Breaking News

Monthly Archives: ಆಗಷ್ಟ್ 2025

ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತ ರೋಹಿಣಿ ಅಜ್ಜಿ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾಳೆ.

ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಬೆಳಗಾವಿ ಜಿಲ್ಲೆಯ ಬೆಳವಟ್ಟಿ ಗ್ರಾಮದ ಯುವತಿ ಸಾವನ್ನಪ್ಪಿ ಆಕೆಯ ತಾಯಿ ಮತ್ತು ಮಾವ ಗಾಯಗೊಂಡ ದುರ್ಘಟನೆಯು ಭಾನುವಾರ ಸಂಜೆ ಬಿಜಗರ್ಣಿ-ಬೆಳವಟ್ಟಿ ರಸ್ತೆಯ ಕವಳೆವಾಡಿ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಯುವತಿಯನ್ನು ಬೆಳವಟ್ಟಿಯ ನಿವಾಸಿ, 18 ವರ್ಷದ ರೋಹಿಣಿ ರಾಮಲಿಂಗ ಚೌಗುಲೆ ಎಂದು ಗುರುತಿಸಲಾಗಿದೆ. ಆಕೆಯ ತಾಯಿ ಲಕ್ಷ್ಮೀ ರಾಮಲಿಂಗ ಚೌಗುಲೆ (45) ಮತ್ತು ಚಂದಗಡ ತಾಲೂಕಿನ ತುಡಯೇ …

Read More »

ಬೆಳಗಾವಿಯಲ್ಲಿ ಚರಂಡಿ ನೀರು ಮನೆಗಳ ಮುಂದೆ:ಚರಂಡಿ ಸ್ವಚ್ಛಗೊಳಿಸಲು ನಾಗರೀಕರ ಆಗ್ರಹ!!

ಬೆಳಗಾವಿಯಲ್ಲಿ ಚರಂಡಿ ನೀರು ಮನೆಗಳ ಮುಂದೆ:ಚರಂಡಿ ಸ್ವಚ್ಛಗೊಳಿಸಲು ನಾಗರೀಕರ ಆಗ್ರಹ!! ಚರಂಡಿ ನೀರು ಮನೆಗಳ ಮುಂದೆ ಹರಿಯುತ್ತಿರುವುದ್ದರಿಂದ ನಾಗರೀಕರು ಸಂಚರಿಸಲು ಹರ ಸಾಹಸ ಪಡಬೇಕಾಗಿದೆ. ಚರಂಡಿ ಸ್ವಚ್ಛತೆಗೆ ನಾಗರೀಕರು ಒತ್ತಾಯಿಸಿದ್ದಾರೆ. ಬೆಳಗಾವಿ ಮಹಾನಗರದ ವಾರ್ಡ ಸಂಖ್ಯೆ 25ರಲ್ಲಿ ಬರುವ ಸದಾಶಿವ ನಗರದ ಕೊನೆಯ ಬಸ್ ನಿಲ್ದಾಣದ ಪ್ರದೇಶದಲ್ಲಿ ಕಳೆದ ಐದಾರು ದಿನಗಳಿಂದ ಜಿಟಿ, ಜಿಟ್ಟಿಯಾಗಿ ಸುರಿಯುತ್ತಿರುವ ಮಳೆಯಿಂದ ನಾಗರೀಕರು ಹೊಬರದ ಸ್ಥಿತಿಯಲ್ಲಿದ್ದರೆ. ಕಸ ಕಡ್ಡಿಗಳಿಂದ ತುಂಬಿರುವ ಚರಂಡಿಗಳಿಂದ ನೀರು ಸುಮಗವಾಗಿ …

Read More »

ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ:ಶಾಸಕ ಗಣೇಶ ಹುಕ್ಕೇರಿ

ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 50 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ಯಕ್ಸಂಬಾ-ಚಿಕ್ಕೋಡಿ ರಸ್ತೆಯಿಂದ ದೇಸಾಯಿ, ಪಟೇಲ, ಮಾನೆ ತೋಟದ ರಸ್ತೆ ಸುಧಾರಣೆ ಮತ್ತು ಹಳ್ಳಕ್ಕೆ ಬ್ರಿಜ್ ನಿರ್ಮಾಣಕ್ಕೆ ರೂ 2 ಕೋಟಿ 30 ಲಕ್ಷ ಅನುದಾನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಹಿರೇಕೊಡಿ ಗ್ರಾಮದ ದೇಸಾಯಿ, ಪಟೇಲ ತೋಟದ …

Read More »

ಶ್ರಾವಣ ಮಾಸದ ಕೊನೆಯ ಸೋಮವಾರ,ಯಡೂರ ಶ್ರೀವೀರಭದ್ರೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ

ಶ್ರಾವಣ ಮಾಸದ ಕೊನೆಯ ಸೋಮವಾರ,ಯಡೂರ ಶ್ರೀವೀರಭದ್ರೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ ಚಿಕ್ಕೋಡಿ: ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆಯಲು ಭಕ್ತರ ದಂಡವೇ ಹರಿದು ಬಂದಿತ್ತು. ದಕ್ಷಿಣದ ಕಾಶೀ ಎಂದೇ ಪ್ರಸಿದ್ದಿಯನ್ನು ಪಡೆದಿರುವ ಸುಕ್ಷೇತ್ರ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ಹಾಗೂ ಭದ್ರಕಾಳಿದೇವಿಯ ದರ್ಶನವನ್ನು ಭಕ್ತರು ಸಾಲಿನಲ್ಲಿ ನಿಂತು ಶಾಂತಿಯುತವಾಗಿ ದರ್ಶನವನ್ನು ಪಡೆದುಕೊಂಡರು. ಕರ್ನಾಟಕ,ಮಹಾರಾಷ್ಟ್ರ,ಆಂದ್ರಪ್ರದೇಶದ ಸೇರಿದಂತೆ …

Read More »

ದಸರಾ ಆನೆಗಳಿಗೆ ಲಾಂಗ್ ವಾಕ್: ಗಜಪಡೆ ನೋಡಲು ಅರಮನೆ ಮುಂದೆ ಜನಸಾಗರ

ಮೈಸೂರು: ಇಂದಿನಿಂದ ದಸರಾ ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳು, ಬನ್ನಿಮಂಟಪದವರೆಗೆ ಸಾಗಿದ್ದು, ಆನೆಗಳನ್ನು ನೋಡಲು ಜನಸಾಗರವೇ ನಿಂತಿದ್ದು ವಿಶೇಷವಾಗಿತ್ತು. ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಆನೆಗಳಾದ ಧನಂಜಯ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಮಹೇಂದ್ರ, ಕಾವೇರಿ, ಲಕ್ಷ್ಮಿ ಸೇರಿದಂತೆ ಒಂಭತ್ತು ಆನೆಗಳು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ಕ್ರೀಡಾಂಗಣದವರೆಗೆ ತೆರಳಿದವು. ಆಗಸ್ಟ್ 10ರ ಸಂಜೆ ಅರಮನೆ ಪ್ರವೇಶಿಸಿದ್ದ ಗಜಪಡೆ, ಆ.11ರಂದು ತಾಲೀಮು ಆರಂಭಿಸಿ, ಅರಮನೆಯಿಂದ 2.50 ಕಿಲೋ ಮೀಟರ್ …

Read More »

ಉಕ್ಕಿ ಹರಿಯುತ್ತಿದ್ದ ಹಳ್ಳ‌ ದಾಟಿ ವ್ಯಕ್ತಿಯ ಅಂತ್ಯಸಂಸ್ಕಾರ

ರಾಯಚೂರು: ಅಪಾಯದ ಮಟ್ಟವನ್ನೂ ಮೀರಿ ಉಕ್ಕಿ ಹರಿಯುತ್ತಿದ್ದ ಹಳ್ಳ‌ವನ್ನು ದಾಟಿ ಗ್ರಾಮಸ್ಥರು ಶವಸಂಸ್ಕಾರ ಮಾಡಿರುವ ಘಟನೆ ಜಿಲ್ಲೆಯ ಗೋಮರ್ಸಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದಲ್ಲಿ ವೀರೇಶ ತೆಲುಗರ ಎನ್ನುವ ವ್ಯಕ್ತಿ ಮೃತಪಟ್ಟಿದ್ದರು. ಶನಿವಾರ ಶವಸಂಸ್ಕಾರ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಆದರೆ, ಶವಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೇ, ಸ್ಮಶಾನಕ್ಕೆ ಹಳ್ಳ ದಾಟಿ ಹೋಗಬೇಕಿದ್ದರಿಂದ ಗ್ರಾಮದ ಜನರು ಸೇರಿದಂತೆ ಸಂಬಂಧಿಕರು ಪರದಾಡುವಂತಾಯಿತು. ಅನಿವಾರ್ಯವಾಗಿ ತುಂಬಿ ಹರಿಯುತ್ತಿರುವ ಹಳ್ಳದ ನೀರಿನಲ್ಲಿಯೇ ಶವಹೊತ್ತು …

Read More »

RSS ಭಾರತ ದೇಶದ ತಾಲಿಬಾನ್: ವಿವಾದದ ಕಿಡಿಹೊತ್ತಿಸಿದ ಕೈ ಹಿರಿಯ ನಾಯಕ ಬಿಕೆ ಹರಿಪ್ರಸಾದ್

ಬೆಂಗಳೂರು, : ಆರ್‌ಎಸ್‌ಎಸ್‌ ಭಾರತದ ತಾಲಿಬಾನ್‌  (RSS Indian Taliban) ಇದ್ದಂತೆ ಎಂದು ಕರ್ನಾಟಕ ಕಾಂಗ್ರೆಸ್ ವಿಧಾನ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ (BK Hariprasad) ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್‌ಎಸ್‌ಎಸ್ ಹೊಗಳಿದ್ದಕ್ಕಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶನಿವಾರ ಹರಿ ಪ್ರಸಾದ್, ಆರ್‌ಎಸ್‌ಎಸ್ ನವರು ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾನು ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಹೋಲಿಸುತ್ತೇನೆ. ಅವರು ಭಾರತೀಯ ತಾಲಿಬಾನ್‌ಗಳು ಮತ್ತು ಪ್ರಧಾನಿ ಅವರನ್ನು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ” ಎಂದು …

Read More »

ಬಟನ್​ ಒತ್ತಿ ಸಮಸ್ಯೆ ಹೇಳಿ! ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ

ಗದಗ, ಆಗಸ್ಟ್​ 18: ಈ ಆಧುನಿಕ ಕಾಲದಲ್ಲಿ ಅನೇಕ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ಅವರ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದು ಕಷ್ಟ. ಹೀಗಾಗಿ ‘ಪ್ರಭುವಿನೆಡೆಗೆ ಪ್ರಭುತ್ವ’ (Prabhuvindege Prabhutva) ಎನ್ನುವ ಪರಿಕಲ್ಪನೆ ತರಲಾಗಿದೆ. ಆ ಮೂಲಕ ವಿದ್ಯುನ್ಮಾನ ಯಂತ್ರದ ಮುಂದೆ ಸಮಸ್ಯೆ ಹೇಳಿಕೊಂಡರೆ ಸಾಕು, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಾರೆ. ಗದಗ (Gadag) ಜಿಲ್ಲೆಯಲ್ಲಿ ಮೊದಲ ಬಾರಿಗೆ ಆರಂಭಗೊಳ್ಳುತ್ತಿದ್ದು, ಈ ರೀತಿಯ ಪರಿಕಲ್ಪನೆ ಇಡೀ ದೇಶದಲ್ಲೇ ಪ್ರಥಮ ಎಂದು ಜಿಲ್ಲಾಡಳಿತ ಹೇಳಿದೆ ‘ಪ್ರಭುವಿನೆಡೆಗೆ ಪ್ರಭುತ್ವ’ ಪರಿಕಲ್ಪನೆ ಇಡೀ ದೇಶದಲ್ಲಿ ಮೊದಲ ಭಾರಿಗೆ ಮುದ್ರಣ …

Read More »

ಸಂಬಳದ ನಕಲಿ ದಾಖಲೆ ಸಲ್ಲಿಸಿ ಬ್ಯಾಂಕ್‌ನಿಂದ ₹23 ಲಕ್ಷ ಸಾಲ ಪಡೆದ ವಂಚಕರು

ಮೈಸೂರು: ನಕಲಿ ದಾಖಲೆಗಳನ್ನು ಸಲ್ಲಿಸಿ ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ)ಗೆ​ 23.16 ಲಕ್ಷ ರೂ. ವಂಚಿಸಲಾಗಿದೆ. ಈ ಕುರಿತು ಬ್ಯಾಂಕ್ ಮ್ಯಾನೇಜರ್​​​ ಪ್ರತಿಭಾ ಅವರು ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ವಿ.ವಿ.ಪುರಂ ಪೊಲೀಸ್​​​​​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಸಂಬಳ​​​​​​ ಸೇರಿದಂತೆ ಇತರೆ ನಕಲಿ ದಾಖಲಾತಿಗಳನ್ನು ಸಲ್ಲಿಸಿ ಬ್ಯಾಂಕ್‌ನಿಂದ ಮೂವರು ಸಾಲ ಪಡೆದಿದ್ದರು. ದಾಖಲಾತಿ ಪರಿಶೀಲನೆಯ ಸಂದರ್ಭದಲ್ಲಿ ದಾಖಲೆಗಳು ನಕಲಿ ಎಂದು ಗೊತ್ತಾಗಿದೆ ಎಂದು ಮ್ಯಾನೇಜರ್​ …

Read More »

‘ಧರ್ಮಸ್ಥಳವನ್ನು ಬಿಜೆಪಿ ನಮ್ಮ ಸ್ವತ್ತು ಅಂದಿಲ್ಲ, ಹಿಂದೂ ಸಮಾಜದ ಸ್ವತ್ತಿಗೆ ಕೈಹಾಕುವ ಪ್ರಯತ್ನವನ್ನು ಕಾಂಗ್ರೆಸ್ ಮಾಡ್ತಿದೆ’

ಹುಬ್ಬಳ್ಳಿ: ಧರ್ಮಸ್ಥಳವನ್ನು ಬಿಜೆಪಿ ನಮ್ಮ ಸ್ವತ್ತು ಅಂತ ಹೇಳಿಲ್ಲ. ಕಾಂಗ್ರೆಸ್ ಸಮಸ್ತ ಹಿಂದೂ ಸಮಾಜದ ಸ್ವತ್ತಿನಲ್ಲಿ ಕೈ ಹಾಕುವ ಪ್ರಯತ್ನ ಮಾಡುತ್ತಿದೆ. ದೇಶದ ಗುಡಿ-ಗುಂಡಾರಗಳ ದುಡ್ಡು ಹೊಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಇಂದು ವರೂರಿನ ನವಗೃಹತೀರ್ಥ ಕ್ಷೇತ್ರದಲ್ಲಿ ಮಾಧ್ಯಮಗಳ ಜೊತೆ ‌ಮಾತನಾಡಿದ ಅವರು, ಕುಕ್ಕರ್ ಬ್ಲಾಸ್ಟ್ ಮಾಡಿದ ಭಯೋತ್ಪಾದಕರು ಸಹೋದರರಾಗಿದ್ದಾರೆ.‌ ಮುಸ್ಲಿಂ ಲೀಗ್, ಪಿಎಫ್​​ಐ ಜೊತೆಗೆ ಸಂಪರ್ಕವಿರುವುದು ನಿಮಗೆ ಬಹಳ ಸಂತೋಷವಾಗುತ್ತದೆ. ಯಾವುನೋ‌ …

Read More »