Breaking News

Daily Archives: ಫೆಬ್ರವರಿ 18, 2025

ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸೊಸೈಟಿಗೆ ಅವಿರೋದವಾಗಿ ಆಯ್ಕೆಯಾದ ಎಸ್ ಜಿ ಕರಂಬಳಕರ.

ಬೆಳಗಾವಿ: ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸೊಸೈಟಿ ಶಿವಾಜಿನಗರ ಬೆಳಗಾವಿ ನೂತನ ಅಧ್ಯಕ್ಷರಾಗಿ ಎಸ್ ಜಿ ಕರಂಬಳಕರ ಅವಿರೋದವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಈರಣ್ಣ ಜಿ .ಗೂಳಪ್ಪನವರ. ಅವಿರೋಧವಾಗಿ ಆಯ್ಕೆಯಾದರು.ಎಂದು ಚುನಾವಣಾ ಅಧಿಕಾರಿಗಳಾದ ಶ್ರೀ.ಎಮ್.ಎಸ್.ಗೌಡಪ್ಪನವರ ಘೋಷಣೆ ಮಾಡಿದರು. ಅವಿರೋಧವಾಗಿ ಆಯ್ಕೆಯಾಗಲು ಎಲ್ಲ ನಿರ್ದೇಶಕರಾದ ಶ್ರೀ ಅನ್ವರ್ ಲಂಗೋಟಿ. ಆನಂದಗೌಡ ಕಾದ್ರೊಳ್ಳಿ. ಅರ್ಜುನ್ ಸಾಗರ್. ಸಂಜಯ್ ಚಿಗರೆ .ಈಶ್ವರ್ ಪಾಟೀಲ್. ಸಾಗರ್ ಹರಾಡೆ .ಮತ್ತು ಶ್ರೀಮತಿ ಅನುರಾಧಾ ತಾರೀಹಾಳ್ಕರ. …

Read More »

ಪತಿಯ ಅನೈತಿಕ ಸಂಬಂಧಕ್ಕೆ ಬೆಸತ್ತ ಪತ್ನಿ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣು.

ಬೆಂಗಳೂರು: ಪತಿಯ ಅನೈತಿಕ ಸಂಬಂಧದಿಂದ ಜೀವನದಲ್ಲಿ ಬೇಸತ್ತ 34 ವರ್ಷದ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗಳನ್ನು ಕೊಂದು ತಾನು  ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ಬೆಂಗಳೂರಿನ ರಾಮಯ್ಯ ಲೇಔಟ್​ ನಡೆದಿದೆ. ಪಾವಗಡ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಶ್ರುತಿ, ಮೊದಲು ತಮ್ಮ ಮಗಳು ರೋಶಿನಿಯನ್ನು ದುಪ್ಪಟ್ಟಾ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಸಂದ್ರದ ರಾಮಯ್ಯ ಲೇಔಟ್‌ನಲ್ಲಿ …

Read More »

ಬೆಳಗಾವಿಯ ಅನಾಥ ಮಗುವನ್ನು ದತ್ತು ಪಡೆದ ಇಟಲಿ ದಂಪತಿ.

ಬೆಳಗಾವಿ: ಕಳೆದ ಎರಡುವರೆ ವರ್ಷಗಳಿಂದ ತಂದೆ, ತಾಯಿ ಪ್ರೀತಿ ಕಾಣದೆ ಚಿಕ್ಕುಂಬಿಮಠದ ಆರೈಕೆ ಕೇಂದ್ರದಲ್ಲಿ ಬೆಳೆದಿದ್ದ ಗಂಡು‌ ಮಗುವನ್ನು ಇಟಲಿಯ ದಂಪತಿಗಳು ದತ್ತು ಪಡೆದಿದ್ದು ತಂದೆ, ತಾಯಿ ಪ್ರೀತಿ ನೀಡಲು‌ ಮುಂದಾಗಿದ್ದಾರೆ. ಅವಧಿಗೂ ಮುನ್ನ ತಾಯಿಯ ಗರ್ಭದಿಂದ ಭೂಮಿಗೆ ಬಂದು ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಗಿದ್ದ ಗಂಡು ಮಗುವನ್ನು ಚಿಕ್ಕುಂಬಿ ಮಠದ ಆರೈಕೆ ಕೇಂದ್ರದವರು ಮಗುವಿಗೆ ಚಿಕಿತ್ಸೆ ‌ಕೊಡಿಸಿ ಎರಡುವರೆ ವರ್ಷದಿಂದ ನೋಡಿಕೊಂಡು ಬಂದಿದ್ದರು. ಆದರೆ ಇಟಲಿಯ ದಂಪತಿಗಳು ಚಿಕ್ಕುಂಬಿ ಮಠದ ಆರೈಕೆ …

Read More »

ಜನದಟ್ಟಣೆ ಕಡಿಮೆಯಾಗಲಿ ನಾನು ಕೂಡ ಕುಂಭಮೇಳಕ್ಕೆ ಹೋಗುತ್ತೇ; ಸತೀಶ್ ಜಾರಕಿಹೊಳಿ

ಬೆಳಗಾವಿ; ಭಕ್ತಿ ವೈಯಕ್ತಿಕ ವಿಷಯ ಮತ್ತು ಭಕ್ತಿಯಿದ್ದವರು ಮಹಾಕುಂಭಕ್ಕೆ ಹೋಗುತ್ತಾರೆ. ಜನದಟ್ಟಣೆ ಕಡಿಮೆಯಾದ ನಂತರ ನಾನು ಕೂಡ ಕುಂಭಮೇಳಕ್ಕೆ ಹೋಗುತ್ತೇನೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ಹಾಗೂ ಡಿಕೆಶಿ ಪುಣ್ಯಸ್ನಾನ ಮಾಡಿರೋದು ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರ ವರ್ಷನ್ ಅವರು ಹೇಳಿದ್ದಾರೆ, ಇವರ ವರ್ಷನ್ ಇವರು ಹೇಳಿದ್ದಾರೆ. ಖರ್ಗೆಯವರು ಹೇಳಿದ ತಕ್ಷಣ ಹೋಗುವವರನ್ನು ನಿಲ್ಲಿಸಲು …

Read More »

ನಿಶ್ಚಯಗೊಂಡ ಮದುವೆ ರದ್ಧು; ಯುವಕನ ಆತ್ಮಹತ್ಯೆ

ಬೆಳಗಾವಿ : ನಿಶ್ಚಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮ ಹತ್ಯಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂತೆ ಬೀದಿಯ ಸೋಮಪ್ಪ ಡೊಂಗರಗಾವಿ(28) ಮೃತ ದುರ್ದೈವಿಯಾಗಿದ್ದು ಮದುವೆಗೆ ಹುಡುಕಿದ್ದ ಮದುವೆ ಸಂಬಂಧಗಳೆಲ್ಲವೂ ರದ್ದಾದ ಹಿನ್ನೆಲೆ ಮನನೊಂದು ಯುವಕ ಆತ್ಮ*ಹತ್ಯೆಗೆ ಶರಣಾಗಿದ್ದಾನೆ.ಹೊಲದಲ್ಲಿನ ಬೇವಿನ ಗಿಡದ ತೊಂಗೆಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.ಹಿರೇಬಾಗೆವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Read More »