ಬೆಂಗಳೂರು, ಜನವರಿ : ಕೇಂದ್ರ ಸರ್ಕಾರ ನಿಷೇಧಿಸಿರುವ, ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಇ-ಸಿಗರೇಟ್ (E-cigarette) ಅನ್ನು ಸಿಸಿಬಿ (CCB Police) ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಇ-ಸಿಗರೇಟ್ಗಳನ್ನು ದುಬೈಯಿಂದ ಬೆಂಗಳೂರಿಗೆ ತರಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಒಂದು ಸಿಗರೇಟ್ಗೆ ಐದರಿಂದ ಆರು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಕೊರಿಯರ್ ಮೂಲಕ ಬರುತ್ತಿತ್ತು ಇ-ಸಿಗರೇಟ್ ಇ-ಸಿಗರೇಟ್ ಅನ್ನು ಬ್ಲೂ ಡಾರ್ಟ್ ಕೊರಿಯರ್ ಮೂಲಕ ದುಬೈಯಿಂದ ದೆಹಲಿಗೆ ತೆರಿಸಿ ಅಲ್ಲಿಂದ ಬೆಂಗಳೂರಿಗೆ ತರಿಸಲಾಗಿತ್ತು. …
Read More »Yearly Archives: 2024
ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ
ಚಿಕ್ಕಮಗಳೂರು: ಲೋಕ ಸಭಾ (loksabha) ಚುನಾವಣೆ (election) ಹತ್ತಿರವಿರುವಾಗಲೇ ಇಲ್ಲೊಬ್ಬರು ಮದುವೆ ಆಮಂತ್ರಣ (wedding invitation) ಪತ್ರಿಕೆಯಲ್ಲಿ ಪ್ರಧಾನಿ (PM) ನರೇಂದ್ರ ಮೋದಿ (narendra modi) ಮೇಲಿನ ಅಭಿಮಾನವನ್ನು ತೋರ್ಪಡಿಸಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಆಶೀರ್ವಾದವೇ ಉಡುಗೊರೆ ಅಥವಾ ಆಗಮನವೇ ಉಡುಗೊರೆ ಎಂದು ಬರೆಯುವುದು ಸಾಮಾನ್ಯ. ಆದರೆ ಇವರು ಮಾತ್ರ ಆಮಂತ್ರಣ ಪತ್ರಿಕೆಯಲ್ಲಿ 2024ರ ಲೋಕಸಭೆ ಚುನಾವಣೆ ಪರ ಪ್ರಚಾರ ಮಾಡಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ …
Read More »ಪಾರ್ಕ್ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರಲ್ಲ, ಒಪ್ಪಿಗೆ ಪಡೆದಿದ್ದಾರಾ? ಸಿದ್ದರಾಮಯ್ಯ, ಪರಮೇಶ್ವರ್ಗೆ ಪ್ರತಾಪ್ ಸಿಂಹ ಪ್ರಶ್ನೆ
ಮೈಸೂರು, : ಮಂಡ್ಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿವಾದ ಕೇಸ್ ಹಿನ್ನೆಲೆ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ಹಾರಾಡುತ್ತಿರುವುದನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದರು. ಇದೀಗ ಸಂಸದ ಪ್ರತಾಪ್ ಸಿಂಹ(Pratap Simha)ಕೂಡ ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ಗೆ ಟಾಂಗ್ ನೀಡಿದ್ದಾರೆ. ಮೈಸೂರಿನ ಕೈಲಾಸಪುರಂನ ಪಾರ್ಕ್ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರಲ್ಲ, ಒಪ್ಪಿಗೆ …
Read More »ಬಾಬಾ ಸಾಹೇಬರ ಸಂವಿಧಾನ ಓದಿದ ಪುಟಾಣಿ
ಬೆಂಗಳೂರು : ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಾಲಾಕಾಲೇಜುಗಳಲ್ಲಿ ಸಂವಿಧಾನ ಓದು (Constitution reading) ಎಂಬ ಹೊಸ ಕ್ರಮವನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರ (Dr BabaSaheb Ambedkar) ಸಂವಿಧಾನದ ಬಗ್ಗೆ ಅರಿವು ಮತ್ತು ಗೌರವ ಮೂಡಿಸುವ ಸಲುವಾಗಿ ಪ್ರಾರಂಭಿಸಿರುವ ಈ ಕಾರ್ಯಕ್ರಮದಲ್ಲಿ ಆರು ವರ್ಷದ ಬಾಲೆಯೊಬ್ಬಳು ಸ್ಪಷ್ಟವಾಗಿ ಸಂವಿಧಾನದ ಪ್ರಸ್ತಾವನೆಯನ್ನು ಕಂಠಪಾಠದ ಮೂಲಕ ಓದಿ ಜನರ ಮೆಚ್ಚುಗೆ ಗಳಿಸಿದ್ದಾಳೆ. ಸಚಿವ …
Read More »ಕೃಷಿಗೆ ಮತ್ತೆ ಮನ್ನಣೆ ನೀಡುವ ದಿನ ಬರಲಿದೆ: ಬಾಬಾಸಾಹೇಬ ಪಾಟೀಲ
ಚನ್ನಮ್ಮನ ಕಿತ್ತೂರು: ‘ಒಕ್ಕಲುತನ ಮತ್ತು ಒಕ್ಕಲುತನ ಮಾಡುವವರು ಸಂಕಷ್ಟದಲ್ಲಿದ್ದಾರೆ. ಆದರೆ, ಕೃಷಿಗೆ ಒಳ್ಳೆಯ ಕಾಲ ಮತ್ತೆ ಬರಲಿದೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಕೃಷಿ ಇಲಾಖೆಯಿಂದ ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಯಂತ್ರೋಪಕರಣ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕೃಷಿಗೆ ಸದ್ಯ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಕೃಷಿಯಿಂದ ವಿಮುಖರಾದವರು ಮರಳಿ ಬರುವ ಸಾಹಸ ಮಾಡುತ್ತಿಲ್ಲ. ಬಿತ್ತನೆ ಮಾಡಿದ ಬೆಳೆ ಕೈಗೆ ಸೇರಬೇಕೆಂದರೆ …
Read More »ರಸ್ತೆ ಮೇಲೆ ಮಲಗಿ ರೈತರ ಆಕ್ರೋಶ
ಬೆಳಗಾವಿ: ‘ಇಲ್ಲಿನ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಸ್ಥಳೀಯ ರೈತರ ಬದಲಿಗೆ, ಹೊರರಾಜ್ಯದ ದಲ್ಲಾಳಿ ಗಜ್ಜರಿ ಖರೀದಿಸಿ ಮೋಸ ಮಾಡಲಾಗುತ್ತಿದೆ’ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಾರುಕಟ್ಟೆ ಎದುರು ರಸ್ತೆಯಲ್ಲೇ ಮಲಗಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮಾರುಕಟ್ಟೆ ಆವರಣದಲ್ಲಿ ಗಜ್ಜರಿ ಸುರಿದ ಆಕ್ರೋಶ ವ್ಯಕ್ತಪಡಿಸಿದ ರೈತರು, ‘ಬೆಳಗಾವಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಜ್ಜರಿ ಬೆಳೆಯಲಾಗುತ್ತಿದೆ. ಆದರೆ, ಇಲ್ಲಿನ ವರ್ತಕರು ಮಾರಾಟಕ್ಕಾಗಿ ಹೊರರಾಜ್ಯದಿಂದ …
Read More »ಪ್ರೇಮ ಪ್ರಕರಣ, ನವ ದಂಪತಿ ಕೊಲೆ
ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ ಮಂಗಳವಾರ ನವ ದಂಪತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅವರ ರಕ್ಷಣೆಗೆ ಬಂದ ಇನ್ನಿಬ್ಬರ ಮೇಲೂ ಹಲ್ಲೆ ಮಾಡಲಾಗಿದೆ. ಯಾಸಿನ್ ಬ್ಯಾಗೋಡೆ (21) ಹಾಗೂ ಹೀನಾಕೌಸರ್ (19) ಕೊಲೆಯಾದವರು. ಇದೇ ಊರಿನ ತೌಫಿಕ್ ಕ್ಯಾಡಿ (24) ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಯಾಸಿನ್ ಹಾಗೂ ಹೀನಾಕೌಸರ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ನಾಲ್ಕು ತಿಂಗಳ ಹಿಂದೆ ಹೀನಾಕೌಸರ್ ಅವರ ಮದುವೆಯನ್ನು ತೌಫಿಕ್ ಜತೆಗೆ …
Read More »ಸುಗ್ರೀವಾಜ್ಞೆಗಿಲ್ಲ ಅಂಕಿತ; ಕನ್ನಡ ನಾಮಫಲಕ ನಿಯಮ ತಿದ್ದುಪಡಿ ರಾಜ್ಯಪಾಲರಿಂದ ವಾಪಸ್
ಬೆಂಗಳೂರು: ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ, ಶೇ.40ರಷ್ಟು ಅನ್ಯ ಭಾಷೆ ಬಳಕೆಗೆ ಅವಕಾಶ ಕಲ್ಪಿಸಲು ನಿಯಮಕ್ಕೆ ತಿದ್ದುಪಡಿ ತಂದು ಹೊರಡಿಸಲಾಗಿದ್ದ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಬಜೆಟ್ ಅಧಿವೇಶನ ಹತ್ತಿರದಲ್ಲಿರುವಾಗ ವಿಧಾನಮಂಡಲದಲ್ಲೇ ವಿಧೇಯಕದ ಮೂಲಕ ಜಾರಿಗೆ ತರುವ ಬದಲು ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಔಚಿತ್ಯವೇನಿತ್ತು ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಜ. 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ತರಲು ಅನುಮೋದನೆ ನೀಡಲಾಗಿತ್ತು. ನಾಮಫಲಕದಲ್ಲಿ ಕನ್ನಡ ಕಡೆಗಣನೆ ವಿರೋಧಿಸಿ ಹೋರಾಟ …
Read More »ಲೋಕಸಮರ: BJP ಘಟಕದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ. ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ?
2024ರ Loka Saba ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ BJP ಘಟಕದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ.ರಾಜ್ಯ ಬಿಜೆಪಿ ಘಟಕದ ವತಿಯಿಂದ ಯಾವ್ಯಾವ ಕ್ಷೇತ್ರಕ್ಕೆ ಯಾರ್ಯಾರು ಅಭ್ಯರ್ಥಿಗಳಾಗಬೇಕು? ಅವರ Strength and Weakness ಕುರಿತ ವರದಿಯೊಂದಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೇ ಅಳೆದುತೂಗಿ ಪಟ್ಟಿ ಸಿದ್ಧಪಡಿಸಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ, ಫೆಬ್ರವರಿ ಮೊದಲ ವಾರದಲ್ಲಿ ಪಟ್ಟಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷರ ಕೈ ಸೇರಲಿದೆ. ಈಗಾಗಲೇ ಎರಡು …
Read More »ಕಾಂಗ್ರೆಸ್ ಸೋತರೆ ಉಚಿತ ಯೋಜನೆಗಳ ರದ್ದು ಗ್ಯಾರೆಂಟಿ!
ರಾಮನಗರ : ಲೋಕಸಭಾ ಚುನಾವಣೆಯಲ್ಲಿ (Lokasabha election 2024) ಕಾಂಗ್ರೆಸ್ (Congress) ಸೋಲನ್ನಪ್ಪಿದರೆ ಗ್ಯಾರೆಂಟಿ ಯೋಜನೆಗಳು (Congress Guaratnee scheme) ರದ್ದಾಗಬಹುದು ಎಂದು ಮಾಗಡಿ (Magadi) ಶಾಸಕ ಎಚ್.ಸಿ. ಬಾಲಕೃಷ್ಣ (H C Balakrishna) ಹೇಳಿಕೆ ನೀಡಿದ್ದಾರೆ. ಮಂಗಳವಾರ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಿದ್ದರೆ, ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಜನರಿಗೆ ಇಷ್ಟವಿಲ್ಲ ಎಂಬ ಅರ್ಥ ಹೊಮ್ಮುತ್ತದೆ. ಹೀಗಾಗಿ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವ ಸಾಧ್ಯತೆಯಿದೆ ಎಂದಿದ್ದಾರೆ. …
Read More »