Breaking News

Yearly Archives: 2024

ಗದಗದಲ್ಲಿ ಶೋಭಾಯಾತ್ರೆ ನಡೆಸದಂತೆ ಪೊಲೀಸರ ಕಟ್ಟಾಜ್ಞೆ; ಯಾರೇ ಬಂದರೂ ಶೋಭಾಯಾತ್ರೆ ನಿಲ್ಲಲ್ಲ ಎಂದ ಶ್ರೀರಾಮಸೇನೆ

ಗದಗ, : ಅಯೋಧ್ಯೆಯಲ್ಲಿ ಭಗವಾನ ಶ್ರೀರಾಮಚಂದ್ರನ ಭವ್ಯ ಮಂದಿರ(Ayodhya Ram Manidr)ನಿರ್ಮಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸುವರ್ಣ ಕ್ಷಣ ಸಂಭ್ರಮಕ್ಕೆ ದೇಶದ ಕೋಟ್ಯಂತರ ಹಿಂದೂಗಳು ಸಜ್ಜಾಗಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ದಿನ ಗದಗ (Gadag) ನಗರದಲ್ಲಿ ಶ್ರೀರಾಮಸೇನೆ ಶ್ರೀರಾಮ ಮೂರ್ತಿಯ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಆದರೆ, ಶೋಭಾಯಾತ್ರೆಗೆ ಪೊಲೀಸ್ ಇಲಾಖೆ ಅಡ್ಡಿಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಶೋಭಾಯಾತ್ರೆ ಮಾಡುವಂತಿಲ್ಲ ಎಂದಿದೆ. ಪೊಲೀಸರ ವಿರುದ್ಧ ಆಕ್ರೋಶಗೊಂಡಿರುವ ಶ್ರೀರಾಮಸೇನೆ, ಯಾರೇ ಬಂದರೂ ಶೋಭಾಯಾತ್ರೆ ನಿಲ್ಲಲ್ಲ. ನಡೆಸಿಯೇ ತೀರುತ್ತೇವೆ …

Read More »

ಕೊನೆಗೂ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿದ ಸಿದ್ದರಾಮಯ್ಯ, ಎಷ್ಟು ಗೊತ್ತಾ?

ತುಮಕೂರು,: ಬೆಲೆ ಇಳಿಕೆಯಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ಡಿಸೆಂಬರ್ ತಿಂಗಳಾಂತ್ಯದಲ್ಲಿಕೊಬ್ಬರಿಗೆ (Copra/Coconut)ಬೆಂಬಲ ಬೆಲೆಹೆಚ್ಚಿಸಿ ಆದೇಶಿಸಿತ್ತು. ಆದರೆ, ಇದುವರೆಗೆ ಯಾವುದೇ ಘೋಷಣೆ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೊನೆಗೂ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ತುಮಕೂರಿ​ನ ಸಿದ್ದಗಂಗಾ ಮಠದ ಬಳಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಹೆಚ್ಚುವರಿಯಾಗಿ 1,500 ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಕುಣಿಗಲ್‌ನಲ್ಲಿ ಸ್ಟಡ್ ಫಾರಂನ ಟೌನ್‌ಶಿಪ್‌ ಮಾಡುವ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ರೇಸ್‌ಕೋರ್ಸ್‌ …

Read More »

ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ ರಾಮ ಮಂದಿರ; ಪ್ರಧಾನಿ ಮೋದಿಗೆ ಇದುವೇ ವಿಶೇಷ ಉಡುಗೊರೆ

ದಾವಣಗೆರೆ, :ಅಯೋಧ್ಯೆ ಶ್ರೀರಾಮ ಮಂದಿರ(Ayodhya Ram Mandir) ನಾಳೆ ಲೋಕಾರ್ಪಣೆಗೊಳ್ಳಲಿದೆ. ಈ ನಡುವೆ ಕರ್ನಾಟಕದಲ್ಲಿ ರಾಮ ಭಕ್ತರು ಅದರಲ್ಲೂ ಕಲಾವಿದರು ರಾಮ ಮಂದಿರದ ಸ್ಥಬ್ದಚಿತ್ರಗಳನ್ನು ರಚಿಸುತ್ತಿದ್ದಾರೆ. ಇತ್ತೀಚೆಗೆ ಪೆನ್ಸಿಲ್ ಲೆಡ್​ನಲ್ಲಿ ರಾಮನ ಕೆತ್ತನೆ, ಕೇಕ್​ನಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಜೈ ಶ್ರೀರಾಮ್ ಹೆಸರುಗಳಲ್ಲೇ ರಾಮನ ಚಿತ್ರ ಬಿಡಿಸಿರುವುದು ಸೇರಿದಂತೆ ಅನೇಕ ರೀತಿಯ ಚಿತ್ರಗಳನ್ನು ಬಿಡಿಸಲಾಗಿತ್ತು. ಇದೀಗ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಡುಗೊರೆ ನೀಡಲು ದಾವಣಗೆರೆಯಲ್ಲಿ (Davanagere) ನಾಣ್ಯಗಳಲ್ಲಿ ಅಯೋಧ್ಯೆ ರಾಮ ಮಂದಿರ …

Read More »

ಕರ್ನಾಟಕದಲ್ಲಿ ಇಂದು 89 ಮಂದಿಗೆ ಕೊರೊನಾ ಸೋಂಕು ದೃಢ; ಎಷ್ಟು ಸಾವು, ಗುಣಮುಖ ಕೇಸ್​ಎಷ್ಟು?

ಬೆಂಗಳೂರು, : ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 3336 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 89 ಮಂದಿಗೆ ಕೊರೊನಾ ಸೋಂಕು (Karnataka Covid Case) ತಗುಲಿರುವುದು ದೃಢಪಟ್ಟಿದೆ. ಒಬ್ಬ ಸೋಂಕಿತ ಮೃತಪಟ್ಟಿದ್ದು, 74 ಸೋಂಕಿತರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಬೆಂಗಳೂರಿನಲ್ಲಿ(Bengaluru) 16 ಮಂದಿಗೆ ಕೋವಿಡ್ ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಬ್ಬ ಸೋಂಕಿತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 2.66 ರಷ್ಟಿದೆ. ಒಟ್ಟು 497 ಸಕ್ರಿಯ …

Read More »

ಚಿತ್ರದುರ್ಗ: ಎಲ್​​ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತ

ಚಿತ್ರದುರ್ಗ, ಜನವರಿ 21: ಎಲ್​​ಪಿಜಿ ಸಿಲಿಂಡರ್ (Cylinder) ಸ್ಫೋಟಗೊಂಡು ಓರ್ವ ಮಹಿಳೆ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮಮ್ಮ (38) ಮೃತ ದುರ್ದೈವಿ. ರೇಣುಕಮ್ಮ ಮತ್ತು ರಚನಾ ಎಂಬುವರಿಗೆ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಮೇಶ್ ಎಂಬುವರ ಬೀದಿ ಬದಿ ಹೋಟೆಲ್​​ಗೆ ಬೆಂಕಿ ಬಿದ್ದಿತ್ತು. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿದ್ದ ಮಹಿಳಾ ಕಾರ್ಮಿಕರು ಬೀದಿ ಬದಿ ಹೋಟೆಲ್​​ನತ್ತ ಧಾವಿಸಿದ್ದಾರೆ. ಈ ವೇಳೆ ಹೋಟೆಲ್​​ನಲ್ಲಿದ್ದ ಸಿಲಿಂಡರ್​ …

Read More »

ವಿವಾದ ಸೃಷ್ಟಿಸಿದ್ದ ಹುಬ್ಬಳ್ಳಿ MTS ಕಾಲೋನಿಯ 13 ಎಕರೆ ಜಮೀನು ಲೀಸ್ ಟೆಂಡರ್ ರದ್ದು: RLDA ಬೋರ್ಡ್​ ಆದೇಶ

ಹುಬ್ಬಳ್ಳಿ, ಜ.21: ಸಾಕಷ್ಟು ವಿವಾದ ಸೃಷ್ಟಿಸಿದ್ದಹುಬ್ಬಳ್ಳಿಯ (Hubballi)ಎಂಟಿಎಸ್ ಕಾಲೋನಿಯ 13 ಎಕರೆ ಜಮೀನಿನ ಟೆಂಡರ್ ಪ್ರಕ್ರಿಯೆಯನ್ನು ರೈಲ್ವೆ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ (RLDA) ಬೋರ್ಡ್ ರದ್ದುಗೊಳಿಸಿ ಆದೇಶಿಸಿದೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ MTS ಕಾಲೀನಿಯ 13 ಎಕರೇ ಜಮೀನನ್ನು 99 ವರ್ಷಗಳಿಗೆ ಲೀಸ್​ಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ರೈಲ್ವೇ ಭೂಮಿ ಅಭಿವೃದ್ಧಿ ಪ್ರಾಧಿಕಾರವು 13 ಎಕರೇ ಜಮೀನು ಲೀಸ್​ಗೆ ಇದೆ ಎಂದು ಬೋರ್ಡ್ ಹಾಕಿತ್ತು. ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ …

Read More »

ಹಳ್ಳಿ ಹುಡಗನ ಕೈಚಳಕ: ಜೋಳ, ಅಕ್ಕಿಯಿಂದ ಭವ್ಯ ಶ್ರೀರಾಮಮಂದಿರ ನಿರ್ಮಾಣ

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅಯೋದ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಇಂದು ಹುಬ್ಬಳಿಯಿಂದ ವಿಶೇಷ ವಿಮಾನದ ಮೂಲಕ ತೆರಳಿದರು. ಅಯೋದ್ಯೆಯ ಶ್ರೀರಾಮ ಮಂದಿರ ಟ್ರಸ್ಟ್‌ ಡಾ. ಕೋರೆ ಅವರಿಗೆ ಆಹ್ವಾನ ನೀಡಿದ್ದು, ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಕೆಎಲ್ ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಸ್ವರ್ಣ ಜ್ವೆಲರ್ಸ ಗ್ರುಪನ ಅಧ್ಯಕ್ಷರಾದ ಪ್ರಸಣ್ಣಾ ಅವರು ಸೇರಿದಂತೆ ಸುಮಾರು 8 ಜನರ ತಂಡವು ಪ್ರಯಾಣ …

Read More »

ಹಳ್ಳಿ ಹುಡಗನ ಕೈಚಳಕ: ಜೋಳ, ಅಕ್ಕಿಯಿಂದ ಭವ್ಯ ಶ್ರೀರಾಮಮಂದಿರ ನಿರ್ಮಾಣ

ಗದಗ, ಜನವರಿ 21: ಅಯೋಧ್ಯೆಯಲ್ಲಿ (Ayodhya) ನಾಳೆ (ಜ.22) ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಪ್ರಾಣ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲು ಅಸಂಖ್ಯ ಜನರು ಕಾಯುತ್ತಿದ್ದಾರೆ. ಭಕ್ತರು ವಿವಿಧ ರೂಪದಲ್ಲಿ ಪ್ರಭು ಶ್ರೀರಾಮಚಂದ್ರನಿಗೆ (Sri Ram) ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಇದೀಗ ಗದಗ ಜಿಲ್ಲೆಯ ಚಿಕ್ಕಹಂದಿಗೋಳ ಗ್ರಾಮದ ಯುವ ಕಲಾವಿದ ನಾಗರಾಜ ಕಮ್ಮಾರ ಅವರು 15 ಕೆಜಿ ಜೋಳ, 2 ಕೆಜಿ ಅಕ್ಕಿಯಲ್ಲಿ 12 ಅಡಿ ಎತ್ತರ, 10 ಅಡಿ ಅಗಲ ವಿಸ್ತೀರ್ಣದಲ್ಲಿ ಶ್ರೀರಾಮಮಂದಿರ …

Read More »

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ

ಬೆಳಗಾವಿ, :ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಜನವರಿ 22 ರಂದು ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಜ.22ರಂದು ಪಂಚಾಂಗದ ಪ್ರಕಾರ ಮೃಗಶಿರಾ ನಕ್ಷತ್ರವಿದೆ. ಆ ದಿನ ಮಧ್ಯಾಹ್ನ 12.15ರಿಂದ 12.45ರ ನಡುವೆ ವಿಗ್ರಹವನ್ನು ಗರ್ಭಗುಡಿ ಯಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರಾಣ ತುಂಬಲಾಗುತ್ತದೆ. ಈ ಸಮಯದಲ್ಲಿ ಅಭಿಜಿನ್ ಮುಹೂರ್ತವಿರುತ್ತದೆ. ಇದೇ ಸಮಯದಲ್ಲಿ ರಾಮನ ಜನನವಾಯಿತು ಎಂಬ ಕಾರಣದ ಜತೆಗೆ, …

Read More »

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಬೆಳಗಾವಿಯಲ್ಲಿ ಶೋಭಾಯಾತ್ರೆಗೆ ಅನುಮತಿ ಕೊರಿ ಸಲ್ಲಿಸಿದ್ದ ಅರ್ಜಿ ವಜಾ

ಬೆಳಗಾವಿ, : ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾನೆಹಿನ್ನೆಲೆ ಜಿಲ್ಲೆಯಲ್ಲಿ ಶೋಭಾಯಾತ್ರೆಗೆ ಅನುಮತಿ ಕೊರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ನ ಧಾರವಾಡ ವಿಭಾಗೀಯ ಪೀಠ​ ವಜಾಗೊಳಿಸಿ ಆದೇಶ ಹೊರಡಿಸಿದೆ. ಶ್ರೀರಾಮ ಸೇನೆ ಹಿಂದೂಸ್ತಾನ್ ವತಿಯಿಂದ ನಾಳೆ ಮಧ್ಯಾಹ್ನ ಗಂಟೆಯಿಂದ ರಾತ್ರಿ 9 ಗಂಟೆ ವರೆಗೂ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟ‌ನೆ ಸಂಸ್ಥಾಪಕ ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ನಗರದ ಸಂಭಾಜಿ ವೃತ್ತದಿಂದ ಶಹಾಪೂರ ವರೆಗೂ ಶೋಭಾಯಾತ್ರೆ ನಡೆಸಲು ಮುಂದಾಗಿದ್ದರು. ಆದರೆ ಕಾನೂನು …

Read More »