Breaking News

Monthly Archives: ಫೆಬ್ರವರಿ 2025

ಯಲ್ಲಪ್ಪ ಕೋಲ್ಕಾರ್ ಗೆ ರಾಷ್ಟ್ರೀಯ ರತ್ನ ಅವಾಡ್೯

ಯಲ್ಲಪ್ಪ ಕೋಲ್ಕಾರ್ ಗೆ ರಾಷ್ಟ್ರೀಯ ರತ್ನ ಅವಾಡ್೯ ಬೆಳಗಾವಿಅಂತರಾಷ್ಟ್ರೀಯ ವ್ಯಕ್ತಿಗತ ಮಾನವ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಡಮಾಡುವ ರಾಷ್ಟ್ರೀಯ ರತ್ನ ಅವಾಡ್೯ನ್ನು ಯಲ್ಲಪ್ಪ ಲಕ್ಷ್ಮಣ ಕೋಲ್ಕಾರ್ ಅವರಿಗೆ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ನೀಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ಯಲ್ಲಪ್ಪ ಕೋಲ್ಕಾರ್ ಅವರು ಸರಕಾರಿ ಸೇವೆಯ ಜೊತೆಗೆ ಸಾಮಾಜಿಕ ಕಾರ್ಯವನ್ನು ಗುರುತಿಸಿ ರಾಷ್ಟ್ರೀಯ ಅವಾರ್ಡ್ ಪ್ರಶಸ್ತಿ ‌ನೀಡಲಾಗಿದೆ.

Read More »

ಜಾತಿಜನಗಣತಿ ವರದಿ ಜಾರಿಗೊಳಿಸಿ ವಂಚಿತ ಸಮಾಜಕ್ಕೆ ನಾಯ್ಯ ದೊರಕಿಸಲು ಸರ್ಕಾರ ಬದ್ಧ; ಗೃಹ ಸಚಿವ ಜಿ.ಪರಮೇಶ್ವರ

ಜಾತಿಜನಗಣತಿ ವರದಿ ಜಾರಿಗೊಳಿಸಿ ವಂಚಿತ ಸಮಾಜಕ್ಕೆ ನಾಯ್ಯ ದೊರಕಿಸಲು ಸರ್ಕಾರ ಬದ್ಧ; ಗೃಹ ಸಚಿವ ಜಿ.ಪರಮೇಶ್ವರ ದಾವಣಗೆರೆಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ ದಾವಣಗೆರೆಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ ಜಾತಿಜನಗಣತಿ ವರದಿ ಜಾರಿಗೊಳಿಸಿ ವಂಚಿತ ಸಮಾಜಕ್ಕೆ ನಾಯ್ಯ ದೊರಕಿಸಲು ಸರ್ಕಾರ ಬದ್ಧ ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆ ಸೌಲಭ್ಯಗಳಿಂದ ವಂಚಿತ ಸಮಾಜಗಳಿಗೆ ನ್ಯಾಯ ದೊರಕಿಸುವ ಉದ್ಧೇಶದಿಂದ ಸುಮಾರು 160 ಕೋಟಿ ವೆಚ್ಚದಲ್ಲಿ ಮಾಡಲಾದ ಜಾತಿಗಣತಿಯ ವರದಿಯನ್ನು ಸರ್ಕಾರ ಜಾರಿ ಮಾಡಲು ಬದ್ಧವಾಗಿದೆ …

Read More »

ಟಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 10 ರಿಂದ 3 ದಿನಗಳವರೆಗೆ 13ನೇ ಕುಂಭಮೇಳ

ಮೈಸೂರು : ಜಿಲ್ಲೆಯ ಕಾವೇರಿ, ಕಪಿಲ ಹಾಗೂ ಸ್ಫಟಿಕ ಸರೋವರಗಳು ಸೇರುವ ಟಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 10 ರಿಂದ 3 ದಿನಗಳವರೆಗೆ 13ನೇ ಕುಂಭಮೇಳ ಜರುಗಲಿದೆ. ಆರು ವರ್ಷಗಳ ನಂತರ ನಡೆಯುತ್ತಿರುವ ಕುಂಭಮೇಳದಲ್ಲಿ ಅಪಾರ ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಟಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆ.12 ರಂದು ಪವಿತ್ರ ಕುಂಭಸ್ನಾನ ನಡೆಯಲಿದೆ. ಅಂದು ಬೆಳಗ್ಗೆ 9 ರಿಂದ …

Read More »

ವೈದ್ಯರ ಪತ್ನಿ ಒಬ್ಬರೇ ಇದ್ದ ವೇಳೆ ಮನೆಗೆ ನುಗ್ಗಿದ್ದ ಕಳ್ಳರು ಅವರ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಕದ್ದು ಪರಾರಿ

ಧಾರವಾಡ: ಶನಿವಾರ (ಫೆ. 8) ಹಾಡಹಗಲೇ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅಶೋಕ್​ ಹೊಸಮನಿ, ಶಿವಕುಮಾರ್ ಕೋಕಾಟಿ, ಶಿವಾನಂದ ಕರಡಿಗುಡ್ಡ ಬಂಧಿತರು. ಆರೋಪಿಗಳಿಂದ ಮೂರು ಬೈಕ್ ಹಾಗೂ ಚಿನ್ನಾಭರಣ, ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಧಾರವಾಡ ಮಾಳಮಡ್ಡಿ ಬಡಾವಣೆಯಲ್ಲಿ ನಿನ್ನೆ ಡಾ. ಆನಂದ ಕಬ್ಬೂರ ಅವರು ಮನೆಯಲ್ಲಿಲ್ಲದ ವೇಳೆ ಕಳ್ಳರು ಅವರ ಪತ್ನಿ ವಿನೋದಿನಿ ಅವರು ಒಬ್ಬರೇ ಇದ್ದು, ಅವರ ಮೇಲೆ ಹಲ್ಲೆ …

Read More »

ಕುಂಭಮೇಳದಲ್ಲಿ ಶಾಸಕ ಯತ್ನಾಳ ಫೋಟೊ ಜೊತೆಗೆ ಮುಂದಿನ ಸಿಎಂ ಎಂದು ಘೋಷಣೆ*

: ಕರ್ನಾಟಕದ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರದಿಂದ ಕಮಲದ ಮನೆಯಲ್ಲಿ ಒಡಕು ಮೂಡಿದೆ. ಹಾಲಿ ಅಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ನಡುವೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಇನ್ನೂ ಪ್ರಯಾಗ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಶಾಸಕ ಯತ್ನಾಳ ಭಾವಚಿತ್ರ ಹಾಗೂ ಘೋಷಣೆಗಳು ರಾರಾಜಿಸಿವೆ. ವಿಜಯಪುರ ಜಿಲ್ಲೆ ಹಾಗೂ ಬಾಗಲಕೋಟ ಜಿಲ್ಲೆಯ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪೊಟೊ ಹಿಡಿದು …

Read More »

ಸರ್ವೀಸ್ ರಸ್ತೆ ಬಂದ್: ಬೆಂ-ಮೈ ಎಕ್ಸ್​ಪ್ರೆಸ್​​ವೇಯಲ್ಲಿ ಟೋಲ್ ತಪ್ಪಿಸಿಕೊಳ್ಳುವವರಿಗೆ ಶಾಕ್

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಟೋಲ್ ತಪ್ಪಿಸಿಕೊಂಡು ಹೋಗುತ್ತಿರುವ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೊಡ್ಡ ಶಾಕ್ ನೀಡಿದೆ. ಟೋಲ್ ತಪ್ಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಬಂದ್ ಮಾಡಲಾಗಿದೆ. ಈ ಮೂಲಕ ಟೋಲ್ ಕಟ್ಟಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗಳಿಂದ ತಪ್ಪಿಸಿಕೊಳ್ಳಲು ಅನ್ಯ ಮಾರ್ಗಗಳನ್ನು ಬಳಸುವುದು, ಬಳಿಕ ಹೆದ್ದಾರಿಗೆ ಎಂಟ್ರಿ ಕೊಡುವ ವಾಹನ ಚಾಲಕರ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹದ್ದಿನ …

Read More »

45 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕೆಎಸ್​​ಆರ್​ಟಿಸಿ ಬಸ್ ಚಾಲಕನಿಗೆ ದಿಢೀರ್ ಮೂರ್ಛೆ ರೋಗ ಕಾಣಿಸಿಕೊಂಡು, ಬಸ್​ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ: ಚಾಲಕ ಮೂರ್ಛೆ ಬಿದ್ದು ನಿಯಂತ್ರಣ ತಪ್ಪಿದ KSRTC ಬಸ್​ ಮರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರು ಗಾಯಗೊಂಡ ಘಟನೆ ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ ಇಂದು ನಡೆಯಿತು. ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್​​ ಇದಾಗಿದ್ದು, ಚಾಲಕನಿಗೆ ದಿಢೀರ್ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಪರಿಣಾಮ, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಮುಂಭಾಗದಲ್ಲಿ ಕುಳಿತಿದ್ದ ಐವರು …

Read More »

ಸಿಗರೇಟ್ ಪಡೆದು ಅಂಗಡಿ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದ ಆರೋಪಿಯ ಬಂಧನ

ಬೆಂಗಳೂರು: ಅಂಗಡಿಯೊಂದರಲ್ಲಿ ಸಿಗರೇಟ್​ ಪಡೆದು ಹಣ ನೀಡದೇ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಂದ್ರನಗರದ ನಿವಾಸಿ ಗೌತಮ್‌ (25) ಬಂಧಿತ. ಫೆಬ್ರವರಿ 4ರಂದು ಕೋರಮಂಗಲದ ರಾಜೇಂದ್ರ ನಗರದ 80 ಅಡಿ ರಸ್ತೆಯ ಸಭಾನಾ ಸ್ಟೋರ್‌ ಎಂಬ ಅಂಗಡಿಯ ಸಿಬ್ಬಂದಿ ನಿಸಾರ್‌ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 4ರಂದು ರಾತ್ರಿ 10.15ರ ಸುಮಾರಿಗೆ ಅಂಗಡಿಗೆ ತೆರಳಿದ್ದ ಆರೋಪಿ, …

Read More »

ಕರ್ನಾಟಕದಲ್ಲಿ ಕೂಡ ಕುಂಭಮೇಳ ಆರಂಭ

ಮೈಸೂರು, ಫೆಬ್ರವರಿ 09: ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ 144 ವರ್ಷಗಳ ಬಳಿಕ ಪವಿತ್ರ ಕುಂಭಮೇಳ (Kumbh Mela) ನಡೆಯುತ್ತಿದೆ. ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಇದೀಗ ಇತ್ತ ಕರ್ನಾಟಕದಲ್ಲಿ ಕೂಡ ಕುಂಭಮೇಳ ಆರಂಭವಾಗುತ್ತಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ಅಂದರೆ ಫೆ. 10 ರಿಂದ 3 ದಿನಗಳ ಕಾಲ ಕುಂಭಮೇಳ ನಡೆಯಲಿದೆ. ಮೂರು ವರ್ಷಕ್ಕೊಮ್ಮೆ ಜಿಲ್ಲೆಯ ಟಿ.ನರಸೀಪುರದ ತಿರುಮಕೂಡಲಿನಲ್ಲಿ ಕುಂಭಮೇಳ ನಡೆಯಲಿದ್ದು, ನಾಳೆ ಸಚಿವ ಡಾ ಹೆಚ್. ಸಿ‌ ಮಹದೇವಪ್ಪ ಕುಂಭಮೇಳಕ್ಕೆ …

Read More »

ರಾತ್ರೋರಾತ್ರಿ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿರುವುದು ವಿವಾದಕ್ಕೆ ಕಾರಣ

ಮೈಸೂರು: ಟಿ ನರಸೀಪುರ ರಸ್ತೆಯಲ್ಲಿ ರಾತ್ರೋರಾತ್ರಿ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಆಗಮಿಸಿ ಅದನ್ನು ತೆರವಿಗೊಳಿಸಬೇಕೆಂದು ಪೊಲೀಸರು ಹೇಳಿದಾಗ ಒಕ್ಕಲಿಗ ಸಂಘದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಪರವಾಗಿ ಮಾತಾಡಿದ ಒಕ್ಕಲಿಗ ಮುಖಂಡರೊಬ್ಬರು ಕಳೆದ ಮೂರು ವರ್ಷಗಳಿಂದ ಸ್ಥಳದಲ್ಲಿ ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪಿಸುವುದಕ್ಕೆ ಪ್ರಯತ್ನಗಳು ನಡೆದಿದ್ದವು. ಶಾಸಕರಾದ ಶ್ರೀವತ್ಸ ಮತ್ತು ಹರೀಶ್ ಸಮಯ ತೆಗೆದುಕೊಂಡಿದ್ದರೂ ಪ್ರತಿಮೆ ಪ್ರತಿಷ್ಠಾಪನೆಗೆ ಅನುಮತಿ ಪಡೆದುಕೊಳ್ಳಲಿಲ್ಲ. ಹಾಗಾಗಿ ಸ್ಥಳೀಯರೇ ನಿನ್ನೆ …

Read More »