Breaking News

Monthly Archives: ಮೇ 2025

ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀ ಗುರುಸ್ವಾಮೀಜಿ ಲಿಂಗೈಕ್ಯ

ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ ಮಂಗಳವಾರ ಮುಂಜಾನೆ ಲಿಂಗೈಕ್ಯರಾಗಿದ್ದಾರೆ. ಶ್ರೀ ಗುರುಸ್ವಾಮೀಜಿ ಅವರು ಹನೂರು ತಾಲೂಕಿನ ಜಿ.ಕೆ ಹೊಸೂರು (ಗಂಗಾಧರನ ಕಟ್ಟೆ)ಗ್ರಾಮದ ರುದ್ರಪ್ಪ ಮತ್ತು ಪುಟ್ಟ ಮಾದಮ್ಮರ ಜೇಷ್ಠ ಪುತ್ರರಾಗಿ, 1956ರ ಆಗಸ್ಟ್ 2ರಂದು ಜನಿಸಿದ್ದರು. ನಂತರ ಸಾಲೂರು ಬ್ರಹನ್ ಮಠಕ್ಕೆ 17ನೇ ಪೀಠಾಧ್ಯಕ್ಷರಾಗಿ 1995ರ ಜನವರಿ 29 ರಂದು …

Read More »

ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಸಹಕಾರ ಕ್ಷೇತ್ರ ಹಾಗೂ ರಾಜಕಾರಣದಲ್ಲಿ ಸಕ್ರಿಯನಾಗಿರುವೆ ಎಂದ ಸಚಿವ ಕೆ.ಎನ್‌.ರಾಜಣ್ಣ

ಮೈಸೂರು: ನನಗೆ 75 ವಯಸ್ಸಾಗಿದೆ. ಯುವಕರಿಗೆ ಅವಕಾಶ ಸಿಗಬೇಕು, ಆ ದೃಷ್ಟಿಯಿಂದ ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಆದರೆ, ಸಹಕಾರ ಕ್ಷೇತ್ರ ಹಾಗೂ ರಾಜಕಾರಣದಲ್ಲಿ ಸಕ್ರಿಯನಾಗಿರುವೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಪ್ರಕಟಿಸಿದರು. ಹುಣಸೂರಿನಲ್ಲಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಟ್ಟಭದ್ರರ ಹಿಡಿತದಿಂದ ಸಹಕಾರ ಕ್ಷೇತ್ರ ಮುಕ್ತಕ್ಕೆ ಕ್ರಮ ಕೈಗೊಳ್ಳಲಾಗುವುದು. ಜನರ ನಿರೀಕ್ಷೆಗೆ ತಕ್ಕಂತೆ ಎರಡೂ ಸದನಗಳ ಒಪ್ಪಿಗೆ ಪಡೆದು ತಿದ್ದುಪಡಿ ತಂದು ರಾಜ್ಯಪಾಲರ ಅಂಕಿತಕ್ಕೆ ಕಡತ ಕಳುಹಿಸಿದ್ದರೂ ಕೇಂದ್ರಕ್ಕೆ ಕಳುಹಿಸುವಂತೆ ಸೂಚಿಸಿದ್ದಾರೆ. ಆದರೆ, …

Read More »

ಮಕ್ಕಳಾಗಲಿಲ್ಲ ಎಂದು ಕಲ್ಲಿನಿಂದ ಜಜ್ಜಿ ಸೊಸೆ ಕೊಲೆ

ಚಿಕ್ಕೋಡಿ (ಬೆಳಗಾವಿ) : ಸೊಸೆಗೆ ಮಕ್ಕಳಾಗಲಿಲ್ಲ ಎಂದು ಅತ್ತೆಯೇ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ, ಭೀಕರವಾಗಿ ಕೊಲೆ ಮಾಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಮಲಬಾದ್​ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೇಣುಕಾ ಸಂತೋಷ ಹೊನಕಾಂಡೆ (27) ಕೊಲೆಯಾದ ಮೃತ ದುರ್ದೈವಿ. ಸೊಸೆಗೆ ಮಕ್ಕಳಾಗಲಿಲ್ಲವೆಂದು ಕಳೆದ ಶನಿವಾರದಂದು ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆ ಪತಿ ಸಂತೋಷ ಹೊನಕಾಂಡೆ, ಮಾವ ಕಾಮಣ್ಣ ಹೊನಕಾಂಡೆ, ಅತ್ತೆ ಜಯಶ್ರೀ ಹೊನಕಾಂಡೆ ಎಂಬುವರನ್ನು …

Read More »

ರಂಗ ಸೃಷ್ಟಿಯಿಂದ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ

ರಂಗ ಸೃಷ್ಟಿಯಿಂದ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ ಬೆಳಗಾವಿ : ಹೇಮರಡ್ಡಿ ಮಲ್ಲಮ್ಮ ನಾಟಕವನ್ನು ಅತ್ಯಂತ ಯಶಸ್ವಿಯಾಗಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ರಂಗಸೃಷ್ಟಿ ತಂಡದ ಕಲಾವಿದರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮ ಈಚೆಗೆ ನಡೆಯಿತು. ಬೆಳಗಾವಿಯ ಸ್ಕೌಟ್ಸ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲ ಕಲಾವಿದರಿಗೆ ಗೌರವ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್ ಅವರು ಮಾತನಾಡಿ, ನಿರೀಕ್ಷೆಗೂ ಮೀರಿ ನಾಟಕ ಯಶಸ್ವಿಯಾಗಿದೆ. ಸಭಾಭವನ ಕಿಕ್ಕಿರಿದು ತುಂಬಿದ್ದರಿಂದ ನೂರಾರು ಜನರು ವಾಪಸ್ ಹೋಗಬೇಕಾಯಿತು. …

Read More »

ಉಚಗಾಂವ-ಬೆಕ್ಕಿನಕೆರೆ ಮಾರ್ಗದಲ್ಲಿ ಮದಗಜದ ದಾಳಿಗೆ ಕಾರೊಂದು ಜಖಂ

ಬೆಳಗಾವಿಯಲ್ಲಿ ಮದಗಜನ ಅಟ್ಟಹಾಸ…ಗಜರಾಜನ ಕಾಲಿಗೆ ಸಿಕ್ಕ ಕಾರು ಪುಡಿ ಪುಡಿ!!! ಮದಗಜದ ದಾಳಿಗೆ ಕಾರೊಂದು ಜಖಂಗೊಳ ಘಟನೆ ಬೆಳಗಾವಿ ತಾಲೂಕಿನ ಉಚಗಾಂವ್ ಗ್ರಾಮದಲ್ಲಿ ನಡೆದಿದೆ. , ಬೆಳಗಾವಿ ತಾಲೂಕಿನಲ್ಲಿ ಮತ್ತೇ ಗಜರಾಜ ಅಟ್ಟಹಾಸ ಮೆರೆದಿದ್ದಾನೆ. ಬೆಳಗಾವಿ ತಾಲೂಕಿನ ಉಚಗಾಂವ-ಬೆಕ್ಕಿನಕೆರೆ ಮಾರ್ಗದಲ್ಲಿ ಡಾ. ನಿರಂಜನ್ ಕದಮ್ ಅವರ ಮನೆಯಿದೆ. ಅವರ ಮನೆ ಆವರಣಕ್ಕೆ ನುಗ್ಗಿದ ಮದಗಜ ಅಲ್ಲಿಯೇ ಪಾರ್ಕ್ ಮಾಡಿದ್ದ ಕಾರನ್ನು ಎತ್ತಿ ಬೀಸಾಕಿ ಜಖಂಗೊಳಿಸಿದೆ. ಗೋವಾದ ಮಡಗಾಂವನಿಂದ ಸಚೀನ್ ಪಾಟೀಲ್ …

Read More »

ಕೆಎಸ್​ಆರ್​ಟಿಸಿ ಬಸ್ ಮೇಲೆ ಮುರಿದು ಬಿದ್ದ ಮರದ ಕೊಂಬೆ

ಬೆಂಗಳೂರು: ದೊಡ್ಡಬಳ್ಳಾಪುರ-ಬೆಂಗಳೂರು ಮಾರ್ಗದಲ್ಲಿ ಕಾವೇರಿ ಭವನಕ್ಕೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಮೇಲೆ ಮರದ ಬೃಹತ್ ಕೊಂಬೆ ಮುರಿದು ಬಿದ್ದಿದೆ. ತಕ್ಷಣವೇ ಚಾಲಕ ಬಸ್​ ಅನ್ನು ಬಲಕ್ಕೆ ಚಲಾಯಿಸುವ ಮೂಲಕ ಪ್ರಾಣಹಾನಿ ತಪ್ಪಿಸಿದ್ದಾರೆ. ಪ್ಯಾಲೆಸ್ ಗುಟ್ಟಹಳ್ಳಿಯ ಅರಮನೆ ಮೈದಾನದ ಮುಂಭಾಗ ಗೇಟ್ ನಂಬರ್ 7ರಲ್ಲಿ ಇಂದು ಮಧ್ಯಾಹ್ನ ಘಟನೆ ನಡೆಯಿತು. ನಿಧಾನಗತಿಯಲ್ಲಿ ಬಸ್ ಚಲಿಸುತ್ತಿತ್ತು. ಈ ವೇಳೆ ರಸ್ತೆ ಬದಿಯ ಮರದ ಕೊಂಬೆ ಬಸ್ ಮೇಲೆ ಬಿದ್ದಿದೆ. ಕೊಂಬೆ ಬೀಳುತ್ತಿರುವುದನ್ನು ಗಮನಿಸಿದ ಚಾಲಕ …

Read More »

ಕದ್ರಿ ಮಂಜುನಾಥ, ಜಾರಂದಾಯ ದೈವದ ಅಪೂರ್ವ ಭೇಟಿ

ಮಂಗಳೂರು(ದಕ್ಷಿಣ ಕನ್ನಡ): 48 ವರ್ಷದ ಹಿಂದೆ‌ ನಿಂತು ಹೋಗಿದ್ದ ಧರ್ಮ ಭೇಟಿ, ದೈವ ದೇವರ ಇಚ್ಚೆಯಂತೆ ಮಂಗಳೂರಿನಲ್ಲಿ ಭಾನುವಾರ ನಡೆಯಿತು. 48 ವರ್ಷಗಳ ಹಿಂದೆ ಅರಸು ಧರ್ಮ‌ ಜಾರಂದಾಯ ದೈವ ಮತ್ತು ಕದ್ರಿ ಮಂಜುನಾಥ ದೇವರ ಭೇಟಿ ಧಾರ್ಮಿಕ ಕಾರ್ಯಕ್ರಮದಲ್ಲಿ ನಡೆಯುತ್ತಿತ್ತು. ನಿಂತು ಹೋಗಿದ್ದ ಈ ಧಾರ್ಮಿಕ ಪ್ರಕ್ರಿಯೆ 48 ವರ್ಷದ ಬಳಿಕ ನಡೆದಿದೆ. ಈ ಮೂಲಕ ಕದ್ರಿ ಮಂಜುನಾಥನ ಕ್ಷೇತ್ರ ಗತವೈಭವದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬಾಳೆಬೈಲು ಶ್ರೀ ಅರಸು …

Read More »

ಪ್ರಧಾನಮಂತ್ರಿ ಜನಔಷಧಿ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರದ ಆದೇಶ ರಾಜಕೀಯಪ್ರೇರಿತ: ಅಶೋಕ್

ಬೆಂಗಳೂರು: ರಾಜ್ಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನಔಷಧಿ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶ ಅತ್ಯಂತ ಜನವಿರೋಧಿ ನಡೆಯಾಗಿದ್ದು, ಇದು ರಾಜಕೀಯ ಪ್ರೇರಿತ ನಿರ್ಧಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಡವರು, ಜನಸಾಮಾನ್ಯರಿಗೆ ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಒದಗಿಸುತ್ತಿರುವ ಜನ ಔಷಧಿ ಕೇಂದ್ರಗಳಿಗೆ ಅವಕಾಶ ನೀಡದಿರಲು ಕಾರಣವೇನು? ಸರ್ಕಾರಿ …

Read More »

ಇದೇನಾ ಬ್ರ್ಯಾಂಡ್ ಬೆಂಗಳೂರು?

ಬೆಂಗಳೂರು: ಭಾನುವಾರ ರಾತ್ರಿ ಸುರಿದ ಪೂರ್ವ ಮುಂಗಾರು ಮಳೆಗೆ ಉದ್ಯಾನ ನಗರಿ ಅಕ್ಷರಶ: ನಲುಗಿದೆ. ವರುಣಾರ್ಭಟದಿಂದ ನಾಗರಿಕರು ಇದೇನಾ ಬ್ರ್ಯಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರೇಟರ್ ಬೆಂಗಳೂರು ಎಂದು ಬದಲಾಗಿರುವ ರಾಜಧಾನಿಯಲ್ಲಿ ಪ್ರತೀ ಬಾರಿ ಮಳೆ ಸುರಿದಾಗಲೆಲ್ಲ ಮನೆಗಳಿಗೆ ನೀರು ನುಗ್ಗುವುದು, ರಸ್ತೆಯಲ್ಲಿ ನೀರು ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. ಮಳೆ ಹಾನಿ ಪ್ರದೇಶಗಳಿಗೆ ಎಡತಾಕುವ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆಗಳನ್ನು ನೀಡುತ್ತಿದ್ಧಾರೆ. ಗೃಹ …

Read More »

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಬ್ಬೂರ ಪಟ್ಟಣದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ‌

ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಬ್ಬೂರ ಪಟ್ಟಣದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ‌ ನೀಡಿ, ವಿವಿಧ ಫಲಾನುಭವಿಗಳಿಗೆ ಯೋಜನೆಗಳನ್ನು ವಿತರಿಸಿದರು. ಈ ವೇಳೆ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ,ಮುಖಂಡರಾದ ಶ್ರೀ‌‌ ಮಹಾವೀರ ಮೊಹಿತೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು. ಕಾಮಗಾರಿಗಳ ವಿವರಗಳು. 1. ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ …

Read More »