Breaking News

Daily Archives: ಸೆಪ್ಟೆಂಬರ್ 19, 2024

ಗರ್ಭಿಣಿ ಪತ್ನಿಯನ್ನು ಕೊಂದು ಬಾವಿಗೆ ಎಸೆದ ಪಾಪಿ ಪತಿ.!

ಕೊಪ್ಪಳ : ಪಾಪಿ ಪತಿಯೋರ್ವ ಗರ್ಭಿಣಿ ಪತ್ನಿಯನ್ನು ಕೊಂದು ಬಾವಿಗೆ ಎಸೆದ ಘಟನೆ ಕೊಪ್ಪಳದ ತಾಳಕನಪೂರದಲ್ಲಿ ನಡೆದಿದೆ. ಸಂಗೀತಾ ಎಂಬ ಮಹಿಳೆ ಕೊಲೆಯಾಗಿದ್ದು, ಪತಿ ಬಾಬು ಎಂಬಾತ ಈ ಕೃತ್ಯ ಎಸಗಿದ್ದಾನೆ. 4 ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಸಂಗೀತಾಳನ್ನು ಬಾಬು ಜಮೀನಿಗೆ ಕರೆದೊಯ್ದು ಕೊಲೆ ಮಾಡಿ ನಂತರ ಬಾವಿಗೆ ಎಸೆದಿದ್ದಾನೆ. ಕೊಳೆದ ಸ್ಥಿತಿಯಲ್ಲಿ ಸಂಗೀತಾಳ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Read More »

ಕಚ್ಚಿದ ಹಾವಿನ ಸಮೇತ ಆಸ್ಪತ್ರೆಗೆ ಬಂದ ಯುವಕ

ಹುಬ್ಬಳ್ಳಿ: ಯುವಕನೊಬ್ಬ ತನಗೆ ಕಚ್ಚಿದ ಹಾವಿನ ಸಮೇತ ಆಸ್ಪತ್ರೆಗೆ ಬಂದಿರುವ ಘಟನೆ ಹುಬ್ಬಳ್ಳಿಯ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಶೇಂಗಾ ಕೀಳಲೆಂದು ತಂದೆ-ಮಗ ಹೊಲಕ್ಕೆ ಹೋಗಿದ್ದ ವೇಳೆ ಹಸಿರು ಹಾವೊಂದು ಯುವಕನಿಗೆ ಕಚ್ಚಿದೆ. ಹವಿನ ತಲೆ ಜಜ್ಜಿ, ಅದನ್ನು ಕೊಂದು ಒಂದು ಚೀಲದಲ್ಲಿ ತುಂಬಿಕೊಂಡು ಯುವಕ ಹಾಗೂ ಆತನ ತಂದೆ ಆಸ್ಪತ್ರೆಗೆ ಬಂದಿದ್ದಾರೆ.   ಗಾಯಾಳು ಯುವಕ ಫಕಿರಪ್ಪ ಅಣ್ಣಿಗೇರಿಗೆ ಚಿಕಿತ್ಸೆ ನೀಡಲಾಗಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Read More »

ಕೊಳ್ಳೇಗಾಲ: ನಕ್ಷತ್ರ ಆಮೆ ಸಾಗಾಟ ಮಾಡುತ್ತಿದ್ದ ಮೂವರ ಬಂಧನ

ಚಾಮರಾಜನಗರ, ಸೆಪ್ಟೆಂಬರ್, 19: ಇತ್ತೀಚೆಗಷ್ಟೇ ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಸಿಐಡಿ ಪೊಲೀಸ್‌ ಅರಣ್ಯ ಸಂಚಾರಿ ದಳ ಬಂಧಿಸಿತ್ತು. ಇದೀಗ ಮತ್ತೆ ಮುಡಿಗುಂಡದ ರಾಷ್ಟ್ರೀಯ ಹೆದ್ದಾರಿ ಬಳಿ ಅಕ್ರಮವಾಗಿ ಜೀವಂತ ನಕ್ಷತ್ರ ಆಮೆಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.   ಚಾಮರಾಜನಗರ ತಾಲ್ಲೂಕು ಕುಳ್ಳೂರು ಗ್ರಾಮದ ಮಾದೇಶ್, ತಮಿಳುನಾಡಿನ ಸತ್ತಿ ತಾಲ್ಲೂಕಿನ ಕಾನಗೆರೆ …

Read More »

ಕನ್ನಡ ಸಾಹಿತ್ಯ ಪರಿಷತ್ತಿನ ಎಡವಟ್ಟು: ಅಧ್ಯಕ್ಷ ಸ್ಥಾನಕ್ಕೆ ಕೊಲೆ ಆರೋಪಿ ಆಯ್ಕೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಗರಿ ಮಂಡ್ಯ ಜಿಲ್ಲೆ ಸಿದ್ಧವಾಗುತ್ತಿರುವ ಹೊತ್ತಲ್ಲೇ ಕನ್ನಡ ಸಾಹಿತ್ಯ ಪರಿಷತ್ತು ಎಡವಟ್ಟೊಂದನ್ನು ಮಾಡಿದೆ. ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಕೊಲೆ ಆರೋಪಿಯನ್ನು ಆಯ್ಕೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಎಂ.ಬಿ.ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಎಂ.ಬಿ.ಕುಮಾರ್ ವಿರುದ್ಧ ಕೊಲೆ ಆರೋಪವಿದೆ. ರೌಡಿಶೀಟರ್ ದೀಪು ಎಂಬಾತನ ಕೊಲೆ ಕೇಸ್ …

Read More »

ಆನ್‌ಲೈನ್‌ ವಂಚಕನ ಸೆರೆ: ₹1.21 ಕೋಟಿ ವಶ

ಬಳ್ಳಾರಿ: ನಗರದ ‘ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೆಟ್ ಲಿಮಿಟೆಡ್’ಗೆ ₹2.11 ಕೋಟಿ ವಂಚಿಸಿದ್ದ ಆನ್‌ಲೈನ್‌ ವಂಚಕರ ತಂಡದ ದುಷ್ಕರ್ಮಿಯೊಬ್ಬನನ್ನು ಬಂಧಿಸುವಲ್ಲಿ ಬಳ್ಳಾರಿಯ ಸೈಬರ್, ಆರ್ಥಿಕ, ಮಾದಕ ವಸ್ತು (ಸಿಇಎನ್‌) ಅಪರಾಧ ಪೊಲೀಸರು ಯಶಸ್ವಿಯಾಗಿದ್ದಾರೆ.   ವಂಚನೆಯ ಜಾಲ ಬೆನ್ನುಹತ್ತಿದ್ದ ಸಿಇಎನ್‌ ವಿಭಾಗದ ಡಿಎಸ್‌ಪಿ ಸಂತೋಷ್‌ ಚೌವ್ಹಾಣ್‌ ಅವರ ತಂಡ, ಮಧ್ಯಪ್ರದೇಶಕ್ಕೆ ತೆರಳಿ ಸಿದಿ ಜಿಲ್ಲೆಯ ಅಜಯ್‌ ಕುಮಾರ್‌ ಜೈಸ್ವಾಲ್‌ ಎಂಬಾತನನ್ನು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದಾರೆ. ‘ಅಜಯ್‌ ಕುಮಾರ್ ಬಂಧನದಿಂದಾಗಿ ₹1.21 ಕೋಟಿ …

Read More »