ಘಟಪ್ರಭಾ: ಬಾರ್ ಅಂಗಡಿ ಮುಂಗಟ್ಟುಗಳಿಗೆ ಕಣ್ಣು ಹಾಕುತ್ತಿದ್ದ ಆರೋಪಿತರನ್ನ ಪತ್ತೆ ಹಚ್ಚಿ ಜೈಲಿಗಟ್ಟಿದ ಘಟಪ್ರಭಾ ಪೊಲೀಸರು ಕಾರ್ಯಾಚರಣೆ ನಡೆಸಿದ ದಿನಾಂಕ. 11/05/2025 ರಂದು 3 ಜನ ಆರೋಪಿತರಿಗೆ ದಸ್ತಗೀರ ಮಾಡಿ ಅವರ ಕಡೆಯಿಂದ ಘಟಪ್ರಭಾ ಠಾಣೆಯ ಹದ್ದಿ ಹಾಗೂ ಹುಕ್ಕೇರಿ ಠಾಣೆಯ ಹದ್ದಿ ಮತ್ತು ಸಂಕೇಶ್ವರ ಠಾಣೆ ಹದ್ದಿ ಹಾಗೂ ರಾಯಭಾಗ ಠಾಣೆ ಹದ್ದಿ ವಿವಿಧ ಅಂಗಡಿಗಳಲ್ಲಿ ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಮೋಟಾರ ಸೈಕಲ್ ಹಾಗೂ ಹಣವನ್ನು ಜಪ್ತಿ …
Read More »Daily Archives: ಜನವರಿ 12, 2025
ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆ, 18 ಕಾರ್ಮಿಕರು ಅಸ್ವಸ್ಥ
ಕಾರವಾರ, ಜನವರಿ 11: ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆಯಿಂದ (Chemical Leak) 18 ಕಾರ್ಮಿಕರು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಬಳಿಯ ಆದಿತ್ಯ ಬಿರ್ಲಾ ಗ್ರೂಪ್ನ ಕಾಸ್ಟಿಕ್ ಸೋಡಾ ಉತ್ಪಾದಿಸುವ ಗ್ರಾಸಿಮ್ ಇಂಡಸ್ಟ್ರೀಸ್ನಲ್ಲಿ ನಡೆದಿದೆ. ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರವಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ನೀಲಕಂಠ, ಜಹನ್ನೂರು, ಕಮಲೇಶ್ ವರ್ಮಾ, ನಂದಕಿಶೋರ್, ದೀಪು, ಸೃಜನ್, ನಜೀದುಲ್ಲಾ, ಬೇಜನ್ ಕುಮಾರ್, ಕಿಶನ್ ಕುಮಾರ್, ಅಜೀಜ್, ಮೋಹಿತ್ ವರ್ಮಾ ಸೇರಿದಂತೆ ಕರ್ನಾಟಕ, …
Read More »ಕರ್ನಾಟಕ ಕಾಂಗ್ರೆಸ್ನಲ್ಲಿ ಡಿನ್ನರ್ ಮತ್ತು ಡಿಶುಂ ಡಿಶುಂ ಪಾಲಿಟಿಕ್ಸ್
ಬೆಂಗಳೂರು, ಜನವರಿ 12: ಕರ್ನಾಟಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಎಷ್ಟೇ ಒಗ್ಗಟ್ಟಿನ ಬಲ ಪ್ರದರ್ಶನ ತೋರಿದರೂ ಅದರ ಒಳಬೇಗುದಿ ಮತ್ತು ಆಂತರಿಕ ಕಚ್ಚಾಟ ಆಗಾಗ್ಗೆ ಬಹಿರಂಗಗೊಳ್ಳುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಸತೀಶ್ ಜಾರಕಿಹೊಳಿ ಮನೆಯಲ್ಲಿ ಕೆಲ ನಾಯಕರು ಸಿಎಂ ಜೊತೆ ಡಿನ್ನರ್ನಲ್ಲಿ ಪಾಲ್ಗೊಂಡಿದ್ದು ಸಾಕಷ್ಟು ಹುಬ್ಬೇರಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಬಣಗಳ ನಡುವಿನ ಕಚ್ಚಾಟವು ಜಾತಿ ಸ್ವರೂಪದಂತಹ ಅತಿರೇಕಕ್ಕೆ ಹೋಗಿದೆ. ಇದು ಈಗ …
Read More »2025ರಲ್ಲಿ ಬರಲಿವೆ ಸಖತ್ ಐಪಿಒಗಳು
ನವದೆಹಲಿ, ಜನವರಿ 12: ಕಳೆದ ವರ್ಷ (2024) ಸಾಕಷ್ಟು ಐಪಿಒಗಳು ಬಿಡುಗಡೆಯಾಗಿ ಲಕ್ಷಾಂತರ ಕೋಟಿ ರೂ ಮೊತ್ತದ ಬಂಡವಾಳ ಸಂಗ್ರಹಣೆ ಆಗಿತ್ತು. ಈ ವರ್ಷವೂ ಅದೇ ಟ್ರೆಂಡ್ ಮುಂದುವರಿಯಲಿದೆ. ಮಾರುಕಟ್ಟೆ ಹಿನ್ನಡೆಯಲ್ಲಿದ್ದರೂ ಐಪಿಒಗಳು ಅಬಾಧಿತವಾಗಿ ಮುಂದುವರಿಯುವ ನಿರೀಕ್ಷೆ ಇದೆ. ಕೋಟಕ್ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಸಂಸ್ಥೆ ಮಾಡಿರುವ ಅಂದಾಜು ಪ್ರಕಾರ ಮುಂದಿನ 12 ತಿಂಗಳಲ್ಲಿ 35 ಬಿಲಿಯನ್ ಡಾಲರ್ (ಮೂರು ಲಕ್ಷ ಕೋಟಿ ರೂ) ಮೌಲ್ಯದ ಐಪಿಒಗಳು ಪ್ರಾಥಮಿಕ ಮಾರುಕಟ್ಟೆಗೆ (primary market) …
Read More »ಸಿ ಟಿ ರವಿ ಕೇಸ್ ರೂಲಿಂಗ್ ಬಳಿಕವೂ ಸಿಐಡಿ ತನಿಖೆಗೆ ವಹಿಸಿರುವುದಕ್ಕೆ ಆಕ್ಷೇಪ; ಗೃಹ ಸಚಿವರಿಗೆ ಹೊರಟ್ಟಿ ಪತ್ರ
ಬೆಂಗಳೂರು: ರೂಲಿಂಗ್ ನೀಡಿದರೂ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ಆಕ್ಷೇಪಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವ ಜಿ. ಪರಮೇಶ್ವರ್ಗೆ ಪತ್ರ ಬರೆದಿದ್ದಾರೆ. ಬೆಳಗಾವಿ ವಿಧಾನ ಪರಿಷತ್ ಕಲಾಪದಲ್ಲಿನ ಅವಾಚ್ಯ ಶಬ್ದ ಬಳಕೆ ಆರೋಪದ ಘಟನೆ ಕುರಿತು ಸಿಐಡಿ ತನಿಖೆ ಬಗ್ಗೆ ಪತ್ರ ಬರೆದಿರುವ ಸಭಾಪತಿ, ರೂಲಿಂಗ್ ನೀಡಿದ್ದರೂ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಕ್ರಮ ಪ್ರಶ್ನಿಸಿದ್ದಾರೆ. ಸಭಾಪತಿ ಅಧಿಕಾರಕ್ಕೆ …
Read More »ಸಿ ಟಿ ರವಿ ಕೇಸ್ ರೂಲಿಂಗ್ ಬಳಿಕವೂ ಸಿಐಡಿ ತನಿಖೆಗೆ ವಹಿಸಿರುವುದಕ್ಕೆ ಆಕ್ಷೇಪ; ಗೃಹ ಸಚಿವರಿಗೆ ಹೊರಟ್ಟಿ ಪತ್ರ
ಬೆಂಗಳೂರು: ರೂಲಿಂಗ್ ನೀಡಿದರೂ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ಆಕ್ಷೇಪಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವ ಜಿ. ಪರಮೇಶ್ವರ್ಗೆ ಪತ್ರ ಬರೆದಿದ್ದಾರೆ. ಬೆಳಗಾವಿ ವಿಧಾನ ಪರಿಷತ್ ಕಲಾಪದಲ್ಲಿನ ಅವಾಚ್ಯ ಶಬ್ದ ಬಳಕೆ ಆರೋಪದ ಘಟನೆ ಕುರಿತು ಸಿಐಡಿ ತನಿಖೆ ಬಗ್ಗೆ ಪತ್ರ ಬರೆದಿರುವ ಸಭಾಪತಿ, ರೂಲಿಂಗ್ ನೀಡಿದ್ದರೂ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಕ್ರಮ ಪ್ರಶ್ನಿಸಿದ್ದಾರೆ. ಸಭಾಪತಿ ಅಧಿಕಾರಕ್ಕೆ …
Read More »ಕಂಬಳೋತ್ಸವವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು : ”ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ. ನಮ್ಮದು ಬಹುತ್ವದ ದೇಶ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ”ಜನಪದ ಕ್ರೀಡೆ ಕಂಬಳ ಸರ್ವ ಜಾತಿ, ಧರ್ಮದ ಜನ ಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಕರಾವಳಿ ಜಿಲ್ಲೆಗಳ ಒಂದು ಸಂಸ್ಕೃತಿಯಾಗಿದೆ. ನಮ್ಮ ಸರ್ಕಾರ ಕೂಡ ಎಲ್ಲಾ …
Read More »ಯೋಧ ರವಿ ತಳವಾರ ಅಂತಿಮ ಯಾತ್ರೆ
ಬೆಳಗಾವಿ: ನಾಗಾಲ್ಯಾಂಡ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಜಿಲ್ಲೆಯ ಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದ ಯೋಧ ರವಿ ತಳವಾರ (35) ಅವರ ಪಾರ್ಥಿವ ಶರೀರ ಶನಿವಾರ ಸ್ವಗ್ರಾಮಕ್ಕೆ ಆಗಮಿಸಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಗೂ ಮುನ್ನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. …
Read More »