Breaking News

Yearly Archives: 2024

ಇತ್ತ ಮಳೆ ಭಾರಿ, ಅತ್ತ ಬೀಜಗಳೂ ದುಬಾರಿ

ಬೆಳಗಾವಿ: ಅಕಾಲಿಕ ಮಳೆ ಹಿಂಗಾರಿ ಹಂಗಾಮಿಗೆ ಸಿದ್ಧಗೊಂಡ ರೈತರಿಗೆ ಚಿಂತೆ ತಂದಿಟ್ಟಿವೆ. ಜಿಲ್ಲೆಯ ಹಲವು ರೈತರು ಇನ್ನೂ ಮುಂಗಾರು ಫಸಲಿನ ರಾಶಿಯಲ್ಲಿ ನಿರತರಾಗಿದ್ದಾರೆ. ಮತ್ತಷ್ಟು ರೈತರು ಹಿಂಗಾರಿ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕಳೆದ ಎರಡು ವಾರಗಳಿಂದ ಸುರಿದ ಮಳೆ ಎರಡೂ ಕೆಲಸಕ್ಕೆ ಅಡಚಣೆ ತಂದೊಡ್ಡಿದೆ. ಗಾಯದ ಮೇಲೆ ಬರೆ ಎಂಬಂತೆ ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ. ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳಾದ ರಾಗಿ, ಗೋಧಿ, ಕಡಲೆ ದರ ತುಸು ಹೆಚ್ಚಾಗಿದೆ. ಜೋಳ, …

Read More »

ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯಿಂದ ಹನಿಟ್ರ್ಯಾಪ್: ಲೇಡಿ ಮೊಬೈಲ್‌ನಲ್ಲಿ ಸಿಕ್ತು 8 ಮಂದಿ ಖಾಸಗಿ ವಿಡಿಯೋ!

ßಬೆಂಗಳೂರು: ಕಾಂಗ್ರೆಸ್‌ ನ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​ ಅವರಿಗೆ ವಾಟ್ಸಪ್​ ಮೂಲಕ ವಿಡಿಯೊ ಕರೆಗಳನ್ನು ಮಾಡಿ ಅವುಗಳನ್ನು ರೆಕಾರ್ಡ್‌ ಮಾಡಿಕೊಂಡು ಹಣಕ್ಕೆ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.   ಈ ಆಡಿಯೋ-ವಿಡಿಯೋ ಬಹಿರಂಗಗೊಳಿಸದಿರಲು 20 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮಂಜುಳಾ ಪಾಟೀಲ ಹಾಗೂ ಆಕೆಯ ಪತಿ ಶಿವರಾಜ್‌ ಪಾಟೀಲರನ್ನು ಬಂಧಿಸಲಾಗಿದೆ. ಮಂಜುಳಾ ಪಾಟೀಲ್ …

Read More »

ಉಪ ಚುನಾವಣೆ ನಡುವೆ ಕುಮಾರಸ್ವಾಮಿ ಕುಟುಂಬಕ್ಕೆ ಸಿದ್ದೇಶ್ವರ ಸ್ವಾಮಿ ಪ್ರಸಾದ! ಚರ್ಚೆ ಶುರು

ಹಾಸನ: ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ವಿಧಾನಸಭಾ ಚುನಾವಣೆಗಳ ಪೈಕಿ ಚನ್ನಪಟ್ಟಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ರಾಜ್ಯ ಹಾಗೂ ದೇಶದ ಗಮನ ಸೆಳೆದಿದೆ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ನಡುವಿನ ನೇರಾ ಹಣಾಹಣಿ ಹಾಗೂ ಕಾಂಗ್ರೆಸ್-ಎನ್ ಡಿಎ ಪಕ್ಷಗಳ ಪ್ರತಿಷ್ಠೆಯೇ ಇದಕ್ಕೆ ಕಾರಣ.   ಈ ಮಧ್ಯೆ ಎಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸಿದ್ದೇಶ್ವರ ಸ್ವಾಮಿ ಬಲಗಡೆಯಿಂದ ಹೂವು ನೀಡಿದ್ದು, ಚನ್ನಪಟ್ಟಣದಲ್ಲಿ ನಿಖಿಲ್ …

Read More »

ರಾಷ್ಟ್ರ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ ಬಿಎಂಟಿಸಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(BMTC) ‘ಸಿಟಿ ವಿಥ್ ಬೆಸ್ಟ್ ರೆಕಾರ್ಡ್ ಆಫ್ ಪಬ್ಲಿಕ್ ಇನ್ವಾಲ್ವ್ಮೆಂಟ್ ಇನ್ ಟ್ರಾನ್ಸ್​​ಪೋರ್ಟ್’ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ಅವಾರ್ಡ್ ಆಫ್ ಎಕ್ಸೆಲೆನ್ಸ್ ಇನ್ ಅರ್ಬನ್ ಟ್ರಾನ್ಸ್​​ಪೋರ್ಟ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.   ಗುಜರಾತ್‌ನ ಗಾಂಧಿನಗರದ ಮಹಾತ್ಮ ಗಾಂಧಿ ಮಂದಿರ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ ಎಂದು …

Read More »

ಶೇ. 50ರಷ್ಟು ಅಗ್ನಿ ಸುರಕ್ಷತೆ ಕ್ರಮ ಅನುಸರಿಸದ ಖಾಸಗಿ ಆಸ್ಪತ್ರೆಗಳು: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಬೆಂಗಳೂರು: ರಾಜ್ಯದ 4,787 ಒಳರೋಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಕ್ಕಿಂತ ಹೆಚ್ಚು ಸರಿಯಾದ ಅಗ್ನಿ ಅವಘಡಗಳ ಸುರಕ್ಷತಾ ಸಾಧನಗಳ ಕೊರತೆ ಮತ್ತು ಅಗ್ನಿ ಸುರಕ್ಷತಾ ಮಾನದಂಡಗಳಿಗೆ ಬದ್ಧವಾಗಿಲ್ಲ ಎಂದು ಕಂಡುಬಂದಿದೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ನಡೆಸಿದ ತಪಾಸಣೆಯಲ್ಲಿ ತಿಳಿದು ಬಂದಿದೆ.   ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಬೆಂಕಿ ಅವಘಡ ಸಂಭವಿಸಿದ ನಂತರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ …

Read More »

ವಕ್ಫ್ ಬೋರ್ಡ್ ನೋಟಿಸ್: ರೈತರ ಅಹವಾಲು ಸ್ವೀಕರಿಸಲು ಬಿಜೆಪಿ ತಂಡ ರಚನೆ

ಬೆಂಗಳೂರು: ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ರೈತರಿಂದ ಅಹವಾಲು ಸ್ವೀಕರಿಸಲು ರಾಜ್ಯ ಬಿಜೆಪಿಯಿಂದ ತಂಡವೊಂದನ್ನು ರಚಿಸಲಾಗಿದೆ. ಸಂಸದ ಗೋವಿಂದ ಕಾರಜೋಳ, ಶಾಸಕರಾದ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ಮಾಜಿ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ , ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಈ ತಂಡದಲ್ಲಿದ್ದಾರೆ. ಈ ತಂಡ ಅಕ್ಟೋಬರ್ 24 ರಂದು ವಿಜಯಪುರಕ್ಕೆ ಭೇಟಿ ಭೇಟಿ ನೀಡಲಿದೆ. ತಂಡದ ಸದಸ್ಯರು ರೈತರ ಸಮಸ್ಯೆ …

Read More »

ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕೊಂದ ಮಗ!

ಚಿತ್ರದುರ್ಗ: ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ‌ ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುಂದಲಗುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಮಗನಿಂದಲೇ ಹತ್ಯೆಯಾದ ತಂದೆಯನ್ನು ರಂಗಸ್ವಾಮಿ(50) ಎಂದು ಗುರುತಿಸಲಾಗಿದ್ದು, ಆರೋಪಿ ಪುತ್ರ ದೇವರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.   ಮನೆಯಲ್ಲಿ ರಾತ್ರಿ ಊಟದ ವೇಳೆ ತನಗೆ ಮೊಟ್ಟೆ ಕೊಡಲಿಲ್ಲ ಎಂದು ದೇವರಾಜ್‌ ತಂದೆ ಜತೆ ಜಗಳ ಆರಂಭಿಸಿದ್ದ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿದ್ದು, ತೀವ್ರ …

Read More »

ಸಂಡೂರು ಉಪಚುನಾವಣೆ; ಮತ್ತೆ ಒಗ್ಗೂಡಿದ ಶ್ರೀರಾಮುಲು-ಜನಾರ್ಧನ ರೆಡ್ಡಿ

ಬಳ್ಳಾರಿ: ಸಂಡೂರು ಉಪಚುನಾವಣೆ ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇದುವರೆಗೂ ಪ್ರಚಾರದಿಂದ ದೂರವೇ ಉಳಿದಿದ್ದ ಮಾಜಿ ಸಚಿವ ಶ್ರೀರಾಮುಲು ಕೊನೆಗೂ ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದು, ಜನಾರ್ದನ ರೆಡ್ಡಿ ಜೊತೆ ಜಂಟಿ ಪ್ರಚಾರ ಆರಂಭಿಸಿದ್ದಾರೆ. ಇಬ್ಬರು ನಾಯಕರ ಜಂಟಿ ಪ್ರಚಾರ ಹಲವರ ಹುಬ್ಬೇರುವಂತೆ ಮಾಡಿದೆ. 2023ರ ಚುನಾವಣೆ ವೇಳೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಆಂತರಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ಬಳಿಕ ರೆಡ್ಡಿಯವರು ಕಲ್ಯಾಣ …

Read More »

ವಕ್ಫ್ ಮಂಡಳಿ ನಿಷೇಧಿಸಿ: ಸರ್ಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಮೈಸೂರು: ವಕ್ಫ್ ಮಂಡಳಿ ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ರೈತರಿಗೆ ನೋಟಿಸ್ ನೀಡಿದೆ. ಈ ಮಂಡಳಿಯನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ರಾಜ್ಯ ಸರ್ಕಾರಕ್ಕೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ವಕ್ಫ್ ಬೋರ್ಡ್‌ಗೆ ಅಧಿಕಾರ ನೀಡುವ ಮೂಲಕ ಸಮಸ್ಯೆ ಮತ್ತು ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ವಕ್ಫ್ ಬೋರ್ಡ್ 16,000 ಎಕರೆಯಲ್ಲಿ ಮಾಲೀಕತ್ವ ಪಡೆದಿರುವ ರೈತರಿಗೆ ನೋಟಿಸ್ ನೀಡಿದೆ. …

Read More »

ನಿಖಿಲ್ 2 ಬಾರಿ ಸೋತಿದ್ದಾಗ ಅಭಿಮನ್ಯು ಆಗಿರಲಿಲ್ಲವಾ: HDKಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ನಿಖಿಲ್ ಕುಮಾರಸ್ವಾಮಿಯವರು ಎರಡು ಬಾರಿ ಸೋತಿದ್ದರು ಆಗ ಅಭಿಮನ್ಯು ಆಗಿರಲಿಲ್ಲವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಭಾನುವಾರ ತಿರುಗೇಟು ನೀಡಿದರು. ಅರಮನೆ ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ನಿಖಿಲ್ ಅಭಿಮನ್ಯು ಅಲ್ಲ, ಅರ್ಜುನ ಆಗಿ ಬರುತ್ತಾನೆ ಎಂಬ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಎರಡು ಬಾರಿ ಚುನಾವಣೆಯಲ್ಲಿ ಸೋತಾಗ ನಿಖಿಲ್ ಅಭಿಮನ್ಯು ಆಗಿರಲಿಲ್ವಾ?. ಮಂಡ್ಯ, ರಾಮನಗರದಲ್ಲಿ ಸೋತಿದ್ದಾರೆ. ಈಗ …

Read More »