ಬೆಂಗಳೂರು: ನಗರದ ಕುಮಾರ ಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಇಂದು ಆಯೋಜಿಸಿರುವ 22ನೇ ಚಿತ್ರ ಸಂತೆಯಲ್ಲಿ ಹಲವು ವಿಧದ ಮನಮೋಹಕ ಚಿತ್ರಕಲೆಗಳು ಕಲಾಭಿಮಾನಿಗಳಿಗೆ ಬೆರಗು ಮೂಡಿಸಿದವು. ಡಾಟ್ ಪೇಂಟಿಂಗ್, ರಿವರ್ಸ್ ಪೇಂಟಿಂಗ್ ಮತ್ತು ಕ್ಲೇ ಆರ್ಟ್ ಮೂಲಕ ಮೂಡಿ ಬಂದ ಕಲಾಕೃತಿಗಳು ಚಿತ್ರಸಂತೆಯ ಮೆರುಗು ಹೆಚ್ಚಿಸಿದವು. ಡಾಟ್ ಪೇಂಟಿಂಗ್ ವಿಶೇಷತೆಯೇನು? ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ವೃತ್ತಿಪರ ಚಿತ್ರಕಲಾವಿದ ಉಷಾರಂಜನ್ ಮಂಡಲ್ ಅವರ ಡಾಟ್ ಪೇಂಟಿಂಗ್ ವಿಶೇಷವಾಗಿ ಜನರ ಗಮನ ಸೆಳೆಯಿತು. ತರಹೇವಾರಿ ಪೆನ್ …
Read More »Monthly Archives: ಜನವರಿ 2025
ಕೆಲವರು ದೇಶದ ನೆಮ್ಮದಿಗೆ ಭಂಗ ತರಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ : ಸಿಎಂ
ದಾವಣಗೆರೆ : ಕೆಲವರು ದೇಶದ ನೆಮ್ಮದಿ ಭಂಗವನ್ನುಂಟು ಮಾಡಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತವರಿಂದ ಯುವ ಜನತೆ ದೂರ ಉಳಿಯಿರಿ. ತಮ್ಮ ಬದುಕು, ಭವಿಷ್ಯ ಕಾಪಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು. ಇಂದು ದಾವಣಗೆರೆ ಜಿಲ್ಲಾಡಳಿತ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಜನತೆ ಸಮಾಜಮುಖಿಯಾಗಿ ಬೆಳೆದಾಗ ದೇಶದ ಆಸ್ತಿ ಆಗುತ್ತಾರೆ. ಇದಕ್ಕಾಗಿ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆದು ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ …
Read More »ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಬ್ರಹ್ಮರಥೋತ್ಸವ
ದೊಡ್ಡಬಳ್ಳಾಪುರ : ಇಂದು ನಾಡಿನೆಲ್ಲೆಡೆ ಚಂಪಾ ಷಷ್ಠಿ ಹಿನ್ನೆಲೆ ಪ್ರಸಿದ್ಧ ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ಜರುಗಿತು. ರಥವನ್ನು ಎಳೆಯುವಾಗ ಗರುಡ ರಥದ ಸುತ್ತಲೂ ಮೂರು ಸುತ್ತು ಸುತ್ತಿದ್ದು, ಎಲ್ಲರ ಗಮನ ಸೆಳೆಯಿತು. ಇಂದು ನಾಡಿನೆಲ್ಲೆಡೆ ಚಂಪಾ ಷಷ್ಠಿ ಹಿನ್ನೆಲೆ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದ ಬಳಿ ಬೆಳಗ್ಗೆಯಿಂದಲೂ ಸಾಗರೋಪಾದಿಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಜೊತೆಗೆ ದೇವಾಲಯದ ಆಡಳಿತ ಮಂಡಳಿ ಕೂಡ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಿತ್ತು. ಹಾಗಾಗಿ ಮುಂಜಾನೆ …
Read More »ಗಡಿ ಜಿಲ್ಲೆಯಲ್ಲಿ ಮುಚ್ಚಿದ 20 ಸರ್ಕಾರಿ ಶಾಲೆಗಳು
ಚಾಮರಾಜನಗರ: ಇಂಗ್ಲಿಷ್ ಮೇಲಿನ ಅಕ್ಕರೆ, ಕಾನ್ವೆಂಟ್ ವ್ಯಾಮೋಹ ಹಾಗೂ ಸಾರಿಗೆ ತೊಂದರೆಯಿಂದಾಗಿ ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ 20 ಸರ್ಕಾರಿ ಶಾಲೆಗಳು ಬಂದ್ ಆಗಿವೆ. 2023-24ರಲ್ಲಿ 12 ಮತ್ತು ಈ ಸಾಲಿನಲ್ಲಿ 8 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಶೂನ್ಯ ದಾಖಲಾತಿಯಿಂದ ಬಂದ್ ಆಗಿವೆ. ಪ್ರಿ ಕೆಜಿಗಳನ್ನು ಆರಂಭಿಸಿದರೆ, ಇಂಗ್ಲಿಷ್ ಮಾಧ್ಯಮ ಇದ್ದರೆ, ಶಾಲಾ ವಾಹನ ಸೌಲಭ್ಯ ಕಲ್ಪಿಸಿದರೆ ಮಾತ್ರ ಸರ್ಕಾರಿ ಶಾಲೆಗೆ ಸೇರಿಸುವುದಾಗಿ ಪೋಷಕರು ಶಿಕ್ಷಣ ಇಲಾಖೆಗೆ ತಿಳಿಸುತ್ತಿದ್ದಾರೆ. ಯಾವ್ಯಾವ …
Read More »ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿ
ಗೋಕಾಕ- ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು 4 ರ ಹಂತದಲ್ಲಿ ಈ ಯೋಜನೆಯನ್ನು ಅನುಷ್ಟಾನ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರದಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ಜರುಗಿದ ಕಾರ್ಯಕ್ರಮದಲ್ಲಿ ಒಟ್ಟು 23.14 ಲಕ್ಷ ರೂಪಾಯಿಗಳ ಚೆಕ್ …
Read More »ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೆ ಮುಹೂರ್ತ ಫಿಕ್ಸ್: ರಾಜ್ಯ ರಾಜಕಾರಣದಲ್ಲಿ ಈಶ್ವರಪ್ಪ ಸಂಚಲನ
ವಿಜಯಪುರ, ಜನವರಿ 05: ಫೆಬ್ರವರಿ 4 ರಂದು ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮುಹೂರ್ತ ಫಿಕ್ಸ್ ಆಗಿದ್ದು, ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಲು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಮುಂದಾಗಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1008 ಸಾಧು ಸಂತರ ಪಾದ ಪೂಜೆ ಮೂಲಕ ಬ್ರಿಗೇಡ್ ಉದ್ಘಾಟನೆ ನಡೆಯಲಿದೆ. 1 ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ.ಕನ್ಹೇರಿ ಮಠದ ಶ್ರೀಗಳು ಹಾಗೂ ಕಾಗಿನೆಲೆ ಮಹಾ ಸಂಸ್ಥಾನದ …
Read More »ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸ ಅಧಿಕಾರಿಗಳ ಪರಸ್ಪರ ಸಭೆ
ಗೋಕಾಕ: ಪ್ರತಿ ಐದು ವರ್ಷಗಳಿಗೊಮ್ಮೆ ಜರುಗುವ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವವನ್ನು ನಾವೆಲ್ಲರೂ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿAದ ಆಚರಿಸುವ ಮೂಲಕ ದೇವತೆಯರ ಅನುಗೃಹಕ್ಕೆ ಪಾತ್ರರಾಗೋಣ ಎಂದು ಶಾಸಕ ಹಾಗೂ ಜಾತ್ರಾ ಕಮೀಟಿಯ ಅಧ್ಯಕ್ಷ ರಮೇಶ ಜಾರಕಿಹೊಳಿ ಅವರು ಹೇಳಿದರು. ಅವರು, ರವಿವಾರದಂದು ನಗರದ ಮಹಾಲಕ್ಷಿö್ಮÃ ಸಭಾ ಭವನದಲ್ಲಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಅಧಿಕಾರಿಗಳು ಪರಸ್ಪರ ಸಭೆಗಳನ್ನು ನಡೆಸುವ ಮೂಲಕ ಜಾತ್ರೆ ಸುವ್ಯವಸ್ಥಿತವಾಗಿ ಜರುಗಲು ಸಿದ್ಧತೆಗಳನ್ನು …
Read More »ಬಿಜೆಪಿ ಬಣ ಬಡಿದಾಟ ಮತ್ತೊಂದು ಹಂತಕ್ಕೆ
ಬೆಂಗಳೂರು, : ಕಳೆದ ಒಂದು ವಾರದಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಹೈಕಮಾಂಡ್ ಅಭಯ ಮತ್ತಷ್ಟು ಶಕ್ತಿ ತುಂಬಿದಂತಿದೆ. ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸಚಿವ ಅಮಿತ್ ಶಾರನ್ನೂ, ಜೆಪಿ ನಡ್ಡಾರನ್ನೂ ಭೇಟಿಯಾಗಿದ್ದರು. ಅದಾದ ಬೆನ್ನಲ್ಲೇ ರಾಜ್ಯಕ್ಕೂ ಜೆಪಿ ನಡ್ಡಾ, ವಿಜಯೇಂದ್ರ ಶುಕ್ರವಾರ ಒಟ್ಟಿಗೇ ಆಗಮಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ವಿಜಯೇಂದ್ರ ಹೆಚ್ಚು ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದು, ಯತ್ನಾಳ್ಗೆ ಡೋಂಟ್ಕೇರ್ ಅನ್ನುತ್ತಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವಾರದಿಂದ ದೆಹಲಿಯಲ್ಲೇ ಇದ್ದ …
Read More »ಚಿತ್ರಸಂತೆ ಉದ್ಘಾಟಿಸಿದ ಸಿಎಂ:
ಬೆಂಗಳೂರು: ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಇಂದು ಆಯೋಜಿಸಿರುವ 22 ನೇ ಚಿತ್ರ ಸಂತೆಯನ್ನು ಉದ್ಘಾಟನೆ ಮಾಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಮಾತನಾಡಿದರು. ಏಳನೇ ಬಾರಿ ಚಿತ್ರಸಂತೆ ಉದ್ಘಾಟಿಸುತ್ತಿದ್ದು, ರಾಜ್ಯದ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಚಿತ್ರದ ಮೂಲಕ …
Read More »ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಪ್ಲಾಸ್ಟರಿಂಗ್ ಬಿದ್ದು ನಾಲ್ಕು ಮಕ್ಕಳು ಗಾಯ
ಕೋಲಾರ : ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಪ್ಲಾಸ್ಟರಿಂಗ್ ಬಿದ್ದು ನಾಲ್ಕು ಮಕ್ಕಳು ಗಾಯಗೊಂಡಿರುವ ಘಟನೆ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಮಕ್ಕಳು ಚೇತರಿಸಿಕೊಂಡಿದ್ದಾರೆ. ದಾಸರಹೊಸಹಳ್ಳಿಯ ಅಂಗನವಾಡಿಯ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರಿಂಗ್ ಬಿದ್ದಿರುವುದರಿಂದ ಅಂಗನವಾಡಿಯಲ್ಲಿದ್ದ ಏಳು ಮಕ್ಕಳಲ್ಲಿ ಲಿಖಿತ, ಪರಿಣಿತ, ಸಾನ್ವಿ, ಚರಿತಾಗೆ ಗಾಯಗಳಾಗಿದೆ.ದಾಸರಹೊಸಹಳ್ಳಿಯ ಬಾಲಸ್ನೇಹಿ ಅಂಗನವಾಡಿ ಕೇಂದ್ರ ಶಿಥಿಲಗೊಂಡಿತ್ತು. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಹಲವು ಬಾರಿ ಇಲಾಖೆಯ ಮೇಲಧಿಕಾರಿಗಳಿಗೆ, ಗ್ರಾಮ …
Read More »