Breaking News

Monthly Archives: ಜುಲೈ 2025

ಶಿರೂರು ಗ್ರಾಮದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಅಳವಡಿಸಲಾದ ವಿದ್ಯುತ್ ಟಿಸಿಯನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಶಿರೂರು ಗ್ರಾಮದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಅಳವಡಿಸಲಾದ ವಿದ್ಯುತ್ ಟಿಸಿಯನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ಹಿರಿಯ ರಾಜಕೀಯ ಮುಖಂಡರಾದ ಶಂಕರ ಗಿಡ್ಡನ್ನವರ, ಕಿರಣ ರಜಪೂತ ಹಾಗೂ ವಿದ್ಯುತ್ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು

Read More »

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಪಣಗುತ್ತಿಯಲ್ಲಿ ಇಂದು ರಾಜಕಟ್ಟಿ ಏತ್ ನೀರಾವರಿ ಯೋಜನೆಯ ಕಾಮಗಾರಿಯ ಪ್ರಗತಿಯನ್ನು ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಪಣಗುತ್ತಿಯಲ್ಲಿ ಇಂದು ರಾಜಕಟ್ಟಿ ಏತ್ ನೀರಾವರಿ ಯೋಜನೆಯ ಕಾಮಗಾರಿಯ ಪ್ರಗತಿಯನ್ನು ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು ಅಂದಾಜು ₹63 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆ ಕ್ಷೇತ್ರದ 7 ಗ್ರಾಮಗಳ ಸುಮಾರು 2 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಿದೆ. ಈ ಮೂಲಕ ರೈತರ ಆರ್ಥಿಕ ಸ್ಥಿತಿಗೆ ಹೊಸ ಚೈತನ್ಯ ತುಂಬುವ ನಿರೀಕ್ಷೆಯಿದೆ ಎಂದರು . …

Read More »

ಮಾಜಿ ಕಾರ್ಪೋರೇಟರ್ ಮನೆಯಲ್ಲಿ 1 ಕೋಟಿಗೂ ಅಧಿಕ ಮೌಲ್ಯದ ನಗ-ನಾಣ್ಯ ದೋಚಿದ್ದ ಮೂವರ ಬಂಧನ

ಬೆಂಗಳೂರು: ಮಾಜಿ ಕಾರ್ಪೋರೇಟರ್ ಮನೆಯಲ್ಲಿ ಕೋಟಿ ಮೌಲ್ಯದ ನಗ ನಾಣ್ಯ ದೋಚಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಘು, ಮಿಥುನ್ ಹಾಗೂ ಜೈದೀಪ್ ಬಂಧಿತ ಆರೋಪಿಗಳು. ಜಯನಗರ 5ನೇ ಬ್ಲಾಕ್‌ನಲ್ಲಿರುವ ಮಾಜಿ ಕಾರ್ಪೋರೇಟರ್ ಟಿ.ಎಸ್. ವಸಂತ್ ಕುಮಾರ್ ಭವಾನಿ ಅವರ ಮನೆಯಲ್ಲಿ ಜುಲೈ 20ರಂದು ಕಳ್ಳತನ ಮಾಡಿದ್ದ ಆರೋಪಿಗಳಿಂದ ಬರೋಬ್ಬರಿ 78.50 ಲಕ್ಷ ರೂ. ಮೌಲ್ಯದ 1.85 ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೋಲೆಕ್ಸ್ …

Read More »

ದರ್ಶನ್ ಅವರ ಅಭಿಮಾನಿಗಳು ತಮ್ಮ ವೈಯಕ್ತಿಕ ತೇಜೋವಧೆ ಜೊತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಟ ಪ್ರಥಮ್ ದೂರು ದಾಖಲಿಸಿದ್ದಾರೆ.

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳು ಆಶ್ಲೀಲವಾಗಿ ಸಂದೇಶ ಕಳುಹಿಸಿದ ಆರೋಪದಡಿ ನಿನ್ನೆಯಷ್ಟೇ ನಟಿ ರಮ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್-4ರ ವಿಜೇತ ಹಾಗೂ ನಟ ಪ್ರಥಮ್ ಕೂಡ ಇಂದು ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿ.ಕೆ. ಬಾಬಾ ಅವರನ್ನು ಭೇಟಿಯಾಗಿ ಪ್ರಥಮ್ ದೂರು ನೀಡಿದರು. ‘ನಟ ದರ್ಶನ್ ಅವರೊಂದಿಗೆ ಜೈಲಿನ ಒಂದೇ ಬ್ಯಾರಕ್​ನಲ್ಲಿದ್ದ ವ್ಯಕ್ತಿಯೋರ್ವ ನನ್ನನ್ನು ಉದ್ದೇಶಿಸಿ ಬಾಸ್ (ದರ್ಶನ್) …

Read More »

ವಿಧಾನಸೌಧದಲ್ಲಿ ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ

ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿ ಶಾಸಕರ ಒನ್ ಟು ಒನ್ ಸಭೆ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಜೊತೆ ಸಭೆ ನಡೆಸುತ್ತಿದ್ದಾರೆ. ವಿಧಾನಸೌಧದಲ್ಲಿರುವ ಸಿಎಂ ಕಚೇರಿಯಲ್ಲಿ ನಡೆಯುತ್ತಿರುವ ಸಭೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ಇಲ್ಲದಿರುವುದು ಕುತೂಹಲ ಮೂಡಿಸಿದೆ. ಮಂಗಳವಾರ ಸಂಜೆ 5:30 ರ ಸುಮಾರಿಗೆ ತಮ್ಮ ಕಚೇರಿಯಲ್ಲಿ …

Read More »

ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ 180 ದಿನಗಳ ನಂತರ ಸಲ್ಲಿಸುವ ಯಾವುದೇ ಮೇಲ್ಮನವಿಗಳನ್ನು ನ್ಯಾಯಾಲಯಗಳು ಪುರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ತಡೆ ಕಾಯ್ದೆಯಡಿಯಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಹೆಚ್ಚಿನ ಕಾಲಾವಕಾಶ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ. ಅಲ್ಲದೆ, ಯಾದಗಿರಿಯ ಪ್ರಕರಣವೊಂದರಲ್ಲಿ ಖುಲಾಸೆಗೊಂಡಿದ್ದ ಆರೋಪಿಯ ವಿರುದ್ಧ 381 ದಿನ ತಡವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ. ರಾಜ್ಯ ಸರ್ಕಾರದ ಪರವಾಗಿ ಶಹಾಪುರ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, …

Read More »

ಹಾಡುಹಗಲೇ ವೃದ್ಧೆಯ ಚಿನ್ನದ ಸರ ಎಗರಿಸಿಕೊಂಡು ಹೋದ ಖದೀಮರು ಬೆಳಗಾವಿಯಲ್ಲಿ ಹಾಡು ಹಗಲೇ ಕಳ್ಳತನ

ಹಾಡುಹಗಲೇ ವೃದ್ಧೆಯ ಚಿನ್ನದ ಸರ ಎಗರಿಸಿಕೊಂಡು ಹೋದ ಖದೀಮರು ಬೆಳಗಾವಿಯಲ್ಲಿ ಹಾಡು ಹಗಲೇ ಕಳ್ಳತನ ವೃದ್ಧೆಯ ಚಿನ್ನದ ಸರ ಎಗರಿಸಿಕೊಂಡು ಹೋದ ಖದೀಮರು ಆಝಮ್ ನಗರದಲ್ಲಿನ ಘಟನೆ ಬಿದ್ದು ಗಾಯಗೊಂಡ ವೃದ್ಧೆ ಬೆಳಗಾವಿಯ ಅಝಮ್ ನಗರದಲ್ಲಿ ಹಾಡುಹಗಲೇ ವೃದ್ಧೆಯ ಸರಗಳ್ಳತನ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಪದ್ಮಜಾ ಕುಲಕರ್ಣಿ (75) ಎಂಬ ವೃದ್ಧೆ ಮೊಮ್ಮಗನ ಜೊತೆ ಇಂದು ಮಧ್ಯಾಹ್ನ 3-4 ಗಂಟೆ ಸುಮಾರಿಗೆ ಕೆ ಎಲ್ ಇ ಆಸ್ಪತ್ರೆಯ …

Read More »

ಬೆಳಗಾವಿಯ ಅಮನ್ ನಗರದಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣ

ರೇಲ್ವೆ ಸೇತುವೆ ನಿರ್ಮಾಣಕ್ಕೆ ಅಮನ್ ನಗರದ ರಹಿವಾಸಿಗಳಿಂದ ಸ್ವಾಗತ ನ್ಯೂ ಗಾಂಧೀ ನಗರದ ಜನರಿಂದ ವಿರೋಧ….!!! ರೇಲ್ವೆ ಸೇತುವೆ ನಿರ್ಮಾಣಕ್ಕೆ ಅಮನ್ ನಗರದ ರಹಿವಾಸಿಗಳಿಂದ ಸ್ವಾಗತ ನ್ಯೂ ಗಾಂಧೀ ನಗರದ ಜನರಿಂದ ವಿರೋಧ…. ಶಾಸಕ ಆಸೀಫ್ ಸೇಠ್ ಅವರೊಂದಿಗೆ ಸಭೆ ಲಿಖಿತ ಅಭಿಪ್ರಾಯ ತಿಳಿಸಬೇಕೆಂದ ಶಾಸಕರು ಬೆಳಗಾವಿಯ ಅಮನ್ ನಗರದಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ಸ್ಥಳೀಯರು ಸ್ವಾಗತಿಸಿದರೇ, ನ್ಯೂ ಗಾಂಧಿ ನಗರದ ಜನರು ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. …

Read More »

ನಾಗರಪಂಚಮಿಗೆ ಮುಸ್ಲಿಂ ಬಾಂಧವರಿಂದ ನಾಗಸ್ವರ ವಾದನ; ಕರಾವಳಿಯಲ್ಲಿ ಹೀಗೊಂದು ಸೌಹಾರ್ದತೆ

ಉಡುಪಿ: ಸಾಮಾನ್ಯವಾಗಿ ನಾಗಾರಾಧನೆಯಲ್ಲಿ ತೊಡಗುವವರು ಬಹುತೇಕ ಹಿಂದೂಗಳು ಮಾತ್ರ. ಅಲ್ಲೊಂದು ಇಲ್ಲೊಂದು ಇದಕ್ಕೆ ಅಪವಾದ ಇರುವುದನ್ನು ನಾವು ಕಾಣುತ್ತೇವೆ. ಉಡುಪಿ ಜಿಲ್ಲೆಯ ತೆಂಕ ಎರ್ಮಾಳ್ ಎಂಬಲ್ಲಿಯ ಅಮೀನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ಮೂವರು ಮುಸ್ಲಿಂ ಬಾಂಧವರು ನಾಗಸ್ವರ ನುಡಿಸುತ್ತಿರುವುದು ವಿಶೇಷವಾಗಿದೆ. ತಲೆತಲಾಂತರಗಳಿಂದ ಈ ಮುಸ್ಲಿಂ ಸಮುದಾಯದ ಜನರು ಲಯಬದ್ಧವಾದ ನಾಗಸ್ವರವನ್ನು ನುಡಿಸುತ್ತಾ ಬಂದಿದ್ದಾರೆ. ಇಲ್ಲಿನ ಮೂವರು ಮುಸ್ಲಿಮರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಈ ನಾಗಸ್ವರ ಪೂಜೆ ನಡೆಸುತ್ತಾ ಬರುವ ಮೂಲಕ ಕರಾವಳಿಯ …

Read More »

ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಸ್ಕೆಚ್; ಕಂಠಪೂರ್ತಿ ಮದ್ಯ ಕುಡಿಸಿ ಕೊಲೆಗೈದ ಆರೋಪಿಗಳ ಬಂಧನ

ದಾವಣಗೆರೆ: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿಸಿದ ಪತ್ನಿ ಸೇರಿದಂತೆ ಕೊಲೆಗೆ ಸಹಾಯ ಮಾಡಿದ ಇನ್ನಿಬ್ಬರು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಎಸ್​ಪಿ ಉಮಾಪ್ರಶಾಂತ್ ಅವರು ಮಾತನಾಡಿದ್ದು, ಮೃತ ಲಿಂಗಪ್ಪ ಅವರ ತಾಯಿ ಯಲ್ಲಮ್ಮ ಎಂಬುವವರು 22 ಜನವರಿ 2024ಕ್ಕೆ ಮಗ ಮನೆಯಿಂದ ಹೋದವನು ಮನೆಗೆ ವಾಪಸ್​ ಬಂದಿಲ್ಲ ಎಂದು ಠಾಣೆಗೆ ದೂರು ನೀಡಿದ್ದರು. ಅದಾದ ಮೇಲೆ ಆರೋಪಿ ಲಕ್ಷ್ಮಿ (ಲಿಂಗಪ್ಪನ ಹೆಂಡತಿ) ಅವರ ತಾಯಿ ಮಾಲಮ್ಮ …

Read More »