ಬೆಂಗಳೂರಿನ ʻರಾಮೇಶ್ವರಂ ಕೆಫೆʼಯ ಸ್ಫೋಟದ ನಂತ್ರ ಇದೀಗ ಸಿಎಂ ಸಿದ್ಧರಾಮಯ್ಯರಿಗೆ ಸ್ಪೋಟದ ಬೆದರಿಕೆ ಬಂದಿದೆ. ಮಾರ್ಚ್ 04 ರಂದು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಅವ್ರಿಗೆ ಇಮೇಲ್ ಒಂದನ್ನ ಕಳುಹಿಸಿ ಸ್ಫೋಟದ ಬೆದರಿಕೆ ನೀಡಲಾಗಿದೆ. ಶಾಹಿದ್ ಖಾನ್ ಅನ್ನೋ ಹೆಸರಿನ ವ್ಯಕ್ತಿ ಈ ರೀತಿ ಇಮೇಲ್ ಕಳುಹಿಸಿದ್ದ ಎನ್ನಲಾಗಿದೆ. ಅಲ್ದೇ ಬರುವ ಶನಿವಾರ ಅಂದ್ರೆ ಮಾರ್ಚ್ 9ರ ಮಧ್ಯಾಹ್ನ 02:48ಕ್ಕೆ ಕರ್ನಾಟಕದಾದ್ಯಂತ …
Read More »Yearly Archives: 2024
ನನಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ನನಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಸಿಎಂ, ಡಿಸಿಎಂ ಕಚೇರಿಗೆ ಬೆದರಿಕೆ ಇಮೇಲ್ ಬಂದ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಈ ಹಿಂದೆ ಕೂಡ ಹಲವು ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ. ಇಂತಹ ಕೇಸ್ ಗಳನ್ನು ಭೇದಿಸೋದು ಕಷ್ಟ.ಫೇಸ್ ಬುಕ್, ಗೂಗಲ್ ನಂತಹ ಕಂಪನಿಗಳು ಸಹಕರಿಸಬೇಕು, ಅವರು ಸಹಕಾರ ನೀಡದಿದ್ರೆ ಇಂತಹ ಕೇಸ್ ಗಳನ್ನು ಭೇದಿಸೋದು ಕಷ್ಟ ಎಂದು ಗೃಹ …
Read More »ಮೇ 31 ರೊಳಗೆ ‘HSRP’ ನಂಬರ್ ಪ್ಲೇಟ್ ಹಾಕಿಸಿ, ಇಲ್ಲದಿದ್ರೆ ದಂಡ ಫಿಕ್ಸ್..!
ಬೆಂಗಳೂರು : ವಾಹನಗಳಿಗೆ ‘ HSRP’ ನಂಬರ್ ಪ್ಲೇಟ್ ಅಳವಡಿಸಲು ಅವಧಿ ವಿಸ್ತರಣೆ ಮಾಡಲಾಗಿದ್ದು ಮೇ.31 ಕೊನೆಯ ದಿನಾಂಕವಾಗಿದೆ. ಮೇ.31 ರೊಳಗೆ HSRP’ ನಂಬರ್ ಪ್ಲೇಟ್ ಅಳವಡಿಸದಿದ್ರೆ ದಂಡ ಬೀಳುವುದಂತು ಗ್ಯಾರಂಟಿ. ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ …
Read More »ಪಾಕಿಸ್ತಾನ’ ಪರ ಘೋಷಣೆ ಬಳಿಕ ಮತ್ತೊಂದು ವಿವಾದದ ಸುಳಿಯಲ್ಲಿ ರಾಜ್ಯಸಭಾ ಸದಸ್ಯ ‘ನಾಸಿರ್ ಹುಸೇನ್’
ಬೆಂಗಳೂರು : ಇನ್ನೂ ಪಾಕ್ ಪರ ಘೋಷಣೆ ಪ್ರಕರಣ ಹಸಿಹಸಿಯಾಗಿರುವಾಗಲೇ ಸಂಸದ ನಾಸಿರ್ ಹುಸೇನ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಹೌದು ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಜೊತೆಗೆ ಶಿವಾಜಿನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಇಸ್ತಿಯಾಕ್ ಪೈಲ್ವಾನ್ ಅಹ್ಮದ್ ಇರುವ ಫೋಟೋ ವೈರಲ್ ಆಗಿದೆ.
Read More »ರೈಲು ಪ್ರಯಾಣಿಕರಿಗೆ ಆಹಾರ ತಲುಪಿಸಲು ಸ್ವಿಗ್ಗಿ ಸಜ್ಜು
ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾರ್ಚ್ 12ರಿಂದ ಪ್ರಯಾಣಿಕರಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಸ್ವಿಗ್ಗಿ ಕಂಪನಿ ಸಜ್ಜಾಗಿದೆ. ಸ್ವಿಗ್ಗಿ ಮತ್ತು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ಮಂಗಳವಾರ ಈ ಕುರಿತ ಒಡಂಬಡಿಕೆಗೆ ಸಹಿ ಹಾಕಿವೆ. ಮೊದಲ ಹಂತದಲ್ಲಿ ಬೆಂಗಳೂರು, ಭುವನೇಶ್ವರ, ವಿಶಾಖಪಟ್ಟಣ ಹಾಗೂ ವಿಜಯವಾಡ ನಿಲ್ದಾಣಗಳಲ್ಲಿ ಸೇವೆ ಆರಂಭವಾಗಲಿದೆ. ಹಂತ ಹಂತವಾಗಿ ಈ ಸೇವೆಯನ್ನು 59ಕ್ಕೂ ಹೆಚ್ಚು ನಿಲ್ದಾಣಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ …
Read More »ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಜರುಗಿದ ಬೆಳಗಾವಿ ವಲಯದ ಬಿಜೆಪಿ ಕೋರ್ ಕಮೀಟಿ ಸಭೆ
ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಜರುಗಿದ ಬೆಳಗಾವಿ ವಲಯದ ಬಿಜೆಪಿ ಕೋರ್ ಕಮೀಟಿ ಸಭೆಯನ್ನುದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರತಾಪ್ ನಡ್ಡಾ ಅವರು ಮಾತನಾಡುತ್ತಿರುವುದು. *ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಡಾ. ಪ್ರಭಾಕರ ಕೋರೆ, ಸಂಸದರಾದ ಮಂಗಲ ಅಂಗಡಿ, ಈರಪ್ಪ ಕಡಾಡಿ, ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಬೆಳಗಾವಿ …
Read More »ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷರ ನೇಮಕ: ನಕಲಿ ಆದೇಶ ಪ್ರತಿ ಸೃಷ್ಟಿಸಿದ ಕಿರಾತಕರು!
ಯಾದಗಿರಿ, (ಮಾರ್ಚ್ 05): ಉಗ್ರಾಣ ನಿಗಮ ಅಧ್ಯಕ್ಷ (Karnataka Warehousing Corporation President) ನೇಮಕ ಮಾಡಿರುವ ನಕಲಿ ಆದೇಶ ಪತ್ರ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ನಕಲಿ ನೇಮಕಾತಿ ಆದೇಶ ಪ್ರತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುವ ರೀತಿಯಲ್ಲೇ ಸಹಿ ಮಾಡಲಾಗಿದೆ. ಹೌದು.. ಸಿದ್ದರಾಮಯ್ಯ ಅವರು ನೇಮಕ ಮಾಡಿ ಆದೇಶ ಹೊರಡಿಸಿರುವಂತೆ ನಕಲಿ ಆದೇಶ ಪ್ರತಿ ಸೃಷ್ಟಿಸಿದ್ದಾರೆ. ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎ.ಸಿ. ಕಾಡ್ಲೂರ್ ಅವರನ್ನು ಉಗ್ರಾಣ ನಿಗಮ ಅಧ್ಯಕ್ಷರನ್ನಾಗಿ …
Read More »ನನ್ನ ಎದುರು ಚುನಾವಣೆಗೆ ಸ್ಪರ್ಧೆ ಮಾಡುವ ಬಿಜೆಪಿಯ ಆಕಾಂಕ್ಷಿಗಳಿದ್ರೆ ಬನ್ನಿ. ಈಗಲೇ ಬನ್ನಿ, ಧಮ್ ಇದ್ರೆ: ಅನಂತ ಕುಮಾರ್ ಹೆಗಡೆ
ಕಾರವಾರ: ನನ್ನ ಎದುರು ಚುನಾವಣೆಗೆ ಸ್ಪರ್ಧೆ ಮಾಡುವ ಬಿಜೆಪಿಯ ಆಕಾಂಕ್ಷಿಗಳಿದ್ರೆ (BJP Ticket Aspiriant) ಬನ್ನಿ. ಈಗಲೇ ಬನ್ನಿ, ಧಮ್ ಇದ್ರೆ ಬನ್ನಿ ಎಂದು ಸಂಸದ ಅನಂತ ಕುಮಾರ್ ಹೆಗಡೆ (MP Ananthkumar Hegde) ಕುರ್ಚಿ ಹಿಡಿದಿರುವ ಘಟನೆ ನಡೆದಿದೆ. ಭಟ್ಕಳದ ಮಾವಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ (BJP Meeting) ಕುರ್ಚಿ ಮೇಲೆತ್ತಿ ಕಾರ್ಯಕರ್ತರ ಧೈರ್ಯವನ್ನು ಸಂಸದ ಅನಂತ ಕುಮಾರ್ ಹೆಗಡೆ ಪ್ರಶ್ನೆ ಮಾಡುವಂತೆ ಕಾಣಿಸುತ್ತಿತ್ತು.
Read More »ವಯನಾಡಿನಲ್ಲಿ ವ್ಯಕ್ತಿಯ ಹತ್ಯೆ ಮಾಡಿದ್ದ ಕಾಡಾನೆ ಸೆರೆಗೆ ಕೊಡಗಿನಲ್ಲಿ ಕಾರ್ಯಾಚರಣೆ!
ಮಡಿಕೇರಿ, ಮಾರ್ಚ್ 5: ಕೇರಳದ ವಯನಾಡಿನಲ್ಲಿ (Wayanad) ವ್ಯಕ್ತಿ ಒಬ್ಬರನ್ನು ಇತ್ತೀಚೆಗೆ ಹತ್ಯೆ ಮಾಡಿದ್ದ ಕಾಡಾನೆಯ (Wild Elephant) ಸೆರಗೆ ಕೊಡಗು (Kodagu) ಜಿಲ್ಲೆಯ ನಾಗರಹೊಳೆ (Nagarahole) ಅಭಯಾರಣ್ಯದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಮಖಾನ್ ಹೆಸರಿನ ಕಾಡಾನೆ ಸದ್ಯ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಓಡಾಡುತ್ತಿದೆ ಎಂಬುದು ರೇಡಿಯೋ ಕಾಲರ ಮೂಲಕ ತಿಳಿದು ಬಂದಿದೆ. ಹೀಗಾಗಿ ನಾಗರಹೊಳೆಯ ನಾಣಚ್ಚಿ, ಹುಲಿಕಲ್ಲು, ಆಲಂದೋಡು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯ ಕಾಡಾನೆಯು ಮದವೇರಿ ನಾಗರಹೊಳೆ ಪ್ರದೇಶದಲ್ಲಿ …
Read More »ಹೋರಿ ತಿವಿದು ಯುವಕ ಸಾವು, ಹತ್ತಾರು ಮಂದಿಗೆ ಗಾಯ
ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೂ ಆಗಾಗ ಹಾವೇರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಹೋರಿ ಬೆದರಿಸು ಸ್ಪರ್ಧೆಯನ್ನು ಆಯೋಜನೆ ಮಾಡುತ್ತಲೇ ಇದ್ದಾರೆ. ಇದರ ಪರಿಣಾಮ ಇಂದು ಹೋರಿ ತಿವಿದು ಓರ್ವ ಸಾವನಪ್ಪಿ ಹಲವರಿಗೆ ತೀವ್ರ ಗಾಯಗಳಾಗಿವೆ. ಒಂದೆಡೆ ಬಾ..ಬಾ.. ಅಖಾಡಕ್ಕೆ ಬಾ… ಬಾರೋ…. ನನ್ನ ರಾಜಾ ಎನ್ನುತ್ತಿರುವ ಹೋರಿ ಹಬ್ಬದ ಆಯೋಜಕರು. ಇನ್ನೊಂದಡೆ ಪೈಲ್ವಾನರಿಗೆ ಸೆಡ್ಡು ಹೊಡೆದು ಹಿಡಿದು ತೋರಿಸಿ ನನ್ನ ಹೋರಿ… ಎನ್ನುತ್ತಿರುವ ರೈತ ಬಾಂಧವರು. ಮೊತ್ತೊಂದಡೆ ತಲೆಗೆ ಟವಲ್ …
Read More »