Breaking News

Yearly Archives: 2024

ಸದಲಗಾ-ಬೋರಗಾಂವ ರಸ್ತೆಗೆ 5.25 ಕೋಟಿ ರೂಪಾಯಿ ಅನುದಾನ;ಎಂಎಲ್ಸಿ ಪ್ರಕಾಶ ಹುಕ್ಕೇರಿ

ಚಿಕ್ಕೋಡಿ:ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಿಂದ ಬೋರಗಾಂವ ರೇಣುಕಾ ಮಂದಿರದವರೆಗೆ ಒಟ್ಟು 5 ಕಿ ಮೀ ರಸ್ತೆ ಡಾಂಬರೀಕರಣಕ್ಕಾಗಿ 5.25 ಕೋಟಿ ರೂಪಾಯಿ ಮಂಜೂರಾಗಿದೆ. ಶೀಘ್ರುದಲ್ಲಿಯೇ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ತಿಳಿಸಿದರು. ಸದಲಗಾ ಬೋರಗಾಂವ ರಸ್ತೆ ಪರಿಶೀಲಿಸಿ ಮಾತನಾಡಿದ ಅವರು, ರಸ್ತೆ ಪ್ರವಾಹದಿಂದ ಹಾಳಾಗಿದ್ದು, ತಗ್ಗು ಗುಂಡಿಗಳಿಂದಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಈ ಕುರಿತು ಜಿಲ್ಲಾ ಉಸ್ತುವಾರಿ …

Read More »

ಉಗಾರ ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಜರಗಿತು.

ಸಮಾಜದಲ್ಲಿ ಕೆಲವರು ಹಿಂದೂ ಮುಸ್ಲಿಂ ಎಂಬ ಭೇದಭಾವ ಮಾಡುತ್ತಾರೆ. ಆದರೆ ಕಾಗವಾಡ ತಾಲೂಕಿನ ಉಗಾರ ಪಟ್ಟಣದ ಮುಸ್ಲಿಂ ಸಮಾಜ ಕೃಷ್ಣನ ಭಕ್ತ ಬಾಪುಸಾಹೇಬ್ ತಾಶೇವಾಲೆ ಇವರ ನೇತೃತ್ವದಲ್ಲಿ ಕಟ್ಟಿಸಿದ ಶ್ರೀ ಕೃಷ್ಣ ಮಂದಿರದಲ್ಲಿ ಅವರ ನೇತೃತ್ವದಲ್ಲಿ ಭಕ್ತಿಯಿಂದ ಅದ್ದೂರಿಯಾಗಿ ಕಾರ್ತಿಕ್ ಮಾಸದ ದೀಪೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಶನಿವಾರ ಸಂಜೆ ಉಗಾರದ ಶ್ರೀ ಕೃಷ್ಣ ಮಂದಿರದಲ್ಲಿ ಮಂದಿರದ ಮುಖ್ಯಸ್ಥ ಬಾಪುಸಾಹೇಬ್ ತಾಶೇವಾಲೆ ಇವರ ನೇತೃತ್ವದಲ್ಲಿ ನೂರಾರು ಕೃಷ್ಣನಭಕ್ತರು ಪಾಲ್ಗೊಂಡು ಭಕ್ತಿಯಿಂದ ಕೃಷ್ಣನ …

Read More »

ಕರವೇ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ

ಚಿಕ್ಕೋಡಿ:ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಜರುಗಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ದೀಪಕ ಗುಡಗನಟ್ಟಿ ಇವರ ನೇತೃತ್ವದಲ್ಲಿ ಸಭೆ ನಡೆಯಿತು. ಚಿಕ್ಕೋಡಿ ತಾಲೂಕಾ ಘಟಕಕ್ಕೆ ಯುವ ಘಟಕದ ತಾಲೂಕಾ ಅಧ್ಯಕ್ಷರಾಗಿ ಬಸವರಾಜ (ದಾದಾ) ಮಗದುಮ್ಮ ,ಸಂತೋಷ ಪೂಜಾರಿ ಇವರನ್ನು ತಾಲೂಕಾ ಉಪಾಧ್ಯಕ್ಷರಾಗಿ ಹಾಗೂ ಚಂದ್ರಕಾಂತ ಹುಕ್ಕೇರಿ ಇವರನ್ನು ತಾಲೂಕಾ ಗೌರವ ಅಧ್ಯಕ್ಷರಾಗಿ …

Read More »

ವಿಜಯಪುರ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ

ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಇವಣಗಿ ಗ್ರಾಮದಲ್ಲಿ ಡಿ.2 ರಂದು ನಡೆಯಲಿರುವ 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ವೇದಿಕೆ ಸಿದ್ದಗೊಂಡಿದೆ. ಸಮ್ಮೇಳನದ ಯಶಸ್ವಿಗಾಗಿ ಕಸಾಪ ಪದಾಧಿಕಾರಿಗಳು, ಸಮ್ಮೇಳನದ ವಿವಿಧ ಸಮಿತಿಗಳ ಸದಸ್ಯರು, ಶಿಕ್ಷಕರು, ವಿವಿಧ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಗ್ರಾಮದ ವಿವಿಧೆಡೆ ಸಮ್ಮೇಳನಕ್ಕೆ ಸ್ವಾಗತ ಕೋರುವ …

Read More »

ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಇನ್ನಿಲ್ಲ; ಹೈದರಾಬಾದ್​ನಲ್ಲಿ ನಿಧನ

ಎರಡೊಂದ್ಲಾ ಮೂರು’, ‘ಒಂದ್‌ ಕಥೆ ಹೇಳಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ನಿಧನರಾಗಿದ್ದಾರೆ. ‘ಬ್ರಹ್ಮಗಂಟು’ ಸೀರಿಯಲ್ ಮೂಲಕ ಅವರು ಖ್ಯಾತಿ ಪಡೆದಿದ್ದರು. ಆತ್ಮಹತ್ಯೆ ಮಾಡಿಕೊಂಡು ಅವರು ಸಾವಿಗೀಡಾಗಿದ್ದಾರೆ. ಹಾಸನ‌‌ ಮೂಲದ ಸಕಲೇಶಪುರದನಟಿ ಶೋಭಿತಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದಲ್ಲಿ ನಟಿಸಿದ್ದ ಶೋಭಿತಾ ಅವರು ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿತ್ತು. ಎರಡು ವರ್ಷಗಳ ಹಿಂದೆ ಮದುವೆಯಾದ ಶೋಭಿತಾ ಅವರು …

Read More »

ವಿಜಯೇಂದ್ರಗೆ ಎಚ್ಚರಿಕೆ ಕೊಟ್ಟ ಅರವಿಂದ ಲಿಂಬಾವಳಿ

ಬೆಳಗಾವಿ ಗಾಂಧಿ ಭವನದಲ್ಲಿ ವಕ್ಫ್​ ಭೂ ಕಬಳಿಕೆ ವಿರೋಧಿಸಿ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ನಿಮ್ಮ ಹೊಂದಾಣಿಕೆ ರಾಜಕಾರಣದಿಂದ ವಿರೋಧ ಪಕ್ಷಕ್ಕೆ ಬಂದಿದ್ದೇವೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಅಧ್ಯಕ್ಷ ಮಾಡಿಲ್ಲ‌ ಎಂದು ಬಿ.ವೈ.ವಿಜಯೇಂದ್ರಗೆ ಎಚ್ಚರಿಕೆ ನೀಡಿದ್ದಾರೆ.   ಡಿಸೆಂಬರ್​ 01: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಅಧ್ಯಕ್ಷ ಮಾಡಿಲ್ಲ‌ ಹುಷಾರ್ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ …

Read More »

ಮೋದಿಯಿಂದಲೇ ವಿಜಯೇಂದ್ರ ಬಣಕ್ಕೆ ಟಕ್ಕರ್​ ಕೊಡಿಸಲು ಯತ್ನಾಳ್ ಮೆಗಾ ಪ್ಲ್ಯಾನ್!

ಬೆಳಗಾವಿ, (ಡಿಸೆಂಬರ್ 01): ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಬಣ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಯತ್ನಾಳ್ ತಂಡದ​ ವಿರುದ್ಧ ಶಿಸ್ತು ಕ್ರಮ ಜರುಗಿಸವಂತೆ ಹೈಕಮಾಂಡ್​ಗೆ ಒತ್ತಾಯಿಸಲು ತೀರ್ಮಾನಿಸಿದೆ. ವಕ್ಫ್​ ವಿಚಾರ ಇಟ್ಟುಕೊಂಡೇ ವಿಜಯೇಂದ್ರ ವಿರುದ್ಧ ರಣಕಹಳೆ ಮೊಳಗಿಸಿರುವ ಯತ್ನಾಳ್ ತಂಡ, ಇದೀಗ ದಾವಣಗೆರೆ ಸಮಾವೇಶಕ್ಕೆ ತಿರುಗೇಟು ನೀಡಲು ತಯಾರಾಗಿದೆ. ಹೌಡು…ಅದೇ ದಾವಣಗೆರೆಯಲ್ಲಿ ಹಿಂದೂಗಳು ಸಮಾವೇಶ ಮಾಡಲು ಮುಂದಾಗಿದೆ. ಇದರೊಂದಿಗೆ ಮತ್ತಷ್ಟು ಬಣ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆಗಳಿವೆ. ಬೆಳಗಾವಿಯಲ್ಲಿ …

Read More »

ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ ೦೧. ೧೨. ೨೦೨೪ರಂದು ವಾರದ ಸಾಮೂಹಿಕ ಪ್ರಾರ್ಥನೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ ೦೧. ೧೨. ೨೦೨೪ರಂದು ವಾರದ ಸಾಮೂಹಿಕ ಪ್ರಾರ್ಥನೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತುಡಾಕ್ಟರ್ ಪ್ರಸಾದಎಂ ಆರ್ ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಅಕ್ಕ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡಿಸಿಕೊಟ್ಟರು. ಬಿ.ಪಿ.ಜೇವಣಿ. ಸುರೇಶ ನರಗುಂದ, ಸುವಣಾ೯ ಗುಡಸ, ಜಯಶ್ರೀ ಚಾವಲಗಿ, ಮಂಜುಳಾ ದೇಯಣ್ಣವರ, ಶಂಕರ ಗುಡಸ, ಅಕ್ಕನ್ನವರ ಸದಾಶಿವ ದೇವರಮನಿ, ವಿ ಕೆ ಪಾಟೀಲ, …

Read More »

ಶಿರಸಂಗಿಯಲ್ಲಿ 24ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ

ಶಿರಸಂಗಿಯಲ್ಲಿ 24ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ರಾಜ್ಯ ಮಟ್ಟದ ಕಲಾ ಪ್ರದರ್ಶನ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಪ್ರತಿಷ್ಠಿತ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಸಮಾರಂಭ ವಿವಿಧ ಗಣ್ಯರ ಉಪಸ್ಥಿತಿ ಸಾಂಸ್ಕೃತಿಕ ನೆಲೆಯಲ್ಲಿ ವಿಶ್ವಕರ್ಮರ ಕೋಡುಗೆ ಅಪಾರವಾಗಿದ್ದು ಧರ್ಮ-ಕರ್ಮ ಚಿಂತನೆಗಳ ಮೂಲಕ ವಿಶ್ವಕರ್ಮರು ಪ್ರಕೃತಿ ಆರಾಧಕರಾಗಿದ್ದಾರೆ ಎಂದು ನವಲಗುಂದದ ಅಜಾತ ನಾಗಲಿಂಗೇಶ್ವರ ಮಠದ ಪೂಜ್ಯರಾದ ವೀರೇಂದ್ರ ಮಹಾಸ್ವಾಮಿಗಳು ಹೇಳಿದರು. . ಅವರು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹಾಗೂ ವಿಶ್ವಕರ್ಮ …

Read More »

74 ಪರ್ಸೆಂಟ್ ಇರುವ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು ಇಲ್ಲವಾದರೆ ಬಂಡಾಯ: ರಮೇಶ್ ಜಾರಕಿಹೊ ಳಿ

 2028ರ ವಿಧನಸಭಾ ಚುನಾವಣೆ ವೇಳೆಗೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊ ಳಿಬಂಡಾಯವೇಳಲಿದ್ದರಾ? ಇಂತದ್ದೊಂದು ಅನುಮಾನ ಸ್ವತಃ ಅವರ ಹೇಲಿಕೆಯಿಂದಲೇ ಮೂಡುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, 74 ಪರ್ಸೆಂಟ್ ಇರುವ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು ಇಲ್ಲವಾದರೆ ಬಂಡಾಯ ಏಳುತ್ತೇನೆ. ನಾನು ಸುಮ್ಮನೆ ಕುಳಿತುಕೊಳ್ಳುವವನಲ್ಲ ಎಂದಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸುಮ್ಮನೆ ಕುಳಿತುಕೊಳ್ಳಲ್ಲ. ನಮ್ಮ ಸರ್ಕಾರವಿರಲಿ, ಬೇರೆ ಸರ್ಕಾರವಿರಲಿ ಬೀಳಿಸುತ್ತೇನೆ ಎಂದು ಗುಡುಗಿದ್ದಾರೆ.   …

Read More »