ಬೆಂಗಳೂರು : ರೈತರು ಕೃಷಿ ವ್ಯವಸಾಯದೊಂದಿಗೆ ಹೈನುಗಾರಿಕೆ ಮತ್ತು ಪಶುಸಂಗೋಪನೆ ಸಹ ಮಾಡುತ್ತಿದ್ದು, ಸರ್ಕಾರ ಹೈನುಗಾರಿಕೆ ಹಾಗೂ ಪಶುಸಂಗೋಪನೆ ಮೂಲಕ ಆರ್ಥಿಕ ಬಲವರ್ಧನೆ ಮಾಡಿಕೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಕೆಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಮುಖ್ಯವಾಗಿ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುತ್ತಿದ್ದು, ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುವ ಸದಸ್ಯರಿಗೆ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ರೂ. 5 ರೂ. ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. …
Read More »Daily Archives: ಏಪ್ರಿಲ್ 5, 2025
ಪಕ್ಷಿಗಳಿಗೆ ನೀರು, ಆಹಾರ ನೀಡುತ್ತಿರುವ ಪಕ್ಷಿಪ್ರೇಮಿಗಳು
ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ಈ ಭಾರಿ ತಾಪಮಾನ 40 ಡಿಗ್ರಿ ತಲುಪಿದೆ. ಜನರಷ್ಟೆ ಅಲ್ಲದೆ, ಪಕ್ಷಿಗಳೂ ಸಹ ಬಿಸಿಲಿನ ಧಗೆ ತಾಳಲಾಗದೆ ಪರದಾಡುತ್ತಿವೆ. ಇದನ್ನು ಮನಗಂಡ ಶಿವಮೊಗ್ಗದ ಪಕ್ಷಿ ಪ್ರೇಮಿಗಳು ಪಕ್ಷಿಗಳಿಗೆ ನೀರು ಹಾಗೂ ಆಹಾರ (ಕಾಳು) ಇಡುವ ಮೂಲಕ ತಮ್ಮ ಪರಿಸರಪ್ರೇಮ ಮೆರೆದಿದ್ದಾರೆ. ಶಿವಮೊಗ್ಗದ ಡಿ.ಕೆ. ಶಿವಕುಮಾರ್ ಬ್ರಿಗೇಡ್ ವಿವಿಧ ಸಂಘಟನೆಗಳ ಜೊತೆ ಸೇರಿ ಪಕ್ಷಿಗಳಿಗೆ ನೀರು ಆಹಾರ ಇಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಮೂಲಗಳು ಬತ್ತುತ್ತವೆ. …
Read More »ರೈತರೇ ಈ ದೇಶದ ಬೆನ್ನೆಲುಬು
ರೈತರೇ ಈ ದೇಶದ ಬೆನ್ನೆಲುಬು” ನಿಪ್ಪಾಣಿ ನಗರದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ “ಕೃಷಿ ಉತ್ಸವ” STALL ಮಳಿಗೆಗಳನ್ನು ಕನ್ನೇರಿಯ ಪ.ಪೂಜ್ಯ.ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಿ,ಮಳಿಗೆಗಳನ್ನು ವಿಕ್ಷಿಸಲಾಯಿತು. ಕೃಷಿ ಮೇಳದಲ್ಲಿ ವಿವಿಧ ತಳಿಯ ವಿಶೇಷ ಜಾನುವಾರು ಪ್ರದರ್ಶನ,ಕೃಷಿ ವಿಚಾರಗಳಿಗೆ ಸಂಬಂಧಪಟ್ಟ ವಿವಿಧ ತಂತ್ರಜ್ಞಾನ ಪ್ರದರ್ಶನ,ಅಟೋಮೊಬೈಲ್ ಮಳಿಗೆ,ಗ್ರಹಪಯೋಗಿ ವಸ್ತುಗಳ ಮಳಿಗೆ,ಆಹಾರ ಮಳಿಗೆಗಳು,ವಿವಿಧ ಬಗೆಯ ಹಲವಾರು ಸ್ಟಾಲ್ ಗಳು ರೈತರ ಮಾಹಿತಿಗಾಗಿ ತೆರದಿರುತ್ತವೆ. ಏಪ್ರಿಲ್ 08 ರವೆಗೆ ನಡೆಯಲಿರುವ ಕೃಷಿ …
Read More »ಹೈಕೋರ್ಟ್ ನ್ಯಾಯಮೂರ್ತಿಗಳು ಆಸ್ತಿ ಘೋಷಿಸುವಂತೆ ಬೆಂಗಳೂರು ವಕೀಲರ ಸಂಘ ಆಗ್ರಹ
ಬೆಂಗಳೂರು : ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿರುವಂತೆ, ಹೈಕೋರ್ಟ್ ನ್ಯಾಯಮೂರ್ತಿಗಳೂ ತಮ್ಮ ಆಸ್ತಿ ವಿವರ ಘೋಷಣೆ ಮಾಡುವಂತೆ ಬೆಂಗಳೂರು ವಕೀಲರ ಸಂಘ ಆಗ್ರಹಿಸಿದೆ. ಈ ಕುರಿತು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತಿತರರ ಪದಾಧಿಕಾರಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಅಲ್ಲದೆ, ಕೂಡಲೇ ಎಲ್ಲಾ ನ್ಯಾಯಮೂರ್ತಿಗಳ ಪೂರ್ಣಪೀಠದ ಸಭೆ ಕರೆದು, ಸಾರ್ವಜನಿಕವಾಗಿ ಆಸ್ತಿ ವಿವರಗಳನ್ನು ಘೊಷಣೆ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!
ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದ ಶ್ರೀ ಮಾರುತೇಶ್ವರ ದೇವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ …
Read More »ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 33ನೇ ನುಡಿಹಬ್ಬ
ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದ 33ನೇ ನುಡಿಹಬ್ಬವು ವಿವಿ ಆವರಣದ ನವರಂಗ ಬಯಲು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ನಡೆಯಿತು. ಈ ವೇಳೆ ಗಣನೀಯ ಸಾಧನೆ ಮಾಡಿದ ಮೂವರಿಗೆ ನಾಡೋಜ ಗೌರವ ಪದವಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಶಿವರಾಜ್ ವಿ. ಪಾಟೀಲ್, ಖ್ಯಾತ ಬರಹಗಾರ, ಚಿಂತಕ ಕುಂ.ವೀರಭದ್ರಪ್ಪ (ಕುಂ.ವೀ) ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್ …
Read More »ಬೆಳಗಾವಿಯಲ್ಲಿ ಸ್ಮೃತಿ ಭವನ ನಿರ್ಮಾಣಕ್ಕೆ ಅನುಮತಿ ನೀಡದಂತೆ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಒತ್ತಾಯ
ಬೆಳಗಾವಿ : ಮಹಾರಾಷ್ಟ್ರ ಸರ್ಕಾರದ ಬೆಂಬಲದೊಂದಿಗೆ ಬೆಳಗಾವಿಯಲ್ಲಿ ಸ್ಮೃತಿ ಭವನ ನಿರ್ಮಾಣಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಂದಾಗಿದೆ. ಇದು ಕನ್ನಡಿಗರನ್ನು ಕೆರಳಿಸಿದೆ. ಯಾವುದೇ ಕಾರಣಕ್ಕೂ ಈ ಭವನ ನಿರ್ಮಾಣಕ್ಕೆ ಅವಕಾಶ ನೀಡದಂತೆ ಕರ್ನಾಟಕ ಸರ್ಕಾರಕ್ಕೆ ಕನ್ನಡ ಸಂಘಟನೆಗಳು ಆಗ್ರಹಿಸಿವೆ. ಹೌದು, ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ”ಸ್ಮೃತಿ ಭವನ” ನಿರ್ಮಾಣಕ್ಕಾಗಿ ಎಂಇಎಸ್ ಮುಖಂಡರು ಇದೇ ಮಾರ್ಚ್ 31 ರಂದು ಭೂಮಿ ಪೂಜೆ ನೆರವೇರಿಸಿದ್ದಾರೆ. 1986ರ ಜೂನ್ 1ರಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ …
Read More »ಬೀದರ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ದುಷ್ಕರ್ಮಿಗಳು ಹಲ್ಲೆ ಮಾಡಿ ಕೊಂದು ಹಾಕಿದ್ದಾರೆ.
ಬೀದರ್: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಮಾಡಿದ ಘಟನೆ ನಗರದ ಹೊರವಲಯದ ಚಿಕ್ಕಪೇಟ್- ಅಲಿಯಾ ಬಾದ್ ರಿಂಗ್ ರೋಡ್ ನಲ್ಲಿರುವ ಢಾಬಾ ಹತ್ತಿರ ಶುಕ್ರವಾರ ಸಂಜೆ ನಡೆದಿದೆ. ತಾಲೂಕಿನ ಹೊನ್ನಿಕೇರಿ ನಿವಾಸಿ, ಗ್ರಾಪಂ ಸದಸ್ಯ ವೈಜಿನಾಥ ದತ್ತಾತ್ರೇಯ (50) ಹತ್ಯೆಯಾದ ಉದ್ಯಮಿ. ಅಪರಿಚಿತರು ವೈಜಿನಾಥ ತಲೆ ಮತ್ತು ಹೊಟ್ಟೆಗೆ ಮಚ್ಚಿನಿಂದ ಕೊಚ್ವಿ, ಚಾಕುವಿನಿಂದ ತಿವಿದು ಹಲ್ಲೆ ಮಾಡಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ …
Read More »ಬೇಸಿಗೆ ವೇಳೆ ಪ್ರಯಾಣಿಕರ ಓಡಾಟ ಹೆಚ್ಚಿರುವ ಕಾರಣ, ದಟ್ಟಣೆ ನಿರ್ವಹಣೆಗಾಗಿ ನೈಋತ್ಯ ರೈಲ್ವೆ ವಿಶೇಷ ಸೇವೆ
ಹುಬ್ಬಳ್ಳಿ : ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಬೆಳಗಾವಿ- ಮವೂ (Belagavi-Mau) ನಡುವೆ 6 ಟ್ರಿಪ್ ಮತ್ತು ಹುಬ್ಬಳ್ಳಿ – ಕಟಿಹಾರ್ (Hubli – Katihar) ನಡುವೆ 4 ಟ್ರಿಪ್ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲಿದೆ. ಈ ವಿಶೇಷ ರೈಲುಗಳ ಸೇವೆ ಈ ಕೆಳಗಿನಂತಿವೆ. 1. ಬೆಳಗಾವಿ-ಮವೂ ನಡುವೆ 6 ಟ್ರಿಪ್ ವಿಶೇಷ ರೈಲು (07327/07328) ಸಂಚಾರ: ರೈಲು ಸಂಖ್ಯೆ 07327 ಏಪ್ರಿಲ್ 6 ರಿಂದ ಮೇ …
Read More »ಸ್ನೇಹಿತೆ ಜೊತೆ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ
ಹಾವೇರಿ: ಸ್ನೇಹಿತೆಯ ಜೊತೆ ಮಾತನಾಡಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳನ್ನು ಹಾವೇರಿ ಶಹರ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಅರುಣ್ ಬಡ್ನಿ, 24 ವರ್ಷದ ನಾಗರಾಜ್ ದೊಡ್ಡವಾಡ , 27 ವರ್ಷದ ಅಕ್ಷಯ್ ಹಾಗೂ 26 ವರ್ಷದ ಚೇತನ್ ಬಂಧಿತ ಆರೋಪಿಗಳಾಗಿದ್ದಾರೆ. ಹಲ್ಲೆ ಹಿಂದಿನ ಕಾರಣ ಇದು: ಹಾವೇರಿಯ ಖಾಸಗಿ ಕಾಲೇಜಿನ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಚೇತನ್ ಅರಗೋಳ್ ಎಂಬ ಯುವಕನನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಖಾಸಗಿ ಕಾಲೇಜ್ ವೊಂದರ …
Read More »