Breaking News

Daily Archives: ಜುಲೈ 8, 2025

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

ಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ ಸಾಕಷ್ಟು ಹೆಸರು ಮಾಡಿದ್ದರು. ಕಳೆದೊಂದು ತಿಂಗಳ ಹಿಂದೆ ಹೃದಯಾಘಾತದಿಂದ (heart attack) ಮೃತಪಟ್ಟಿದ್ದರು. ಆದರೆ ಆ ವೈದ್ಯರ ಕೊಠಡಿ ತೆರೆದು ನೋಡಿದಾಗ ಅಲ್ಲೊಂದು ಆಘಾತವೇ ಎದುರಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರ ಕುಟುಂಬಸ್ಥರು ಅಕ್ಷರಶಃ ದಂಗಾಗಿದ್ದಾರೆ. ಮಾಟ‌ಮಂತ್ರ (Black magic) ಮಾಡಿರುವ ವಸ್ತುಗಳು ಪತ್ತೆ ಆಗಿವೆ. ಜೂನ್​ 5 ರಂದು ಮಾಲೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ …

Read More »

ದೆವ್ವ ಮೆಟ್ಕೊಂಡಿದೆ ಎಂದು ಮನಸೋ ಇಚ್ಛೆ ಥಳಿತ, ಮಹಿಳೆ ಸಾವು

ಶಿವಮೊಗ್ಗ, ಜುಲೈ 07: ದೆವ್ವ ಮೆಟ್ಕೊಂಡಿದೆ ಎಂದು ಮನಸೋಯಿಚ್ಛೆ ಥಳಿಸಿದ್ದ ಮಹಿಳೆ (woman) ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನುರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ. ಗೀತಮ್ಮ(53) ಮೃತ ಮಹಿಳೆ. ಗೀತಮ್ಮ ಮೇಲೆ ಹಲ್ಲೆ ಮಾಡಿದ ಆಶಾ ವಿರುದ್ಧ ಕೊಲೆ  ಕೇಸ್ ದಾಖಲಾಗಿದ್ದು, ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಆಶಾ ಎಂಬ ಮಹಿಳೆ ತಮ್ಮ ಮೇಲೆ ಚೌಡಮ್ಮ ದೇವಿ ಬರುತ್ತಾಳೆ ಎಂದು ಊರವರಲ್ಲಿ ಮೌಡ್ಯತೆ ಹಬ್ಬಿಸಿದ್ದಳು. ಇದನ್ನೇ ನಂಬಿದ್ದ ಗೀತಮ್ಮ ಕುಟುಂಬಸ್ಥರು ದೆವ್ವ ಬಂದಿದೆ ಎಂದು …

Read More »

ಮಂಜೂರಾದ ಆಸ್ಪತ್ರೆ ರದ್ದು: ‘ಇದು ಸಚಿವ ತಂಗಡಗಿ ಅಭಿವೃದ್ಧಿ ಮಾದರಿ’ : ಜನಾರ್ದನ್​ ರೆಡ್ಡಿ ವಾಗ್ದಾಳಿ

ಗಂಗಾವತಿ (ಕೊಪ್ಪಳ): ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವೆಂಕಟಗಿರಿ ಹಾಗೂ ಇರಕಲ್ ಗಡಾ ಹೋಬಳಿಗೆ ಮಂಜೂರಾಗಿದ್ದ ತಲಾ 30 ಹಾಸಿಗೆಗಳ ಎರಡು ಸಮುದಾಯ ಆಸ್ಪತ್ರೆಗಳನ್ನು ಸಚಿವ ಶಿವರಾಜ ತಂಗಡಗಿ ರದ್ದು ಮಾಡಿಸಿದ್ದಾರೆ. ಇದು ಸಚಿವ `ತಂಗಡಗಿ ಅಭಿವೃದ್ಧಿ ಮಾದರಿ’ ಎಂದು ಶಾಸಕ ಗಾಲಿ ಜನಾರ್ದನ್​ ರೆಡ್ಡಿ ಅವರು ವಾಗ್ದಾಳಿ ನಡೆಸಿದರು. ನಗರದ ತಾಲೂಕು ಪಂಚಾಯತ್​ ಆವರಣದಲ್ಲಿರುವ ಮಂಥನ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ …

Read More »

ಸಿಎಂ ಬದಲಾವಣೆ ವಿಚಾರ: ಈ ವಿಚಾರವಾಗಿ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಖರ್ಗೆ ಆದೇಶವಿದೆ: ಮಧು ಬಂಗಾರಪ್ಪ

ಗದಗ: “ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ, ಈ ಬಗ್ಗೆ ಪ್ರತಿಕ್ರಿಯೆ ನೀಡದಂತೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಸ್ಪಷ್ಟ ಸೂಚನೆ ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ‘ಈ ವಿಚಾರವಾಗಿ ಬಾಯಿ ಮುಚ್ಚಿಕೊಂಡು ಇರಬೇಕು’ ಎಂಬ ಸೂಚನೆ ನೀಡಿದ್ದಾರೆ” ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇಂದು ಗದಗ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಸಿಎಂ …

Read More »

ವಿಗ್ರಹ ಕಿತ್ತು ಹಾಕಿದ ಪ್ರಕರಣದಲ್ಲಿ ಇಬ್ಬರ ಬಂಧನ

ಶಿವಮೊಗ್ಗ: “ಹೊರವಲಯ ರಾಗಿಗುಡ್ಡದ ಬಂಗಾರಪ್ಪ ಕಾಲೊನಿಯಲ್ಲಿ ಶನಿವಾರ ನಡೆದ ವಿಗ್ರಹ ಕಿತ್ತು ದ್ವಂಸಕ್ಕೆ ಯತ್ನದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಯಾರೇ ಆದರೂ ಕಾನೂನಿನ ವಿರುದ್ದ ಕ್ರಮ ತೆಗೆದುಕೊಂಡರೆ ಸೂಕ್ತ ಕ್ರಮ ಜರುಗಿಸಲಾಗುವುದು” ಎಂದು ಎಸ್​ಪಿ ಮಿಥುನ್ ಕುಮಾರ್ ಎಚ್ಚರಿಸಿದ್ದಾರೆ. ಅಲ್ಲದೆ ದಲಿತ ದೌರ್ಜನ್ಯದ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.‌ ಸೈಯದ್ ಹಾಗೂ ನಿಯಾಮತ್ ಎಂಬುವರನ್ನು ಬಂಧಿಸಲಾಗಿದೆ.‌ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ‌ ಒಳಪಡಿಸಲಾಗಿದೆ.‌ ಘಟನೆ ಯಾಕೆ ನಡೆದಿದೆ ಎಂದು ತನಿಖೆ ನಡೆಸಲಾಗುತ್ತಿದೆ. ಅಕ್ರಮ …

Read More »

ಸಿಎ ಪಾಸ್ ಮಾಡಿದ ಕೂಲಿ ಕಾರ್ಮಿಕನ ಮಗ ರಮೇಶ

ಸಿಎ ಪಾಸ್ ಮಾಡಿದ ಕೂಲಿ ಕಾರ್ಮಿಕನ ಮಗ ರಮೇಶ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಳ್ಳಿಕಾನಿನ ರಮೇಶ್ ನಾಯ್ಕ ಪ್ರತಿಷ್ಠಿತ “𝗜𝗻𝘀𝘁𝗶𝘁𝘂𝘁𝗲 𝗼𝗳 𝗖𝗵𝗮𝗿𝘁𝗲𝗿𝗲𝗱 𝗔𝗰𝗰𝗼𝘂𝗻𝘁𝗮𝗻𝘁𝘀 𝗼𝗳 𝗜𝗻𝗱𝗶𝗮” ಮೇ 2025 ರಲ್ಲಿ ನೆಡೆಸಿದ ಅಂತಾರಾಷ್ಟ್ರಿಯ ಮಟ್ಟದ CA ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಇವರು ಮಂಜುನಾಥ ಹಾಗೂ ಶಾರದಾ ದಂಪತಿಗಳ ಮಗನಾಗಿದ್ದು ಅವಿದ್ಯಾವಂತರಾದ ತಂದೆ ತಾಯಿ ಇಬ್ಬರು ದಿನಗೂಲಿ ಕೆಲಸ ಮಾಡುತ್ತಾರೆ. …

Read More »

ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ

ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ ಉಗರಗೋಳ, ಚಿಕ್ಕುಂಬಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸವದತ್ತಿ ತಾಲ್ಲೂಕಿನ ಉಗರಗೋಳ ಹಾಗೂ ಚಿಕ್ಕುಂಬಿ ಗ್ರಾಮಗಳಲ್ಲಿ ಮೊಹರಂ ಅನ್ನು ಶ್ರದ್ಧಾ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಮುಸ್ಲಿಂ ಬಾಂಧವರು ಸಾಂಪ್ರದಾಯಿಕವಾಗಿ ಪಂಜಾಗಳ ಮೆರವಣಿಗೆಯನ್ನು ನಡೆಸಿದರೆ, ಮಕ್ಕಳ ಕಲಾತ್ಮಕ ನೃತ್ಯಗಳು ಗ್ರಾಮಸ್ಥರ ಗಮನ ಸೆಳೆಯುವಂತಾಗಿತ್ತು. ಉಗರಗೋಳ ಗ್ರಾಮದಲ್ಲಿ ಆರು ಮಸೀದಿಗಳಲ್ಲಿ ಪಂಜಾಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಡೋಲಿಗಳ ಮೆರವಣಿಗೆಯ ಮೂಲಕ ಅವುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹರಿದಾಡಿಸಲಾಯಿತು. ಮೆರವಣಿಗೆ …

Read More »

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ ಶಾಸಕ ರಾಜು ಶೆಠ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಬೆಳಗಾವಿ ನಗರದಲ್ಲಿ ಮುಂಬರುವ ದಿನಗಳಲ್ಲಿ ಆರಂಭವಾಗುವ ಫ್ಲೈಓವರ್ ಕಾಮಗಾರಿಯಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಂಡು ಆದಷ್ಟು ಬೇಗನೆ ಕಾಮಗಾರಿಯನ್ನು ಮುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಬೆಳಗಾವಿ ಉತ್ತರದ ಶಾಸಕ ಆಸಿಫ್ (ರಾಜು) ಶೆಠ ಸೂಚಿಸಿದರು. ಅವರು ಫ್ಲೈಓವರ್ ಯೋಜನೆಯಿಂದ …

Read More »