Breaking News

Daily Archives: ಫೆಬ್ರವರಿ 25, 2025

ಬೆಳಗಾವಿಯಲ್ಲಿ ಮತ್ತೆ ಮರಾಠಿ ಯುವಕರ ಗೂಂಡಾಗಿರಿ: ಕರವೇ ತಾಲೂಕು ಉಪಾಧ್ಯಕ್ಷನಿಗೆ ಥಳಿತ

ಬೆಳಗಾವಿ, (ಫೆಬ್ರವರಿ 24): ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬೆಳಗಾವಿಯಲ್ಲಿ ಮರಾಠಿ ಪುಂಡರು ಕರ್ನಾಟಕ ಬಸ್​ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡಂತಿದೆ. ಇದರ ಬೆನ್ನಲ್ಲೇ ಇದೀಗ ಬೆಳಗಾವಿಯಲ್ಲಿ ಮತ್ತೆ ಮರಾಠಿ ಯುವಕರ ಗೂಂಡಾಗಿರಿ ಮುಂದುವರೆದಿದ್ದು, ಕನ್ನಡ ಮಾತಾಡಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ತಾಲೂಕು ಉಪಾಧ್ಯಕ್ಷನಿಗೆ ಥಳಿಸಿರುವ ಘಟನೆ ನಡೆದಿದೆ. ಖಾನಾಪುರ ತಾಲೂಕು ಕರವೇ …

Read More »

ದೂರು ನೀಡಲು ಹೋದ ಬಾಲಕಿಯನ್ನು ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ

ಬೆಂಗಳೂರು, (ಫೆಬ್ರವರಿ 24): ಸಾರ್ವಜನಿಕರ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಪೊಲೀಸರ ಕರ್ತವ್ಯ. ಆದ್ರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ದೂರು ನೀಡಲು ಬಂದಿದ್ದ ಅಪ್ರಾಪ್ತೆ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ದೂರು ನೀಡಲು ಠಾಣೆಗೆ ಬಂದ ಅಪ್ರಾಪ್ತೆ ವಯಸ್ಸಿನ ಹುಡುಗಿಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ ಎಂದು ಬೊಮ್ಮನಹಳ್ಳಿ ಠಾಣೆಯ ಕಾನ್ ಸ್ಟೇಬಲ್ ಅರುಣ್ ವಿರುದ್ಧ ಗಂಭೀರ ಆರೋಪ ಬಂದಿದ್ದು, ಈ …

Read More »

ಪ್ರೀತ್ಸೆ…ಪ್ರೀತ್ಸೆ ಎಂದು ವಿವಾಹಿತ ಮಹಿಳೆ ಬಲಿ ಪಡೆದ ಕಾಮಿ

ಬೆಂಗಳೂರು, (ಫೆಬ್ರವರಿ 24): ಸೂರ್ಯ ಮತ್ತು ನಂದಿನಿ ಅಕ್ಕ ಪಕ್ಕದ ಮನೆಯವರಾಗಿದ್ದು, ಇಬ್ಬರು ಎಂಟು ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ನಂದಿನಿ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸೂರ್ಯ ಇನ್ವಿಟೇಷನ್ ಕಾರ್ಡ್ ಪ್ರಿಂಟ್ ಮಾಡೋ ಕೆಲಸ ಮಾಡುತ್ತಿದ್ದ. ಹೀಗಿದ್ದವರ ಬಾಳಲ್ಲಿ ಈಗ ಬಿರುಗಾಳಿ ಎದ್ದಿದ್ದು, ಪತ್ನಿ ಸಾವಿನ ಮನೆ ಸೇರಿದ್ದಾಳೆ. ಹೌದು..ಫೆಬ್ರವರಿ 23 ರಂದು ರಾತ್ರಿ 9.30 ರ ಸಮಯ. ಚಾಮರಾಜಪೇಟೆ ಏರಿಯಾದಲ್ಲಿರುವ ಮನೆಯಲ್ಲಿ ಗಂಡ ಮತ್ತು ಮಗ ಬೇಕರಿಗೆ …

Read More »

ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ, ಇಬ್ಬರ ವೈಯಕ್ತಿಕ ಜಗಳ,ಇದಕ್ಕೆ ಕನ್ನಡ-ಮರಾಠಿ ಬಣ್ಣ ಬಳಿಯಬಾರದು: ಸತೀಶ್ ಜಾರಕಿಹೊಳಿ

ಬೆಳಗಾವಿ (ಫೆ.25): ಭಾಷಾ ಸಂಘರ್ಷದಿಂದ ಶಾಂತಿ, ನೆಮ್ಮದಿ, ಉದ್ಯೋಗಕ್ಕೆ ಸಮಸ್ಯೆಯಾಗಲಿದೆ. ಕಾನೂನು ಸುವ್ಯವಸ್ಥೆ, ಶಾಂತಿ ಸೌಹಾರ್ದತೆ ಕಾಪಾಡಬೇಕಿದೆ. ಗಡಿಭಾಷೆ ಸಂಘರ್ಷ ಮರುಕಳಿಸದಂತೆ ಸರ್ಕಾರ ಎಲ್ಲಾ ರೀತಿ ಕ್ರಮಕೈಗೊಳ್ಳಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಇದು ಇಬ್ಬರ ವೈಯಕ್ತಿಕ ಜಗಳವಾಗಿದ್ದು, ಇದಕ್ಕೆ ಕನ್ನಡ-ಮರಾಠಿ ಬಣ್ಣ ಬಳಿಯಬಾರದು. ಇದರಿಂದ ಬೆಳಗಾವಿ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ ಎಂದರು. …

Read More »

ಬಜೆಟ್ ಅಧಿವೇಶನ ಪ್ರಾರಂಭ 6 ಬೇಡಿಕೆಗಳನ್ನಿಟ್ಟ ಸ್ವಾಮೀಜಿಗಳ ನಿಯೋಗ

ಬೆಂಗಳೂರು, ಫೆಬ್ರವರಿ 25: ಸಿಎಂ ಸಿದ್ದರಾಮಯ್ಯ ಈ ಬಾರಿ 16ನೇ ಬಜೆಟ್ ಮಂಡಿಸಲಿದ್ದಾರೆ. ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಸತತ 2-3 ವಾರಗಳಿಂದ‌ ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ವ್ಯಸ್ತರಾಗಿದ್ದಾರೆ. ವಿವಿಧ ಇಲಾಖೆಗಳ ಸಚಿವರು, ಅಧಿಕಾರಗಳ ಜೊತೆ ಸರಣಿ ಸಭೆ ನಡೆಸುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ವಿವಿಧ ಸಮುದಾಯಗಳ ಮಠಾಧೀಶರ ಜೊತೆಗೂ ಸೋಮವಾರ ಸಭೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ‌. ಸಚಿವರಾದ ಎಂಬಿ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಸೇರಿದಂತೆ …

Read More »

ನಿಡಸೋಸಿ ಗೇಟ ಹತ್ತಿರ ಸ್ವೀಟ ಮಾರ್ಟಗೆ ಬೆಂಕಿ

ನಿಡಸೋಸಿ ಗೇಟ ಹತ್ತಿರ ಸ್ವೀಟ ಮಾರ್ಟಗೆ ಬೆಂಕಿ ಅನಾಹುತ ಲಕ್ಷಾಂತರ ರೂಪಾಯಿ ಹಾನಿ.ಹುಕ್ಕೇರಿ ತಾಲೂಕಿನ ಸಂಕೇಶ್ವರ ಹತ್ತಿರ ನಿಡಸೋಸಿ ಗೇಟ ಹತ್ತಿರ ಕೃಷ್ಣಾ ಪ್ಯಾಲೇಸ್ ಪಕ್ಕದ ಸ್ವೀರ್ಟ ಮಾರ್ಟ ಮತ್ತು ಬೇಕರಿಗೆ ಆಕಸ್ಮಿಕ ಅಗ್ನಿ ಅನಾಹುತ ಸಂಭವ೮ಸಿ ಲಕ್ಷಾಂತರ ರೂಪಾಯಿ ಹಾನಿ ಯಾದ ಘಟನೆ ಜರುಗಿದೆ. ಇಂದು ಸಂಜೆ ಆಕಸ್ಮಿಕವಾಗಿ ಬೆಂಕಿ ಅಯ್ಯಂಗಾರ್ ಬೇಕರಿಗೆ ಹತ್ತಿ ಕ್ಷಣಾರ್ಧದಲ್ಲಿ ಹೋತ್ತಿ ಉರಿದಿದೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ಹತೋಟಿಗೆ …

Read More »