ಬೆಂಗಳೂರು: ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಕಾಲದಲ್ಲಿ ಈ ಕೆನಾಲ್ ಯೋಜನೆ ಮಂಜೂರಾತಿ ಆಗಿದೆ. ಯಡಿಯೂರಪ್ಪ ಅಧಿಕಾರದಲ್ಲಿ ಯೋಜನೆಗೆ ತಡೆ ನೀಡಿದ್ದರು. ಆಗ ಯೋಜನೆ ವೆಚ್ಚ 600 ಕೋಟಿ ರೂ ಇತ್ತು. ಈಗ ಯೋಜನಾ ವೆಚ್ಚ ಸುಮಾರು 900 ಕೋಟಿ ರೂ.ನಿಂದ ಸಾವಿರ ಕೋಟಿಗೆ …
Read More »Daily Archives: ಜೂನ್ 2, 2025
ದಿನಾಂಕ 1-6-2025 ರಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ(ರಿ)ಬೆಂಗಳೂರು ರಾಜ್ಯಾದ್ಯಂತ ವಿವಿಧ ಬೇಡಿಕೆಗಳು ಈಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರ
ಘಟಪ್ರಭಾ:- ದಿನಾಂಕ 1-6-2025 ರಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ(ರಿ)ಬೆಂಗಳೂರು ರಾಜ್ಯಾದ್ಯಂತ ವಿವಿಧ ಬೇಡಿಕೆಗಳು ಈಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡ ಹಿನ್ನಲೆ ಇಂದು ಘಟಪ್ರಭಾ ಪುರಸಭೆಯ ಪೌರಸೇವಾ ನೌಕರರು ಸೇರಿ ಅನಿರ್ದಿಷ್ಟಾವಧಿ ಮುಷ್ಕರದ ಹೋರಾಟಕ್ಕೆ ರವಿವಾರದಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ಗೋಕಾಕ ತಾಲೂಕ ಘಟಕದ ವತಿಯಿಂದ ಬೆಂಬಲ ಸೂಚಿಸಿ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿಲಾಯಿತು ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ …
Read More »ಕೊರೊನಾ ಮಧ್ಯೆ Influenza, SARI ಕೇಸ್ಗಳು ಹೆಚ್ಚಳ!
ಬೆಂಗಳೂರು, ಜೂನ್ 01: ವೈರಸ್ ಜೊತೆ ಬದುಕಲು ಕಲಿಯಬೇಕು ಎಂದು ಹೇಳುವ ವೈದ್ಯರ ಮಾತು ನಿಜವಾಗುತ್ತಿದೆ. ಎಡ್ಮೂರು ವರ್ಷಗಳ ಹಿಂದೆ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಕೊರೊನಾ ವೈರಸ್ (Covid) ಮತ್ತೆ ಬಂದಿದೆ. ವೈರಲ್ ಫೀವರ್ ಹಾಗೂ ಸಾಂಕ್ರಾಮಿಕ ಖಾಯಿಲೆಗಳ ನಡುವೆ ರಾಜ್ಯದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ರೂಪಾಂತರ ಓಮಿಕ್ರಾನ್ನ ಉಪ ತಳಿಯಾದ ಜೆಎನ್.1 ವೈರಸ್ ರಾಜ್ಯಕ್ಕೆ ವಕ್ಕರಿಸಿದೆ. ಈ ನಡುವೆ ರಾಜ್ಯದಲ್ಲಿ ಜನವರಿಯಿಂದ ಈವರೆಗೆ 4536 ಸಾರಿ (SARI) ಹಾಗೂ …
Read More »ಸ್ವಾವಲಂಬಿ ಬದುಕಿಗೆ ಆಸರೆಯಾದ ಕೈ ಕಸೂತಿ ಕೆಲಸ: ಇತರರಿಗೂ ಕಲಿಸುವ ಮೂಲಕ ಮಾದರಿಯಾದ ಪಶ್ಚಿಮ ಬಂಗಾಳ ಮಹಿಳೆ
ಬೀದರ್, ಜೂನ್ 02: ಅಂದು ದೇಶದಲ್ಲಿ ಕೋವಿಡ್ ಸೋಂಕಿನಿಂದ ಮನುಕುಲವೇ ನಲುಗಿ ಹೋಗಿತ್ತು. ಅದೆಷ್ಟೋ ಜನರು ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕುಳಿತು ಊಟಕ್ಕೂ ಪರದಾಟ ನಡೆಸಿದ್ದರು. ಆದರೆ ಅದೇ ಸಮಯವನ್ನು ಬಳಸಿಕೊಂಡ ಮಹಿಳೆಯೊಬ್ಬರು (woman) ಕೈ ಕಸೂತಿ (Hand Embroidery) ಕಲಿತುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡರು. ತಾವು ಕಲಿತು ಸುಮ್ಮನಾಗದೇ ಇಂದು ಗ್ರಾಮೀಣ ಮಹಿಳೆಯರಿಗೆ ಕಲಿಸಿಕೊಡುತ್ತಿದ್ದಾರೆ. ಆ ಮೂಲಕ ಮಾದರಿ ಮಹಿಳೆಯಾಗಿದ್ದಾರೆ.ಕೊಲ್ಕತ್ತಾದ ಸುಕಲಿ ಎಂಬುವವರು ಹೊಟ್ಟೆ ಪಾಡಿಗಾಗಿ ಕರ್ನಾಟದ ಬೀದರ್ ಜಿಲ್ಲೆಗೆ 11 ವರ್ಷದ ಹಿಂದೆ ಆಗಮಿಸಿದ್ದು, …
Read More »ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಪ್ರಕರಣ ದಾಖಲ
ಬೆಂಗಳೂರು, ಜೂನ್ 2: ಟೀಮ್ ಇಂಡಿಯಾ (Team India) ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮಾಲೀಕತ್ವದ ಪಬ್ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸಿದ್ದ ಆರೋಪದಲ್ಲಿ ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿರುವ ‘ದ ಒನ್ 8 ಕಮ್ಯೂನ್’ ಪಬ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, …
Read More »‘ನನ್ನ ಸಿನಿಮಾ ತಡೆಯುವ ಮೂರ್ಖತನ ಬೇಡ’; ತಮಿಳು ನಟ ಧನುಷ್ ಎಚ್ಚರಿಸಿದ್ದು ಯಾರಿಗೆ?
ಕಾಲಿವುಡ್ ಸ್ಟಾರ್ ಹೀರೋ ಧನುಷ್ (Dhanush) ಅವರ ಇತ್ತೀಚಿನ ಸಿನಿಮಾ ‘ಕುಬೇರ’ ರಿಲೀಸ್ಗೆ ರೆಡಿ ಇದೆ. ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರದಲ್ಲಿ ಟಾಲಿವುಡ್ ಹೀರೋ ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸುತ್ತ ಈಗಾಗಲೇ ಒಳ್ಳೆಯ ಹೈಪ್ ಇದೆ. ಭಾರಿ ನಿರೀಕ್ಷೆಗಳ ನಡುವೆ ತಯಾರಾಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಬಗ್ಗೆ ಕೆಲವರು …
Read More »4 ವರ್ಷಗಳಿಂದ ಯುವತಿಗೆ ನಿರಂತರ ಕಿರುಕುಳ, 7 ಮದುವೆ ರದ್ದು
ಮಂಡ್ಯ, ಜೂನ್ 2: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯ ಬೆನ್ನುಬಿದ್ದ ಹಿಂದೂ ಮುಖಂಡನೊಬ್ಬ (Hindu Leader) ನಿರಂತರ ನಾಲ್ಕು ವರ್ಷಗಳಿಂದ ಆಕೆಗೆ ಕಿರುಕುಳ ನೀಡಿದ್ದಾನೆ. ಅಲ್ಲದೆ, ಆಕೆಗೆ ನಿಶ್ಚಯವಾಗುತ್ತಿದ್ದ ಮದುವೆಯನ್ನೆಲ್ಲ ರದ್ದು ಮಾಡಿಸಿದ್ದಲ್ಲದೆ, ಆ್ಯಸಿಡ್ ದಾಳಿ (Acid Attack threat) ಮಾಡುವ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಸದ್ಯ ಆತನ ವಿರುದ್ಧ ಮಂಡ್ಯದ (Mandya) ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ಹಿಂದೂ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 4 ವರ್ಷಗಳ ಹಿಂದೆ ಸಂತ್ರಸ್ತೆ …
Read More »