Breaking News

Monthly Archives: ಏಪ್ರಿಲ್ 2025

ಮನುವಾದಿಗಳು ಇದ್ದಕಿದ್ದಂತೆ ಅಂಬೇಡ್ಕರ್ ಮೇಲೆ ಪ್ರೀತಿ ಬಂದಂತೆ ಆಡುತ್ತಿದ್ದಾರೆ. ಆದರೆ ಸಂವಿಧಾನವನ್ನು, ಇದರ ಜಾರಿಯನ್ನು ವಿರೋಧಿಸಿದ್ದವರೇ ಇವರು: ಸಿ.ಎಂ ಸಿದ್ದರಾಮಯ್ಯ ವ್ಯಂಗ್ಯ

ಮನುವಾದಿಗಳು ಇದ್ದಕಿದ್ದಂತೆ ಅಂಬೇಡ್ಕರ್ ಮೇಲೆ ಪ್ರೀತಿ ಬಂದಂತೆ ಆಡುತ್ತಿದ್ದಾರೆ. ಆದರೆ ಸಂವಿಧಾನವನ್ನು, ಇದರ ಜಾರಿಯನ್ನು ವಿರೋಧಿಸಿದ್ದವರೇ ಇವರು: ಸಿ.ಎಂ ಸಿದ್ದರಾಮಯ್ಯ ವ್ಯಂಗ್ಯ ಚುನಾವಣೆಯಲ್ಲಿ ನನ್ನ ಸೋಲಿಗೆ ಸಾವರ್ಕರ್ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ: ಸಿ.ಎಂ ಸಿದ್ದರಾಮಯ್ಯ ಆದರೆ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಮನುವಾದಿಗಳು ಅಪಪ್ರಚಾರ ಮಾಡುತ್ತಿದ್ದಾರೆ: ಸಿಎಂ 8300 ಕೋಟಿ scsp/tsp ಹಣ ದುರುಪಯೋಗ ಪಡಿಸಿಕೊಂಡಿದ್ದು ಬಿಜೆಪಿ: ಇವರು ನಾಚಿಕೆ ಇಲ್ಲದೆ ನಮ್ಮ ಮೇಲೆ …

Read More »

ಬಾಬಾಸಾಹೇಬರ ಜಯಂತಿ ಹಿನ್ನೆಲೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬಾಬಾಸಾಹೇಬರ ಜಯಂತಿ ಹಿನ್ನೆಲೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಜೈ ಭೀಮ ಗ್ರುಪ್ ಮಾತಾ ರಮಾಬಾಯಿ ಅಂಬೇಡ್ಕರ ಫೌಂಡೇಶನ್’ನ ಕಾರ್ಯ ಭಾರತ ರತ್ನ , ವಿಶ್ವ ಮಾನವ, ಡಾ, ಬಾಬಾಸಾಹೇಬ ಅಂಬೇಡ್ಕರ ಅವರ 134 ನೇ ಜಯಂತಿಯ ಅಂಗವಾಗಿ ಜೈ ಭೀಮ ಗ್ರುಪ್ ಮಾತಾ ರಮಾಬಾಯಿ ಅಂಬೇಡ್ಕರ ಫೌಂಡೇಶನ್ ಬೆಳಗಾವಿ ವತಿಯಿಂದ ಜಿಲ್ಲಾ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರರ 134ನೇ …

Read More »

ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ : ಎನ್​ಕೌಂಟರ್ ಲೇಡಿ ಸಿಂಗಂ ಹಾಡಿ – ಹೊಗಳುತ್ತಿರುವ ಸಾರ್ವಜನಿಕರು

ಹುಬ್ಬಳ್ಳಿ : ಇಲ್ಲಿನ ಅಶೋಕನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಯತ್ನ ಮಾಡಿ ಬಳಿಕ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿ ಅಶೋಕನಗರ ಮಹಿಳಾ ಪಿಎಸ್‌ಐ ಅನ್ನಪೂರ್ಣಾ ಎನ್‌ಕೌಂಟರ್ ಮಾಡಿದ್ದಾರೆ. ಹುಬ್ಬಳ್ಳಿ – ಧಾರವಾಡದ ಮಹಾನಗರದ ಇತಿಹಾಸದಲ್ಲಿ ನಡೆದ ಮೊದಲ ಎನ್‌ಕೌಂಟರ್ ಕೂಡ ಇದಾಗಿದೆ. ಈ ಹಿಂದೆ ಹಲವು ಬಾರಿ ಗೋಲಿಬಾರ್ ಆಗಿವೆ. ರೌಡಿಗಳ ಕಾಲಿಗೆ ಗುಂಡೇಟು ಬಿದ್ದಿವೆ. ಆದರೆ, …

Read More »

ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ: ‘ಮಗುವಿನ ಮುಖ ನೋಡಲು ಆಗುತ್ತಿಲ್ಲ’: ಸಚಿವ ಸಂತೋಷ್​ ಲಾಡ್

ಹುಬ್ಬಳ್ಳಿ(ಧಾರವಾಡ): “5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಯತ್ನ ಹಾಗೂ ಕೊಲೆ ಇಡೀ ಸಮಾಜ ತಲೆ ತಗ್ಗಿಸುವ ವಿಚಾರ. ಮಗುವಿನ ಮುಖ ನೋಡಲು ಆಗುತ್ತಿಲ್ಲ” ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್​ ಲಾಡ್ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯ ಕಿಮ್ಸ್​​ ಶವಾಗಾರಕ್ಕೆ ಭೇಟಿ ನೀಡಿ ಮೃತ ಮಗುವನ್ನು ನೋಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಬಾಲಕಿಯನ್ನು ಹತ್ಯೆ ಮಾಡಿದ ಆರೋಪಿ ಡ್ರಗ್ ಸೇವನೆ ಬಗ್ಗೆ ಮಾಹಿತಿ …

Read More »

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಸಿದ್ದಾರೂಢರ ಸ್ವಾಮಿಯವರ ರಥೋತ್ಸವ

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಸಿದ್ದಾರೂಢರ ಸ್ವಾಮಿಯವರ ರಥೋತ್ಸವ ಚಿಕ್ಕೋಡಿ:ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಸಿದ್ದಾರೂಢರ ಸ್ವಾಮೀಜಿಯವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಸಿದ್ದಾರೂಢರ ಜಾತ್ರೆಯ ಅಂಗವಾಗಿ ಮಠದ ಆವರಣದಲ್ಲಿ ರಥೋತ್ಸವ ಜರುಗಿತು. ರಥೋತ್ಸವ ಪ್ರಾರಂಭವಾಗುತ್ತಿದಂತೆ ಭಕ್ತರ ಹರ್ಷದ್ಗೋಗಾರ ಮುಗಿಲು ಮುಟ್ಟಿತ್ತು. ರಥೋತ್ಸವ ಹೋಗುತ್ತಿದಂತೆ ಭಕ್ತರು ರಥದ ಮೇಲೆ ಹೂವುಗಳನ್ನು ಅರ್ಪಿಸಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಓಂ ನಮ ಶಿವಾಯ ಮಂತ್ರ ಘೋಷದೊಂದಿಗೆ,ಸಕಲವಾದ್ಯಗಳೊಂದಿಗೆ ಈ …

Read More »

500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬ್ಯಾಂಕ್​​​ ಜನಾರ್ಧನ್​​ ​ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್​​​ ಜನಾರ್ಧನ್​​​ ತಮ್ಮ 76ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಚಂದನವನದ ಖ್ಯಾತ ಹಾಸ್ಯನಟನ ನಿಧನಕ್ಕೆ ಸಂತಾಪ ವ್ಯಕ್ತವಾಗುತ್ತಿದೆ. ​​ ಸಂಜೆ ಅಂತ್ಯಕ್ರಿಯೆ: ಬಹುದಿನಗಳಿಂದ ವಯೋಸಹಜ ಕಾಯಿಲೆ ವಿರುದ್ಧ ಹೋರಾಡುತ್ತಿದ್ದ ಜನಪ್ರಿಯ ನಟ ಮುಂಜಾನೆ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. …

Read More »

ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ

ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ ಮೊಮ್ಮಕ್ಕಳ ಮೇಲಿನ ಹ* ಲ್ಲೆ ಪ್ರಶ್ನಿಸಿದಕ್ಕೆ ಅಜ್ಜಿ, ಮಗ ಹಾಗೂ ಮಗಳ ಮೇಲೆ ಮಾರಣಾಂತಿಕ ಹ*ಲ್ಲೆ‌ ಆರೋಪ ಕೊಡಲಿ ಹಾಗೂ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಆರೋಪ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಘಟನೆ ಘಟನೆಯಲ್ಲಿ ಉಮರಾಣಿ ಗ್ರಾಮದ ಭೀಮಾ ಜಿಡ್ಡಿಮನಿ( 20), ಶೋಭಾ ಶಂಕರ್ ಜಿಡ್ಡಿಮನಿ( 40), ವಿಠ್ಠಲ ಶಂಕರ ಜಿಡ್ಡಿಮನಿಗೆ ಗಂಭೀರ ಗಾಯ ಗಂಭೀರ …

Read More »

ಡ್ರಗ್ಸ್ ಹಾವಳಿ ಹುಬ್ಬಳ್ಳಿ-ಧಾರವಾಡದಲ್ಲಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ, ಏಪ್ರಿಲ್​ 13: ಐದು ವರ್ಷದ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಆರೋಪಿ ಡ್ರಗ್ಸ್ ಮತ್ತಿನಲ್ಲಿ ಕೃತ್ಯವೆಸಗಿದ್ದಾನೆಂದು ಹೇಳುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಡ್ರಗ್ಸ್ ಮಾಫಿಯಾ ಮಟ್ಟ ಹಾಕಬೇಕು. ಆರೋಪಿ ಕೊಲೆ ಮಾಡಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರು ಎನ್​ಕೌಂಟರ್​ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Read More »

ಯುವಕರು ಕ್ರೀಡೆಯಲ್ಲಿ ಭಾಗವಹಿಸಿ: ಉದ್ಯಮಿ ಸಂತೋಷ್ ಜಾರಕಿಹೊಳಿ

ಯುವಕರು ಕ್ರೀಡೆಯಲ್ಲಿ ಭಾಗವಹಿಸಿ: ಉದ್ಯಮಿ ಸಂತೋಷ್ ಜಾರಕಿಹೊಳಿ ಹಿರೇನಂದಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ; ವಿಜೇತರಿಗೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಂದ ಬಹುಮಾನ ವಿತರಣೆ ಗೋಕಾಕ : ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಅಭಿಮಾನಿ ಬಳಗದಿಂದ ಹಿರೇನಂದಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದ್ದು ವಿಜೇತರಿಗೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಬಹುಮಾನ ವಿತರಣೆ ಮಾಡಿದರು. ತಾಲೂಕಿನ ಹಿರೇನಂದಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ನಿಮಿತ್ತ ಶ್ರೀ ಸಂತೋಷ್ …

Read More »

ಬಳ್ಳಾರಿ: ಮಲಗಿರುವಾಗ ನಾಗರ ಹಾವು ಕಡಿದು 10ನೇ ತರಗತಿ ಬಾಲಕಿ ಸಾವು

ಬಳ್ಳಾರಿ: ಮಲಗಿದ್ದಾಗ ನಾಗರ ಹಾವು ಕಡಿದು 10ನೇ ತರಗತಿ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಬಳ್ಳಾರಿ ತಾಲೂಕಿನ ಹೊಸ ಮೋಕಾ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. 15 ವರ್ಷದ ಬಾಲಕಿ ಶ್ರಾವಣಿ ಹಾವು ಕಡಿತದಿಂದ ಮೃತಪಟ್ಟವಳು. ಬಾಲಕಿಯು ಹೊಸ ಮೋಕಾ ಗ್ರಾಮದ ಲಕ್ಷ್ಮಣ ಹಾಗೂ ಶೇಕಮ್ಮ ದಂಪತಿಯ ಮಗಳಾಗಿದ್ದಳು. ಶ್ರಾವಣಿ ಮೋಕಾ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ರಾತ್ರಿ ಮಲಗಿರುವಾಗ ಬಾಲಕಿಗೆ ಮೂರು ಸಲ ನಾಗರ ಹಾವು ಕಚ್ಚಿದೆ. …

Read More »