ಬೆಂಗಳೂರು: ರಾಜ್ಯದ ಪೊಲೀಸರ ಮಕ್ಕಳಿಗಾಗಿ 7 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಸ್ಥಾನದಲ್ಲಿ ಸೋಮವಾರ ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ನಮನ ಸಲ್ಲಿಸಿ ಮಾತನಾಡಿದ ಸಿಎಂ, ಪೊಲೀಸರು ಮುಕ್ತವಾಗಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸರ್ಕಾರ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ. ಪೊಲೀಸ್ ಸಿಬ್ಬಂದಿ ಹಿತರಕ್ಷಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ 2025 ರಲ್ಲಿ 10,000 ಪೋಲಿಸ್ ವಸತಿಗೃಹಗಳ …
Read More »Yearly Archives: 2024
ಇದ್ದೂ ಇಲ್ಲದಂತಾದ ಕಲಾಭವನ:
ಧಾರವಾಡ: ಅವಳಿನಗರಗಳ ಬಹುತೇಕ ರಂಗಮಂದಿರಗಳು ದುಃಸ್ಥಿತಿಯಲ್ಲಿವೆ. ಇದು ನಾಟಕ ಪ್ರದರ್ಶನ, ರಂಗ ತಾಲೀಮು ಮೊದಲಾದ ಚಟುವಟಿಕೆಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸಾಂಸ್ಕೃತಿಕ ನಗರವೆಂದು ಕರೆಯುವ ಧಾರವಾಡದಲ್ಲಿ ಈಗ ಕೆಲವೇ ರಂಗಮಂದಿರಗಳಲ್ಲಿ ರಂಗಭೂಮಿ ಚಟುವಟಿಕೆಗಳು ನಡೆಯುತ್ತವೆ. ಮೂಲಸೌಕರ್ಯಗಳ ಕೊರತೆ ಮತ್ತು ಅವ್ಯವಸ್ಥೆಗಳಿಂದ ನಲುಗಿರುವ ರಂಗತಾಣಗಳಿಗೆ ಕಾಯಕಲ್ಪಿಸಲು ಸಂಬಂಧಪಟ್ಟವರು ಕ್ರಮವಹಿಸಿಲ್ಲ. ಧಾರವಾಡದಲ್ಲಿ ರಂಗಾಯಣ ಇದ್ದರೂ ಅನುದಾನ ಕೊರತೆ, ಸವಲತ್ತುಗಳ ಕೊರತೆಯಿಂದಾಗಿ ರಂಗಚಟುವಟಿಕೆಗಳು ಸೊರಗಿವೆ. ಬಹುತೇಕ ರಂಗಮಂದಿರಗಳಲ್ಲಿ ಬೆಳಕು, ಧ್ವನಿ ವ್ಯವಸ್ಥೆ ಸಹಿತ ಸುಸಜ್ಜಿತ ಸಕಲ …
Read More »ಧಾರವಾಡದಲ್ಲಿ ಏರ್ಪಡಿಸಿದ್ದ ಪೊಲೀಸ್ ಹುತ್ಮಾತರ ದಿನಾಚರಣೆಯಲ್ಲಿ
ಧಾರವಾಡ: ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಬಿ.ಜಿ.ರಮಾ ತಿಳಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು. ಪೊಲೀಸರಿಗೆ ಕಾರ್ಯದ ಒತ್ತಡ ಇರುತ್ತದೆ. ಪೊಲೀಸರು ತಮ್ಮ ಮತ್ತು ಕುಟುಂಬದ ಆರೋಗ್ಯ ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದರು. ಪೊಲೀಸರು ಹಗಲಿರುಗಳು ಕಾರ್ಯನಿರ್ವಹಿಸುತ್ತಾರೆ. ಸಮಾಜದ ಆಂತರಿಕ ಭದ್ರತೆಗೆ ಶ್ರಮಿಸುತ್ತಾರೆ. ಪೊಲೀಸರು ಸಾರ್ವಜನಿಕರ …
Read More »ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ಸಂಜೆ 4 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಸಮಂಜರಿ ನಡೆಸಿಕೊಡಲಿದ್ದಾರೆ.
ಬೆಳಗಾವಿ: ‘ಕಿತ್ತೂರು ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಬೆಳಗಾವಿ ನಗರದಲ್ಲೂ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಖ್ಯಾತ ಗಾಯಕರಾದ ಕುನಾಲ್ ಗಾಂಜಾವಾಲಾ ಅವರು ಸಂಜೆ 4 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಸಮಂಜರಿ ನಡೆಸಿಕೊಡಲಿದ್ದಾರೆ. ಅದೇ ವೇದಿಕೆಯಲ್ಲಿ ಕನ್ನಡದ ಖ್ಯಾತ ಹಾಸ್ಯ ಕಲಾವಿದ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಮತ್ತು ಜೀ ಕನ್ನಡ …
Read More »DCM ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ : ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಸಿದ CBI
ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಬಿಜೆಪಿ ಶಾಸಕ ಯತ್ನಾಳ್ ಬೆನ್ನಲ್ಲೇ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ. ಸಿಬಿಐ ತನಿಖೆಗೆ ನೀಡಿದ ಸಮ್ಮತಿಯನ್ನು ಸರ್ಕಾರ ಹಿಂಪಡೆದುಕೊಂಡಿತ್ತು. ಸಿಬಿಐ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ …
Read More »ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಬಾಯ್ಲರ್ ಪ್ರದೀಪನಕ್ಕೆ ಚಾಲನೆ
ಹುಕ್ಕೇರಿ: ತಾಲ್ಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 64ನೇ ಕಬ್ಬು ಅರೆಯುವ ಹಂಗಾಮಿನ ನಿಮಿತ್ತ ಬಾಯ್ಲರ್ ಪ್ರದೀಪನ ಸಮಾರಂಭ ಸೋಮವಾರ ಜರುಗಿತು. ನಿಡಸೋಸಿಯ ಸಿದ್ದ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹುನ್ನೂರ ವಿಠ್ಠರಾಯ ದೇವರ ಪೂಜಾರಿ ಬಾಗಪ್ಪ ಬಿಜ್ಜು ಪೂಜೇರಿ ದಂಪತಿ ಪೂಜೆ ಸಲ್ಲಿಸಿದರು. ಕಾರ್ಖಾನೆಯ ಚೇರಮನ್, ಶಾಸಕ ನಿಖಿಲ್ ಉಮೇಶ ಕತ್ತಿ, ನಿರ್ದೇಶಕರಾದ ಶಿವನಾಯಿಕ ನಾಯಿಕ, ಶಿವಪುತ್ರ ಶಿರಕೋಳಿ, ಪ್ರಭುದೇವ್ ಪಾಟೀಲ್, …
Read More »ಇದೀಗ ಎಲ್ಲ ಹಳ್ಳಿಗಳಿಗೆ ಸುವರ್ಣಕಾಲ ಬಂದಿದೆ’
ಅಥಣಿ: ‘ಮುಂದಿನ ವರ್ಷದ ಒಳಗಾಗಿ ನೀರು ಒದಗಿಸುವ ಕಾರ್ಯ ಮಾಡಲಾಗುವುದು, 17100ಎಚ್‌ಪಿ ಸಾಮರ್ಥ್ಯದ ಮೂರು ಮೋಟಾರ್ ಕೂಡಿಸಿ 14 ತಿಂಗಳಿನಲ್ಲಿ ಏಳು ಗ್ರಾಮಗಳಿಗೆ ನೀರು ಪೂರೈಸಲಾಗುವುದು, ಕೃಷ್ಣಾ ನದಿಯ ಪ್ರವಾಹ ಮಹಾಪೂರ ಬಂದರೂ ತೊಂದರೆಯಾಗದಂತಹ ಉನ್ನತ ತಂತ್ರಜ್ಞಾನದ ವ್ಯವಸ್ಥೆಯನ್ನು ಅಳವಡಿಸಿಕೊಂಡು, ರಾಜ್ಯದಲ್ಲೆ ಮಾದರಿ ಯೋಜನೆಯನ್ನಾಗಿಸಲಾಗಿದೆ’ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ತಾಲ್ಲೂಕಿನ ಅರಟಾಳ ಕ್ರಾಸ್ ಹತ್ತಿರ ಜರುಗಿದ ಅಮ್ಮಾಜೇಶ್ವರಿ -ಕೊಟ್ಟಲಗಿ ಏತನೀರಾವರಿ ಯೋಜನೆಯ ಎಂ.ಎಸ್ ಪೈಪ್‌ಗಳ …
Read More »ಕಡೆಗೂ MLC ಸ್ಥಾನಕ್ಕೆ ಸಿ.ಪಿ. ಯೋಗೇಶ್ವರ್ ರಾಜೀನಾಮೆ! ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಚುನಾವಣಾ ಅಖಾಡ ರಂಗೇರಿದೆ. ಇದರ ಬೆನ್ನಲ್ಲೇ ಬಿಜೆಪಿ ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ಇಂದು (ಅ.21) ರಾಜೀನಾಮೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯಲ್ಲಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಗೃಹ ಕಚೇರಿಗೆ ಸೋಮವಾರ ಸಂಜೆ ಆಗಮಿಸಿದ ರಾಜೀನಾಮೆ ಪತ್ರ ನೀಡಿದರು. ಇನ್ನು ರಾಜೀನಾಮೆ ಘೋಷಿಸಿದ ಬಳಿಕ ಮಾತನಾಡಿದ ಅವರು, ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ. …
Read More »ಮಹಾರಾಷ್ಟ್ರದ ರೈತರಿಗೆ ಬಿಜೆಪಿ ದೊಡ್ಡ ಶತ್ರುವಾಗಿದೆ: ಖರ್ಗೆ
ನವದೆಹಲಿ: ‘ಮಹಾರಾಷ್ಟ್ರದ ರೈತರ ದೊಡ್ಡ ಶತ್ರು ಬಿಜೆಪಿ. ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರದಿಂದ ಕಿತ್ತುಹಾಕುವುದರಿಂದ ಮಾತ್ರ ರೈತರಿಗೆ ಲಾಭವಾಗಲಿದೆ. ಮಹಾಪರಿವರ್ತನೆಯೇ ರಾಜ್ಯದ ಬೇಡಿಕೆಯಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಸೋಮವಾರ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗೆ ಬಿಜೆಪಿ ಕಾರಣವೆಂದು ಕಿಡಿಕಾರಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯವನ್ನು ಬರದಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ಸುಳ್ಳು ಭರವಸೆ ನೀಡಿದೆ ಎಂದು ಟೀಕಿಸಿದ್ದಾರೆ. ಬಿಜೆಪಿಯು ಮಹಾರಾಷ್ಟ್ರದ ರೈತರ ಅತ್ಯಂತ ದೊಡ್ಡ …
Read More »ನೀರು ಕೊಟ್ಟು, ರಸ್ತೆ ಕಿತ್ತುಕೊಂಡರು
ಸವದತ್ತಿ: ನಿರಂತರ ನೀರು (24X7) ಪೂರೈಕೆಗಾಗಿ ಪಟ್ಟಣದ ಬಹುಪಾಲು ರಸ್ತೆಗಳನ್ನು ಅಗೆದು ಹಾಕಲಾಗಿದೆ. ಕಾಮಗಾರಿ ಮುಗಿದ ಮೇಲೆ ಮತ್ತೆ ರಸ್ತೆ ದುರಸ್ತಿ ಮಾಡಿಲ್ಲ. ಇದೇ ಪರಿಸ್ಥಿತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ತಲೆದೋರಿದೆ. ಕೊರಕಲು ರಸ್ತೆಗಳಿಂದ ಜನ ಬೇಸತ್ತುಹೋಗಿದ್ದಾರೆ. ಅಧಿಕಾರಿಗಳು ಮಾತ್ರ ಒಬ್ಬರ ಮೇಲೊಬ್ಬರ ನೆಪ ಹೇಳಿಕೊಂಡು ದಿನ ಕಳೆಯುತ್ತಿದ್ದಾರೆ. ಸುಪ್ರಸಿದ್ಧ ಪ್ರೇಕ್ಷಣೀಯ ಸ್ಥಾನ ಯಲ್ಲಮ್ಮನ ಗುಡ್ಡವನ್ನು ಸುತ್ತವರಿದು ಸವದತ್ತಿ ಪಟ್ಟಣ ಹಾಗೂ ಗ್ರಾಮಗಳಿವೆ. ವಿಶಾಲವಾಗಿ ಹರಿದ ಮಲಪ್ರಭೆಯಿಂದ ಸಾಕಷ್ಟು ನೀರಿನ …
Read More »