Breaking News

Yearly Archives: 2024

ಬಿಯರ್ ದರ ಮತ್ತೆ ಹೆಚ್ಚಳ, ಮದ್ಯ ಪ್ರಿಯರಿಗೆ ಆಘಾತ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು, ಫೆಬ್ರವರಿ 2: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ (Karnataka government) ಮತ್ತೆ ಆಘಾತ ನೀಡಿದೆ. ಪದೇ ಪದೇ ದರ ಏರಿಕೆ ಮಾಡಿ ಜೇಬಿಗೆ ಕತ್ತರಿ ಹಾಕುತ್ತಿದ್ದು, ಕಿಸೆಯಲ್ಲಾ ಖಾಲಿಯಾದರೂ ಕಿಕ್ ಮಾತ್ರ ಏರದಂತಾಗಿದೆ.! ರಾಜ್ಯ ಸರ್ಕಾರ ಬಿಯರ್ (Beer) ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದೆ. ಅಬಕಾರಿ ಸುಂಕವನ್ನು ಶೇಕಡಾ 185 ರಿಂದ ಶೇಕಡಾ 195 ಕ್ಕೆ ಅಂದ್ರೆ ಶೇ 10 ರಷ್ಟು ಹೆಚ್ಚಿಸಿದೆ. ಇದರಿಂದಾಗಿ, ಬಿಯರ್ ಬಾಟಲ್ ಬೆಲೆ …

Read More »

ಹಲವಾರು ಅಕ್ರಮಗಳು ನಡೆಯುತ್ತಿದ್ದರೂ ಕಾನೂನಿನ ಕಣ್ಣು ಕೇವಲ ಹನುಮ ಧ್ವಜದ ಮೇಲೆ ಬಿದ್ದಿದ್ಯಾಕೆ? ಸುಮಲತಾ ಅಂಬರೀಶ್

ಬೆಂಗಳೂರು: ಮಂಡ್ಯದ ಕೆರಗೋಡುನಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದು ಬಹಳ ಸೂಕ್ಷ್ಮ ವಿಷಯವಾಗಿತ್ತು ಆದರೆ ಅದನ್ನು ಸೂಕ್ತವಾಗಿ ನಿರ್ವಹುಸುವಲ್ಲಿ ರಾಜ್ಯಸರ್ಕಾರ (state government) ಪ್ರಮಾದವೆಸಗಿದೆ ಎಂದುಮಂಡ್ಯ ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಹೇಳಿದರು.   ನಗರದ ಅವರ ನಿವಾಸದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿರುವ ಸುಮಲತಾ, ಸರ್ಕಾರ ಕಟ್ಟುನಿಟ್ಟಾಗಿ ಕಾನೂನನ್ನು ಜಾರಿಗೊಳಿಸುತ್ತಿರುವ ಬಗ್ಗೆ ಹೇಳಿಕೊಳ್ಳುತ್ತ್ತಿರುವುದಾದರೆ, ಯಾರ ಭಾವನೆಗಗಳಿಗೂ (sentiments) ಧಕ್ಕೆ ಉಂಟು ಮಾಡದ ಹನುಮ ಧ್ವಜ ಮಾತ್ರ ಅದರ ಕಣ್ಣಿಗೆ ಬಿತ್ತೇ? ಮಂಡ್ಯ ಸೇರಿದಂತೆ …

Read More »

ನಾಲ್ವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ

ಬೆಂಗಳೂರು, ಫೆಬ್ರುವರಿ 1: ನಾಲ್ವರು ಐಪಿಎಸ್​ (IPS)ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಅಮಿತ್ ಸಿಂಗ್, ಡಿಐಜಿಪಿ, ದಕ್ಷಿಣ ವಲಯ (ಮೈಸೂರು), ಡಾ.ಎಂ.ಬಿ.ಬೋರಲಿಂಗಯ್ಯ, ಡಿಐಜಿಪಿ, ಪಶ್ಚಿಮ ವಲಯ (ಮಂಗಳೂರು), ಶಿವಪ್ರಕಾಶ್ ದೇವರಾಜು, ಪೊಲೀಸ್ ವರಿಷ್ಠಾಧಿಕಾರಿ, (ಕಲಬುರಗಿ) ಮತ್ತು ಎ.ಶ್ರೀನಿವಾಸುಲು, ಡಿಸಿಪಿ, ಬೆಂಗಳೂರು ದಕ್ಷಿಣ ಸಂಚಾರ ವಿಭಾಗಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದೆ. 4 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಅಮಿತ್ ಸಿಂಗ್: ಡಿಐಜಿ, …

Read More »

ಫೆ.02 ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ

ವಿಜಯನಗರ, ಫೆ.01: ನಾಳೆಯಿಂದ(ಫೆ.02) ಮೂರು ದಿನಗಳ ಕಾಲ ಹಂಪಿ ಉತ್ಸವ(Hampi Utsava) ನಡೆಯಲಿದೆ. ಈ ಹಿನ್ನಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಾಲ್ಕು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಅದರಂತೆಹಂಪಿ ಉತ್ಸವದ ಅಂತಿಮ ಹಂತದ ಸಿದ್ಧತೆಯನ್ನು ವಿಜಯನಗರ ಜಿಲ್ಲಾಧಿಕಾರಿ ದಿವಾಕರ್, ಎಸ್ಪಿ ಶ್ರೀಹರಿಬಾಬು ಬಿಎಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯವೇದಿಕೆಯ ನಿರ್ಮಾಣ ಮಾಡುತ್ತಿರುವ ಕಲಾವಿದ ಅರುಣ್ ಸಾಗರ್ ಅವರಿಂದ ಮಾಹಿತಿ ಪಡೆದ ಡಿಸಿ, ಎಸ್ಪಿ. ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವಕ್ಕೆ …

Read More »

2023ರ ವಿಧಾನಸಭಾ ಚುನಾವಣೆ ವೇಳೆ‌ ಮತದಾರರಿಗೆ ಆಮಿಷ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು, : 2023ರ ವಿಧಾನಸಭಾ ಚುನಾವಣೆ ವೇಳೆ‌ ಮತದಾರರಿಗೆ ಆಮಿಷ ಆರೋಪ ಹಿನ್ನೆಲೆ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ನಿರ್ದೇಶನ ಕೋರಿ ರಾಜ್ಯ ಯುವ ಜನತಾ ದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ(nikhil kumaraswamy)ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮತ್ತಿತರರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ, ಗ್ಯಾರಂಟಿ ಕಾರ್ಡ್ ನೀಡಿ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ. ಇದರಿಂದ ನಿಷ್ಪಕ್ಷಪಾತ ಚುನಾವಣೆ ನಡೆಯುವುದು ಸಾಧ್ಯವಿಲ್ಲ. ಕರ್ನಾಟಕ ಮಾಡಲ್ ಇನ್ನು ಮರುಕಳಿಸದಂತೆ ಕ್ರಮಕೈಗೊಳ್ಳುವಂತೆ …

Read More »

ಕಾಂತರಾಜ ವರದಿ ಪಡೆಯುವುದಕ್ಕೆ 1 ತಿಂಗಳ ಟೈಮ್ ನೀಡಿದ್ದೀನಿ: ಸಿಎಂ

ಬೆಂಗಳೂರು, : ಕಾಂತರಾಜ ವರದಿ ಪಡೆಯುವುದಕ್ಕೆ 1 ತಿಂಗಳ ಟೈಮ್ ನೀಡಿದ್ದೀನಿ. ಆಮೇಲೆ ಸ್ವೀಕಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರದಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಸರಿಪಡಿಸುತ್ತೇವೆ. ಜಾತಿಗಣತಿಗೆ ಕಾಂತರಾಜ ಸಮಿತಿ ರಚಿಸಿ ಹಣ ಬಿಡುಗಡೆ ಮಾಡಿದ್ದೆ. ಹೆಚ್​ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾಂತರಾಜ ಸಮಿತಿ ವರದಿ ಸ್ವೀಕರಿಸಲಿಲ್ಲ. ನಾನು ಕಾಂತರಾಜ ಸಮಿತಿ ವರದಿ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ. …

Read More »

ವಂಟಮೂರಿ ಮಹಿಳೆ‌ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಘಟನೆಗೆ ಕಾರಣವಾಗಿದ್ದ ಪ್ರೇಮಿಗಳ ಮದುವೆ ಮಾಡಿಸಿದ ಪೊಲೀಸ್

ಬೆಳಗಾವಿ, : ಮಗ ಯುವತಿಯೊಂದಿಗೆ ಓಡಿ ಹೋದ ಎಂಬ ಕಾರಣಕ್ಕೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು (Woman) ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault) ನಡೆಸಲಾಗಿತ್ತು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಸದ್ಯ ಈಗ ಈ ಘಟನೆಗೆ ಕಾರಣವಾಗಿದ್ದ ವಂಟಮೂರಿ ಗ್ರಾಮದ ಪ್ರೇಮಿಗಳ ಮದುವೆ ಮಾಡಿಸಲಾಗಿದೆ. ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಮದುವೆ ಮಾಡಿಸಲಾಗಿದೆ. ದುಂಡಪ್ಪ ಅಶೋಕ ನಾಯಕ್ ಎಂಬ ವಂಟಮೂರಿ ಗ್ರಾಮದ …

Read More »

ಧಾರವಾಡ ಬಣ ರಾಜಕೀಯ ಶಮನಕ್ಕೆ ಮುಂದಾದ ಬಿವೈ ವಿಜಯೇಂದ್ರ: ಶೆಟ್ಟರ್, ಮುನೇನಕೊಪ್ಪ, ಬೆಲ್ಲದ್ ಜೊತೆ ಸಭೆ

ಹುಬ್ಬಳ್ಳಿ, ಫೆಬ್ರುವರಿ 1: ಧಾರವಾಡದ ಬಣ ರಾಜಕೀಯವನ್ನು ಶಮನ ಮಾಡಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra)ಮುಂದಾಗಿದ್ದಾರೆ. ಆ ಮೂಲಕ ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ವಿಧಾನಸಭಾ ಉಪನಾಯಕ ಅರವಿಂದ ಬೆಲ್ಲದ್​ ಅವರೊಂದಿಗೆ ಹುಬ್ಬಳ್ಳಿ ಪ್ರವಾಸಿ‌ ಮಂದಿರದಲ್ಲಿ ಪ್ರತ್ಯೇಕ ಸಭೆ ಮಾಡಿದ್ದಾರೆ. ಮೂವರು ನಾಯಕರೊಂದಿಗೆ ಬಿ.ವೈ.ವಿಜಯೇಂದ್ರ ಚರ್ಚೆ ಮಾಡಿದ್ದಾರೆ. ಧಾರಾವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್ ಘರವಾಪ್ಸಿಯಾದರೂ ಭಿನ್ನಮತವಿತ್ತು. ಶೆಟ್ಟರ್ ಮೆರವಣಿಗೆಯಲ್ಲೂ ಸ್ಥಳೀಯ ನಾಯಕರು …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ ಪುತ್ರ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ ಪುತ್ರ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ. ಗೋಕಾಕ : ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನ್ ರು ಹಾಗೂ ಯುವ ನಾಯಕ ಸಂತೋಷ ಜಾರಕಿಹೊಳಿ ಅವರ ಪುತ್ರರಾದ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಮಾಜಮುಖಿಯಾಗಿ ಸರಳವಾಗಿ ಆಚರಿಸಿದರು. ಶ್ರೇಷ್ಠ ಫೌಂಡೇಶನ್ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಶಿವಾ ಫೌಂಡೇಶನ್ ಮಕ್ಕಳಿಗೆ ಹಣ್ಣು …

Read More »

ಕಲಬುರಗಿ: ಹೊಲದಿಂದ ಬರ್ತಿದ್ದ ಒಂಟಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಆಸ್ಪತ್ರೆಗೆ ದಾಖಲು

ಕಲಬುರಗಿ, : ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಇದೀಗಕಲಬುರಗಿ(Kalaburagi) ಜಿಲ್ಲೆಯ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಒಂಟಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಲಿಂಗಮ್ಮ ಹಲ್ಲೆಗೊಳಾದ ಮಹಿಳೆ. ಇವರು ಹೊಲದಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಂತೆ 6 ರಿಂದ 7 ಜನರ ಗುಂಪೊಂದು ಕಬ್ಬಿಣದ ರಾಡ್, ಚಾಕು ಹಾಗೂ ಕಲ್ಲಿನಿಂದ ಲಿಂಗಮ್ಮನ ಮೇಲೆ ಏಕಾಎಕಿ ಹಲ್ಲೆ ನಡೆಸಿದೆ. …

Read More »