Breaking News

Daily Archives: ಆಗಷ್ಟ್ 24, 2025

ಖೈದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ

ಬೆಂಗಳೂರು, ಆಗಸ್ಟ್​ 24: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ (Bengaluru Central Jail) ಭರತ್ ಮತ್ತು ಈತನ ಗ್ಯಾಂಗ್​​​ ಖೈದಿ ಅನಿಲ್​​​ ಕುಮಾರ್ ಎಂಬುವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ. ಆಗಸ್ಟ್​ 2ರ ಮಧ್ಯಾಹ್ನ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖೈದಿ ಅನಿಲ್​​​ ಕುಮಾರ್​ ಪ್ರಕರಣವೊಂದರ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್​ ಕೊಠಡಿಗೆ ತೆರಳುತ್ತಿದ್ದರು. ಈ ವೇಳೆ ಭರತ್ ಮತ್ತು ಈತನ ಗ್ಯಾಂಗ್​​​ ಕ್ವಾರಂಟೈನ್​​ ಜೈಲಿನ ಬ್ಯಾರಕ್​​-2ರ ಹಿಂಭಾಗದ ಕೊಠಡಿ 6ರಲ್ಲಿ …

Read More »

ಒಂದೇ ಒಂದು ಮೊಬೈಲ್ ಕದ್ದ ಕಳ್ಳನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯ ತೀರ್ಪು ನೀಡಿದೆ. ಪ್ರದೀಪ್​ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ.

ತುಮಕೂರು: ಒಂದೇ ಒಂದು ಮೊಬೈಲ್ ಕದ್ದ ಕಳ್ಳನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯ ತೀರ್ಪು ನೀಡಿದೆ. ಪ್ರದೀಪ್​ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ. ಅಮಿತ್ ಹಾಗೂ ದಿಲೀಪ್ ಚೌಧರಿ ಎಂಬ ಇಬ್ಬರು ಯುವಕರಿಗೆ ಡ್ರ್ಯಾಗರ್ ತೋರಿಸಿ ಬೆದರಿಸಿ ಪ್ರದೀಪ್​​ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದನು. 2020ರಲ್ಲಿ ನಾಮದ ಚಿಲುಮೆ ಬಳಿ ಘಟನೆ ನಡೆದಿತ್ತು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. …

Read More »

ಕಾಂಗ್ರೆಸ್ ಶಾಸಕ‌ ವಿರೇಂದ್ರ ಪಪ್ಪಿ ಇರಲಿ, ಯಾರೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ

ರಾಯಚೂರು: ಕಾಂಗ್ರೆಸ್ ಶಾಸಕ‌ ವಿರೇಂದ್ರ ಪಪ್ಪಿ ಇರಲಿ, ಯಾರೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ ಎಂದು ಸಣ್ಣ‌ ನೀರಾವರಿ ಖಾತೆ ಸಚಿವ ಎನ್. ಎಸ್. ಬೋಸರಾಜು ಹೇಳಿದರು. ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ‌‌ ಬಳಿಕ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ. ಸಿ. ವಿರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ ಹಾಗೂ ಬಂಧನ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದರು. ನ್ಯಾಯಯುತವಾಗಿ ಏನು ನಡೆಯಬೇಕೋ ಅದು ನಡೆಯುತ್ತೆ. …

Read More »

ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ

ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ ಚಿಕ್ಕೋಡಿ: ಕೃಷ್ಣಾ ಸೇರಿದಂತೆ ದೂಧಗಂಗಾ, ವೇದಗಂಗಾ ನದಿಗಳಿಗೆ ಇವತ್ತು ನೀರು ಕಡಿಮೆ ಆಗುತ್ತೆ ಜನರು ಪ್ರವಾಹದ ಕುರಿತು ಆತಂಕ ಪಡುವ ಅಗತ್ಯ ಇಲ್ಲ ಎಂದು ಎಂದು ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ಹೇಳಿದರು. ಅವರು ಇವತ್ತು ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಜಲಾವೃತಗೊಂಡ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸಿ ಮಾತನಾಡಿ ಅವರು ಮಹಾರಾಷ್ಟ್ರದಲ್ಲಿ‌ ಮಳೆಯ …

Read More »

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ ತಾಲೂಕಿನ ಗೋಲಿಹಳ್ಳಿ ಗ್ರಾಮದಲ್ಲಿ ನೆಲೆಯೂರಿರುವ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಹಾಗೂ ನಂದಿ ಮೂರ್ತಿಯ ಪ್ರತಿಷ್ಠಾಪನೆ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮವನ್ನು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರವಿಂದ್ ಪಾಟೀಲ ಅವರ ನೇತೃತ್ವದಲ್ಲಿ ಭಕ್ತಿಭಾವದಿಂದ ಜರುಗಿತು. ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ-ಪುನಸ್ಕಾರಗಳು ಕೈಗೊಂಡು, ಶ್ರದ್ಧಾ ಗೌರವದಿಂದ …

Read More »

ಸುರೇಶ ಯಾದವ ಪೌoಡೇಶನ್ ಹಾಗೂ KLE ಬ್ಲಡ್ ಬ್ಯಾಂಕ್ ಮತ್ತು ರೋಹನ್ ಸ್ಪೆಷಲಿಟಿ ಕ್ಲಿನಿಕ್ ಇವರ ಸಂಯುಕ್ತ ಆಶ್ರಯ ದಲ್ಲಿ ಸುರೇಶ ಯಾದವ ಅವರ 25 ನೇ ಮದುವೆಯ ವಾರ್ಷಿಕೋತ್ಸವದ ನಿಮಿತ್ಯ ರಾಮತೀರ್ಥ ನಗರದ ಸಭಾಭವನದಲ್ಲಿ ರಕ್ತದಾನ

ಸುರೇಶ ಯಾದವ ಪೌoಡೇಶನ್ ಹಾಗೂ KLE ಬ್ಲಡ್ ಬ್ಯಾಂಕ್ ಮತ್ತು ರೋಹನ್ ಸ್ಪೆಷಲಿಟಿ ಕ್ಲಿನಿಕ್ ಇವರ ಸಂಯುಕ್ತ ಆಶ್ರಯ ದಲ್ಲಿ ಸುರೇಶ ಯಾದವ ಅವರ 25 ನೇ ಮದುವೆಯ ವಾರ್ಷಿಕೋತ್ಸವದ ನಿಮಿತ್ಯ ರಾಮತೀರ್ಥ ನಗರದ ಸಭಾಭವನದಲ್ಲಿ ರಕ್ತದಾನ ಮತ್ತು ಅರೋಗ್ಯ ಶಿಬಿರದ ದಿವ್ಯ ಸಾನಿದ್ಯ ವನ್ನುವಹಿಸಿ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ನಾಗನೂರಿನ ಶ್ರೀ ಮ ನಿ ಪ್ರ ಡಾ: ಅಲ್ಲಮಪ್ರಭು ಮಹಾಸ್ವಾಮಿಗಳು ರಕ್ತದಾನವು ಜೀವಗಳನ್ನು ಉಳಿಸುವುದಲ್ಲದೆ, ದಾನಿಗಳ ಅರೋಗ್ಯಕ್ಕೂ ಪ್ರಯೋಜನಕಾರಿ, …

Read More »

ನೂರಾರು ಕಾಯಕ ಪಂಗಡಗಳ ಒಕ್ಕೂಟದಿಂದ ಶ್ರಾವಣ ಮಾಸದ ಪಾದಯಾತ್ರೆ ಹಾಗೂ ಪ್ರವಚನ

ನೂರಾರು ಕಾಯಕ ಪಂಗಡಗಳ ಒಕ್ಕೂಟದಿಂದ ಶ್ರಾವಣ ಮಾಸದ ಪಾದಯಾತ್ರೆ ಹಾಗೂ ಪ್ರವಚನ ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ, ಅಖಿಲ ಲಿಂಗಾಯತ ನೂರು ಕಾಯಕ ಪಂಗಡಗಳ ಒಕ್ಕೂಟವು (ರಿ) ಬೆಳಗಾವಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾದಯಾತ್ರೆ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಪಾದಯಾತ್ರೆಯು ‘ನೂರು ಕಾಯಕ ಪಂಗಡದ ಮನೆಗಳಿಗೆ ಪೂಜ್ಯರ ನಡೆ’ ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಭಕ್ತರನ್ನು ಆಶೀರ್ವದಿಸಿದರು. ಶ್ರೀ ಜಗದ್ಗುರು …

Read More »

ಗೋವಿನ ಜೋಳದ ನುಚ್ಚಿನಲ್ಲಿ ಮೂಡಿ ಬಂದ ಗಣೇಶ…

ಗೋವಿನ ಜೋಳದ ನುಚ್ಚಿನಲ್ಲಿ ಮೂಡಿ ಬಂದ ಗಣೇಶ… ಬೆಳಗಾವಿ ನಗರದಲ್ಲಿ ಈ ವರ್ಷ ಗಣೇಶನ ಆಗಮನಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ವಿಧ ವಿಧದ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ.‌ ಆದರೆ ಇಲ್ಲೋಬ್ಬ ಮೂರ್ತಿಕಾರ ಗೋವಿನ ಜೋಳದ ನುಚ್ಚು ಬಳಸಿ ಪರಿಸರ ಸ್ನೇಹಿ ಮೂರ್ತಿ ತಯಾರಿಸುವ ಮೂಲಕ ಎಲ್ಲರ ಗಮನ ಸೇಳೆದಿದ್ದಾರೆ. ಹೌದು.. ಬೆಳಗಾವಿ ಎಂದರೆ ನೆನಪಾಗುವುದು ವಿಜೃಂಭಣೆಯ ಗಣೇಶನ ಹಬ್ಬ.‌ ಈಗಾಗಲೇ ಹಬ್ಬಕ್ಕೆ ಎಲ್ಲಾ ರೀತಿಯ ಮೂರ್ತಿಗಳು ತಯಾರಿಗಿವೆ. ಮೂರ್ತಿಕಾರರು ಅಂತಿಮ ಟಚ್ …

Read More »

ಬೈಲಹೊಂಗಲ ತಾಲೂಕಿನ ತಿಗಡಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ

ಬೈಲಹೊಂಗಲ ತಾಲೂಕಿನ ತಿಗಡಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಕ್ರಾಸ್ ಬಳಿ ಇಂದು ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್ ಹಾಗೂ ಟೆಂಪೋ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಸುಮಾರು 10ರಿಂದ 15 ಜನರಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ತೀವ್ರತೆಯಿಂದ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಗೊಂಡವರನ್ನು ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಕೂಡಲೇ ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ರವಾನೆ …

Read More »

ಬೆಳಗಾವಿಯ ಚವ್ಹಾಟ ಗಲ್ಲಿ ಗಣೇಶನ ಮಂಟಪದಲ್ಲಿ ಶುದ್ಧಿಕರಣ…ಹೋಮ ಹವನ…

ಬೆಳಗಾವಿಯ ಚವ್ಹಾಟ ಗಲ್ಲಿ ಗಣೇಶನ ಮಂಟಪದಲ್ಲಿ ಶುದ್ಧಿಕರಣ…ಹೋಮ ಹವನ… ಬೆಳಗಾವಿಯ ಚವಾಟ ಗಲ್ಲಿಯಲ್ಲಿರುವ ‘ಬೆಳಗಾವಿ ರಾಜ’ ಎಂದೇ ಪ್ರಸಿದ್ಧವಾಗಿರುವ ಶ್ರೀ ಗಣೇಶ ಮೂರ್ತಿಯ ಮಂಟಪವನ್ನು ಭಾನುವಾರದಂದು ಮಂತ್ರಗಳ ಘೋಷಗಳೊಂದಿಗೆ ವಿಧಿಪೂರ್ವಕವಾಗಿ ಪೂಜಿಸಲಾಯಿತು. ಈ ಸಂದರ್ಭದಲ್ಲಿ ಹೋಮ-ಹವನ ಮತ್ತಿತರ ಪೂಜೆಗಳನ್ನೂ ನಡೆಸಲಾಯಿತು. ಈ ಸಂದರ್ಭದಲ್ಲಿ ರಂಗೋಲಿ, ಹೂವುಗಳ ಅಲಂಕಾರದೊಂದಿಗೆ, ಶುಭಕರವಾದ ಹಣ್ಣು-ಹೂವು-ಎಲೆಗಳಿಂದ ಉತ್ಸಾಹದ ವಾತಾವರಣ ನಿರ್ಮಾಣವಾಗಿತ್ತು. ಪೂಜಾರಿ ವಿಠ್ಠಲ್ ಅವರು ಮಂಡಳಿಯ ಕಾರ್ಯಾಧ್ಯಕ್ಷ ಸುನಿಲ್ ಜಾಧವ್ ಮತ್ತು ಉಪಾಧ್ಯಕ್ಷ ಸೌರಭ್ ಪವಾರ್ …

Read More »