Breaking News

Yearly Archives: 2024

ಜನಾರ್ದನ ರೆಡ್ಡಿ ಬೆಂಬಲ ನಮಗೆ ಇದೆ: ಡಿಕೆಶಿ

ಬೆಂಗಳೂರು: ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಸೇರಿದಂತೆ ನಮ್ಮ 138 ಶಾಸಕರು ಒಂದಾಗಿದ್ದಾರೆ, ನಮ್ಮ ಮನೆಯನ್ನು ಭದ್ರವಾಗಿಟ್ಟುಕೊಳ್ಳುವುದು ಹೇಗೆ ಅಂತ ಗೊತ್ತು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯಸಭಾ ಚುನಾವಣೆಗೆ ನಮ್ಮ ಪಕ್ಷ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿರೋಧ ಪಕ್ಷದವರು ಏನೆಲ್ಲ ಕಸರತ್ತು ನಡೆಸಿದ್ದಾರೆನ್ನುವುದರ ಮೇಲೂ ನಿಗಾ ಇಡಲಾಗಿದೆ. ಜನರ್ದನ ರೆಡ್ಡಿ ಬೆಂಬಲ ನಮಗಿದೆ ಎಂದು …

Read More »

ಸಿಎಂಗೆ ಅಮ್ಮಾ.. ತಾಯಿ ಅಂತಾ ಬೇಡುವ ಸ್ಥಿತಿ ಉದ್ಭವವಾಗಿದೆ: ಹೆಚ್‌ಡಿಕೆ ವ್ಯಂಗ್ಯ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ (Chief Minister) ಅಮ್ಮಾ.. ತಾಯಿ.. ಅಂತಾ ದಯನೀಯ ಸ್ಥಿತಿಯಲ್ಲಿ ಬೇಡುವ ಸನ್ನಿವೇಶ ಉದ್ಭವವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗೌರವ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ? ಈ ರಾಜ್ಯದ ಸರ್ಕಾರವನ್ನು ಭಿಕ್ಷುಕರ ಸರ್ಕಾರವನ್ನಾಗಿ ಮಾಡಲು ಹೊರಟಿದ್ದಿರಾ? ಕೆಲವರು ಮನೆಗಳ ಮುಂದೆ ಹೋದಾಗ ರಾತ್ರಿ ಊಟ ಉಳಿದಿದ್ರೆ ಕೊಡಿ ಅಂತಾ ಭಿಕ್ಷೆ ಕೇಳ್ತಾರೆ, ಅದೇ ರೀತಿ ಸಿಎಂ …

Read More »

ಸಾಧನಾ ಪಟ್ಟಿ ಹೇಳುತ್ತಾ ವಿದಾಯದ ಭಾಷಣ ಮಾಡಿದ ಸುಮಲತಾ ಅಂಬರೀಶ್‌!

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌- ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್‌ (‌Sumalatha Ambareesh) ಅವರು, ಕಾಂಗ್ರೆಸ್‌ನತ್ತ ವಲಸೆ ಹೋಗುತ್ತಾರಾ? ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿತ್ತು. ಈ ನಡುವೆ ಲೋಕಸಭೆಗೆ ನನ್ನ ಸ್ಪರ್ಧೆ ಖಚಿತ ಎಂದು ಹೇಳಿದ್ದ ಸುಮಲತಾ ಅವರು, ಇದೀಗ ದಿಶಾ ಸಭೆಯಲ್ಲಿ ಸಾಧನಾ ಪಟ್ಟಿ ಬಿಡುಗಡೆ ಮಾಡುವ ಮೂಲಕ ವಿದಾಯದ ಭಾಷಣ ಮಾಡಿರುವುದು ಕಂಡುಬಂದಿದೆ. ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ …

Read More »

ಗ್ರಾಮಸ್ಥರಿಂದ ಕುಡಿಯುವ ನೀರಿಗಾಗಿ ಖಾಲಿ ಕೊಡಗಳ ಪ್ರದರ್ಶನ

ವಾಡಿ: ಚಿತ್ತಾಪುರ ಮೀಸಲು ಮತಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಬಗೆಲೆದ್ದಿದ್ದು ಗ್ರಾಮಸ್ಥರು ಖಾಲಿ ಕೊಡೆಗಳ ಪ್ರದರ್ಶನ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ ಯುಸಿಐ) ಪಕ್ಷದ ನೇತೃತ್ವದಲ್ಲಿ ಶುಕ್ರವಾರ ಹಳಕರ್ಟಿ ಗ್ರಾಮದ ನೂರಾರು ಜನ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿ ಕುಡಿಯುವ ನೀರು, ಶೌಚಾಲಯ, ಚರಂಡಿ ಸ್ವಚ್ಛತೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿದರು. ಗ್ರಾಪಂ ಪಿಡಿಒ ಹಾಗೂ ಜನಪ್ರತಿನಿಧಿಗಳ ವಿರುದ್ಧ …

Read More »

ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ ಹೆಚ್ಚುತ್ತಿದೆ: ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲೆಲ್ಲಾ ಹಿಂದೂಗಳ ಮೇಲೆ, ಯಾತ್ರಾರ್ಥಿಗಳ ಮೇಲೆ ಹಲ್ಲೆ, ಬೆದರಿಕೆ ಪ್ರಕರಣಗಳು ನಡೆಯುತ್ತವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು. ಹೊಸಪೇಟೆಯಲ್ಲಿ ಅಯೋಧ್ಯೆಯ ಯಾತ್ರಿಗಳಿಗೆ ಬೆದರಿಕೆ ಹಾಕಿದ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹೀಗಾಗುತ್ತದೆ ಎಂದರು. ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಅಂತಹವರು ತುಷ್ಟೀಕರಣಕ್ಕಾಗಿ, ಮತ ಬ್ಯಾಂಕ್‌ ಗಾಗಿ ಉತ್ತೇಜನ ಕೊಡುತ್ತಾರೆ. ಬೆದರಿಕೆ ಹಾಕಿದವರನ್ನು …

Read More »

ಅಂಬೇವಾಡಿ, ಮೌಳಂಗಿ ಸುತ್ತಮುತ್ತ ಕಾಡಾನೆ ಹಾವಳಿ

ದಾಂಡೇಲಿ : ನಗರದ ಸಮೀಪದ ಮೌಳಂಗಿ, ಹಳೆ ಕೊಣಪ, ಕೊಣಪ ಹಾಗೂ ಅಲ್ಲೇ ಹತ್ತಿರದ ವಿಟ್ನಾಳ, ಹರೇಗಾಳಿ, ಅಂಬೇವಾಡಿ ಬರ್ಚಿ ರಸ್ತೆ, ಗೋಬ್ರಾಳ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಎರಡ್ಮೂರು ತಿಂಗಳುಗಳಿಂದ ಕಾಡಾನೆಯೊಂದು ಸ್ಥಳೀಯ ರೈತರ ಕೃಷಿ ಬೆಳೆಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಕೃಷಿ ಬೆಳೆಗಳು ಹಾನಿಯಾಗುತ್ತಿದೆ. ಪರಿಣಾಮವಾಗಿ ಸ್ಥಳೀಯ ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ. ಶುಕ್ರವಾರವೂ ಕಾಡಾನೆ ಮತ್ತೆ ಸ್ಥಳೀಯರ ಕೃಷಿ ಜಮೀನಿಗೆ ನುಗ್ಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು …

Read More »

ಜಯದೇವಕ್ಕೆ ಇನ್ನೂ ಇಲ್ಲ ಪೂರ್ಣಾವಧಿ ನಿರ್ದೇಶಕ

ಬೆಂಗಳೂರು: ಡಾ| ಸಿ.ಎನ್‌.ಮಂಜುನಾಥ್‌ ನಿವೃತ್ತಿಯಿಂದ ತೆರವಾಗಿರುವ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು, ಹುದ್ದೆ ಗಿಟ್ಟಿಸಲು ಭಾರೀ ಪೈಪೋಟಿ ಶುರುವಾಗಿದೆ. ಆದರೆ ಈ ನಡುವೆಯೇ, ಇಷ್ಟೊಂದು ದೊಡ್ಡ ಸಂಸ್ಥೆಗೆ ನಿರ್ದೇಶಕರಾಗಲು ಸಂಸ್ಥೆಯಲ್ಲಿಯೇ ಹಲವು ಮಂದಿ ಹಿರಿಯರು, ಅನುಭವಿಗಳು, ಸೇವಾ ಹಿರಿತನವುಳ್ಳವರಿದ್ದರೂ ನಿವೃತ್ತರೊಬ್ಬರನ್ನು ಹಂಗಾಮಿಯಾಗಿ ನೇಮಿಸಿರುವುದು ಸಂಸ್ಥೆಯಲ್ಲಿ ಅನೇಕರ ಹುಬ್ಬೇರಿಸಿದೆ.   ಬೆಂಗಳೂರು, ಮೈಸೂರು, ಕಲಬುರಗಿ ಸೇರಿ 3 ಸಾವಿರ ಹಾಸಿಗೆ …

Read More »

ಬಸ್ ನಿಲ್ದಾಣದಲ್ಲಿ ಕಳ್ಳತನ: ಮೂವರು ಕಳ್ಳಿಯರ ಬಂಧನ

ವಿಜಯಪುರ: ನಗರದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಣ ಆಭರಣ ಕಳ್ಳತನ ಪ್ರಕರಣದಲ್ಲಿ ನಗರದ ಪೊಲೀಸರು ಕಲಬುರಗಿ ಮೂಲದ ಮೂವರು ಅಂತರ ಜಿಲ್ಲಾ ಕಳ್ಳಿಯರನ್ನು ಬಂಧಿಸಿ, 8.70 ಲಕ್ಷ ರೂ. ಮೌಲ್ಯದ 146 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.   ಕಳ್ಳತನ ಆರೋಪದಲ್ಲಿ ಬಂಧಿತರನ್ನು ಕಲಬುರಗಿ ನಗರದ ಬಾಪು ನಗರ ನಿವಾಸಿಗಳಾದ 56 ವರ್ಷದ ಗಂಗೂಬಾಯಿ ನಾರಾಯಣ ಕಾಳೆ, 44 ವರ್ಷದ ನರಸಮ್ಮ ಅಮಿತ ಕುಮಾರ ಪಾಟೀಲ ಹಾಗೂ 35 ವರ್ಷದ …

Read More »

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ ಮಂಜೂರು: ಮಂಗಳಾ ಅಂಗಡಿ

ಬೆಳಗಾವಿ: ಕೇಂದ್ರದ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯಡಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ ಮಂಜೂರು ಮಾಡಲಾಗಿದೆ ಎಂದು ಬೆಳಗಾವಿ ಸಂಸದೆ ಮಂಗಲಾ ಸುರೇಶ್ ಅಂಗಡಿ ಹೇಳಿದರು. ದೇಶದಾದ್ಯಂತ ಒಟ್ಟು 78 ವಿಶ್ವವಿದ್ಯಾಲಯಗಳನ್ನು ಈ ಯೋಜನೆಯಡಿ ಆಯ್ಕೆಯಾಗಿದ್ದು ಅದರಲ್ಲಿ ರಾಣಿ ಚೆನ್ನಮ್ಮ ವಿವಿ ಸಹ ಒಂದಾಗಿದೆ. ಫೆ.20ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು. ಈ ಅನುದಾನವನ್ನು ರಾಣಿ …

Read More »

ಫಲಕ ವಿರುದ್ಧ ಮೋದಿ, ಅಮಿತ್‌ ಶಾಗೆ ದೂರು ನೀಡಲು ಮಹಾರಾಷ್ಟ್ರ ನಿರ್ಧಾರ

ಬೆಳಗಾವಿ: ಬೆಳಗಾವಿಯ ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ತೀರ್ಪು ಬರುವವರೆಗೂ ಯಾವುದೇ ಕಾರಣಕ್ಕೂ ಬೆಳಗಾವಿಯಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಕರ್ನಾಟಕ ಸರಕಾರದ ವಿರುದ್ಧ ದೂರು ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.   ಮುಂಬಯಿಯ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಮುಖಂಡರ ಜತೆಗೆ ಮಹಾರಾಷ್ಟ್ರದ ಸಮನ್ವಯ ಸಚಿವ ಶಂಭುರಾಜೆ ದೇಸಾಯಿ ನೇತೃತ್ವದಲ್ಲಿ …

Read More »