ನವದೆಹಲಿ, ಜುಲೈ 11: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್ಒ (EPFO) ಕಳೆದ ವರ್ಷದ ಬಡ್ಡಿ ಹಣವನ್ನು ಎಲ್ಲಾ ಸಕ್ರಿಯ ಅಕೌಂಟ್ಗಳಿಗೂ ಜಮೆ ಮಾಡಿದೆ. 2024-25ರ ಹಣಕಾಸು ವರ್ಷಕ್ಕೆ ಇಪಿಎಫ್ ಹಣಕ್ಕೆ ಸರ್ಕಾರ ಶೇ. 8.25ರಷ್ಟು ವಾರ್ಷಿಕ ಬಡ್ಡಿಯನ್ನು ಪ್ರಕಟಿಸಿದೆ. ಇದೇ ಮಂಗಳವಾರದಂದು ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಮಾತನಾಡಿ, ಈ ವಾರದೊಳಗೆ ಬಡ್ಡಿಹಣವನ್ನು ಎಲ್ಲಾ ಅಕೌಂಟ್ಗಳಿಗೆ ಹಾಕಲಾಗುವುದು ಎಂದು ಹೇಳಿದ್ದರು. ಅವರ ಪ್ರಕಾರ, ಬಹುತೇಕ ಎಲ್ಲಾ ಇಪಿಎಫ್ ಖಾತೆಗಳಿಗೆ ಬಡ್ಡಿ …
Read More »Monthly Archives: ಜುಲೈ 2025
ಮಹಿಳೆಯರೇ ಎಚ್ಚರ: ಬಿರಿಯಾನಿ ಎಲೆ ಅಂತ ನೀಲಗಿರಿ ಎಲೆ, ಪಪ್ಪಾಯಿ ಬೀಜ ಮಿಶ್ರಿತ ಕಾಳು ಮೆಣಸು ಮಾರಾಟ!
ರಾಯಚೂರು, ಜುಲೈ 11: ರಾಯಚೂರು (Raichur) ಜಿಲ್ಲೆಯ ಮಾನ್ವಿ ಪಟ್ಟಣದ ಇಸ್ಲಾಂ ನಗರದಲ್ಲಿನ ಪಾಳು ಬಿದ್ದ ಮನೆಯೊಂದರ ಬಳಿ ಈ ಕಲಬೆರಕೆ ಮಸಾಲೆ (Masala) ಪದಾರ್ಥಗಳನ್ನು ತಯಾರಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಒಟ್ಟು 846 ಕೆಜಿ ಕಲಬೆರಿಕೆ ಮಸಾಲೆ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳು ದನಿಯಾ ಕಾಳು, ಮೆಣಸಿನ ಕಾಳು, ಬಿರಿಯಾನಿ ಎಲೆ, ಚಿಕನ್ ಮಸಾಲೆ, ಸಾಂಬರ್ ಮಸಾಲೆಯನ್ನು ಕೆಮಿಕಲ್ ಬಳಸಿ ತಯಾರು ಮಾಡುತ್ತಿದ್ದರು. …
Read More »ಆಹಾರ ಇಲಾಖೆಯಿಂದ ರಾಜ್ಯದ ಹಲವು ಮಳಿಗೆಗಳು, ಹೋಟೆಲ್ಗಳಿಗೆ ನೋಟಿಸ್, ಭಾರಿ ದಂಡ
ಬೆಂಗಳೂರು, ಜುಲೈ 11: ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಆಹಾರ ಇಲಾಖೆ (Food Department) ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಹೊಟೇಲ್ (Hotel), ರೆಸ್ಟೋರೆಂಟ್, ಬೀದಿ ಬದಿ ವ್ಯಾಪಾರ ಘಟಕಗಳಲ್ಲಿ ಪರಿಶೀಲನೆ ನಡೆಸಿದೆ. ಆಹಾರ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಕಳಪೆ ಗುಣಮಟ್ಟದ ಆಹಾರ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆಯು ಹೊಟೇಲ್, ರೆಸ್ಟೋರೆಂಟ್ ಮತ್ತು ಬೀದಿ ಬದಿ ವ್ಯಾಪಾರ ಘಟಕಗಳಿಗೆ ನೋಟಿಸ್ ನೀಡಿ, ದಂಡ ವಿಧಿಸಿದೆ. ಆಹಾರ ಇಲಾಖೆಯು ರಾಜ್ಯಾದ್ಯಂತ 720 ಹೋಟೆಲ್ …
Read More »ಮಲ್ಲೇಶ್ವರಂ ಸ್ಫೋಟ ಪ್ರಕರಣದ ಆರೋಪಿಯನ್ನ ಬಂಧಿಸಿರುವ ತಮಿಳುನಾಡು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ; ಕಮಿಷನರ್
ಬೆಂಗಳೂರು : 2013 ರಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಅಬೂಬಕ್ಕರ್ ಸಿದ್ದಿಕಿ (60)ಯನ್ನ ಬಂಧಿಸಿರುವ ತಮಿಳುನಾಡು ಪೊಲೀಸರನ್ನ ರಾಜ್ಯ ಭಯೋತ್ಪಾದಕ ನಿಗ್ರಹ ದಳ (ಎಟಿಸಿ) ಅಧಿಕಾರಿಗಳು ಭೇಟಿಯಾಗಿ ಮಾಹಿತಿ ಕಲೆ ಹಾಕಿದ್ದಾರೆ. ತಮಿಳುನಾಡು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಅವರ ವಿಚಾರಣೆಯ ಬಳಿಕ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ತಮಿಳುನಾಡು …
Read More »ವಿಟಮಿನ್ ಡ್ರಾಪ್ ಸೇವಿಸಿದ ಅಂಗನವಾಡಿಯ 13 ಮಕ್ಕಳು ಅಸ್ವಸ್ಥ
ವಿಟಮಿನ್ ಡ್ರಾಪ್ ಸೇವಿಸಿದ ಅಂಗನವಾಡಿಯ 13 ಮಕ್ಕಳು ಅಸ್ವಸ್ಥ ಶಿವಮೊಗ್ಗ: ಅಂಗನವಾಡಿಯಲ್ಲಿ ಮಕ್ಕಳ ಬೆಳವಣಿಗೆಗೆ ಎಂದು ನೀಡಿದ್ದ ವಿಟಮಿನ್ ಡ್ರಾಪ್ ಸೇವಿಸಿದ 13 ಮಕ್ಕಳು ಅಸ್ವಸ್ಥರಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಹಿರೇಸಾನಿ ಗ್ರಾಮದ ಅಂಗನವಾಡಿ ಮಕ್ಕಳಿಗೆ ಗುರುವಾರ ವಿಟಮಿನ್ ಡ್ರಾಪ್ ಅನ್ನು ನೀಡಲಾಗಿದೆ. ಈ ಡ್ರಾಪ್ ಸೇವಿಸಿದ ಮಕ್ಕಳು ಮನೆಗೆ ತೆರಳಿದ ಬಳಿಕ ವಾಂತಿ ಮತ್ತು ಹೊಟ್ಟೆ …
Read More »ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯತ್ತ ಸಾಗಿದೆ ಹಗಲುವೇಷ ಕಲೆ
ಹಾವೇರಿ: ಜಾನಪದ ಸೊಗಡಿನ ಕಲೆಗಳಲ್ಲಿ ಒಂದಾದ ಹಗಲುವೇಷವನ್ನು ಅಲೆಮಾರಿ ಬುಡುಗ ಜಂಗಮ ಸಮುದಾಯದವರು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ತಲೆತಲಾಂತರದಿಂದ ಈ ಸಮುದಾಯ ಹಗಲುವೇಷ ಹಾಕಿಕೊಂಡು ಕಲೆ ಪ್ರದರ್ಶನ ಮಾಡುತ್ತದೆ. ಐದು ಜನರ ತಂಡ ಹಾರ್ಮೋನಿಯಂ, ತಬಲಾ ಮತ್ತು ಗಾಯಕನೊಂದಿಗೆ ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಪೌರಾಣಿಕ ಪಾತ್ರಗಳನ್ನು ಹಾಕಿಕೊಂಡು ಮನೆ ಮನೆಗೆ ತೆರಳುತ್ತದೆ. ಸುಮಾರು ಮೂರು ದಿನಗಳ ಕಾಲ ವಿವಿಧ ಪಾತ್ರಗಳನ್ನು ಧರಿಸಿ ಜನರನ್ನು ರಂಜಿಸುವ ತಂಡ ಮೂರನೆಯ ದಿನ ಜನರು …
Read More »ಗಗನಯಾತ್ರಿ ಶುಭಾಂಶು ಶುಕ್ಲಾ ಈ ದಿನ ಭೂಮಿಗೆ ವಾಪಸ್
ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಆಕ್ಸಿಯಮ್ 4 ನ ನಾಲ್ವರೂ ಗಗನಯಾತ್ರಿಗಳು ಭೂಮಿಗೆ ಹಿಂದಿರುಗಲು ದಿನಾಂಕ ನಿಗದಿಯಾಗಿದೆ ಎಂದು ವರದಿಗಳು ಆಗಿವೆ. ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ನಿಂದ ಜು. 14 ಕ್ಕೆ ನಾಲ್ವರೂ ಭೂಮಿಗೆ ಬಂದು ಇಳಿಯಲಿದ್ದಾರೆಂದು ಆಕ್ಸಿಯಮ್ ಸ್ಪೇಸ್ ಮಾಹಿತಿ ನೀಡಿದೆ. ಈ ಕುರಿತು ಆಕ್ಸಿಯಮ್ ತನ್ನ ಅಧಿಕೃತ ಎಕ್ಸ್ ಖಾತೆಯಿ ಮೂಲಕ ಸಂದೇಶ ಹಂಚಿಕೊಂಡಿದೆ,ಇದಕ್ಕೂ ಮುನ್ನ ಜು. 10 ರಂದು ಹಿಂದಿರುಗುವ ನಿರೀಕ್ಷೆಯಿತ್ತು. ಆದರೆ ಬಳಿಕ …
Read More »ರಾಜ್ಯದಲ್ಲಿ ಯೋಧರೊಬ್ಬರು ಹೃದಯಾಘಾತದಿಂದ ಸಾವು
ರಾಜ್ಯದಲ್ಲಿ ಹೃದಯಾಘಾತದಿಂದ ಸಾವಿನ ಸರಣಿ ಮುಂದುವರೆದಿದೆ. ರಸ್ತೆ ಬಳಿ ನಡೆದು ಹೋಗುತ್ತಿದ್ದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಬ್ರಾಹಿಂ ದೇವಲಾಪುರ (37) ಮೃತ ಯೋಧ. ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅನಗೋಳ ಬಜಾರ್ ನಲ್ಲಿ ಇದ್ದಕ್ಕಿದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಹೃದಯಾಘಾತದಿಂದ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಣ್ಣ ವಯಸ್ಸಿನವರೂ ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಗಿದೆ.
Read More »ಹಾಡಹಗಲೇ ಚಿನ್ನಾಭರಣ ತಯಾರಿಕಾ ಅಂಗಡಿ ದರೋಡೆ ; 3 ಕೆಜಿ ಚಿನ್ನ ಹೊತ್ತೊಯ್ದ ದುಷ್ಕರ್ಮಿಗಳು
ಕಲಬುರಗಿ : ರಾಜ್ಯದಲ್ಲಿ ಇತ್ತೀಚೆಗೆ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ವಿಜಯಪುರ, ಬೀದರ್, ದಾವಣಗೆರೆ, ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣಗಳು ಮಾಸುವ ಮುನ್ನವೇ ಈಗ ಕಲಬುರಗಿಯಲ್ಲಿ ಚಿನ್ನಾಭರಣ ತಯಾರಿಕಾ ಅಂಗಡಿಯನ್ನು ದೋಚಲಾಗಿದೆ. ನಗರದ ಜನದಟ್ಟಣೆ ಪ್ರದೇಶವಾದ ಸರಾಫ್ ಬಜಾರ್‌ನಲ್ಲಿ ಹಾಡಹಗಲೇ ಚಿನ್ನದ ಆಭರಣ ತಯಾರಿಸುವ ಅಂಗಡಿಗೆ ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಿರುವ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಗರ ಪೊಲೀಸ್ ಆಯುಕ್ತ ಶರಣಪ್ಪ: ಮಾಲಿಕ್ …
Read More »ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪೋಷಕರ ಮೇಲಿನ ಹೊರೆಯನ್ನು ತಪ್ಪಿಸುವ ಸಲುವಾಗಿ ನರ್ಸಿಂಗ್ ಕೋರ್ಸ್ ಶುಲ್ಕವನ್ನು ಈ ವರ್ಷ ಹೆಚ್ಚಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಗುರುವಾರ ನಡೆದ ನರ್ಸಿಂಗ್ ಕಾಲೇಜುಗಳ ಸಂಘದೊಂದಿಗಿನ ಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ ಸಚಿವರು, ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ನಮ್ಮ ಸರ್ಕಾರ ಕ್ರಮ …
Read More »