ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಗದಿದ್ದರೂ, ಸೇವೆ ಆರಂಭಿಸಿ ತಿಂಗಳಾಗಿದೆ. ಒಳರೋಗಿಗಳ ವಿಭಾಗ ಕಾರ್ಯಾರಂಭ ಮಾಡಿದ್ದು, ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. 100 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅ.17ರಿಂದ ನ.16ರವರೆಗೆ 35 ಹೆರಿಗೆಯಾಗಿವೆ. ಈ ಪೈಕಿ 12 ಸಿಸೇರಿಯನ್ ಹೆರಿಗೆಯಾಗಿವೆ. ಆದರೆ, ಆರೋಗ್ಯ ಮತ್ತು …
Read More »Monthly Archives: ನವೆಂಬರ್ 2024
ಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಕಾಂಪೌಂಡ್ ಬಳಿಯೇ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಸೋಮವಾರ (ನ.18) ಬೆಳಗಿನ ಜಾವ ನಡೆದಿದೆ. ಮರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಿಹಾಳ ಹಾಗೂ ಮಾವಿನಕಟ್ಟಿ ಗ್ರಾಮದ ಬಳಿಯ ಬೆಳಗಾವಿ ವಿಮಾನ ನಿಲ್ದಾಣದ ಕಾಂಪೌಂಡ್ ಸಮೀಪದ ಹೊಲದಲ್ಲಿ ಮೃತದೇಹ ಪತ್ತೆಯಾಗಿದೆ. ಯುವಕನ ಜೇಬಿನಲ್ಲಿ ದ್ವಿಚಕ್ರ ವಾಹನದ ಚೀಲಿ ಕೈ ಪತ್ತೆಯಾಗಿದೆ. ಯುವಕನ ಗುರುತು ಪತ್ತೆಯಾಗಿಲ್ಲ. ಕಲ್ಲಿನಿಂದ ತಲೆಗೆ ಜಜ್ಜಿ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ …
Read More »ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
ಬಳ್ಳಾರಿ (ಹೊಸಪೇಟೆ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಹಂಚಿಕೆಯಲ್ಲಿ ವಿಜಯನಗರ ಕ್ಷೇತ್ರಕ್ಕೆ ಭಾರಿ ಅನ್ಯಾಯವಾಗಿದ್ದು, ಅನುದಾನವೇ ಇಲ್ಲದೇ, ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡೋಕೆ ಆಗುತ್ತದೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ, ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಹೊಸಪೇಟೆ ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದರೂ, ಅನುದಾನವೇ ನೀಡುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಹಂಚಿಕೆಯಲ್ಲಿ ವಿಜಯನಗರ …
Read More »ಗೋಬಿ, ಕಾಟನ್ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!
ಬೆಂಗಳೂರು: ರಾಜ್ಯದಲ್ಲಿ ಕೃತಕ ಬಣ್ಣ ಬಳಸಿ ತಯಾರಿಸುವ ಕಲರ್ ಕಾಟನ್ ಕ್ಯಾಂಡಿ, ಕಬಾಬ್, ಗೋಬಿ ಮಂಚೂರಿಗಳ ಮಾರಾಟ ನಿಷೇಧ ಆದೇಶ ಹೊರಡಿಸಿ ವರ್ಷ ಪೂರ್ಣಗೊಳ್ಳುವುದರ ಒಳಗಾಗಿ ಬೆಂಗಳೂರು ಮತ್ತಿತರ ಕಡೆಗಳಲ್ಲಿ ಬಣ್ಣ ಬಣ್ಣದ ಕಾಟನ್ ಕ್ಯಾಂಡಿ ಮಾರಾಟ ಮತ್ತೆ ಆರಂಭವಾಗಿದೆ. ಗೋಬಿ ಮಂಚೂರಿಯಲ್ಲೂ ಕೃತಕ ಬಣ್ಣ ಬಳಕೆಯ ಪ್ರಕರಣಗಳು ವರದಿಯಾಗುತ್ತಿವೆ. ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಇಲಾಖೆಯು ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಬಣ್ಣದ ಕಾಟನ್ ಕ್ಯಾಂಡಿಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. …
Read More »ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
ಕುಂದಾಪುರ/ದಾವಣಗೆರೆ: ಕೇರಳ ಹೊರತುಪಡಿಸಿ ದೇಶದಲ್ಲೇ ಅತೀ ಹೆಚ್ಚು ತೆಂಗಿನಕಾಯಿ ಬೆಳೆಯುವ ಕರ್ನಾಟಕ ದಲ್ಲೂ ಈ ಬಾರಿ ಇಳುವರಿ ಕೊರತೆಯಿದ್ದು, ದಿನೇದಿನೆ ಬೆಲೆ ಏರಿಕೆಯಾಗುತ್ತಿದೆ. ಇದೇ ಮೊದಲ ಬಾರಿಗೆ ತೆಂಗಿನಕಾಯಿ ಬೆಲೆ 60 ರೂ. ಗಡಿ ದಾಟಿದೆ. ಇದು ತೆಂಗಿನ ಕಾಯಿ ಮಾರುಕಟ್ಟೆಯ ಸಾರ್ವ ಕಾಲಿಕ ಗರಿಷ್ಠ ಧಾರಣೆ ಯಾಗಿದೆ. ರೈತರಿಂದಲೇ ಉತ್ತಮ ಗುಣ ಮಟ್ಟದ ಕಾಯಿಗಳನ್ನು 50-52 ರೂ. ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದು, ಅಂಗಡಿಗಳಲ್ಲಿ 58-60 ರೂ.ಗೆ ಮಾರುತ್ತಿದ್ದಾರೆ. ಮಂಗಳೂರು …
Read More »ಕಲ್ಲು ತೂರಾಟ. ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
ಮಹಾರಾಷ್ಟ್ರ: ಅಪರಿಚಿತ ಗುಂಪೊಂದು ಕಲ್ಲು ತೂರಾಟ ನಡೆಸಿದ ಪರಿಣಾಮ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಹಣೆಗೆ ಗಾಯವಾದ ಘಟನೆ ಭಾನುವಾರ(ನ.18) ರಾತ್ರಿ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. ದೇಶಮುಖ್ ಅವರನ್ನು ಕೂಡಲೇ ಕಟೋಲ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾನುವಾರ ರಾತ್ರಿ ಸುಮಾರು ಎಂಟು ಗಂಟೆಯ ಸುಮಾರಿಗೆ ನಾರ್ಖೇಡ್ ಗ್ರಾಮದಲ್ಲಿ ನಡೆದ ಎನ್‌ಸಿಪಿ ನಾಯಕ ಶರದ್‌ಚಂದ್ರ ಪವಾರ್ ಅವರ ಸಭೆಯಲ್ಲಿ ಭಾಗವಹಿಸಿ ಕಟೋಲ್‌ಗೆ ಹಿಂತಿರುಗುತ್ತಿದ್ದಾಗ …
Read More »ಇಂದಿನಿಂದ ಮೂರು ದಿನ ‘ಬೆಂಗಳೂರು ಟೆಕ್ ಶೃಂಗಸಭೆ’ ಆಯೋಜನೆ |Bangalore Tech Summit
ಬೆಂಗಳೂರು : ಬೆಂಗಳೂರು ಟೆಕ್ ಶೃಂಗಸಭೆ ಇಂದು ನವೆಂಬರ್ 19 ರಿಂದ 21ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನವೋದ್ಯಮಗಳು ಮತ್ತು ಜಾಗತಿಕ ಮಟ್ಟದ ಹೂಡಿಕೆದಾರರನ್ನು ಒಂದೇ ವೇದಿಕೆಯಲ್ಲಿ ತರಲು ಆಯೋಜಿಸಲಾಗಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ – 2024 ಇದೇ ನವೆಂಬರ್ 19 ರಿಂದ 21ರ ವರೆಗೆ ನಡೆಯಲಿದೆ. ಆಸ್ಟ್ರೇಲಿಯಾ, ಬ್ರಿಟನ್, ಫ್ರಾನ್ಸ್, ಆಸ್ಟ್ರೀಯ, ಜರ್ಮನಿ, ಸ್ವಿಡ್ಜರ್ಲೆಂಡ್, ಇಸ್ರೇಲ್, …
Read More »ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ನಮ್ಮ ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯನ್ನು ಹೊಂದಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನ.20ರಂದು ಒಂದೇ ಹಂತದಲ್ಲಿ ನಡೆಯಲಿದೆ. 2019ಕ್ಕೆ ಹೋಲಿಕೆ ಮಾಡಿದರೆ 2024ರಲ್ಲಿ ನಡೆಯಲಿರುವ ಚುನಾವಣೆ ಒಂದು ರೀತಿ “ಮಾಡು ಇಲ್ಲವೇ ಮಡಿ’ ಎಂಬ ನಾಣ್ಣುಡಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. 288 ಸದಸ್ಯ ಬಲದ ವಿಧಾನಸಭೆಗೆ 2019ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಗೆ 105, ಶಿವಸೇನೆಗೆ 56, ಎನ್‌ಸಿಪಿಗೆ 54, ಕಾಂಗ್ರೆಸ್‌ಗೆ 44, ಪಕ್ಷೇತರರು ಮತ್ತು ಇತರರು …
Read More »ಕನ್ನಡ ಪುಸ್ತಕಗಳಿಗೆ ಶೇಕಡ 50ರಷ್ಟು ಭಾರಿ ರಿಯಾಯಿತಿ : CM ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಅಕಾಡೆಮಿಗಳು, ಪ್ರಾಧಿಕಾರದಿಂದ ಪ್ರಕಟಿಸುವ ಪುಸ್ತಕಗಳನ್ನು ಶೇಕಡ 50 ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಾವೇರಿ ಜಿಲ್ಲೆ ಬಂಕಾಪುರದಲ್ಲಿ ಕನಕದಾಸರು ನೆಲೆಸಿದ್ದ ಸ್ಥಳ ಅಭಿವೃದ್ಧಿ ಪಡಿಸಬೇಕು. ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡುವುದಕ್ಕೆ ಒಪ್ಪಿಗೆ ನೀಡುವಂತೆ …
Read More »ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
ಮುಂಬೈ/ ರಾಂಚಿ: ಮಹಾರಾಷ್ಟ್ರದ ಎಲ್ಲಾ 288 ಕ್ಷೇತ್ರಗಳಿಗೆ ಹಾಗೂ ಜಾರ್ಖಂಡ್‌ನ 38 ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯಲಿದ್ದು, ಸೋಮವಾರ ಉಭಯ ರಾಜ್ಯಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಉಭಯ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಂತಹ ಘಟಾನುಘಟಿಗಳು ಪ್ರಚಾರ ನಡೆಸಿದ್ದು, ಫಲಿತಾಂಶ ಭಾರಿ ಕುತೂಹಲ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ಬಣದ …
Read More »