Breaking News

Yearly Archives: 2024

ಈ ಅಯೋಗ್ಯ ರಾಜಕಾರಿಣಿಗಳಿಗೆ ರಾಮ ಬರೀ ರಾಜಕೀಯ ಲಾಭಕ್ಕಾಗಿಯೇ ಇರುವ ವ್ಯಾಪಾರದ ಸರಕು.. ಅಷ್ಟೇ.: ನಟ ಕಿಶೋರ್‌ ಕುಮಾರ್‌

ಬೆಂಗಳೂರು, ಜನವರಿ 22: ಅಯೋಧ್ಯೆಯಲ್ಲಿ ತಲೆಎತ್ತಿ ನಿಂತಿರುವ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಲಕ್ಷಾಂತರ ರಾಮನ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಸೋಮವಾರ ದಂದು ಭಗವಾನ್‌ ಶ್ರೀರಾಮನು ಅಯೋಧ್ಯೆಯ ರಾಮ ಮಂದಿರದಲ್ಲಿ ನೆಲೆಸಲಿದ್ದು, ಕೋಟ್ಯಂತರ ಭಕ್ತರು ಅಯೋಧ್ಯೆ ರಾಮನನ್ನು ಕಣ್ತುಂಬಿಕೊಂಡಿದ್ದಾರೆ. ಆದರೆ, ರಾಮ ಮಂದಿರ ರಾಜಕೀಯ ಲಾಭಕ್ಕಾಗಿ ಎಂದು ನಟ ಕಿಶೋರ್‌ ಕುಮಾರ್‌ ಕಿಡಿಕಾರಿದ್ದಾರೆ. ಹೌದು, ಈ ಕುರಿತಂತೆ ನಟ ಕಿಶೋರ್‌ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಅಸಲಿ ಹಿಂದೂ ವಿರೋಧಿ …

Read More »

ಹನುಮಂತನ ಆಶೀರ್ವಾದವಿದ್ದರೆ ನಾನು ಮತ್ತೆ ಶೀಘ್ರದಲ್ಲಿ ಬಳ್ಳಾರಿಗೆ ಹೋಗುತ್ತೇನೆ

ಕೊಪ್ಪಳ, ಜನವರಿ: : ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ಹನುಮಂತನ ಆಶೀರ್ವಾದವಿದ್ದರೆ ನಾನು ಮತ್ತೆ ಶೀಘ್ರದಲ್ಲಿ ಬಳ್ಳಾರಿಗೆ ಹೋಗುತ್ತೇನೆ ಎಂದು ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಸೋಮವಾರ ಅಂಜನಾದ್ರಿಯಲ್ಲಿ ಹನುಮನ ಪೂಜೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಇಂದು ಕೇವಲ ಭಾರತ ದೇಶವಲ್ಲ ಇಡೀ ವಿಶ್ವದಲ್ಲಿಯೇ ಸಂತೋಷವಾಗಿದೆ. ರಾಮಮೂರ್ತಿ ಪ್ರತಿಷ್ಠಾಪನೆಯ ವಿಷಯದಲ್ಲಿ ಸಂತೋಷಪಡುವ ಮೊದಲ ವ್ಯಕ್ತಿ ಎಂದರೆ ಅದು ಹನುಮಂತ ಎಂದು …

Read More »

ರಾಜ್ಯದ ಅಂತಿಮ ಮತದಾರರ ಪಟ್ಟಿ ಬಿಡುಗಡೆ, ಒಟ್ಟು ಮತದಾರರು, ಅಂಕಿ ಸಂಖ್ಯೆಗಳು

ಬೆಂಗಳೂರು, ಜನವರಿ 22: ಲೋಕಸಭಾ ಚುನಾವಣೆ ಅಂಗವಾಗಿ ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ 2024 ಅನ್ನು ರಾಜ್ಯ ಚುನಾವಣೆ ಆಯೋಗ ಬಿಡುಗಡೆ ಮಾಡಿದೆ. ಪ್ರಕಟಗೊಂಡ ಬಳಿಕ ಆಯೋಗದ ಮುಖ್ಯ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಜತೆ ಸಭೆ ನಡೆಸಿದರು. ಹಾಗಾದರೆ ಎಷ್ಟು ಮತದಾರರು ಇದ್ದಾರೆ?, ಯಾವ ಮತದಾರರು ಇದ್ದಾರೆ, ಅಂಕಿ ಸಂಖ್ಯೆಯಲ್ಲಿ ಮಾಹಿತಿ ಇಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,37,85,815 ಇದೆ. ಇದರಲ್ಲಿ 2,69,33,750 ಪುರುಷ …

Read More »

ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್? ಬಿಯರ್ ಬೆಲೆ ಹೆಚ್ಚಳ ಸಾಧ್ಯತೆ

ಕರ್ನಾಟಕದಲ್ಲಿ ಮತ್ತೆ ಮದ್ಯದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಕರ್ನಾಟಕ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಮತ್ತೊಮ್ಮೆ ಹೆಚ್ಚಿಸಲು ಪ್ರಸ್ತಾಪಿಸಿದೆ, ಇದರ ಪರಿಣಾಮವಾಗಿ ಪ್ರತಿ 650 ಮಿಲಿ ಬಾಟಲಿಗೆ 8-10 ರೂ ಹೆಚ್ಚಳವಾಗುವ ಸಾಧ್ಯತೆ ಇದೆ. ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳು) ನಿಯಮಗಳು, 1968 ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆಯಲ್ಲಿ ಹೆಚ್ಚಳವನ್ನು ಸರ್ಕಾರ ಪ್ರಸ್ತಾಪಿಸಿದೆ. …

Read More »

500 ವರ್ಷಗಳ ಬಳಿಕ ಶ್ರೀರಾಮ ಮರಳಿ ಮನೆಗೆ

ಅಯೋಧ್ಯೆ: ಸೋಮವಾರ ‘ಪ್ರಾಣ ಪ್ರತಿಷ್ಠಾ ವಿಧಿವಿಧಾನಗಳಿಗೆ ಚಾಲನೆ ನೀಡಿ, ರಾಮಲಲ್ಲಾ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ, ಸಮಾರಂಭಕ್ಕೆ ಹಾಜರಾಗುವ ಮೂಲಕ ಎಲ್ಲರ ಗಮನಸೆಳೆದರು. ಪ್ರತಿಷ್ಠಾಪನೆಗೊಂಡ ರಾಮಲಲ್ಲಾನ ವಿಗ್ರಹ ಚಿನ್ನ ಮತ್ತು ಪಚ್ಚೆ ಆಭರಣಗಳಲ್ಲಿ ಅಲಂಕರಿಸಲಾಗಿದ್ದು, ಕಳೆದ ವಾರ ದೇವಸ್ಥಾನದಲ್ಲಿ ವಿಗ್ರಹವನ್ನು ಇಡಲಾಗಿತ್ತು. ದೇವರ ಮುಖ ಮತ್ತು ಕಣ್ಣನ್ನು ಮುಚ್ಚಲಾಗಿತ್ತು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುವ ಮುಖೇನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 84 ಸೆಕೆಂಡುಗಳ ಮುಹೂರ್ತದಲ್ಲಿ ‘ಪ್ರಾಣ ಪ್ರತಿಷ್ಠೆ’ …

Read More »

ರಾಮ ಮಂದಿರ ಮೆರವಣಿಗೆ ವೇಳೆ ವಿದ್ಯುತ್ ಅವಘಡ, 9 ಮಕ್ಕಳ ಸ್ಥಿತಿ ಗಂಭೀರ

ಅಮೇಥಿ : ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಸೋಮವಾರ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಆಚರಿಸುವ ಮೆರವಣಿಗೆಯ ವೇಳೆ ವಿದ್ಯುತ್ ಸ್ಪರ್ಶದಿಂದ ಒಂಬತ್ತು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ಸಂಗ್ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪೂರ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೆರವಣಿಗೆಯ ಸಮಯದಲ್ಲಿ ಡಿಜೆಯನ್ನು ಹೊತ್ತ ಟ್ರಕ್ ಮೇಲೆ ಮಕ್ಕಳು ಸವಾರಿ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅದರ ಮೇಲಿದ್ದ ಕೆಲವು ಧ್ವಜಗಳು ಹೈಟೆನ್ಷನ್ ತಂತಿಗೆ ಸಿಲುಕಿ ವಿದ್ಯುತ್ ಶಾಕ್ …

Read More »

ಕ್ವಿಂಟಲ್ ಗೆ 61,999 ರೂ. ಗರಿಷ್ಠ ದರದಲ್ಲಿ ಡಬ್ಬಿ ಮೆಣಸಿನಕಾಯಿ ಮಾರಾಟ

ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ ಗೆ 61,999 ರೂ. ಗರಿಷ್ಠ ದರದಲ್ಲಿ ಮಾರಾಟವಾಗಿದ್ದು, ಸ್ಥಿರತೆ ಕಾಯ್ದುಕೊಂಡಿದೆ. ಸೋಮವಾರ ಬ್ಯಾಡಗಿ ಎಪಿಎಂಸಿಗೆ 1,68,489 ಚೀಲಗಳಲ್ಲಿ 42,122 ಕ್ವಿಂಟಲ್ ಮೆಣಸಿನ ಕಾಯಿ ಮಾರಾಟಕ್ಕೆ ಬಂದಿದೆ. ಕಳೆದ ವಾರ 28,506 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿತ್ತು. ಈ ಹಂಗಾಮಿನಲ್ಲಿ ಮೊದಲ ಬಾರಿಗೆ 1.50 ಲಕ್ಷಕ್ಕೂ ಹೆಚ್ಚು ಚೀಲ ಮಾರಾಟಕ್ಕೆ ಬಂದಿದೆ. ಕಡ್ಡಿ ಮೆಣಸಿನಕಾಯಿ ಕ್ವಿಂಟಲ್ ಗೆ 50,189 …

Read More »

ಯುವನಿಧಿʼ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ ನಿರುದ್ಯೋಗ ಭತ್ಯೆ ಪಡೆಯಿರಿ

ಬೆಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಖಾತರಿ ಯೋಜನೆಯಾದ “ಯುವನಿಧಿ” ಯೋಜನೆಯನ್ನು ಡಿಸೆಂಬರ್ 26 ರಂದು ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. 2023 ರಲ್ಲಿ ಪದವಿ/ ಡಿಪ್ಲೋಮಾ ಉತ್ತೀರ್ಣರಾಗಿ 6 ತಿಂಗಳಾದರೂ ಸರ್ಕಾರಿ/ಖಾಸಗಿ/ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಕರ್ನಾಟಕ ಒನ್, ಗ್ರಾಮಒನ್, ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ https://sevasindhugs.karnataka.gov.in ಪೋರ್ಟಲ್ ಮೂಲಕ ಉಚಿತವಾಗಿ “ಯುವನಿಧಿ” ಯೋಜನೆಗೆ …

Read More »

ಪ್ರಧಾನಿ ನರೇಂದ್ರ ಮೋದಿಯವರ ರಾಮರಾಜ್ಯದ ಕನಸು ಶೀಘ್ರದಲ್ಲಿ ನನಸಾಗಲಿದೆ : ಬಿವೈ ವಿಜಯೇಂದ್ರ

ಬೆಂಗಳೂರು : ಪ್ರತಿಯೊಬ್ಬ ಹಿಂದೂಗಳನ್ನು ಒಂದುಗೂಡಿಸುವ ಪವಿತ್ರ ಘಳಿಗೆ ಇಂದಿನದು. ಅಯೋಧ್ಯೆಯು ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳ. ಪ್ರಭು ಶ್ರೀರಾಮಚಂದ್ರನ ಪರಮ ಭಕ್ತ ಹನುಮನ ಜನ್ಮಸ್ಥಳ ಕಿಷ್ಕಿಂಧೆ ಕರ್ನಾಟಕದಲ್ಲಿದೆ.ಕೋಟಿ ಕೋಟಿ ರಾಮಭಕ್ತರ ಆಸೆ ಇವತ್ತು ಈಡೇರಿದ್ದು, ಪ್ರಧಾನಿ ನರೇಂದ್ರ ಮೋದಿಯವರ ರಾಮರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂದು ಹೇಳಿದ್ದಾರೆ.   ಸೋಮವಾರ ನಗರದಲ್ಲಿ ರಾಮೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪ್ರತಿಯೊಂದು …

Read More »

ಇಂದು PSI ಮರು ಪರೀಕ್ಷೆ : ಕೇಂದ್ರಗಳ ಸುತ್ತಲೂ ಬಿಗಿ ಬಂದೋ ಬಸ್ತ್

ಬೆಂಗಳೂರು : ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಮೇರೆಗೆ ಇಂದು 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಬೆಂಗಳೂರಿನ ಒಟ್ಟು 117 ಕೇಂದ್ರಗಳಲ್ಲಿ ಪಿಎಸ್​ಐ ನೇಮಕಾತಿ ಮರು ಪರೀಕ್ಷೆಯು ನಡೆಯಲಿದೆ. ಈ ಹಿನ್ನೆಲ್ಲಿ ಈ ಬಾರಿ ಯಾವುದೇ ಅಕ್ರಮಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ …

Read More »