Breaking News

Monthly Archives: ಆಗಷ್ಟ್ 2025

ಮಹೇಶ್ ಶೆಟ್ಟಿ ತಿಮರೋಡಿ ಕರೆತರುವಾಗ ಪೊಲೀಸ್​ ಕರ್ತವ್ಯಕ್ಕೆ ಅಡ್ಡಿ; ಮೂವರು ಬೆಂಗಲಿಗರ ಬಂಧನ

ಉಡುಪಿ: ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬ್ರಹ್ಮಾವರ ಠಾಣೆಗೆ ಕರೆತರುತ್ತಿರುವಾಗ ವಾಹನಗಳನ್ನು ಹಿಂಬಾಲಿಸಿಕೊಂಡು ಬಂದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರ ಮೂವರು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. ಉಜಿರೆ ನಿವಾಸಿಗಳಾದ ಸೃಜನ್ ಎಲ್., ಹಿತೇಶ್ ಶೆಟ್ಟಿ ಹಾಗೂ ಸಹನ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ತಿಮರೋಡಿಯನ್ನು ಹಿಂಬಾಲಿಸಿ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಂದಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಪೊಲೀಸರು ಸೂಚನೆ ನೀಡಿದರೂ ಕೇಳಿರಲಿಲ್ಲ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ …

Read More »

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ ಕಸರತ್ತು ನಡೆಯುತ್ತಿದೆ. ಐಟಿ ಹಬ್ ಆಗಿ ಹೊರಹೊಮ್ಮವ ಎಲ್ಲ ರೀತಿಯ ಸಾಮರ್ಥ್ಯ ದಾವಣಗೆರೆಗಿದೆ.‌ ಈಗಾಗಲೇ ಎಸ್​ಟಿಪಿಐ ಉಪ ಕೇಂದ್ರ ಈ ಜಿಲ್ಲೆಯಲ್ಲಿದೆ. ಇಲ್ಲಿ ಐಟಿ ಪಾರ್ಕ್ ಆರಂಭಕ್ಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ನಾಲ್ಕೈದು ಕಡೆ ಸ್ಥಳವನ್ನು ಗುರುತಿಸಿದ್ದಾರೆ. ಎರಡು ಎಕರೆ ಜಮೀನು, ವಿಶಾಲವಾದ ಕಟ್ಟಡದ ಬೇಡಿಕೆ: ದಾವಣಗೆರೆಯಲ್ಲಿ ಐಟಿ ಪಾರ್ಕ್​ ಆರಂಭಿಸಲು …

Read More »

ವಾಹನ ಸವಾರರೇ ಗಮನಿಸಿ.. ಸಂಚಾರ ನಿಯಮ ಉಲ್ಲಂಘನೆ ದಂಡ ಬಾಕಿ ಪಾವತಿಗೆ ಮತ್ತೊಮ್ಮೆ ಶೇ.50 ರಿಯಾಯಿತಿ ಘೋಷಣೆ

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡ ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ದಂಡ ಪಾವತಿಗೆ ರಿಯಾಯಿತಿ ಆಫರ್ ನೀಡಿದೆ. ಬಾಕಿ ಉಳಿಸಿಕೊಂಡ ದಂಡದಲ್ಲಿ ಶೇಕಡ 50ರಷ್ಟು ರಿಯಾಯತಿ ಘೋಷಿಸಿ ಸಾರಿಗೆ ಇಲಾಖೆ ಗುರುವಾರ ಆದೇಶ ಹೊರಡಿಸಿದೆ. ಈ ತಿಂಗಳ 23ರಿಂದ ಸೆಪ್ಟೆಂಬರ್ 12ರೊಳಗೆ ದಂಡ ಪಾವತಿಸಿದರೆ ಮಾತ್ರ ದಂಡದ ಡಿಸ್ಕೌಂಟ್ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದಿನ ಅವಧಿಯಲ್ಲಿ 2023ರ ಫೆಬ್ರವರಿ 23ರೊಳಗೆ …

Read More »

ಗಣೇಶ ಚತುರ್ಥಿ ಹಾಗೂ ಸರಣಿ ರಜೆ ಹಿನ್ನೆಲೆ: ವಾಯುವ್ಯ ಸಾರಿಗೆಯಿಂದ ಹೆಚ್ಚುವರಿ ವಿಶೇಷ ಬಸ್​​ ಸೌಲಭ್ಯ

ಹುಬ್ಬಳ್ಳಿ (ಧಾರವಾಡ): ಗಣೇಶ ಚತುರ್ಥಿ ಹಾಗೂ ಸರಣಿ ರಜೆ ಹಿನ್ನೆಲೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಆಗಸ್ಟ್ 22 ರಿಂದ 31 ರವರೆಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ. ಆಗಸ್ಟ್​ 26ರಂದು ಮಂಗಳವಾರ ಗೌರಿ ಹಬ್ಬ, ನಿರ್ಬಂಧಿತ ರಜೆ, ಆ. 27 ರಂದು ಬುಧವಾರ ಗಣೇಶ ಚತುರ್ಥಿ ಸಾರ್ವಜನಿಕ ರಜೆ, ಆ. 24ರಂದು 4ನೇ ಶನಿವಾರ …

Read More »

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಅನುಷ್ಠಾನದಲ್ಲಿ ಹಲವು ಲೋಪ ಗುರುತಿಸಿದ ಸಿಎಜಿ

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ (2018 ರಿಂದ 2023) ರಾಜ್ಯದ ಒಟ್ಟು ವೆಚ್ಚವು ಶೇ.36ರಷ್ಟು ಹೆಚ್ಚಾಗಿತ್ತು. ಈ ಪೈಕಿ 2022-23ರ ಒಂದು ವರ್ಷದ ಅವಧಿಯಲ್ಲಿ ರಾಜಸ್ವ ವೆಚ್ಚವು ಒಟ್ಟು ವೆಚ್ಚದ ಶೇಕಡಾ 78 ರಷ್ಟಿದೆ (2.15 ಲಕ್ಷ ಕೋಟಿ) ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ. ವಿಧಾನಸಭೆಯಲ್ಲಿ ಇಂದು ವರದಿಯನ್ನು ಮಂಡಿಸಲಾಯಿತು. ವಿವಿಧ ಇಲಾಖೆಗಳು ಮತ್ತು ಬಾಬ್ತುಗಳ ಪರಿಶೀಲನೆಯ ಹಿನ್ನೆಲೆಯಲ್ಲಿ ವೆಚ್ಚದ ಒಟ್ಟು ಸ್ವರೂಪವನ್ನು ಸಿಎಜಿ …

Read More »

ಗೋಕಾಕ್ ಫಾಲ್ಸ್: ಪ್ರವಾಸಿಗರಿಗೆ ಖುಷಿಯೋ ಖುಷಿ

ಬೆಳಗಾವಿ: ಘಟಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ಒಂದು ಕಡೆ ಪ್ರವಾಹದ ಸಂಕಟ ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ ಪ್ರವಾಸಿಗರು ಗೋಕಾಕ್ ಫಾಲ್ಸ್​​ನ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳುವ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ನಿಸರ್ಗ ಪ್ರಿಯರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೌದು, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬರುತ್ತಿದೆ. ಹಾಗಾಗಿ, ಜಲಾಶಯದಿಂದ ಸುಮಾರು 36 ಸಾವಿರ …

Read More »

ಡ್ರಗ್ಸ್ ನಿರ್ಮೂಲನೆ ಒಂದೇ ವರ್ಷದಲ್ಲಿ ಮಾಡಲು ಸಾಧ್ಯವಿಲ್ಲ: ಗೃಹ ಸಚಿವ

ಬೆಂಗಳೂರು: ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಒಂದು ವರ್ಷದಲ್ಲಿ ಡ್ರಗ್ಸ್ ನಿರ್ಮೂಲನೆ ಸಾಧ್ಯವಿಲ್ಲ. ಈ ಪಿಡುಗಿನ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 14,485 ಡ್ರಗ್ಸ್ ಪ್ರಕರಣ ದಾಖಲಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರಿಷತ್​​ನಲ್ಲಿ ಮಾಹಿತಿ ನೀಡಿದ್ಧಾರೆ. ಇಂದು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಇಂದು ಡ್ರಗ್ಸ್ ಮಹಾಹೆಮ್ಮಾರಿಯಾಗಿ ಪರಿಣಮಿಸಿದೆ. ಹಳ್ಳಿ-ಹಳ್ಳಿಗಳಲ್ಲಿ ಮಾದಕವಸ್ತುವಿನ ಜಾಲ …

Read More »

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟ ಕುಟುಂಬಗಳಿಗೆ ₹5 ಲಕ್ಷ ಪರಿಹಾರ

ಬೆಂಗಳೂರು: ಮೈಕ್ರೋ ಫೈನಾನ್ಸಿಯರ್​ಗಳ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಜನರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಪರಿಷತ್​ನಲ್ಲಿ ಘೋಷಿಸಿದ್ದಾರೆ. ಸಾಲಬಾಧೆಗೆ ತತ್ತರಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಕುಟುಂಬಕ್ಕೆ ನೀಡಲಾಗುವ ಪರಿಹಾರ ಮಾದರಿಯಲ್ಲೇ ಮೈಕ್ರೋ ಫೈನಾನ್ಸ್​ಗಳ ಹಾವಳಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಗಳ ಕುಟುಂಬಕ್ಕೂ 5 ಲಕ್ಷ ರೂ ನೀಡಲಾಗುವುದು. ಆತ್ಮಹತ್ಯೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದೇ ನಮ್ಮ ಉದ್ದೇಶ. ಈ ಬಗ್ಗೆ ಹಣಕಾಸು ಇಲಾಖೆ ಹಾಗೂ ಮುಖ್ಯ …

Read More »

ಉನ್ನತ ಶಿಕ್ಷಣಕ್ಕೆ ಸರ್ಕಾರಿ ಸೇವಾ ನಿರತ ವೈದ್ಯರನ್ನು ಬಿಡುಗಡೆಗೊಳಿಸದ ಸರ್ಕಾರ ಕ್ರಮಕ್ಕೆ ಹೈಕೋರ್ಟ್​ ತರಾಟೆ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾನಿರತ ವೈದ್ಯರಿಗೆ ಉನ್ನತ ಶಿಕ್ಷಣ ಪಡೆಯಲು ಸೇವೆಯಿಂದ ಬಿಡುಗಡೆಗೊಳಿಸಲು ನ್ಯಾಯಾಲಯ ನೀಡಿದ ಆದೇಶ ಪಾಲಿಸದ ಸರ್ಕಾರದ ಕ್ರಮವನ್ನು ಹೈಕೋರ್ಟ್​ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಉನ್ನತ ಶಿಕ್ಷಣ ಪಡೆಯಲು ತಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ 2025ರ ಜೂನ್ 24ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪಾಲಿಸದ ಆರೋಗ್ಯ ಇಲಾಖೆಯ ಕ್ರಮ ಪ್ರಶ್ನಿಸಿ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಬಾಚಿಗೊಂಡನಹಳ್ಳಿಯ ಪ್ರಾಥಮಿಕ …

Read More »

ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ಆಯೋಜಕರು ಹೆಚ್ಚಿನ ಕಾರಣೀಕರ್ತರಾಗಿದ್ದಾರೆ: ಸಚಿವ ಜಿ.ಪರಮೇಶ್ವರ್

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಆಯೋಜನೆ ಮಾಡಿದವರು ಹೆಚ್ಚಿನ ಕಾರಣೀಕರ್ತರಾಗಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಸಂಬಂಧ ಚರ್ಚೆಗೆ ಅವರು ಉತ್ತರಿಸಿದರು. ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಇಂತಹ ಘಟನೆ ನಡೆದಿರಲಿಲ್ಲ.‌ ಪ್ರಗತಿಶೀಲ ರಾಜ್ಯ ಇದನ್ನು ಲಘುವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ತಪ್ಪು ಆದ ಮೇಲೆ ಕ್ರಮ ಕೈಗೊಳ್ಳುವುದು ಅದು ಬಹಳ ಮುಖ್ಯವಾಗಿದೆ. ಐಪಿಎಲ್​ನ್ನು ಕ್ರೀಡೆಯೂ ಆಗಬೇಕು, …

Read More »