ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಮತ್ತು ಕೃಷಿ ಮಾರುಕಟ್ಟೆ ಮತ್ತು ಜವಳಿ ಹಾಗೂ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ರವರ ಉಪಸ್ಥಿತಿಯಲ್ಲಿ ವಿಕಾಸಸೌಧದಲ್ಲಿ ಇಂದು ಸಕ್ಕರೆ ಕಾರ್ಖಾನೆಗಳ ನೌಕರರ ವೇತನ ಪರಿಷ್ಕರಣೆಯ ತ್ರಿಪಕ್ಷೀಯ ವೇತನ ಸಭೆ ನಡೆಯಿತು. ಸಭೆಯಲ್ಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳಾದ ಎನ್. ವಿ. ಪ್ರಸಾದ್, ಕಾರ್ಮಿಕ ಆಯುಕ್ತರಾದ ಗೋಪಾಲಕೃಷ್ಣ, ಜಂಟಿ ಕಾರ್ಮಿಕ ಆಯುಕ್ತರಾದ ರವಿಕುಮಾರ್ ಸಕ್ಕರೆ ಕಾರ್ಖಾನೆಗಳ ನೌಕರ ವರ್ಗದ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
Read More »Monthly Archives: ಫೆಬ್ರವರಿ 2025
ಶಿವಮೊಗ್ಗ ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ
ಬೆಂಗಳೂರು : ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ನಿನ್ನೆ ಸಂಜೆ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವ ಸಚಿವರು, ಹುಲಿಗೆ …
Read More »ಜೇಡಿ ಮಣ್ಣಿನಿಂದ ಸೃಜನಾತ್ಮಕವಾಗಿ ವಸ್ತುಗಳನ್ನು ತಯಾರಿಸಿದ ಬೆಳಗಾವಿ ಶಾಲಾ ಮಕ್ಕಳು.
ಬೆಳಗಾವಿ: ತಾಲೂಕಿನ ಬೆಳಗುಂದಿಯಲ್ಲಿರುವ ಬಾಲವೀರ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಜೇಡಿಮಣ್ಣಿನಿಂದ ವಸ್ತುಗಳನ್ನು ತಯಾರಿಸುವ ವಿಶೇಷ ಉಪಕ್ರಮವನ್ನು ನಡೆಸಲಾಯಿತು. ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಜೇಡಿಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸಲು ಹೇಳಿದ್ದರು. ಅದರಂತೆ, ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ವಿದ್ಯಾರ್ಥಿಗಳು ಜೇಡಿಮಣ್ಣಿನಿಂದ ಎತ್ತುಗಳು, ಎತ್ತಿನ ಬಂಡಿಗಳು, ಆಟಿಕೆಗಳು ಮತ್ತು ಅಡುಗೆ ಪಾತ್ರೆಗಳನ್ನು ಸೃಜನಾತ್ಮಕವಾಗಿ ತಯಾರಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ತೇಜಸ್ವಿನಿ ಭಡಾಂಗೆ, ಸುಷ್ಮಾ ಸುತಾರ್, ಪೂಜಾ ಪಾಟೀಲ್, ಶೈಲಾ ಕೋಳಿ, …
Read More »ಯಾವುದೇ ಗೊಂದಲಗಳಿಲ್ಲದೆ ಪಿಯು ಪರೀಕ್ಷೆ ನಡೆಸಿ : ಪಿ.ಯು ಡಿ ಡಿ ಕರೆ
ಬೆಳಗಾವಿ: ಜಿಲ್ಲೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷಾ ಸಿದ್ಧತೆಗಳ ಕುರಿತು ಮಹತ್ವದ ಸಭೆ ಇಂದು ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ನಡೆಯಿತು ಸಭೆಯಲ್ಲಿ ಪಿಯು ಉಪ ನಿರ್ದೇಶಕರು , ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಜರಿದ್ದರು ಈ ಸಂದರ್ಭದಲ್ಲಿ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿ ಪೂರ್ವ ಕಾಲೇಜು ಉಪನಿರ್ದೇಶಕ ಪಿ.ಐ. …
Read More »ರೈತರ ಮನವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಂದನೆ; ಇನ್ನೂ 15 ದಿನ ಮಲಪ್ರಭಾ ಜಲಾಶಯದಿಂದ ನೀರು ಬಿಡಲು ಆದೇಶ
ಬೆಳಗಾವಿ: ಮಲಪ್ರಭಾ ಜಲಾಶಯದಿಂದ ಕಾಲುವೆಗಳಿಗೆ ಹರಿಬಿಡಲಾಗಿರುವ ನೀರನ್ನು ಫೆಬ್ರವರಿ 15ರಿಂದ ಸ್ಥಳಗಿತಗೊಳಿಸುವ ನಿರ್ಧಾರವನ್ನು ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಕೈಬಿಟ್ಟು, ಮಾರ್ಚ್ 1ರ ವರೆಗೂ ನೀರು ಬಿಡುವಂತೆ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆದೇಶಿಸಿದ್ದಾರೆ. ಈ ಕುರಿತು ಧಾರವಾಡ ವಾರ್ತಾ ಇಲಾಖೆ ಮಾಹಿತಿ ನೀಡಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 15ರಂದು ಜರುಗಿದ್ದ ಸಭೆಯಲ್ಲಿ ಶಾಸಕರುಗಳು, …
Read More »ಹಿಂಡಲಗಾ ಜೈಲಿನ ಜಾಮರ್ ತಂದೊಡ್ಡಿದ ತೊಂದರೆ… ನೆಟವರ್ಕ್ ಸಿಗದೇ ಪರಿತಪಿಸುತ್ತಿರುವ ಜನತೆ..
ಬೆಳಗಾವಿ: ಹಿಂಡಲಗಾ ಜೈಲಿನ ವತಿಯಿಂದ ಜೈಲಿನ ಹಿತಾಸಕ್ತಿಯಲ್ಲಿ ಅಳವಡಿಸಿದ ಜಾಮರನಿಂದಾಗಿ ಜೈಲಿನ ಅಕ್ಕಪಕ್ಕದ ನಾಗರಿಕರಿಗೆ ನೆಟವರ್ಕ್ ಸಿಗದೇ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಬೆಳಗಾವಿಯ ಹಿಂಡಲಗಾ ಜೈಲಿನ ಮೂಲಕ ಜಾಮರ್ ಅಳವಡಿಸಲಾಗಿದ್ದು, ಜೈಲಿನ ಅಕ್ಕಪಕ್ಕದ ಜನವಸತಿಯಲ್ಲಿಯೂ ನೆಟವರ್ಕ್ ಸಿಗದೇ ಜನರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಈಗಾಗಲೇ ನಾಗರೀಕರು ಜೈಲಿನ ಆಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದು, ಜಾಮರನ ಮಿತಿಯನ್ನು ಕಡಿಮೆಗೊಳಿಸಬೇಕೆಂದು ಆಗ್ರಹಿಸಲಾಗಿದೆ. ಕಳೆದ 5 ದಿನಗಳಿಂದ ಹಿಂಡಲಗಾ ಗ್ರಾಮ …
Read More »ಲೋಕಾಯುಕ್ತ ಸ್ವತಂತ್ರ ಸಂಸ್ಥೆ…ಸಿಎಂ ಕಂಟ್ರೋಲನಲ್ಲಿ ಬರಲ್ಲ; ಡಿಸಿಎಂ ಡಿ.ಕೆ.ಶಿವಕುಮಾರ್.
ಬೆಂಗಳೂರು: ಮುಡಾ ವಿರುದ್ಧ ದೋಸ್ತಿ ಪಾದಯಾತ್ರೆ ರಾಜಕೀಯ ಪ್ರೇರಿತ ಎಂದು ಮೊದಲೇ ಹೇಳಿದ್ದೆ. ಲೋಕಾಯುಕ್ತ ಸಂಸ್ಥೆ ಸ್ವತಂತ್ರ್ಯವಾಗಿದ್ದು, ಮುಖ್ಯಮಂತ್ರಿಗಳ ನಿಯಂತ್ರಣದಲ್ಲಿರಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದಾಗಲೇ ಬಿಜೆಪಿ ಮತ್ತು ಜೆ.ಡಿ.ಎಸ್. ಬಗ್ಗೆ ಇದು ರಾಜಕೀಯ ಪ್ರೇರಿತ ಎಂದು ಹೇಳಿದ್ದೆ. ಕ್ಲೇಮ್ ಕೇಳಿದಾಗ ನೀಡಿದ್ದಾರೆ. ಲೋಕಾಯುಕ್ತ ಒಂದು ಸ್ವತಂತ್ರ್ಯ ಸಂಸ್ಥೆ ಇಲ್ಲಿ ಯಾವುದೇ ಪ್ರಭಾವವಿಲ್ಲ. ಯಾವುದಾದರೂ ಕೇಸ್ ಹಾಕಲು ಎವಿಡೆನ್ಸ …
Read More »ಹು-ಧಾ ಕಮಿಷನರ್ ಕಾರ್ಯವನ್ನು ಮೆಚ್ಚಿ ಅಂತರ್ ರಾಜ್ಯದಿಂದ ಬಂದ ಅಭಿಮಾನಿ.
ಹು-ಧಾ ಪೊಲೀಸ್ ಕಮಿಷನರ್ ಕಾರ್ಯಕ್ಕೆ ಧಾರವಾಡ ಜಿಲ್ಲೆ ಜನೆತೆ ಮೆಚ್ಚುಗೆ ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಇದೀಗ ಹೊರ ರಾಜ್ಯದ ಜನರು ಕೂಡ ಹು-ಧಾ ಪೊಲೀಸ್ ಕಮಿಷನರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಮಿಷನರ್ ಅವರನ್ನ ಭೇಟಿಯಾಗಿ ಅಭಿನಂದಿಸಿದ್ದಾರೆ. ಹು-ಧಾ ಅವಳಿನಗರಕ್ಕೆ ಕಮಿಷನರ್ ಆಗಿ ನೇಮಕ ಆಗಿದ್ದಾಗನಿಂದ ಕಮಿಷನ್ ಎನ್.ಶಶಿಕುಮಾರ ಅವರ ನೇತೃದಲ್ಲಿ ಅನೇಕ ಪ್ರಕರಣವನ್ನು ಬೇದಿಸಿದ್ದರು. ಹಾಗೂ ಅವಳಿ ನಗರದಲ್ಲಿ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿದರು. ಯುವತಿಯರನ್ನ ಚುಡಾಯಿಸಿಯುವ ಪುಂಡ …
Read More »ದುಷ್ಕರ್ಮಿಗಳು ಉದ್ಯಮಿಯನ್ನು ಅಪಹರಣ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ : ಸಿನಿಮೀಯ ರೀತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ದಂಡಾಪುರ ಕ್ರಾಸ್ ಬಳಿ ನಡೆದಿದೆ. ರಾಜಾಪುರ ಗ್ರಾಮದ ನಿವಾಸಿ ಬಸವರಾಜ್ ಅಂಬಿ(48) ಅಪಹರಣಕ್ಕೆ ಒಳಗಾದ ಉದ್ಯಮಿ. ಫೆ.14 ರಂದು ರಾತ್ರಿ ಬಸವರಾಜ್ ಅವರನ್ನು ಅಪಹರಣ ಮಾಡಿದ್ದಾರೆ. ಅಪಹರಣದ ಬಳಿಕ ಬಸವರಾಜ್ ಪತ್ನಿಗೆ ಮಂಗಳವಾರ (ಫೆ.18) ತಡರಾತ್ರಿ ಕರೆ ಮಾಡಿರುವ ಕಿಡ್ನಾಪರ್ಸ್, ಬಸವರಾಜ್ ಅಂಬಿಯನ್ನು ಬಿಡಿಸಿಕೊಂಡು ಹೋಗಬೇಕು ಎಂದಿದ್ದರೆ, 5 ಕೋಟಿ ರೂ. …
Read More »ದಲಿತ ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಹೇಳಿಲ್ಲ: ಸಚಿವ ಮುನಿಯಪ್ಪ
ಬೆಂಗಳೂರು: ದಲಿತ ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಹೇಳಿಲ್ಲ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದೆಯೇ ಹೈಕಮಾಂಡ್ ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ಒಗ್ಗೂಡಿಸಿ ಅಂತ ಹೇಳಿತ್ತು. ಹೈಕಮಾಂಡ್ ಯಾವಾಗ ಸಮಾವೇಶ ಮಾಡಬೇಕೆಂದು ಹೇಳುತ್ತದೋ ಆವಾಗ ಸಮಾವೇಶವನ್ನು ಮಾಡುತ್ತೇವೆ ಎಂದರು. ನಾನೇನೂ ಹೈಕಮಾಂಡ್ ಭೇಟಿಯಾಗಲ್ಲ. ಸಮಾವೇಶ ಮಾಡಬೇಕು ಅಂತ ರಾಜಣ್ಣ, ಪರಮೇಶ್ವರ್ ಸೇರಿ ಹಲವರು ಮನವಿ ಮಾಡಿದ್ದಾರೆ. ಬೇರೆಯವರು ಹೇಳಿದ್ದನ್ನೇ ನಾನು …
Read More »