Breaking News

Yearly Archives: 2024

ದೇಶಿ ಸಂಸ್ಕೃತಿ ಉಳಿಸಿ: ಸಂಸದ ಜಗದೀಶ ಶೆಟ್ಟರ್

ರಾಮದುರ್ಗ: ‘ಪಾಶ್ಚಿಮಾತ್ಯ ಸಂಸ್ಕೃತಿಗೆ ವಾಲಿಕೊಂಡಿರುವ ಯುವ ಜನಾಂಗವನ್ನು ಮರಳಿ ದೇಶೀಯ ಸಂಸ್ಕೃತಿಗೆ ತರುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ನಡೆಯಬೇಕಿದೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ತಾಲ್ಲೂಕಿನ ಗೊಡಚಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಮಂದಿರ, ರೇಣುಕಾಚಾರ್ಯ ಗುರುಕುಲ, ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಜ್ಞಾನ ಮಂಟಪ ಕಟ್ಟಡದ ಶಂಕುಸ್ಥಾಪನೆ, ವೀರಭದ್ರೇಶ್ವರ ಜಯಂತಿ ಮತ್ತು ಧರ್ಮಸಭೆ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಮೊದಲಿನಿಂದಲೂ ರಂಭಾಪುರಿ ಪೀಠ ಧರ್ಮ ಜಾಗೃತಿ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು. …

Read More »

ಹುಬ್ಬಳ್ಳಿ-ಪುಣೆ ಸೇರಿ 11 ವಂದೇ ಭಾರತ್‌ ರೈಲುಗಳಿಗೆ ಸೆಪ್ಟೆಂಬರ್ 15ರಂದು ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ 11 ರೈಲುಗಳಿಗೆ ಸೆ.15ರಂದು ಜೆಮ್‌ಶೆಡ್‌ಪುರದಲ್ಲಿ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ-ಪುಣೆ, ಪುಣೆ- ನಾಗ್ಪುರ, ಗಯಾ-ಹೌರಾ, ಬಾಗಲ್‌ಪುರ-ಹೌರಾ, ನಾಗ್ಪುರ-ಸಿಕಂದರಾಬಾದ್‌, ಆಗ್ರಾ-ಬನಾರಸ್‌, ರಾಯಪುರ-ವಿಶಾಖಪಟ್ಟಣ, ಟಾಟನಗರ-ಪಟ್ನಾ. ದಿಯೋಘರ್‌-ವಾರಾಣಸಿ ಮತ್ತು ಟಾಟನಗರ-ಬೃಹಂಪುರ(ಒಡಿಶಾ) ಮಾರ್ಗಗಳಲ್ಲಿ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸಲಿವೆ. ಇದೇ ವೇಳೆ, ವಾರಾಣಸಿ-ದೆಹಲಿ ಮಾರ್ಗದಲ್ಲಿ ಪ್ರಸ್ತುತ ಸಂಚರಿಸುತ್ತಿರುವ 16 ಬೋಗಿಗಳ ವಂದೇಭಾರತ್‌ ರೈಲಿನ ಬದಲಾಗಿ 20 ಬೋಗಿಗಳ ನೂತನ ವಂದೇ ಭಾರತ್‌ ರೈಲಿಗೂ …

Read More »

ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು: ಶಾಸಕ ವಿಶ್ವಾಸ ವೈದ್ಯ

ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು: ಶಾಸಕ ವಿಶ್ವಾಸ ವೈದ್ಯ ಸತೀಶ್ ಜಾರಕೊಹೊಳಿ ಪರ ಆಪ್ತನ ಬ್ಯಾಟಿಂಗ್ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದಿಲ್ಲ ಮಂತ್ರಿಗಳು, ಶಾಸಕರು ಸಿಎಂ ಪರವಾಗಿದ್ದಾರೆ ಸಿಎಂ ಸಿದ್ದರಾಮಯ್ಯ ಖಂಡಿತ ಮುಂದುವರೀತ್ತಾರೆ ಸತೀಶ ಜಾರಕಿಹೊಳಿ ಮುಂದಿನ ಸಿಎಂ ಅಭಿಯಾನ ವಿಚಾರ ಅದೆಲ್ಲಾ ಹೈಕಮಾಂಡಗೆ ಬಿಟ್ಟ ವಿಚಾರ ಸಚಿವ ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು! ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತೆ ನಮ್ಮ ಜಿಲ್ಲೆಯವರೆ ಸಿಎಂ …

Read More »

ಸಿ.ಎಂ ಸ್ಥಾನಕ್ಕೆ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ: ದಿನೇಶ್ ಗುಂಡೂರಾವ್

ಬೆಳಗಾವಿ: ‘ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ಈಗ ಸಿ.ಎಂ ಸ್ಥಾನಕ್ಕೆ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಹೇಳಿದರು. ‘ದೀಪಾವಳಿ ನಂತರ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಇಲ್ಲಿ ಬುಧವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದ ಅವರು, ‘ಸ್ಥಿರವಾಗಿರುವ ನಮ್ಮ ಸರ್ಕಾರವನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಹಾಗಾಗಿ ಸರ್ಕಾರ ಬೀಳಿಸಲು, ಒಡೆಯಲು ಮತ್ತು ಆಪರೇಷನ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಅಭಿವೃದ್ಧಿ …

Read More »

ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾದರೆ ಸ್ವಾಗತ: ಬಿಜೆಪಿ ಶಾಸಕ ವಿಠ್ಠಲ ಹಲಗೇಕರ

ಬೆಳಗಾವಿ: ‘ಸಚಿವ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಇದ್ದಾರೆ. ಅವರೇ ಸಿ.ಎಂ ಆದರೆ ಸ್ವಾಗತ’ ಎಂದು ಖಾನಾಪುರ ಕ್ಷೇತ್ರದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ ಹೇಳಿದರು. ಇಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾದರೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲಿದೆ. ಅವರು ಪಕ್ಷಾತೀತವಾಗಿ ಕೆಲಸ ಮಾಡಲಿದ್ದಾರೆ. ನಾನು ಪ್ರತಿನಿಧಿಸುವ ಖಾನಾಪುರ ಕ್ಷೇತ್ರವನ್ನು ಸಮೀಪದಿಂದ ನೋಡಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾಗಿಯೂ ಇಡೀ ಜಿಲ್ಲೆ ಓಡಾಡಿದ್ದಾರೆ‌. ಅವರು …

Read More »

ಬಿಜೆಪಿಗೆ ಬಿಗ್ ಶಾಕ್ : ಹಗರಣಗಳ ತನಿಖೆಗೆ ಸಮಿತಿ ರಚಿಸಿ ‘ಸಿಎಂ ಸಿದ್ದರಾಮಯ್ಯ’ ಆದೇಶ.!

ಬೆಂಗಳೂರು : ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದ ಹಗರಣಗಳ ಕುರಿತು ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಸಮಿತಿ ರಚಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಗಳ ಪ್ರಗತಿ, ಸಮನ್ವಯ ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಕ್ರಮ ವಹಿಸಲು ಈ ಕೆಳಕಂಡಂತೆ ಮಾನ್ಯ ಸಚಿವರುಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ: ಸಚಿವರುಗಳಾದ ಡಾ.ಜಿ. ಪರಮೇಶ್ವರ, ಹೆಚ್.ಕೆ ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ …

Read More »

ಓಣಂ ಪ್ರಯುಕ್ತ ಹುಬ್ಬಳ್ಳಿಯಿಂದ ವಿಶೇಷ ರೈಲು ಸೇವೆ

ಬೆಂಗಳೂರು, ಸೆಪ್ಟಂಬರ್ 11: ಓಣಂ ಹಬ್ಬದ ನೈರತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ವಿಶೇಷ ರೈಲು ಬಿಡಲಾಗಿದೆ. ಈ ವಿಶೇಷ ರೈಲು ಹುಬ್ಬಳ್ಳಿ ಜಂಕ್ಷನ್‌ನಿಂದ ನೆರೆಯ ಕೇರಳ ರಾಜ್ಯ ತಲುಪಲಿದೆ. ಈ ರೈಲಿನಿಂದ ಓಣಂಗೆ ತೆರಳುವವರಿಗೆ ಹಾಗೂ ರಾಜ್ಯದ ಕೆಲವು ಜಿಲ್ಲೆಗಳ ಮೂಲಕ ಹಾದು ಹೋಗುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ವಿಶೇಷ ರೈಲಿನ ವೇಳಾಪಟ್ಟಿ, ಮಾಹಿತಿ ಇಲ್ಲಿದೆ. ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ-ಕೊಚುವೇಲಿ ನಡುವೆ ಸೆಪ್ಟೆಂಬರ್ 13ರಂದು ವಿಶೇಷ ರೈಲು …

Read More »

ದೇವಸ್ಥಾನಗಳಲ್ಲಿ ಕಳವು ಮಾಡುತ್ತಿದ್ದ ಜೈಲು ವಾರ್ಡನ್ ಸೇರಿ ಮೂವರು ಅರೆಸ್ಟ್

ಗದಗ: ದೇವಾಲಯಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಅಮಾನತುಗೊಂಡ ಜೈಲು ವಾರ್ಡನ್ ಸೇರಿದಂತೆ ಮೂವರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಅಮಾನತಾಗಿರುವ ಬಂಧಿಖಾಕಾನೆ ಇಲಾಖೆ ನೌಕರ ಶ್ರೀಕಾಂತ ಗುಡದೂರ, ಆತನ ಸಹಚರರಾದ ಪ್ರಸಾದ ಸಿಳ್ಳಿಕೇತರ, ಗುರುಪ್ರಸಾದ ಸಿಳ್ಳಿಕೇತರ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಗದಗ, ಹಾವೇರಿ, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಕಳವು ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು, ಹರಪನಹಳ್ಳಿ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಚಿತ್ರದುರ್ಗ ಜಿಲ್ಲೆಯ …

Read More »

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಭಾವಿಸಿದ್ದಾರೆ. ಹಲ್ಲುಜ್ಜದೆ ನೀರು ಕುಡಿಯುವುದು ನಿಜವಾಗಿಯೂ ಉತ್ತಮವೇ? ನಿಮ್ಮಲ್ಲಿ ಈ ಪ್ರಶ್ನೆ ಕಾಡುತ್ತಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ ನೋಡಿ.   ಹಲ್ಲುಜ್ಜುವ ಮೊದಲು ನೀರು ಕುಡಿಯುವುದ ಉತ್ತಮ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ನಿಮ್ಮ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸುತ್ತದೆ. ಮಲಬದ್ಧತೆ, ಮೊಡವೆ, ಹೊಟ್ಟೆಯ ಸಮಸ್ಯೆ ಹಾಗೂ ಅಜೀರ್ಣ ಸಮಸ್ಯೆಯಂತಹ ಅನೇಕ ತೊಂದರೆಗಳನ್ನು ತಡೆಗಟ್ಟುತ್ತದೆ. ಇದಿಷ್ಟೇ …

Read More »

ನನ್ನ ದಾಖಲೆ ಸೇಫ್​. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್!

ನನ್ನ ದಾಖಲೆ ಸೇಫ್​. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್! ನವದೆಹಲಿ: ಶ್ರೀಲಂಕಾದ ಲೆಜೆಂಡರಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಂದುವರಿದಿದ್ದಾರೆ. ಈ ಆಫ್ ಸ್ಪಿನ್ನರ್​ ಟೆಸ್ಟ್​ ಸ್ವರೂಪದಲ್ಲಿ 800 ವಿಕೆಟ್ ಪಡೆದಿರುವುದು ವಿಶ್ವದಾಖಲೆಯಾಗಿದೆ. ಈ ದಾಖಲೆಯನ್ನು ಯಾವುದೇ ಬೌಲರ್​ನಿಂದ ಮುರಿಯಲು ಸಾಧ್ಯವಿಲ್ಲ ಎಂದಿರುವ ಮುರಳೀಧರನ್​, ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.   ಇತ್ತೀಚೆಗೆ ಮಾಧ್ಯಮ …

Read More »