Breaking News

Yearly Archives: 2024

ಪ್ರಲ್ಹಾದ್​​ ಜೋಶಿ ವಿರುದ್ಧ ಸಚಿವ ಸಂತೋಷ್ ಲಾಡ್‌ ಆಕ್ರೋಶ

ಧಾರವಾಡ, ಜನವರಿ 08: ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ 4 ಸಲ ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಪ್ರಬುದ್ಧ ಧಾರವಾಡ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಹೀಗೆ ಮಾತನಾಡುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆಯನ್ನ ಹಿಂಪಡೆದು ಸಿಎಂ ಸಿದ್ದರಾಮಯ್ಯರವರ ಬಳಿ ಕ್ಷಮೆ ಕೇಳಲಿ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್(Santosh Lad)ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಆಡಳಿತವನ್ನು ಐಸಿಸ್ ಆಡಳಿತಕ್ಕೆ ಹೋಲಿಕೆ ವಿಚಾರವಾಗಿ ಮಾತನಾಡಿದ ಅವರು, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ನಡೆಯುತ್ತಿರುವುದಕ್ಕೆ ಹೋಲಿಸಿದ್ದಾರೆ ಎಂದಿದ್ದಾರೆ. ಇತ್ತೀಚೆಗೆ ಹಾರಿಕೊಂಡು …

Read More »

ಬಿಡುಗಡೆಯಾಗುತ್ತಿದ್ದಂತೆ ಕರವೇ ನಾರಾಯಣಗೌಡ ಮತ್ತೆ ಪೊಲೀಸರ ವಶಕ್ಕೆ !

ಬೆಂಗಳೂರು, ಜನವರಿ 09: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ (ಕರವೇ)ನಾರಾಯಣಗೌಡ(Narayangouda) ಅವರಿಗೆ ಜಾಮೀನು‌ ಮಂಜೂರು ಆದ ಹಿನ್ನೆಲೆಯಲ್ಲಿ ಮಂಗಳವಾರ (ಜ.09) ಬಿಡುಗಡೆಯಾಗಿದ್ದಾರೆ. ನಾರಯಣಗೌಡ ಅವರು ಬಿಡುಗಡೆಯಾಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು (Police) ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಇದೀಗ ಮಾರ್ಥಾಸ್ ಆಸ್ಪತ್ರೆಯಲ್ಲಿ ನಾರಾಯಣಗೌಡ ಅವರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಬಳಿಕ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. 2017ರ ಹಳೇ ಕೇಸ್ ಸಂಬಂಧ ಪೊಲೀಸರು ನಾರಾಯಣಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. …

Read More »

ಗಡಿ ವಿವಾದ: ಮರಾಠಿ ಭಾಷಿಕರಿಗೆ ಪರಿಹಾರ ನಿಧಿ ಮಂಜೂರು, ಬೆಳಗಾವಿಯಲ್ಲೇ ಆರೋಗ್ಯ ವಿಮೆ ತೆರೆದ ಮಹಾರಾಷ್ಟ್ರ

ಬೆಳಗಾವಿ, ಜನವರಿ 09: ಇತ್ತೀಚಿಗೆಮಹಾರಾಷ್ಟ್ರಸಂಸದ ಧೈರ್ಯಶೀಲ ಮಾನೆ (Dhairyashil mane) ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಕರ್ನಾಟಕದ ಗಡಿಯಲ್ಲಿ ಇರುವ ಮರಾಠಿ ಭಾಷಿಕರಿಗೆ ಮಹಾರಾಷ್ಟ್ರ (Maharashtra) ಸರ್ಕಾರ ಆರೋಗ್ಯ ವಿಮೆ (Health Insurance) ಜಾರಿ ಮಾಡಲಿದೆ ಎಂದಿದ್ದರು. ಈ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸರ್ಕಾರ ಕರ್ನಾಟಕದ ಗಡಿಯೊಳಗಿನ ಮರಾಠಿ ಭಾಷಿಕರಿಗೆ ಆರೋಗ್ಯ ಪರಿಹಾರ ನಿಧಿ ಮಂಜೂರು ಮಾಡಿದೆ. …

Read More »

ಡಿವೈಡರ್​ಗೆ ಕಾರು ಡಿಕ್ಕಿ; ಅಯ್ಯಪ್ಪ ಮಾಲಾಧಾರಿಗಳಿಬ್ಬರ ಸಾವು, ಮೂವರಿಗೆ ಗಂಭೀರ ಗಾಯ

 ಗದಗ ಜಿಲ್ಲೆಯಿಂದ ಕೇರಳಕ್ಕೆ ಹೋಗುತ್ತಿದ್ದ ಐಯಪ್ಪಸ್ವಾಮಿ ಮಾಲಾಧಾರಿಗಳ ವಾಹನ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಕ್ರಾಸ್ ಬಳಿ NH 50 ರಸ್ತೆಯಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಇಬ್ಬರು ಮೃತಪಟ್ಟಿದ್ದು ಮೂವರಿಗೆ ಗಾಯಗಳಾಗಿವೆ.ಬಳ್ಳಾರಿ, ಜ.09: ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು (Ayyappa Devotees) ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ (Accident) ಚೆನ್ನುಪಾಟೀಲ(26), ಯುವರಾಜ(28) ಸ್ಥಳದಲ್ಲೇ ಮೃತಪಟ್ಟಿದ್ದಾರೆ (Death). ಇನ್ನು …

Read More »

ಮಾಗಡಿ ರೋಡ್, ತಾವರೆಕೆರೆ ಸೇರಿ ಮೂವತ್ತಕ್ಕೂ ಹೆಚ್ಚು ಕಡೆ 15 ದಿನ ವಿದ್ಯುತ್ ವ್ಯತ್ಯಯ

ಬೆಂಗಳೂರು, ಜ.09: ರಾಜಧಾನಿ ಬೆಂಗಳೂರಿನ ಮಾಗಡಿರೋಡ್, ತಾವರೆಕೆರೆ ಸೇರಿ ಮೂವತ್ತಕ್ಕೂ ಹೆಚ್ಚು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (Bengaluru Power Cut). ಕೆಪಿಟಿಸಿಲ್ ಮಾಗಡಿ-ಬ್ಯಾಡರಹಳ್ಳಿ 66 ಕೆ.ವಿ. ಮಾರ್ಗದ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆ ಜ.10 ರಿಂದ ಜ.26ರವರೆಗೆ ಅಂದ್ರೆ ಒರೋಬ್ಬರಿ 16 ದಿನಗಳ ಕಾಲ ತಾವರೆಕೆರೆ ಹಾಗೂ ಮಾಚೋಹಳ್ಳಿ ಸುತ್ತಮುತ್ತ ಬೆಳಗ್ಗೆ 8ರಿಂದ ರಾತ್ರಿ 8ರ ಅವಧಿ ನಡುವೆ 2-3 ಗಂಟೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮೂಲಗಳು …

Read More »

ಬೆಳ್ಳಂಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್​​​

ಬೆಂಗಳೂರು, ಜನವರಿ 09:ಲೋಕಾಯುಕ್ತ(Lokayukta) ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್​ ನೀಡಿದ್ದಾರೆ. ಬೆಂಗಳೂರು, ಬಳ್ಳಾರಿ, ರಾಮನಗರ ಸೇರಿದಂತೆ ರಾಜ್ಯದ 30 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ನಾಲ್ಕು ಹಾಗೂ ರಾಮನಗರದ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಈ ದಾಳಿ ನಡೆಸಿದೆ. ಪಿಡಬ್ಯೂಡಿ (PWD), ಪಿಡಿಓ (PDO) , ಬೆಸ್ಕಾಂ (BESCOM), ಕೆಆರ್​ಐಡಿಎಲ್ (KRIDL)​ ಹಾಗೂ ಪಂಚಾಯತ್ ಸದಸ್ಯ ಮತ್ತು ಟೌನ್ ಪ್ಲ್ಯಾನಿಂಗ್ ಅಧಿಕಾರಿ​ಗೆ ಸೇರಿದ ಜಾಗಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. …

Read More »

ಮೂರು ಡಿಸಿಎಂ ಸೃಷ್ಟಿ ವಿಚಾರ: ಸ್ಪಷ್ಟನೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಜನವರಿ 09: ದಲಿತ ಮತಗಳನ್ನು ಭದ್ರಪಡಿಸಿಕೊಳ್ಳಲು ಲೋಕಸಭಾ ಚುನಾವಣೆಗೂ (Lok Sabha Election) ಮುನ್ನ ಇನ್ನೂ ಮೂರುಡಿಸಿಎಂ(DCM) ಸ್ಥಾನ ಸೃಷ್ಟಿಸುವಂತೆ ಕಾಂಗ್ರೆಸ್ (Congress)​ ಹೈಕಮಾಂಡ್​ ಮೇಲೆ ಸಿದ್ದರಾಮಯ್ಯ (Siddaramaiah) ಆಪ್ತ ಬಣ ಒತ್ತಡ ಹೇರುತ್ತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ (Mallikarjun Kharge) ಮಾತನಾಡಿ, ಮೂವರು ಡಿಸಿಎಂ ವಿಚಾರ ಹೈಕಮಾಂಡ್​ ಮುಂದೆ ಇಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ …

Read More »

ವಿದ್ಯಾರ್ಥಿಗಳು ಶಾಲೆಯಲ್ಲಿ ಶೌಚಾಲಯ ತೊಳೆದರೆ ತಪ್ಪಿಲ್ಲ: ಯುಟಿ ಖಾದರ್

ಮಂಗಳೂರು, : ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯಗಳನ್ನು ತೊಳೆದರೆ ತಪ್ಪಿಲ್ಲ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ವಿಧಾನಸಭೆ ಸ್ಪೀಕರ್ಯುಟಿ ಖಾದರ್(UT Khader), ವಿದ್ಯಾರ್ಥಿಯಾಗಿದ್ದಾಗ ನಾನು ಕೂಡ ಶಾಲೆಯ ಶೌಚಾಲಯವನ್ನು ತೊಳೆದಿದ್ದೇನೆ. ಮಕ್ಕಳ ಶೌಚಾಲಯವನ್ನು ಮಕ್ಕಳೇ ಸ್ವಚ್ಚಗೊಳಿಸಿದರೆ ತಪ್ಪಿಲ್ಲ. ಇದು ಶಿಕ್ಷಣದ ಒಂದು ಭಾಗ ಎಂದು ಹೇಳಿದರು   ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದಲ್ಲಿ ಮಾತನಾಡಿದ ಅವರು, ಶಾಲೆಯ ಶೌಚಾಲಯವನ್ನು ವಿದ್ಯಾರ್ಥಿಗಳಾಗಿದ್ದಾಗ ನಾವೇ ಕ್ಲೀನ್ ಮಾಡುತ್ತಿದ್ದೆವು. ಅದು ಶಿಕ್ಷಣದ ಒಂದು …

Read More »

545 ಪಿಎಸ್‌ಐ ನೇಮಕಾತಿ ಮರುಪರೀಕ್ಷೆ,

ಬೆಂಗಳೂರು, ಜ.09: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ (PSI Recruitment Scam) ನಡೆದ ಹಿನ್ನೆಲೆ ರದ್ದಾಗಿದ್ದ ಪರೀಕ್ಷೆಯನ್ನು ಮತ್ತೆ ಬರೆಯಲು ದಿನಾಂಕ ನಿಗದಿಯಾಗಿದ್ದು ಜ. 23ರಂದು ಮರು ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ (KEA) ಹೊರಡಿಸಿದೆ. ಕಳೆದ ಡಿ.23ರಂದು ಬೆಂಗಳೂರಿನಲ್ಲಿ ಮಾತ್ರ ಮರು ಪರೀಕ್ಷೆ ನಡೆಸಲು ಪ್ರಾಧಿಕಾರ ದಿನಾಂಕ ಪ್ರಕಟಿಸಿತ್ತು. ಆದರೆ, ಅಭ್ಯರ್ಥಿಗಳು ಪರೀಕ್ಷೆಗೆ ತಯಾರಾಗಲು ಹೆಚ್ಚಿನ ಕಾಲಾವಕಾಶ ನೀಡಲು ಪರೀಕ್ಷೆ ಮುಂದೂಡ ಬೇಕೆಂದು …

Read More »

ಡೆತ್​​ ನೋಟ್​​​ ಬರೆದಿಟ್ಟು ಪಿಯು ವಿದ್ಯಾರ್ಥಿ ಆತ್ಯಹತ್ಯೆ

ಬೆಂಗಳೂರು ಗ್ರಾಮಾಂತರ, ಜ.09 : ಡೆತ್​​ ನೋಟ್​​​ ಬರೆದಿಟ್ಟು ಪಿಯುಸಿ ವಿದ್ಯಾರ್ಥಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯದೊಡ್ಡಬಳ್ಳಾಪುರ( Doddaballapura )ದ ತ್ಯಾಗರಾಜನಗರದ ಮನೆಯೊಂದರಲ್ಲಿ ನಡೆದಿದೆ. ಜಾನ್ಸಿ(17) ಆತ್ಯಹತ್ಯೆಗೆ ಶರಣಾದ ವಿದ್ಯಾರ್ಥಿ. ನಾನು ಯಾರಿಗೂ ಮೋಸ ಮಾಡಿಲ್ಲ. ಬುಜ್ಜಿ, ಆಲ್ ಫ್ರೆಂಡ್ಸ್ ಮಿಸ್​​ಯೂ. ನಾನು‌ ಲೋಕ ಬಿಟ್ಟು ತೆರಳುತ್ತಿದ್ದೇನೆ, ಎಲ್ಲರೂ ಖುಷಿ ಖುಷಿಯಾಗಿರಿ ಎಂದು ಡೆತ್​​ ನೋಟ್​​​ ಬರೆದಿಟ್ಟು,   ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಘಟನೆ …

Read More »