Breaking News

Daily Archives: ಸೆಪ್ಟೆಂಬರ್ 18, 2024

ಮುನಿರತ್ನಂ ವಿರುದ್ಧ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಲು ಒಕ್ಕಲಿಗರ ಆಗ್ರಹ

ದೊಡ್ಡಬಳ್ಳಾಪುರ: ಒಕ್ಕಲಿಗ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಮುನಿರತ್ನಂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಯುವ ಒಕ್ಕಲಿಗ ಗೆಳೆಯರ ಬಳಗ ಮತ್ತು ಕೆಂಪೇಗೌಡರ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದಿಂದ ನಗರದ ತಾಲ್ಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.   ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಒಕ್ಕಲಿಗ ಜನಾಂಗದ ಗುತ್ತಿಗೆದಾರರೊಬ್ಬರನ್ನು ಶಾಸಕ ಮುನಿರತ್ನಂ ನಾಯ್ಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ತುಚ್ಛವಾಗಿ ಮಾತನಾಡಿ ಗುತ್ತಿಗೆದಾರರನ್ನು ಹೆದರಿಸಿ, ಜೀವ …

Read More »

ಅನಂತ್ ಕುಮಾರ್ ಹೆಗ್ಡೆಗೆ ಟಿಕೆಟ್ ತಪ್ಪಿಸಿದ್ದು ನಾನೆ : ಛಲವಾದಿ ನಾರಾಯಣಸ್ವಾಮಿ

ರಾಯಚೂರು : ಈ ಬಾರಿ ಲೋಕಸಭಾ ಚುನಾವಣೆಗೆ ಅನಂತ್ ಕುಮಾರ್‌ ಅವರಿಗೆ ಟಿಕೆಟ್ ಕೊಡಬೇಡಿ ಎಂದು ನಾನೇ ಹೇಳಿದ್ದೆ ಎಂದು ವಿಧಾನ ಪರಿಷತ್ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಅಮೇರಿಕಾದಲ್ಲಿ ಮೀಸಲಾತಿ ಕುರಿತು ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಖಂಡಿಸಿ ರಾಹುಲ್ ಗಾಂಧಿ ರಾಜೀನಾಮೆಗೆ ಆಗ್ರಹಿಸಿ ರಾಯಚೂರಿನಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಅನಂತ ಕುಮಾರ್ ಹೆಗಡೆಗೆ ಕಳೆದ ಲೋಕಸಭಾ …

Read More »

ಮುನಿರತ್ನ ಪ್ರಕರಣ | ಕೆಟ್ಟ ಪದ ಬಳಕೆ ಸಂಸ್ಕಾರವಲ್ಲ: ಬಸವರಾಜ ಹೊರಟ್ಟಿ

ಧಾರವಾಡ: ‘ಕೆಟ್ಟದಾಗಿ ಮಾತನಾಡುವುದು ಸಂಸ್ಕಾರ ಅಲ್ಲ. ಲಕ್ಷಗಟ್ಟಲೇ ಜನರನ್ನು ಪ್ರತಿನಿಧಿಸುವವರೇ (ಶಾಸಕರು) ಕೆಟ್ಟದಾಗಿ ಮಾತನಾಡಿದರೆ ಸಮಾಜಕ್ಕೆ ಯಾವ ಸಂದೇಶ ರವಾನೆ ಆಗುತ್ತದೆ?’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದರು. ಶಾಸಕ ಮುನಿರತ್ನ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಅದು ತಮ್ಮ ಧ್ವನಿಯಲ್ಲ ಎಂದು ಅವರು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ’ ಎಂದರು. ‘‍ಹಣ ನೀಡಿ ಮತ ಹಾಕಿಸಿಕೊಳ್ಳುವವರು …

Read More »

ಹುಬ್ಬಳ್ಳಿ | ಕನ್ನಡ ಬೆಳೆಯಲು ಪುಸ್ತಕ ಓದಿ: ಎಸ್.ಎಲ್. ಭೈರಪ್ಪ

ಹುಬ್ಬಳ್ಳಿ: ‘ಪುಸ್ತಕ ಓದದಿದ್ದರೆ ಕನ್ನಡ ಬೆಳೆಯುವುದಿಲ್ಲ. ಪುಸ್ತಕ ಖರೀದಿಸಿ ಓದಬೇಕು’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಸಲಹೆ ನೀಡಿದರು. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನವು ಸಾಹಿತ್ಯ ಭಂಡಾರದ ಮ. ಅನಂತಮೂರ್ತಿ ಅವರ ಪುಣ್ಯತಿಥಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪ್ರಕಾಶಕರಿಗೆ ಸನ್ಮಾನ, ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ನವೋದಯ ಕಾಲಘಟದಲ್ಲಿ ಹಲವಾರು ಕೃತಿಗಳು ಮೂಡಿಬಂದರೂ, ಸರಿಯಾದ ಪ್ರಕಾಶಕರು …

Read More »

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ: ಒಬ್ಬರು ವಶಕ್ಕೆ

ಧಾರವಾಡ): ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ರಾಯಣ್ಣ ಪ್ರತಿಮೆಯ ಬಲಗೈ ವಿರೂಪಗೊಳಿಸಲಾಗಿದೆ. ಗ್ರಾಮಸ್ಥರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ‘ಕೃತ್ಯಕ್ಕೆ ಸಂಬಂಧಿಸಿದಂತೆ ಅಶೋಕ ಕಾಲವಾಡ (44) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೋಲೀಸರು ತಿಳಿಸಿದ್ದಾರೆ. ಬಟ್ಟೆ ಸುತ್ತಿ ಪ್ರತಿಮೆಯನ್ನು ಮುಚ್ಚಲಾಗಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Read More »

ಬೆಳಗಾವಿಯಲ್ಲಿ ಗಣೇಶೋತ್ಸವ ಮೆರವಣಿಗೆಗೆ ಜನಸಾಗರ

ಬೆಳಗಾವಿಯ ಶ್ಯಾಮಪ್ರಸಾದ್‌ ಮುಖರ್ಜಿ (ಎಸ್‌ಪಿಎಂ) ರಸ್ತೆಯಲ್ಲಿ ಬುಧವಾರ ಸಂಜೆಯೂ ಮುಂದುವರಿದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದರು. ನಿರಂತರ 30 ತಾಸು ಮೆರವಣಿಗೆ ನಡೆಯಿತು

Read More »

ಜೈಲಿನಲ್ಲಿ ಟಿವಿ ಬೇಕು ಎಂದಿದ್ದ ದಾಸನಿಗೆ, ಕೇವಲ ದೂರ ‘ದರ್ಶನ’ ವಷ್ಟೇ ವೀಕ್ಷಿಸಲು ಅವಕಾಶ : ಖಾಸಗಿ ವಾಹಿನಿಗಳಿಗೆ ಬ್ರೇಕ್!

ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಸೆಲ್‌ಗೆ ಟಿವಿ ಸೌಲಭ್ಯ ನೀಡಲಾಗಿದೆ. ಟಿವಿಯಲ್ಲಿ ಕೇವಲ ಒಂದೇ ಒಂದು ಚಾನೆಲ್‌ ಬರಲಿದೆ. ಇನ್ನು ಖಾಸಗಿ ಚಾನೆಲ್‌ ನೋಡುವ ಮೂಲಕ ತನ್ನ ಸುದ್ದಿಗಳನ್ನು ತಿಳಿದುಕೊಳ್ಳಬೇಕು ಎಂಬ ನಟನ ಉದ್ದೇಶಕ್ಕೆ ನಿರಾಸೆಯಾಗಿದೆ.   ಹೌದು ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪಗೆ ಟಿವಿ ನೋಡುವ ಸೌಲಭ್ಯ ಸಿಕ್ಕಿದೆ. ಹಲವು ದಿನಗಳ ಬೇಡಿಕೆಯ ಬಳಿಕ ಬಳ್ಳಾರಿ ಜೈಲನಲ್ಲಿ …

Read More »

ನರೇಂದ್ರ ಮೋದಿ ಈ ಬಾರಿ ಐದು ವರ್ಷ ಪೂರೈಸಲ್ಲ: ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರು, ಸೆಪ್ಟೆಂಬರ್‌ 18: ದೇಶದಲ್ಲಿ‌ ಆಗುತ್ತಿರುವ ರಾಜಕಾರಣದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೋದಿ ಅವರು ಈ ಬಾರಿ ಪೂರ್ಣಾವಧಿ ಮುಗಿಸೋದು ಡೌಟು. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಹೆಚ್ಚು ದಿನ ಕೇಂದ್ರ ಸರ್ಕಾರದ ಜೊತೆ ಇರುವುದಿಲ್ಲ ಎನ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭವಿಷ್ಯ ನುಡಿದಿದ್ದಾರೆ.   ಬುಧವಾರ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಟಿಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿ, ಇಂಧಿರಾಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಹುತಸತ್ಮರಾಗಿದ್ದಾರೆ. ಇಂಥಾ ಉನ್ನತ ತ್ಯಾಗ …

Read More »

30 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ

30 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ರಾಮನಗರ : 30 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬೆಸ್ಕಾಂ AEE ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಬೆಸ್ಕಾಂ ಉಪಕಛೆರಿಯಲ್ಲಿ ನಡೆದಿದೆ. ಹೌದು ರಾಮನಗರ ತಾಲೂಕಿನ ಬಿಡದಿ ಬೆಸ್ಕಾಂ ಉಪಕಛೆರಿಯಲ್ಲಿ ಸಹಾಯಕ ಕಾರ್ಯ ಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್ ಪುಟ್ಟಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. …

Read More »

Tatkalನಲ್ಲಿ ಬುಕ್ಕಿಂಗ್ ಮಾಡಿದ ಕೂಡಲೇ ಕನ್ಫರ್ಮ್​ ಆಗುತ್ತೆ ಸೀಟ್, ಕೆಲವರಿಗಷ್ಟೇ ಗೊತ್ತು ಈ ಟಿಪ್ಸ್​!

ನವದೆಹಲಿ(ಸೆ.18): ರೈಲ್ವೆಯನ್ನು ಭಾರತದ ಜೀವನಾಡಿ ಎಂದು ಕರೆಯಲಾಗುತ್ತದೆ. ಪ್ರತಿದಿನ ಕೋಟಿಗಟ್ಟಲೆ ಜನರನ್ನು ತಮ್ಮ ನಿಗದಿತ ಪ್ರದೇಶಕ್ಕೆ ಕೊಂಡೊಯ್ಯುತ್ತದೆ. ನೀವು ಎಂದಾದರೂ ರೈಲ್ವೇ ಮೂಲಕ ಪ್ರಯಾಣಿಸುತ್ತಿದ್ದರೆ, ದೃಢೀಕೃತ ಟಿಕೆಟ್ ಪಡೆಯಲು ನೀವು ಒಂದು ಅಥವಾ ಎರಡು ತಿಂಗಳ ಮುಂಚಿತವಾಗಿ ಟಿಕೆಟ್ ಅನ್ನು ಬುಕ್ ಮಾಡಿರಬೇಕು. ಏಕೆಂದರೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚು ಮತ್ತು ಆಸನಗಳ ಸಂಖ್ಯೆ ಕಡಿಮೆ. ಆದ್ದರಿಂದ, ನೀವು ಎಂದಾದರೂ ತುರ್ತು ಪರಿಸ್ಥಿತಿಯಲ್ಲಿ ರೈಲ್ವೇ ಮೂಲಕ ಪ್ರಯಾಣಿಸಬೇಕಾದರೆ, ರೈಲಿನಲ್ಲಿ …

Read More »