ಪಂಚಮಸಾಲಿ ಸಮುದಾಯದ ಮುಖಂಡರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬೆದರಿಕೆ ಹಾಕುವ ಕೆಲಸ ನಡೆಯುತ್ತಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ. ಬಾಗಲಕೋಟೆಯ ಬನಹಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದ ಮುಖಂಡರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಕಳೆದ ನಾಲ್ಕು ದಿನಗಳಿಂದ ಪಂಚಮಸಾಲಿ ತಾಲೂಕು ಘಟಕದ ಅಧ್ಯಕ್ಷರು, ಜಿಲ್ಲಾ ಘಟಕದ ಅಧ್ಯಕ್ಷರಿಗೆ ಕರೆ ಮಾಡಿ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು. ಈ ಹಿಂದೆ …
Read More »Yearly Archives: 2024
ಬೆಳಗಾವಿಯಲ್ಲಿ ಟ್ರೇಡಿಂಗ್ ಪಾಯಿಂಟ್ ಶಾಖೆ ಆರಂಭ
ಬೆಳಗಾವಿಯಲ್ಲಿ ಟ್ರೇಡಿಂಗ್ ಪಾಯಿಂಟ್ ಶಾಖೆ ಆರಂಭಸಂಸ್ಥಾಪಕ ಮತ್ತು ಸಿಇಓ ಮೊಹಸಿನ್ ಮನೇರ್ ಉದ್ಘಾಟನೆ ಮನೆಯಲ್ಲೇ ಕುಳಿತು ಹಣ ಸಂಪಾದಿಸಿಬೆಳಗಾವಿಗರಿಗೆ ಸಿಗಲಿದೆ ಟ್ರೇಡಿಂಗ್ ಕುರಿತು ಮಾರ್ಗದರ್ಶನ ಇಂದಿನ ತುಟ್ಟಿಯ ಕಾಲದಲ್ಲಿ ಟ್ರೇಡಿಂಗ್ ಮತ್ತು ಸ್ಟಾಕ್ ಮಾರ್ಕೆಟ್ ನ ಮಾಹಿತಿ ಎಲ್ಲರಿಗೂ ತಿಳಿದಿರಲೇಬೇಕು. ಇದಕ್ಕಾಗಿ ಟ್ರೇಡಿಂಗ್ ಪಾಯಿಂಟ್ ನ ವತಿಯಿಂದ ದೇಶದಲ್ಲಿ ವಿವಿಧಡೆ ಶಾಖೆಗಳನ್ನು ಆರಂಭಿಸಿ ಎಲ್ಲ ವರ್ಗದ ಜನರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಸಂಸ್ಥಾಪಕ ಹಾಗೂ ಸಿಇಓ ಮೋಸಿನ್ ಮನೇರ್ ಹೇಳಿದರು. …
Read More »ಖಾನಾಪುರ ತಾಲೂಕಿನಲ್ಲಿ ಮತ್ತೇ ಗಜರಾಜನ ಆಗಮನವಾಗಿದ್ದು, ರೈತರಲ್ಲಿ ಮತ್ತೇ ಆತಂಕ ಮನೆ ಮಾಡಿದೆ.
ಖಾನಾಪೂರ ತಾಲೂಕಿನಲ್ಲಿ ಆನೆಯ ಹಾವಳಿ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಸುಗ್ಗಿಯ ಸಮಯದಲ್ಲಿ ಭತ್ತದ ಬೆಳೆ ಕಟಾವು ಮಾಡಿ ರಾಶಿ ಮಾಡುವ ಸಂದರ್ಭದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಖಾನಾಪೂರ ತಾಲೂಕಿನಲ್ಲಿ ನಿರ್ಮಾಣವಾಗಿದೆ.ಕಬ್ಬು ಬೆಳೆಗಾರರ ಪರಿಸ್ಥಿತಿ ಕೂಡಾ ಇದರ ಹೊರತಾಗಿಲ್ಲ ಇದರ ಪರಿಸ್ಥಿತಿಯಲ್ಲಿ ರೈತರು ಆತಂಕದಲ್ಲಿದ್ದಾರೆ. ಈ ಮೊದಲು ಕೂಡಾ ಆನೆಯ ಆಗಮನದಿಂದ ತಾಲೂಕಿನ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಅವರೊಳ್ಳಿ ರುದ್ರಸ್ವಾಮಿ ಮಠದಿಂದ ಕೊಡಚವಾಡ ಪ್ರದೇಶದಲ್ಲಿ …
Read More »6 ತಿಂಗಳ ಹಿಂದೆ ನಿರ್ಮಿಸಿದ ರಸ್ತೆಯಲ್ಲಿ ಬಿದ್ದ ಗುಂಡಿ…
ಬೆಳಗಾವಿ ನೆಹರುನಗರದ ಮೂರನೇ ಕ್ರಾಸನಲ್ಲಿ 6 ತಿಂಗಳ ಹಿಂದೆ ನಿರ್ಮಿಸಿದ ರಸ್ತೆಯಲ್ಲಿ ಗುಂಡಿ ಬಿದ್ದು ಸಂಚಾರಕ್ಕೆ ಅನಾನುಕೂಲವಾಗಿದೆ. ಬೆಳಗಾವಿ ನೆಹರುನಗರದ ಮೂರನೇ ಕ್ರಾಸನಲ್ಲಿ 6 ತಿಂಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೇ ಈಗ ಈ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಇಲ್ಲಿರುವ ಡಿ ಮಾರ್ಟ್ ಮತ್ತು ಆಸ್ಪತ್ರೆಗೆ ಸಂಪರ್ಕಿಸುವ ರಸ್ತೆ ಇದಾಗಿದೆ. ಕೂಡಲೇ ಸಂಬಂಧಿಸಿದವರು ರಸ್ತೆಯ ದುರಸ್ಥಿಗೆ ಮುಂದಾಗಬೇಕೆಂದು ಒತ್ತಾಯಿಸಲಾಗಿದೆ.
Read More »ಮಾಯಾ ಗ್ಯಾಂಗ್ ಹೆಸರು ಕೇಳಿದ್ರೆ ಸಾಕು ಮಂಗಳೂರಿನ ಪೊಲೀಸರು ಅಲರ್ಟ್ ಆಗಿ ಬಿಡ್ತಾರೇ
ಮಾಯಾ ಗ್ಯಾಂಗ್ ಹೆಸರು ಕೇಳಿದ್ರೆ ಸಾಕು ಮಂಗಳೂರಿನ ಪೊಲೀಸರು ಅಲರ್ಟ್ ಆಗಿ ಬಿಡ್ತಾರೇ..ಈ ಗ್ಯಾಂಗ್ ಟಾರ್ಗೆಟ್ ಪೊಲೀಸರು…ಒಂಟಿಯಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನೇ ಟಾರ್ಗೆಟ್ ಮಾಡಿ ಅವರ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಕ್ಷಣಾರ್ಧದಲ್ಲಿ ಈ ಗ್ಯಾಂಗ್ ಪರಾರಿಯಾಗತ್ತೆ. ಸಿಎ ಮತ್ತು ಎನ್ ಆರ್ ಸಿ ಉಗ್ರ ಹೋರಾಟದ ವೇಳೆಯಲ್ಲಿ ಈ ಗ್ಯಾಂಗ್ ಈ ಮತ್ತೆ ಮುನ್ನಲೆಗೆ ಬಂದಿದೆ. ಈ ಬೆನ್ನಲ್ಲೇ ಫುಲ್ ಅಲರ್ಟ್ ಆಗಿರುವ ಹುಬ್ಬಳ್ಳಿ ಧಾರವಾಡ ಪೊಲೀಸರು, ಈ …
Read More »ಸದಲಗಾ-ಬೋರಗಾಂವ ರಸ್ತೆಗೆ 5.25 ಕೋಟಿ ರೂಪಾಯಿ ಅನುದಾನ;ಎಂಎಲ್ಸಿ ಪ್ರಕಾಶ ಹುಕ್ಕೇರಿ
ಚಿಕ್ಕೋಡಿ:ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಿಂದ ಬೋರಗಾಂವ ರೇಣುಕಾ ಮಂದಿರದವರೆಗೆ ಒಟ್ಟು 5 ಕಿ ಮೀ ರಸ್ತೆ ಡಾಂಬರೀಕರಣಕ್ಕಾಗಿ 5.25 ಕೋಟಿ ರೂಪಾಯಿ ಮಂಜೂರಾಗಿದೆ. ಶೀಘ್ರುದಲ್ಲಿಯೇ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ತಿಳಿಸಿದರು. ಸದಲಗಾ ಬೋರಗಾಂವ ರಸ್ತೆ ಪರಿಶೀಲಿಸಿ ಮಾತನಾಡಿದ ಅವರು, ರಸ್ತೆ ಪ್ರವಾಹದಿಂದ ಹಾಳಾಗಿದ್ದು, ತಗ್ಗು ಗುಂಡಿಗಳಿಂದಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಈ ಕುರಿತು ಜಿಲ್ಲಾ ಉಸ್ತುವಾರಿ …
Read More »ಉಗಾರ ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಜರಗಿತು.
ಸಮಾಜದಲ್ಲಿ ಕೆಲವರು ಹಿಂದೂ ಮುಸ್ಲಿಂ ಎಂಬ ಭೇದಭಾವ ಮಾಡುತ್ತಾರೆ. ಆದರೆ ಕಾಗವಾಡ ತಾಲೂಕಿನ ಉಗಾರ ಪಟ್ಟಣದ ಮುಸ್ಲಿಂ ಸಮಾಜ ಕೃಷ್ಣನ ಭಕ್ತ ಬಾಪುಸಾಹೇಬ್ ತಾಶೇವಾಲೆ ಇವರ ನೇತೃತ್ವದಲ್ಲಿ ಕಟ್ಟಿಸಿದ ಶ್ರೀ ಕೃಷ್ಣ ಮಂದಿರದಲ್ಲಿ ಅವರ ನೇತೃತ್ವದಲ್ಲಿ ಭಕ್ತಿಯಿಂದ ಅದ್ದೂರಿಯಾಗಿ ಕಾರ್ತಿಕ್ ಮಾಸದ ದೀಪೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಶನಿವಾರ ಸಂಜೆ ಉಗಾರದ ಶ್ರೀ ಕೃಷ್ಣ ಮಂದಿರದಲ್ಲಿ ಮಂದಿರದ ಮುಖ್ಯಸ್ಥ ಬಾಪುಸಾಹೇಬ್ ತಾಶೇವಾಲೆ ಇವರ ನೇತೃತ್ವದಲ್ಲಿ ನೂರಾರು ಕೃಷ್ಣನಭಕ್ತರು ಪಾಲ್ಗೊಂಡು ಭಕ್ತಿಯಿಂದ ಕೃಷ್ಣನ …
Read More »ಕರವೇ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ
ಚಿಕ್ಕೋಡಿ:ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಜರುಗಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ದೀಪಕ ಗುಡಗನಟ್ಟಿ ಇವರ ನೇತೃತ್ವದಲ್ಲಿ ಸಭೆ ನಡೆಯಿತು. ಚಿಕ್ಕೋಡಿ ತಾಲೂಕಾ ಘಟಕಕ್ಕೆ ಯುವ ಘಟಕದ ತಾಲೂಕಾ ಅಧ್ಯಕ್ಷರಾಗಿ ಬಸವರಾಜ (ದಾದಾ) ಮಗದುಮ್ಮ ,ಸಂತೋಷ ಪೂಜಾರಿ ಇವರನ್ನು ತಾಲೂಕಾ ಉಪಾಧ್ಯಕ್ಷರಾಗಿ ಹಾಗೂ ಚಂದ್ರಕಾಂತ ಹುಕ್ಕೇರಿ ಇವರನ್ನು ತಾಲೂಕಾ ಗೌರವ ಅಧ್ಯಕ್ಷರಾಗಿ …
Read More »ವಿಜಯಪುರ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ
ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಇವಣಗಿ ಗ್ರಾಮದಲ್ಲಿ ಡಿ.2 ರಂದು ನಡೆಯಲಿರುವ 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ವೇದಿಕೆ ಸಿದ್ದಗೊಂಡಿದೆ. ಸಮ್ಮೇಳನದ ಯಶಸ್ವಿಗಾಗಿ ಕಸಾಪ ಪದಾಧಿಕಾರಿಗಳು, ಸಮ್ಮೇಳನದ ವಿವಿಧ ಸಮಿತಿಗಳ ಸದಸ್ಯರು, ಶಿಕ್ಷಕರು, ವಿವಿಧ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಗ್ರಾಮದ ವಿವಿಧೆಡೆ ಸಮ್ಮೇಳನಕ್ಕೆ ಸ್ವಾಗತ ಕೋರುವ …
Read More »ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಇನ್ನಿಲ್ಲ; ಹೈದರಾಬಾದ್ನಲ್ಲಿ ನಿಧನ
ಎರಡೊಂದ್ಲಾ ಮೂರು’, ‘ಒಂದ್ ಕಥೆ ಹೇಳಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ನಿಧನರಾಗಿದ್ದಾರೆ. ‘ಬ್ರಹ್ಮಗಂಟು’ ಸೀರಿಯಲ್ ಮೂಲಕ ಅವರು ಖ್ಯಾತಿ ಪಡೆದಿದ್ದರು. ಆತ್ಮಹತ್ಯೆ ಮಾಡಿಕೊಂಡು ಅವರು ಸಾವಿಗೀಡಾಗಿದ್ದಾರೆ. ಹಾಸನ ಮೂಲದ ಸಕಲೇಶಪುರದನಟಿ ಶೋಭಿತಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದಲ್ಲಿ ನಟಿಸಿದ್ದ ಶೋಭಿತಾ ಅವರು ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿತ್ತು. ಎರಡು ವರ್ಷಗಳ ಹಿಂದೆ ಮದುವೆಯಾದ ಶೋಭಿತಾ ಅವರು …
Read More »