Breaking News

Monthly Archives: ಏಪ್ರಿಲ್ 2025

ಬರೀ ಜಾತ್ರಿಗೆ ಬಂದ್ ಹೋಗಬ್ಯಾಡ್ರಿ ನಮ್ಗೊಂದ್ ಕನ್ಯೆ ನೋಡಿ

ವಿಜಯಪುರ, ಏಪ್ರಿಲ್​ 23: ಜಾತ್ರೆಯೆಂದರೆ ಅಲ್ಲಿ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಇಡೀ ಊರ ತುಂಬೆಲ್ಲಾ ಜನರು ಸೇರಿರುತ್ತಾರೆ. ತಮ್ಮೂರ ಜಾತ್ರೆಗೆ ಹೆಣ್ಣು ಮಕ್ಕಳು ಸಹ ತವರಿಗೆ ಆಗಮಿಸಿರುತ್ತಾರೆ. ಸಂಬಂಧಿಕರು ಬಂಧು-ಬಳಗ ಕೂಡ ಬಂದಿರುತ್ತಾರೆ. ವಿಜಯಪುರ (Vijayapura) ಜಿಲ್ಲೆಯ ಬಬಲೇಶ್ವರ (Bableshwar) ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಗ್ರಾಮ ದೇವರಾದ ಹನುಮಂತ ದೇವರ ಜಾತ್ರೆ ನಡೆಯುತ್ತಿದೆ. ಜಾತ್ರೆಯ ಪ್ರಯುಕ್ತ ಹಾಲೋಕುಳಿ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಜಾತ್ರೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ಧಾರೆ. …

Read More »

ಮನೆ ಹೊಕ್ಕು RSS ಮುಖಂಡನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ

ಧಾರವಾಡ, ಏಪ್ರಿಲ್​ 23: ಮನೆ ಹೊಕ್ಕು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ (RSS) ಮುಖಂಡನಿಗೆ ನಾಲ್ವರು ಮುಸ್ಲಿಂ ಯುವಕರು ಹಲ್ಲೆ ಮಾಡಿರುವ ಘಟನೆ ಧಾರವಾಡ (Dharwad) ನಗರದ ಹಳೆ ತಹಸೀಲ್ದಾರ್ ಕಚೇರಿ ಓಣಿಯಲ್ಲಿ ನಡೆದಿದೆ. ಸಿರೀಶ್ ಬಳ್ಳಾರಿ ಹಲ್ಲೆಗೊಳಗಾದ ಆರ್​ಎಸ್​ಎಸ್​ ಮುಖಂಡ. ಯುವಕರು ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ, ಸಿರೀಶ್​ ಬಳ್ಳಾರಿಯವರು ದೂರಕ್ಕೆ ಹೋಗಿ ಸಿಗರೇಟು ಸೇದುವಂತೆ ಹೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ನಾಲ್ವರು ಮುಸ್ಲಿಂ ಯುವಕರು, ಸಿರೀಶ್​ ಬಳ್ಳಾರಿಯವರ ಮನೆಯೊಳಗೆ ಹೊಕ್ಕು …

Read More »

ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ

ನವದೆಹಲಿ, (ಏಪ್ರಿಲ್ 23): ಪ್ರವಾಸಕ್ಕೆಂದು ಹೋಗಿ ಕಾಶ್ಮೀರದಲ್ಲಿ (Kashmir) ಸಿಲುಕಿಕೊಂಡಿರುವ ಕರ್ನಾಟಕದ ಜನರಿಗೆ ತವರಿಗೆ ವಾಪಸ್ ಆಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಸ್ಥಳೀಯ ಸಚಿವರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಇನ್ನು ಈ ಸಂಬಂಧ ಇಂದು (ಏಪ್ರಿಲ್ 23) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಸ್ಥಳೀಯ ಸಚಿವರ ಜೊತೆ ಕೇಂದ್ರ ಸಚಿವ …

Read More »

ಬೆಳಗಾವಿ ಗ್ಯಾಂಗ್ ವಾಡಿಯಲ್ಲಿಯುವಕನ ಮೇಲೆ ಚಾಕು ಇರಿತ

ಬೆಳಗಾವಿಯಲ್ಲಿ ಯುವಕನ ಮೇಲೆ ಚಾ*ಕು ಇರಿತ ವ್ಯಕ್ತಿ ‌ಗಂಭೀರ ಗಾ*ಯ. ಬೆಳಗಾವಿ ಗ್ಯಾಂಗ್ ವಾಡಿಯಲ್ಲಿ ನಡೆದ ಘಟನೆ. ಧೀರಜ್ ಚೌಗಲೆ (38) ಗಂಭೀರ ಗಾ*ಯ. ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಯುವಕನಿಗೆ ಚಿಕಿತ್ಸೆ. ಐದು ಜನ ಯುವಕರಿಂದ ಧೀರಜ್ ಚೌಗಲೆಗೆ ಚಾ*ಕು ಇರಿ*ತ. ನಿನ್ನೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಆರಂಭವಾಗಿರೋ ಜಗಳ. ಒಂದೇ ಬಡಾವಣೆಯ ಯುವಕರ ನಡುವೆ ಗ*ಲಾಟೆ‌. ಇಂದು ಮದ್ಯಾಹ್ನ ಧೀರಜ್ ಐದು ಜನ ಯುವಕರಿಂದ ಚಾ*ಕು ಇರಿತ. ಬಿಮ್ಸ್ …

Read More »

ಪೆಹಲ್ಗಾವ್ ಉಗ್ರರ ದಾಳಿಯಿಂದ ಅಚ್ಚರಿ ರೀತಿಯಲ್ಲಿ ಸೇಫ್ ಬಾಗಲಕೋಟೆಯಿಂದ ಕಾಶ್ಮೀರ ಗೆ ತೆರಳಿದ್ದ ಕಾಸೆಟ್ ಕುಟುಂಬ

ಪೆಹಲ್ಗಾವ್ ಉಗ್ರರ ದಾಳಿಯಿಂದ ಅಚ್ಚರಿ ರೀತಿಯಲ್ಲಿ ಸೇಫ್ ಬಾಗಲಕೋಟೆಯಿಂದ ಕಾಶ್ಮೀರ ಗೆ ತೆರಳಿದ್ದ ಕಾಸೆಟ್ ಕುಟುಂಬ ದಾರಿ ಮಧ್ಯ ಗುಡ್ಡ ಕುಸಿತ, ಅರ್ಧಕ್ಕೆ ಮೊಟಕುಗೊಂಡ ಪಹಲಗಾಂ ಪ್ರಯಾಣ ವೈಷ್ಣೋದೇವಿ ದರ್ಶನದಿಂದಲೇ ಕುಟುಂಬ ಸೇಪ್-ಕಾಸಟ್ ಕುಟುಂಬ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಬಾಗಲಕೋಟೆಯ ಕಾಸಟ್ ಕುಟುಂಬ ಫಹಲ್ಗಾವ್ ತೆರಳುವ ಮಾರ್ಗ ಮಧ್ಯೆ ಗುಡ್ಡ ಕುಸಿದ ಕಾರಣ ಪ್ರಯಾಣ ಮೊಟಕುಗೊಳಿಸಿದ್ದರಿಂದ ದಾಳಿಯಿಂದ ಬಚಾವಾಗಿ ಸುರಕ್ಷಿತವಾಗಿದ್ದಾರೆ. ಬಾಗಲಕೋಟೆಯ ಕಾಸಟ್ ಕುಟುಂಬದ ಆನಂದ್ ಕಾಸಟ್ ಈ ಕುರಿತು …

Read More »

ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ಹೊರಟ್ಟಿದ್ದ ಬಾಲಕಿಯೋರ್ವವಳಿಗೆ ಸಿಡಿಲು ಬಡೆದು ಸ್ಥಳದಲ್ಲೇ ಮೃತ

ಬೆಳಗಾವಿ ತಾಲೂಕಿನ ಖನಗಾವ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ಹೊರಟ್ಟಿದ್ದ ಬಾಲಕಿಯೋರ್ವವಳಿಗೆ ಸಿಡಿಲು ಬಡೆದು ಸ್ಥಳದಲ್ಲೇ ಮೃ*ತಪಟ್ಟ ಘಟನೆ ಬುಧವಾರ ನಡೆದಿದೆ. ಅತ್ಸಾ ಜಮಾದಾರ (15) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.‌ ಶಾಲೆ ರಜೆ ಇದ್ದ ಕಾರಣ ತಾಯಿಯೊಂದಿಗೆ ಜಮೀನು ಕೆಲಸಕ್ಕೆ ತೆರಳಿದ್ದ ಬಾಲಕಿ ಮಳೆ ಬರುತ್ತಿದ್ದಂತೆ ಜಮೀನಿನಿಂದ ಹೊರ ಬಂದು ಮರದ ಕೆಳಗಡೆ ನಿಂತಿದ್ದರು. ಏಕಾಏಕಿ ಮಳೆಯ ಸಿಡಿಲು ಬಂದು ಪುಟ್ಟ ಬಾಲಕಿಗೆ ಬಡೆದು ಮೃತಪಟ್ಟಿದ್ದಾಳೆ. ಮೃತ ಬಾಲಕಿಯ …

Read More »

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

ಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ ತನ್ನತ್ತ‌ ತಿರುಗಿ ನೋಡಬೇಕೆಂಬ ಅಧಮ್ಯ ವಿಶ್ವಾಸ. ತಂದೆ – ತಾಯಿಗೆ ಮಗನ ಮೇಲೆ ಬೆಟ್ಟದಷ್ಟು ನಿರೀಕ್ಷೆ. ಅದು ಹುಸಿ ಆಗಲಿಲ್ಲ. ಸತತ ಓದು, ಪರಿಶ್ರಮ ಆತನ ಕೈ ಹಿಡಿದಿದ್ದು, ಯುಪಿಎಸ್ಸಿ ಪರೀಕ್ಷೆಯಲ್ಲಿ 910ನೇ ರ‍್ಯಾಂಕ್ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಹೌದು, ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ ನಂದಿ …

Read More »

ಮೃತದೇಹಗಳನ್ನು ಗುರುತಿಸುತ್ತಿರುವ ಸಚಿವ ಸಂತೋಷ್​ ಲಾಡ್‌

ಧಾರವಾಡ/ಬೆಂಗಳೂರು: ಜಮ್ಮು ಕಾಶ್ಮೀರ ಪಹಲ್ಗಾಮ್​ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಗುರುತು ಪತ್ತೆ ನಡೆಯುತ್ತಿದ್ದು, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಕಣಿವೆನಾಡಿಗೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾಶ್ಮೀರಕ್ಕೆ ತೆರಳಿರುವ ಲಾಡ್‌, ತೊಂದರೆಗೊಳಗಾದ ಕನ್ನಡಿಗರ ನೆರವಿಗೆ ನಿಂತಿದ್ದಾರೆ. ಪಹಲ್ಗಾಮ್‌ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಮೃತರ ಸಂಬಂಧಿಕರೊಂದಿಗೆ ಪಾರ್ಥಿವ ಶರೀರಗಳನ್ನು ಗುರುತಿಸಲು ಸಂತೋಷ್‌ ಲಾಡ್‌ ನೆರವಾಗಿದ್ದಾರೆ. ಮೃತದೇಹಗಳು ನಿಮ್ಮ ಸಂಬಂಧಿಕರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ನೀವು ಎಷ್ಟು ಜನ ಬಂದಿದ್ದೀರಿ ಎಂಬ ಮಾಹಿತಿ …

Read More »

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಪ್ರತಿಭಟನೆ

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆಗೈದ ಉಗ್ರರ ಪೈಶಾಚಿಕ ಕೃತ್ಯವನ್ನು ಖಂಡಿಸಿ ಶಿವಮೊಗ್ಗದಲ್ಲಿ ಇಂದು ಸರಣಿ ಪ್ರತಿಭಟನೆಗಳು ನಡೆದವು. ಜಿಲ್ಲಾ ವಕೀಲ ಸಂಘ ಹಾಗೂ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್​​ ಅವರು ಪ್ರತಿಭಟನೆ ನಡೆಸಿದರೆ, ಜಿಲ್ಲಾ ಕಾಂಗ್ರೆಸ್​ನ ಉತ್ತರ ಬ್ಲಾಕ್​ನ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಲಾಯಿತು. ಜಿಲ್ಲಾ ವಕೀಲರ ಸಂಘವು ಜಿಲ್ಲಾ ವಕೀಲರ ಭವನದಿಂದ ಬಾಲರಾಜ್ ರಸ್ತೆಯಲ್ಲಿ ಸಾಗಿ ಮಹಾವೀರ ವೃತ್ತದ ಮೂಲಕ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟಿಸಿದರು. ನಂತರ …

Read More »

ಯುಪಿಎಸ್​​ಸಿ ಪರೀಕ್ಷೆಯಲ್ಲಿ ಹಾಸನದ ಕೆ.ಎಸ್. ಧನ್ಯಗೆ 982ನೇ ರ‍್ಯಾಂಕ್

ಹಾಸನ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​​ಸಿ) ಈ ಸಾಲಿನ ಪರೀಕ್ಷೆಯಲ್ಲಿ ಸಕಲೇಶಪುರ ಪಟ್ಟಣದ ಮಲ್ಲಿಕಾರ್ಜುನನಗರದ ನಿವಾಸಿ ಕೆ.ಎಸ್.ಧನ್ಯ 982ನೇ ರ‍್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಧನ್ಯ ಅವರು ಇಲ್ಲಿನ ಸಾಂಬಾರ ಮಂಡಳಿಯ ನಿವೃತ್ತ ಸಹಾಯಕ ನಿರ್ದೇಶಕ ಟಿ. ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಹಿರಿಯ ಶಿರಸ್ತೇದಾರ್ ಪಿ. ವಿಜಯಕುಮಾರಿ ದಂಪತಿಯ ಪುತ್ರಿಯಾಗಿದ್ದಾರೆ.ಈ ಹಿಂದೆ ಮೂರು ಸಲ …

Read More »