Breaking News

Monthly Archives: ಜನವರಿ 2025

ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್

ವಿಜಯಪುರ, ಜನವರಿ 26: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋರ್ ಕಮಿಟಿಯಲ್ಲಿ ನನ್ನ ಹೆಸರು ಅಂತಿಮವಾದರೆ ಸ್ಪರ್ಧಿಸುವೆ. ಕೋರ್ ಕಮಿಟಿಯಲ್ಲಿ ಸೂಕ್ತ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡುತ್ತೇವೆ. ಕೋರ್ ಕಮಿಟಿ ನಿರ್ಣಯ ಮಾಡಿದವರು ಸ್ಪರ್ಧೆ ಮಾಡುತ್ತಾರೆ. ನನ್ನ ಹೆಸರು ಫೈನಲ್ ಆದರೆ ಸ್ಪರ್ಧೆ ಮಾಡ್ತೇನೆ ಎಂದು ಹೇಳಿದ್ದಾರೆ. 

Read More »

3 ಕೋಟಿ ಅಂತರದಲ್ಲಿ ವಿನ್ ಆದ ದೋಸ್ತಹನುಮಂತ

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ವಿನ್ನರ್ ಎಂದು ಘೋಷಣೆ ಆಗಿದೆ. ಅವರು ದೊಡ್ಮನೆಯಲ್ಲಿ ಕೆಲ ವಾರಗಳ ಬಳಿಕ ಎಂಟ್ರಿ ಕೊಟ್ಟರೂ ಮೆಚ್ಚುಗೆ ಪಡೆದರು. ಈಗ ದೊಡ್ಮನೆಯಲ್ಲಿ ಅವರು ಕಪ್ ಎತ್ತುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಗೆಲುವಿನ ಬಗ್ಗೆ ಫ್ಯಾನ್ಸ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಅವರು ದೊಡ್ಡ ಅಂತರದಿಂದ ಗೆದ್ದಿದ್ದಾರೆ ಅನ್ನೋ ವಿಚಾರ ರಿವೀಲ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿಜೇತನಾಗಿ ಹನುಮಂತ …

Read More »

ಸುಮೇರು ಪರ್ವತದ ಮೇಲೆ ತ್ರಿವರ್ಣಧ್ವಜ: ತೀರ್ಥಂಕರರ ಮಹಾಮಸ್ತಕಾಭಿಷೇಕ ಸಂಪನ್ನ

ಹುಬ್ಬಳ್ಳಿ: “ವರೂರು ಜೈನ ದಿಗಂಬರ ನವಗ್ರಹ ಕ್ಷೇತ್ರದಲ್ಲಿ ನಡೆದ ತೀರ್ಥಂಕರರ ಪಂಚಕಲ್ಯಾಣ ಮತ್ತು ಮಹಾಮಸ್ತಕಾಭಿಷೇಕ ಕಾರ್ಯಕ್ರಮದಿಂದ ಧಾರವಾಡ ಜಿಲ್ಲೆಗೆ ದೇಶ ಪ್ರಸಿದ್ಧಿ ಪ್ರಾಪ್ತವಾಗಿದೆ” ಎಂದು ರಾಜ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ವರೂರು ನವಗ್ರಹ ಕ್ಷೇತ್ರದಲ್ಲಿ ಕಳೆದ 12 ದಿನಗಳಿಂದ ಜರುಗಿದ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ, ಸುಮೇರು ಪರ್ವತ ಲೋಕಾರ್ಪಣೆ ಹಾಗೂ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ …

Read More »

ಗರ್ಭ ಧರಿಸಿದ್ದ ಗೋ ಹತ್ಯೆ ಪ್ರಕರಣ : ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ಕಾರವಾರ (ಉತ್ತರ ಕನ್ನಡ): ಗರ್ಭ ಧರಿಸಿದ್ದ ಗೋ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಪಂಚನಾಮೆಗೆ‌ ಕರೆದುಕೊಂಡು ಹೋಗಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ ಘಟನೆ ಹೊನ್ನಾವರದಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಕೊಂಡಾಕುಳಿಯಲ್ಲಿ ಗರ್ಭ ಧರಿಸಿದ್ದ ಗೋ ವಧೆ ಮಾಡಿದ ಆರೋಪದಡಿ ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹಮ್ಮದ್ ಜಿದ್ದಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದಾಗ …

Read More »

ಖೋ‌ ಖೋ ಪಟು ಚೈತ್ರಾ ಹಾಗೂ ಸಂಸದ ಸುನಿಲ್ ಬೋಸ್

ಚಾಮರಾಜನಗರ: ಖೋ ಖೋ ಪಟು ಚೈತ್ರಾ ಅವರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಪ್ರಯತ್ನ ಮಾಡುವುದಾಗಿ ಸಂಸದ ಸುನಿಲ್ ಬೋಸ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, “ನಿನ್ನೆ ನರಸೀಪುರದಲ್ಲಿ ಚೈತ್ರಾ ಅವರನ್ನು ಭೇಟಿ ಮಾಡಿ ಸನ್ಮಾನ ಮಾಡಿದೆ. ಈ ವೇಳೆ ಗ್ರಾಮಸ್ಥರು ಹೆಚ್ಚಿನ ಬಹುಮಾನ ಕೊಡಿಸಿ ಅಂತ ಬೇಡಿಕೆಯಿಟ್ಟರು. ಚೈತ್ರಾ ತನಗೆ ಸರ್ಕಾರಿ ಕೆಲಸ ಕೊಡಿಸಿ ಅಂತಾ ಕೇಳಿಕೊಂಡಿದ್ದು, ನಾನು ನಮ್ಮ ತಂದೆ ಜೊತೆಗೆ ಸರ್ಕಾರಿ ಕೆಲಸ ಕೊಡಿಸುವ ಬಗ್ಗೆ ಮಾತನಾಡುತ್ತೇನೆ. …

Read More »

ಬೃಹತ್​ ಅಡುಗೆ ಮನೆಯಲ್ಲಿ ಅಡುಗೆ ಒಲೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಶನಿವಾರ ಸುತ್ತೂರು ಶ್ರೀಗಳು ಸುತ್ತೂರು ಜಾತ್ರ ಮಹೋತ್ಸವದ ಮಹಾ ದಾಸೋಹಕ್ಕೆ ಚಾಲನೆ ನೀಡಿದರು.

ಮೈಸೂರು: ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳು ಶನಿವಾರ ಚಾಲನೆ ನೀಡಿದರು. ಬೃಹತ್​ ಅಡುಗೆ ಮನೆಯಲ್ಲಿ ಅಡುಗೆ ಒಲೆಗಳಿಗೆ ಪೂಜೆ ಸಲ್ಲಿಸಿ, ದೊಡ್ಡ ದೊಡ್ಡ ಪಾತ್ರೆಗಳಿಗೆ ಅಡುಗೆ ಪದಾರ್ಥ ಹಾಕುವ ಮೂಲಕ ಚಾಲನೆ ನೀಡಲಾಯಿತು. ವಿಶೇಷವೆಂದ್ರೆ ದೊಡ್ಡ ದೊಡ್ಡ ಅಡುಗೆ ಒಲೆಗಳಿಗೆ ಹಚ್ಚುವ ಬೆಂಕಿ ಒಂದು ವಾರಗಳ ಕಾಲ ಆರದೇ ಇರುವುದು ತ್ರಿಕಾಲ ಮಹಾ ದಾಸೋಹದ ವಿಶೇಷ. ಸುತ್ತೂರು ಜಾತ್ರೆ ಮಹಾ ದಾಸೋಹಕ್ಕೆ 1 ಸಾವಿರ …

Read More »

ಒನ್ ನೇಶನ್-ಒನ್ ಎಲೆಕ್ಷನ್ ಜಾರಿಯಾದರೆ, 1 ವರ್ಷ ಹೆಚ್ಚುವರಿ ಸಿಗುತ್ತದೆ : ಸತೀಶ್ ಜಾರಕಿಹೊಳಿ

ಬೆಳಗಾವಿ : ಈ ಅವಧಿಯಲ್ಲಿ ನಮಗೆಲ್ಲ ಒಂದು ವರ್ಷ ಜಾಸ್ತಿ ಅವಕಾಶ ಸಿಗುತ್ತದೆ. ಒನ್ ನೇಶನ್-ಒನ್ ಎಲೆಕ್ಷನ್ ಜಾರಿಗೆ ಬಂದರೆ ಆರು ವರ್ಷ ನಾವು ಶಾಸಕರಾಗಿ ಇರಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಅವಧಿ ಪೂರ್ವ ಚುನಾವಣೆ ಬರುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ಕೇಂದ್ರ ಸರ್ಕಾರ ಒನ್ ನೇಶನ್-ಒನ್ ಎಲೆಕ್ಷನ್ ಜಾರಿಗೆ …

Read More »

ಶ್ರೀರಾಮುಲು ಅವರಿಗೆ ಬಿಜೆಪಿಯಿಂದ ರಾಜ್ಯಸಭಾ ಸದಸ್ಯತ್ವ ನೀಡುವಂತೆ ವಾಲ್ಮೀಕಿ ಸ್ವಾಭಿಮಾನಿ ಸಂಘ ಒತ್ತಾಯಿಸಿದೆ.

ಬೆಂಗಳೂರು : ಶ್ರೀರಾಮುಲು ಅವರಿಗೆ ಬಿಜೆಪಿಯು ರಾಜ್ಯಸಭಾ ಸದಸ್ಯತ್ವ ನೀಡಿ, ಕೇಂದ್ರ ಸಚಿವರನ್ನಾಗಿ ಮಾಡದಿದ್ದರೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ವಾಲ್ಮೀಕಿ ಸಮುದಾಯವು ಬಿಜೆಪಿಯನ್ನು ಬಾಯ್ಕಾಟ್ ಮಾಡಬೇಕಾಗುತ್ತೆ ಎಂದು ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳವಳಿ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ. ವಾಲ್ಮೀಕಿ ಸ್ವಾಭಿಮಾನಿ ಸಂಘ, ಜೈ ಭೀಮ್‌ ಅಖಿಲ ಭಾರತ ದಲಿತ ಹೋರಾಟ ಸಮಿತಿ, ಶ್ರೀರಾಮುಲು ಅಭಿಮಾನಿ ಬಳಗ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದೊಂದಿಗೆ ಭಾನುವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು …

Read More »

ಕೊಪ್ಪಳದಲ್ಲಿ ಅಣು ಸ್ಥಾವರ ನಿರ್ಮಾಣ ಪ್ರಸ್ತಾವನೆ ಇಲ್ಲ. ಕೇವಲ ಸರ್ವೇ ಮಾಡಿದ ಮಾತ್ರಕ್ಕೆ ಇಲ್ಲಿ ಅಣುಸ್ಥಾವರ ನಿರ್ಮಾಣವಾಗದು

ಕೊಪ್ಪಳ : ಕೊಪ್ಪಳದಲ್ಲಿ ಅಣು ಸ್ಥಾವರ ನಿರ್ಮಾಣ ಪ್ರಸ್ತಾವನೆ ಇಲ್ಲ. ಕೇವಲ ಸರ್ವೇ ಮಾಡಿದ ಮಾತ್ರಕ್ಕೆ ಇಲ್ಲಿ ಅಣುಸ್ಥಾವರ ನಿರ್ಮಾಣವಾಗದು. ಅದಕ್ಕೆ ಪೂರಕವಾದ ಜಾಗವನ್ನ ಹುಡುಕುವ ಪ್ರಕ್ರಿಯೆ ನಡೆದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ. ರಸ್ತೆಗಳ ಅಭಿವೃದ್ಧಿಗೆ …

Read More »

ಗಣರಾಜ್ಯೋತ್ಸವದಂದು ಎಂಎಸ್‌ಪಿಗಾಗಿ ಮೈಸೂರಿನಲ್ಲಿ ರೈತರಿಂದ ಟ್ರ್ಯಾಕ್ಟರ್ ರ‍್ಯಾಲಿ (

ಮೈಸೂರು: ದೆಹಲಿ ಗಡಿಯಲ್ಲಿ ಕೃಷಿ ಉತ್ಪನ್ನಗಳಿಗೆ ಎಂಎಸ್​ಪಿ ಗ್ಯಾರಂಟಿ ಕಾನೂನು ಜಾರಿಗಾಗಿ ಹೋರಾಡುತ್ತಿರುವ ಜಗಜಿತ್ ಸಿಂಗ್ ದಲೈವಾಲಾ ಅವರ 62 ದಿನದ ಉಪವಾಸ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಯಿತು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ಡಾ.ಸ್ವಾಮಿನಾಥನ್ ವರದಿ ಜಾರಿ, ರೈತರ ಸಂಪೂರ್ಣ ಸಾಲ ಮನ್ನಾ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಸಂಘಟನೆ ರಾಷ್ಟ್ರೀಯ …

Read More »