Breaking News

Daily Archives: ಜುಲೈ 16, 2025

ನಂದಗಡ ಪೋಲಿಸ್ ಠಾಣೆ ವತಿಯಿಂದ ಮನೆ -ಮನೆಗೆ ಪೋಲಿಸ್ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು

ನಂದಗಡ ಪೋಲಿಸ್ ಠಾಣೆ ವತಿಯಿಂದ ಮನೆ -ಮನೆಗೆ ಪೋಲಿಸ್ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಬೆಳಗಾವಿ ಜಿಲ್ಲಾ ಪೋಲಿಸ್, ಬೈಲಹೊಂಗಲ ಉಪ ವಿಭಾಗದ ನಂದಗಡದ ಪೋಲಿಸ್ ಠಾಣೆಯವತಿಯಿಂದ ಮನೆ -ಮನೆಗೆ ಪೋಲಿಸ್-2025 ಕಾರ್ಯಕ್ರಮ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ ಸುಮಾರು ಒಂದುನೂರಾ ಒಂದು ಹಳ್ಳಿಗಳ ಸಮಾವೇಶ ಇರುವ ನಂದಗಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಪಿಎಸ್ಐ ಸಪಾಟೆ ಅವರು ಮನೆ -ಮನೆಗೆ ಪೋಲಿಸ್ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ …

Read More »

ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಖಾನಾಪೂರ ಘಟಕದ ಅಧ್ಯಕ್ಷರಾಗಿ ಶಿವಾನಂದ ಕುಂದರಗಿ ಆಯ್ಕೆ

ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಖಾನಾಪೂರ ಘಟಕದ ಅಧ್ಯಕ್ಷರಾಗಿ ಶಿವಾನಂದ ಕುಂದರಗಿ ಆಯ್ಕೆ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಖಾನಾಪೂರ ಘಟಕದ ನೂತನ ಅಧ್ಯಕ್ಷರಾಗಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಗಾಂಧಿ ನಗರದ ನಿವೃತ್ತ ಶಿಕ್ಷಕರಾದ ಶಿವಾನಂದ ಕುಂದರಗಿ ಅವರನ್ನು ಆಯ್ಕೆ ಮಾಡಲಾಯಿತು. ಖಾನಾಪೂರ ಪಟ್ಟಣದ ಸಂತ ಜ್ಞಾನೇಶ್ವರ ಮಂದಿರದಲ್ಲಿ ಖಾನಾಪೂರ ತಾಲೂಕು ಹಿರಿಯ ನಾಗರಿಕರ ಮತ್ತು ನಿವೃತ್ತ ನೌಕರರ ಸಭೆ ಆಯೋಜಿಸಲಾಗಿತ್ತು …

Read More »

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಮೇಲೆ ಹತ್ತಿಸಿ ಬಚಾವ ಆದ ವಾಹನ ಚಾಲಕ

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಮೇಲೆ ಹತ್ತಿಸಿ ಬಚಾವ ಆದ ವಾಹನ ಚಾಲಕ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಹತ್ತಿರ ಬಡೇಕ್ಕೊಳ್ಳಮಠದ ಬಳಿ ನಡೆದ ಘಟನೆ. ಬೆಳಗಾವಿಯಿಂದ ಧಾರವಾಡದ ಕಡೆಗೆ ಹೋಗುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ನಡೆದ ಘಟನೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಡಿವೈಡರ ಮೇಲೆ ಹತ್ತಿದ ಟಾಟಾ ಇನ್ಟ್ರಾ ಎನ್ನವ ವಾಹನ. ಕಳೆದ ತಿಂಗಳಿಂದ ಒಂದೇ ಸ್ಥಳದಲ್ಲಿ ಸರಣಿ ಅಪಘಾತದಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿತ್ತು. ಅಪಘಾತವ ತಡೆಯಲಿಕೆ ಪೊಲೀಸ್ …

Read More »

ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ.ಗೆ ಮಿತಿಗೊಳಿಸಿ ರಾಜ್ಯ ಸರ್ಕಾರದಿಂದ ಕರಡು ಅಧಿಸೂಚನೆ

ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ.ಗೆ ಮಿತಿಗೊಳಿಸಿ ರಾಜ್ಯ ಸರ್ಕಾರದಿಂದ ಕರಡು ಅಧಿಸೂಚನೆ ಬೆಂಗಳೂರು: ರಾಜ್ಯದ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರದಲ್ಲಿ ಪ್ರದರ್ಶಿಸುವ ಎಲ್ಲಾ ಭಾಷೆಯ ಚಿತ್ರಗಳಿಗೆ ಪ್ರವೇಶ ದರ 200 ರೂ. ಮಿತಿ ನಿಗದಿಗೊಳಿಸುವ ಸಂಬಂಧ ಕರಡು ತಿದ್ದುಪಡಿ ನಿಯಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕರ್ನಾಟಕ ಸಿನಿನಾ ನಿಯಂತ್ರಣ (ತಿದ್ದುಪಡಿ) ನಿಯಮ 2025 ಕರಡು ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ ಯಾವುದೇ ಸಾರ್ವಜನಿಕ ಆಕ್ಷೇಪ, ಸಲಹೆ ಸೂಚನೆಗಳಿಗೆ …

Read More »

ಅಹಿಂದ ಒಂದು ಮತಬ್ಯಾಂಕ್ ಅಲ್ಲ, ಇದು ಭಾರತದ ಆತ್ಮಸಾಕ್ಷಿಯ ಧ್ವನಿ

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ನಾನು ದೃಢವಾಗಿ ಹೇಳುತ್ತೇನೆ. ಕರ್ನಾಟಕ ಮಾದರಿಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಬದ್ಧವಾಗಿದೆ. ಇದು ಭ್ರಾತೃತ್ವದಲ್ಲಿ ಬೇರೂರಿದೆ, ಡೇಟಾ ಆಧಾರಿತವಾಗಿದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಳವಡಿಕೆಗೆ ಸಿದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.‌ ಕೆಪಿಸಿಸಿ ಭಾರತ್ ಜೋಡೋದಲ್ಲಿ ನಡೆದ ಎಐಸಿಸಿ ಒಬಿಸಿ ಸಲಹಾ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, OBC ಸಲಹಾ ಸಮಿತಿಯ ಪಾತ್ರ ಮತ್ತು ಮುಂದಿನ ದಾರಿ, ಈ ಸಮಿತಿಯು ಕೇವಲ ಔಪಚಾರಿಕವಲ್ಲ, ಇದು …

Read More »

2003ರರಲ್ಲಿ ನಾಪತ್ತೆಯಾಗಿದ್ದಾಳೆ ಎನ್ನಲಾದ ಎಂಬಿಬಿಎಸ್ ವಿದ್ಯಾರ್ಥಿನಿ ತಾಯಿ ಎಸ್ಪಿ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ.

ಮಂಗಳೂರು: ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆಯಾಗಿದ್ದಾಳೆ ಎನ್ನಲಾದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್, ವಿಚಾರವಾಗಿ ಎರಡು ದಶಕಗಳ ನಂತರ ಆಕೆಯ ತಾಯಿ ಸುಜಾತಾ ಭಟ್ ಎಂಬುವರು ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ. ತಮ್ಮ ವಕೀಲರೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಅವರು, ಎಸ್ಪಿ ಡಾ . ಅರುಣ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ದೂರುದಾರರ ದೂರಿನ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ಅರ್ಜಿ ದಾಖಲಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ, ಸೂಕ್ತ ಕಾನೂನು …

Read More »

ಹಣ ವಸೂಲಿ ಆರೋಪ ಪ್ರಕರಣ: ಲೋಕಾಯುಕ್ತರ ವಿಚಾರಣೆ ಎದುರಿಸಿದ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ

ಬೆಂಗಳೂರು: ಸರ್ಕಾರಿ ಅಧಿಕಾರಿಗಳಿಗೆ ದಾಳಿ ಬೆದರಿಕೆಯೊಡ್ಡಿ, ಲಕ್ಷಾಂತರ ರೂಪಾಯಿ ವಸೂಲಿ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ತನಿಖಾಧಿಕಾರಿ ಮುಂದೆ ಐಪಿಎಸ್ ಅಧಿಕಾರಿ ಶ್ರೀನಾಥ್ ಮಹದೇವ ಜೋಶಿ​ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಪ್ರಕರಣ ಸಂಬಂಧ ಮಂಗಳವಾರ ವಿಚಾರಣೆ ಹಾಜರಾಗುವಂತೆ ಶ್ರೀನಾಥ್ ಜೋಶಿ​ ಅವರಿಗೆ ತನಿಖಾಧಿಕಾರಿಯಾಗಿರುವ ಡಿವೈಎಸ್​​​ಪಿ ತಿಪ್ಪೇಸ್ವಾಮಿ ಅವರು ನೋಟಿಸ್ ಜಾರಿ ಮಾಡಿದ್ದರು. ಇದರಂತೆ, ಮಂಗಳವಾರ ಬೆಳಗ್ಗೆ ಹಾಜರಾಗಿ ಸುಮಾರು 5 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಪ್ರಕರಣದಲ್ಲಿ ಬಂಧಿತರಾದ ನಿಂಗಪ್ಪ …

Read More »

ಖಾನಾಪೂರ ಪಟ್ಟಣದಲ್ಲಿ ಇಂದು ಖಾನಾಪೂರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ಯುವ ನಾಯಕ ರಾಹುಲ ಜಾರಕಿಹೊಳಿ..

ಖಾನಾಪೂರ ಪಟ್ಟಣದಲ್ಲಿ ಇಂದು ಖಾನಾಪೂರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ಯುವ ನಾಯಕ ರಾಹುಲ ಜಾರಕಿಹೊಳಿ.. ಯುವ ಶಕ್ತಿ – ಕಾಂಗ್ರೆಸ್ ಶಕ್ತಿಯಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆ ಗಟ್ಟಿ ಮಾಡಿದಾಗಲೇ ಬದಲಾವಣೆ ಸಾಧ್ಯ ಎಂದು ಪಕ್ಷದ ಬಲವರ್ಧನೆ ಕುರಿತಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಾಯಿತು. ಈ ವೇಳೆ ನೂತನವಾಗಿ ಆಯ್ಕೆಯಾಗಿರುವ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕಿನ ಎಲ್ಲ ಪದಾಧಿಕಾರಿಗಳು, …

Read More »

ಯಮಕನಮರಡಿ ಕ್ಷೇತ್ರದಲ್ಲಿನ ಮಸರಗುಪ್ಪಿ, ಗವನಾಳ, ಗೋಟುರ ಹಾಗೂ ಕೋಚರಿ ಗ್ರಾಮಗಳಲ್ಲಿ ಅಂದಾಜು 1.44 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 7 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ,ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ..

ಯಮಕನಮರಡಿ ಕ್ಷೇತ್ರದಲ್ಲಿನ ಮಸರಗುಪ್ಪಿ, ಗವನಾಳ, ಗೋಟುರ ಹಾಗೂ ಕೋಚರಿ ಗ್ರಾಮಗಳಲ್ಲಿ ಅಂದಾಜು 1.44 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 7 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ,ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ.. ಈ ವೇಳೆ ಗ್ರಾಮದ ಮುಖಂಡರು, ಗ್ರಾ.ಪಂ. ಸದಸ್ಯರು, ಎಸ್ ಡಿಎಂಸಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಕಾಮಗಾರಿಗಳ ವಿವರ. 1. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿ.ಎಚ್.ಪಿ.ಎಸ್ ಮಸರಗುಪ್ಪಿ ಉರ್ದು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ …

Read More »

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಬೆಂಗಳೂರು ಸುತ್ತಮುತ್ತಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಹಾಗೂ ಬೃಹತ್ ಸೇತುವೆ ನಿರ್ಮಾಣ ಕಾಮಗಾರಿಗಳ ಪರಿಷ್ಕೃತ ಅಂದಾಜು ಪ್ರಸ್ತಾವನೆ

ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ನನ್ನ ಅಧ್ಯಕ್ಷತೆಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಬೆಂಗಳೂರು ಸುತ್ತಮುತ್ತಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಹಾಗೂ ಬೃಹತ್ ಸೇತುವೆ ನಿರ್ಮಾಣ ಕಾಮಗಾರಿಗಳ ಪರಿಷ್ಕೃತ ಅಂದಾಜು ಪ್ರಸ್ತಾವನೆ ಕುರಿತು ಸಭೆಯನ್ನು ನಡೆಸಿದೆ. ಈ ವೇಳೆ ನಿಗಮದ ಅಧ್ಯಕ್ಷ ಶ್ರೀ ಎಚ್.ಸಿ.‌ಬಾಲಕೃಷ್ಣ, ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. #satishjarkiholi #bengaluru

Read More »