ಸಂಪುಟ ಪುನಾರಚನೆ ಕಪೋಲಕಲ್ಪಿತ ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ನಮಗೆ ಸರ್ಕಾರಕ್ಕಿಂತ ಪಕ್ಷವೇ ಮುಖ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕಿಂತ ಪಕ್ಷವೇ ದೊಡ್ಡದು. ಶತಮಾನಗಳ ಇತಿಹಾಸ ಇರುವ ಈ ಪಕ್ಷಕ್ಕೆ ತನ್ನದೇ ಆದ ಬದ್ಧತೆ ಇದೆ. ಪಕ್ಷ ಇದ್ದರೆ ಸರ್ಕಾರ ರಚನೆ ಸಾಧ್ಯ ಎಂದು ಸಚಿವರು ತಿಳಿಸಿದರು. …
Read More »Daily Archives: ಜನವರಿ 14, 2025
ದೈಹಿಕ ಶ್ರಮ , ವ್ಯಾಯಮ,ಯೋಗ,ನಿಯಮಿತ ಸಾತ್ವಿಕ ಆಹಾರ ಸೇವನೆಯಿಂದ ಬಿಪಿ, ಶುಗರ ‘ ಬರದಂತೆ ತಡೆಯಬಹುದೆಂದು ಡಾ ಎಂ.ಆರ್ ಪ್ರಸಾದ ಅವರು ಹೇಳಿದರು.
ಬೆಳಗಾವಿ – ದೈಹಿಕ ಶ್ರಮ , ವ್ಯಾಯಮ,ಯೋಗ,ನಿಯಮಿತ ಸಾತ್ವಿಕ ಆಹಾರ ಸೇವನೆಯಿಂದ ಬಿಪಿ, ಶುಗರ ‘ ಬರದಂತೆ ತಡೆಯಬಹುದೆಂದು ಡಾ ಎಂ.ಆರ್ ಪ್ರಸಾದ ಅವರು ಹೇಳಿದರು. ಮಾಳಮಾರುತಿ ನಾಗರಿಕ ವಿಕಾಸ ಸಂಘದಿಂದ ಎಸ್ ಜಿ ವಿ ಮಹೇಶ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಡಾ. ಪ್ರಸಾದ ಎಂ.ಆರ್ ಅವರು ಆರೋಗ್ಯ ತಪಸಣಾ ತಂಡದೊಂದಿಗೆ ಆಗಮಿಸಿ ಸುಮಾರು 60 ಹಿರಿಯ ನಾಗರಿಕರಿಗೆ ಬಿಪಿ, …
Read More »ಡಿಸೆಂಬರ್ನಲ್ಲಿ ಹಣದುಬ್ಬರ ಶೇ. 5.22; ನಾಲ್ಕು ತಿಂಗಳಲ್ಲೇ ಕನಿಷ್ಠ ಬೆಲೆ ಹೆಚ್ಚಳ
ನವದೆಹಲಿ, ಜನವರಿ 14: ಭಾರತದ ರೀಟೇಲ್ ಹಣದುಬ್ಬರ ದರ ಡಿಸೆಂಬರ್ ತಿಂಗಳಲ್ಲಿ ಶೇ. 5.22ರಷ್ಟಿದೆ. ಹಿಂದಿನ ತಿಂಗಳು ಮತ್ತು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಹಣದುಬ್ಬರ ಇಳಿಕೆ ಆಗಿದೆ. 2023ರ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.69ರಷ್ಟಿತ್ತು. 2024ರ ನವೆಂಬರ್ ತಿಂಗಳಲ್ಲಿ ಶೇ. 5.48ರಷ್ಟಿತ್ತು. ಸರ್ಕಾರ ನಿನ್ನೆ ಸೋಮವಾರ ಡಿಸೆಂಬರ್ ತಿಂಗಳ ಹಣದುಬ್ಬರ ದರದ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ ತಿಂಗಳಲ್ಲಿ ಆಹಾರ ವಸ್ತು ವಿಭಾಗದಲ್ಲಿ ಬೆಲೆ ಏರಿಕೆ ಪ್ರಮಾಣ ಕಡಿಮೆ ಇದ್ದರಿಂದ …
Read More »144 ವರ್ಷಕ್ಕೆ ಒಮ್ಮೆ ಬರುವ ಮಹಾಕುಂಭಮೇಳದ ಮಹತ್ವ
ಮಹಾ ಕುಂಭಮೇಳವು 144 ವರ್ಷಗಳಿಗೊಮ್ಮೆ ನಡೆಯುವ ಪವಿತ್ರ ಧಾರ್ಮಿಕ ಕಾರ್ಯಕ್ರಮ. ಗುರು ಗ್ರಹದ ಚಲನೆಯನ್ನು ಆಧರಿಸಿ ನಡೆಯುವ ಈ ಮೇಳವು ಪುಣ್ಯ ಪ್ರಾಪ್ತಿ ಮತ್ತು ಪಾಪ ಪರಿಹಾರಕ್ಕೆ ಅತ್ಯಂತ ಶುಭ ಸಮಯ. ಪೌಷ ಮಾಸದ ಪುಷ್ಯ ನಕ್ಷತ್ರದಲ್ಲಿ ನಡೆಯುವ ಈ ಮೇಳದಲ್ಲಿ ಸಂಗಮದಲ್ಲಿ ಸ್ನಾನ ಮಾಡುವುದು ವಿಶೇಷ ಫಲವನ್ನು ನೀಡುತ್ತದೆ. ಗುರು ಶಾಪ, ಪಿತೃ ಋಣ ಇತ್ಯಾದಿಗಳಿಂದ ಬಳಲುವವರಿಗೆ ಇದು ಪರಿಹಾರಕಾರಿ. ಶುದ್ಧ ಮನಸ್ಸಿನೊಂದಿಗೆ ಸ್ನಾನ ಮಾಡುವುದು ಮುಖ್ಯ. ಕಾಲ …
Read More »ಜೈ ಮಹಾರಾಷ್ಟ್ರ ಘೋಷಣೆ ವಿರುದ್ಧ ಕರುನಾಡ ರಕ್ಷಣಾ ವೇದಿಕೆಯಿಂದ ಪ್ರತಿಭಟಿಸಿ ಶಾಸಕರ ಮೇಯರ್ ರಾಜೀನಾಮೆಗೆ ಒತ್ತಾಯ.
ಜೈ ಮಹಾರಾಷ್ಟ್ರ ಘೋಷಣೆ ವಿರುದ್ಧ ಕರುನಾಡ ರಕ್ಷಣಾ ವೇದಿಕೆಯಿಂದ ಪ್ರತಿಭಟಿಸಿ ಶಾಸಕರ ಮೇಯರ್ ರಾಜೀನಾಮೆಗೆ ಒತ್ತಾಯ. 1 ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದು ಸಮರ್ಥಿಸಿದ್ದು ಅಕ್ಷಮ್ಯ. 2 ಶಾಸಕರು ಮತ್ತು ಮೇಯರ್ ಮೇಲೆ ರಾಜದ್ರೋಹ ಪ್ರಕರಣ ದಾಖಲಿಸಲು ಆಗ್ರಹ. 3 ಮಹಾರಾಷ್ಟ್ರ ನಾಯಕರು ರಾಜ್ಯಕ್ಕೆ ಬರದಂತೆ ಖಾಯಂ ನಿರ್ಬಂಧ ಹೇರಬೇಕು. 4 ಕರುನಾಡು ರಕ್ಷಣಾ ವೇದಿಕೆಯಿಂದ ಪ್ರತಿಭಟನೆ _ಅನುಗೋಳದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ ಅನಾವರಣ ಸಂದರ್ಭದಲ್ಲಿ ಜೈ ಮಹಾರಾಷ್ಟ್ರ …
Read More »ದಕ್ಷಿಣ ಕಾಶಿಯಲ್ಲಿ ನಡೆದ ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ; ಇದರ ಐತಿಹಾಸಿಕ ಹಿನ್ನೆಲೆ ಹೀಗಿದೆ!
ಮೈಸೂರು: ದಕ್ಷಿಣಿ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ಪಟ್ಟಣದ ರಾಕ್ಷಸ ಮಂಟಪದ ಬಳಿ ಅಂಧಕಾಸುರ ಸಂಹಾರ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇಲ್ಲಿ ಅಂಧಕಾಸುರ ರಾಕ್ಷಸನನ್ನ ಹೋಲುವ ರಾಕ್ಷಸನನ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸಿ ಉತ್ಸವ ಮೂರ್ತಿಗಳನ್ನು ತಂದು ಪೂಜೆ ಮಾಡಲಾಯಿತು. ಅಂಧಕಾಸುರ ಭಾವಚಿತ್ರದ ರಂಗೋಲಿಯನ್ನು ಅಳಿಸಿ ಹಾಕುವ ಆಚರಣೆ ಇದಾಗಿದ್ದು, ಇದಕ್ಕೆ ಐತಿಹಾಸಿಕ ಹಿನ್ನೆಲೆಯೂ ಉಂಟು. ಧರ್ನುಮಾಸದ, ಆರಿದ್ರ ನಕ್ಷತ್ರದ ಹುಣ್ಣಿಮೆಯ ಹಿಂದಿನ ದಿನ ದೇವಾಲಯದ ವತಿಯಿಂದ ರಾಕ್ಷಸ ಮಂಟಪದ ಬಳಿ …
Read More »ಯಲ್ಲಮ್ಮನ ಗುಡ್ಡದಲ್ಲಿ ಬನದ ಹುಣ್ಣಿಮೆ ಸಂಭ್ರಮ
ಬೆಳಗಾವಿ: ಬನದ ಹುಣ್ಣಿಮೆ ನಿಮಿತ್ತ ಸೋಮವಾರ ವೈಭವದ ಜಾತ್ರೆಗೆ ಸವದತ್ತಿ ಏಳುಕೊಳ್ಳದ ತಾಯಿ ವಾಸಸ್ಥಾನ ಯಲ್ಲಮ್ಮನಗುಡ್ಡ ಸಾಕ್ಷಿಯಾಯಿತು. 10 ಲಕ್ಷಕ್ಕೂ ಅಧಿಕ ಭಕ್ತರು ಭಕ್ತಿಯ ಹೊಳೆ ಹರಿಸಿದರು. ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಯಲ್ಲಮ್ಮದೇವಿ ದರ್ಶನ ಪಡೆದು ಪುನೀತರಾದರು. ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಭಾನುವಾರದಿಂದಲೇ ಯಲ್ಲಮ್ಮನ ಗುಡ್ಡದತ್ತ ಪ್ರಯಾಣ ಬೆಳೆಸಿದ್ದರು. ಸೋಮವಾರ ಬೆಳಗ್ಗೆ ಯಲ್ಲಮ್ಮನಗುಡ್ಡದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಕಣ್ಣು ಹಾಯಿಸಿದಲ್ಲೆಲ್ಲಾ …
Read More »ಎತ್ತಿನಗಾಡಿ ಓಡಿಸುತ್ತಿದ್ದಾಗ ಅವಘಡ
ಚಾಮರಾಜನಗರ: ಎತ್ತಿನಗಾಡಿ ಓಡಿಸುವಾಗ ಆಯತಪ್ಪಿ ಕೆಳಕ್ಕೆ ಬಿದ್ದ ವ್ಯಕ್ತಿಯ ಮೇಲೆ ಚಕ್ರ ಹರಿದು ಆತ ಮೃತಪಟ್ಟ ಘಟನೆ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆಯಿತು. ಕಮರವಾಡಿ ಗ್ರಾಮದ ಬಸವ (45) ಮೃತರು. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮೂಗೂರು ಜಾತ್ರೆಗೆ ಕಮರವಾಡಿ ಗ್ರಾಮದಿಂದಲೂ ಬಂಡಿಗಳು ಬಂದಿದ್ದವು. ಪೂಜೆ ಮುಗಿಸಿಕೊಂಡು ಗ್ರಾಮಕ್ಕೆ ಮರಳುತ್ತಿದ್ದಾಗ ಅವಘಡ ಸಂಭವಿಸಿದೆ. ಬಂಡಿಯ ನೊಗ ಕಳಚಿಕೊಂಡ ಕಾರಣ ಬಸವ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಬಂಡಿಯ ಚಕ್ರ ಅವರ …
Read More »ಅಪಘಾತ ಪ್ರಕರಣದಲ್ಲಿ ಮೆಡಿಕ್ಲೈಮ್ ಹೊರತುಪಡಿಸಿ ಉಳಿದ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ
ಬೆಂಗಳೂರು: ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪಾವತಿಸುವ ಪರಿಹಾರ ಮೊತ್ತದಲ್ಲಿ ಮೆಡಿಕ್ಲೈಮ್‌ನ ಅಡಿಯಲ್ಲಿ ಪಾವತಿಸಿರುವ ಮೊತ್ತವನ್ನು ಕಡಿತಗೊಳಿಸಿ ಉಳಿದ ಮೊತ್ತ ಪಾವತಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ. ಬೆಂಗಳೂರಿನ ಮಾರತ್‌ಹಳ್ಳಿಯ ವಾಸಿ ಹನುಮಂತಪ್ಪ ಪರವಾಗಿ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣ(ಎಂಎಸಿಟಿ)ದ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕ ಸದಸ್ಯಪೀಠ ಸೋಮವಾರ ಈ ಆದೇಶ ನೀಡಿತು. ಅರ್ಜಿದಾರರ ಕುಟುಂಬಕ್ಕೆ …
Read More »ಅದ್ಧೂರಿಯಾಗಿ ಜರುಗಿದ ಬಾದಾಮಿ ಬನಶಂಕರಿ ಜಾತ್ರೆ
ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗು ಶಕ್ತಿ ಪೀಠಗಳಲ್ಲಿ ಒಂದಾಗಿರುವ ಬಾದಾಮಿ ಬನಶಂಕರಿ ದೇವಾಲಯ ಜಾತ್ರಾ ಮಹೋತ್ಸವ ಸೋಮವಾರ ಅದ್ಧೂರಿಯಾಗಿ ಜರುಗಿತು. ಪ್ರತಿವರ್ಷವೂ ಬನದ ಹುಣ್ಣಿಮೆ ದಿನ ಜಾತ್ರೋತ್ಸವದ ಪ್ರಯುಕ್ತ ರಥೋತ್ಸವ ನಡೆಯುತ್ತದೆ. ಅದರಂತೆ, ಲಕ್ಷಾಂತರ ಭಕ್ತರ ಮಧ್ಯೆ ದೇವಿಗೆ ಶಂಭೋಕೋ ಎಂದು ಘೋಷಣೆ ಮೊಳಗಿಸುತ್ತಾ ಭಕ್ತರು ರಥ ಎಳೆದು ಸಂಭ್ರಮಿಸಿದರು. ಈ ಜಾತ್ರೆಗೆ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಪಾದಯಾತ್ರೆ ಮೂಲಕವೂ ಸಾವಿರಾರು ಭಕ್ತರು ಬರುತ್ತಾರೆ. ಪಾದಯಾತ್ರೆ ಮೂಲಕ …
Read More »