Breaking News

Daily Archives: ಸೆಪ್ಟೆಂಬರ್ 16, 2024

ಪೋಕ್ಸೊ ಪ್ರಕರಣ: ಶಿಕ್ಷಕ ಅಮಾನತು

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಪೋಕ್ಸೊ ಪ್ರಕರಣದಡಿ ಬಂಧಿತನಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮೊಹಮ್ಮದ್ ಸಾದಿಕ್ ಮೀಯಾಬೇಗ್ (39) ಎಂಬುವನನ್ನು ಅಮಾನತು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಬಿ. ಎ. ಮೇಕನಮರಡಿ ತಿಳಿಸಿದ್ದಾರೆ.   10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಶಿಕ್ಷಕನನ್ನು ಚಿಕ್ಕೋಡಿ ಠಾಣೆ ಪೊಲೀಸರು ಬಂಧಿಸಿದ್ದರು.

Read More »

ರಾಜಿ ಸಂಧಾನ: 27,376 ಪ್ರಕರಣಗಳು ಇತ್ಯರ್ಥ

ಬಾಗಲಕೋಟೆ: ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ 27,376 ‍ಪ್ರಕರಣಗಳನ್ನು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ವಿವಿಧ ನ್ಯಾಯಾಲಯಗಳಲ್ಲಿನ 7,151 ಪೈಕಿ 4,819 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 24,107 ಪೈಕಿ 22,557 ಪ್ರಕರಣಗಳು ಇತ್ಯರ್ಥ ಮಾಡಲಾಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ ನೇತೃತ್ವದಲ್ಲಿ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ₹25.11 ಕೋಟಿ ಮೊತ್ತದ ಪ್ರಕರಣಗಳಿಗೆ …

Read More »

ಗೃಹಲಕ್ಷ್ಮಿ’ ಯೋಜನೆ ನಿತ್ಯ, ನಿರಂತರ : 2 ತಿಂಗಳ ಬಾಕಿ ಹಣ ಒಂದೇ ಬಾರಿ ಅಕೌಂಟ್‌ಗೆ ಜಮೆ : ಸಚಿವೆ ಹೆಬ್ಬಾಳ್ಕರ್ ಹೇಳಿಕೆ

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಉಳಿದ ಎರಡು ತಿಂಗಳ ಹಣ ಒಟ್ಟಿಗೆ ಖಾತೆಗೆ ಜಮೆಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದಾರೆ. ಇನ್ನು ಯೋಜನೆ ಸ್ಥಗಿತವಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. 2 ತಿಂಗಳ ಬಾಕಿ ಹಣವನ್ನು ಶೀಘ್ರ ಒಮ್ಮೆಗೆ ಖಾತೆ ಜಮೆ …

Read More »

ಮಂಡ್ಯದಲ್ಲಿ ಮತ್ತೊಂದು ಗಲಾಟೆ

ಗಣೇಶೋತ್ಸವ ಮೆರವಣಿಗೆಯ ವೇಳೆ ಕಲ್ಲು ತೂರಾಟ ಹಾಗೂ ಪೆಟ್ರೋಲ್ ಬಾಂಬ್ ಎಸೆತ ಘಟನೆ ಮಾಸುವ ಬೆನ್ನಲ್ಲೇ ಮಂಡ್ಯದಲ್ಲಿ ತಡರಾತ್ರಿ ಮತ್ತೊಂದು ವಿವಾದ ನಡೆದಿದೆ. ಪಾಂಡವಪುರದಲ್ಲಿರುವ ಆರ್‌ಎಸ್‌ಎಸ್‌ ಕಚೇರಿಗೆ ಏಕಾಏಕಿ ನುಗ್ಗಿದ ಪೊಲೀಸರು ಅಲ್ಲಿದ್ದವರನ್ನು ವಶಕ್ಕೆ ಪಡೆಯಲು ವಿಫಲ ಯತ್ನ ನಡೆಸಿದ್ದಾರೆ. ರೊಚ್ಚಿಗೆದ್ದ ಕಾರ್ಯಕರ್ತರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ರಸ್ತೆ ತಡೆದು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಶರಣ್ ಪಂಪ್‌ವೆಲ್ ಮಂಡ್ಯಕ್ಕೆ ಬಂದಿದ್ದಾರೆಂಬ ಮಾಹಿತಿಯ ಮೇಲೆ ಪೊಲೀಸರು ಆರ್‌ಎಸ್‌ಎಸ್‌ ಕಚೇರಿಗೆ ತೆರಳಿದ್ದರು. ಆದರೆ …

Read More »

ಜೈಲಿನಲ್ಲಿ ಹೇಗಿರಬೇಕು? ವಕೀಲರಿಂದ ದರ್ಶನ್‌ಗೆ ಪತ್ರ

ಬಳ್ಳಾರಿ: ಇಲ್ಲಿನ ಕಾರಾಗೃಹದಲ್ಲಿ ಇರುವ ಕೊಲೆ ಆರೋಪಿ, ನಟ ದರ್ಶನ್‌ಗೆ ವಕೀಲರ ತಂಡವು ಪತ್ರ ಬರೆದು ‘ಜೈಲಿನಲ್ಲಿ ಹೇಗಿರಬೇಕು’ ಎಂಬ ಬಗ್ಗೆ ಸಲಹೆ, ಸೂಚನೆ ನೀಡಿದೆ. ಕೈದಿಗಳಿಗೆ ಕುಟುಂಬಸ್ಥರು, ವಕೀಲರು ಪತ್ರ ಬರೆಯಲು ಅವಕಾಶವಿದೆ. ಕಾರಾಗೃಹದ ಅಧಿಕಾರಿಗಳು ಪತ್ರವನ್ನು ಪರಿಶೀಲಿಸಿ, ದರ್ಶನ್‌ಗೆ ನೀಡಿದ್ದಾರೆ. ‘ವಕೀಲರಿಂದ ಬಂದಿರುವ ಪತ್ರದಲ್ಲಿ ಕೆಲವಷ್ಟು ವೈಯಕ್ತಿಕ ವಿಚಾರಗಳಿವೆ. ಪತ್ರದ ಜೊತೆ ಭಗವದ್ಗೀತೆ ಕಳುಹಿಸಿರುವ ಬಗ್ಗೆ ಉಲ್ಲೇಖವಿದೆ. ಆದರೆ, ಅದು ಪತ್ತೆಯಾಗಿಲ್ಲ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು. …

Read More »

ಮೂಡದ ಜಾಗೃತಿ; ಜೀವಜಲ ಕಲುಷಿತ

ಬೆಳಗಾವಿ: ನಗರದ ಜಲಮೂಲಗಳನ್ನು ರಕ್ಷಣೆ ಮಾಡುವಲ್ಲಿ ಈ ವರ್ಷವೂ ಮಹಾನಗರ ಪಾಲಿಕೆ ಹಿಂದೆ ಬಿದ್ದಿದೆ. ನಗರದಲ್ಲಿ ಎಲ್ಲೆಂದರಲ್ಲಿ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈಗಾಗಲೇ ಐದು ದಿನಗಳ ಗಣಪತಿಗಳನ್ನು ವಿಸರ್ಜನೆಯೂ ಮಾಡಲಾಗಿದೆ. ಈ ಬಾರಿಯೂ ನದಿ, ಹಳ್ಳ, ಬಾವಿ, ಕೆರೆಗಳಲ್ಲಿಯೇ ವಿಸರ್ಜನೆ ಮಾಡಿದ್ದು ಬಹುಪಾಲು ಕಡೆ ಕಂಡುಬಂದಿದೆ. ‘ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸಿ. ಪರಿಸರ ಸ್ನೇಹಿ ಮೂರ್ತಿಗಳನ್ನು ನಿರ್ದಿಷ್ಟವಾದ ಹೊಂಡಗಳಲ್ಲೇ ವಿಸರ್ಜಿಸಿ. ಒಂದುವೇಳೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ)ನಿಂದ ತಯಾರಿಸಿದ್ದ ಮೂರ್ತಿಗಳಿದ್ದರೆ, …

Read More »

ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಬೆಳಗಾವಿವರೆಗೆ ವಿಸ್ತರಿಸಲು ಕ್ರಮ: ಸೋಮಣ್ಣ

ಬೆಳಗಾವಿ: ‘ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿನ ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ಕ್ರಮ ವಹಿಸಲಾಗುವುದು’ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ರೈಲ್ವೆ ಅಧಿಕಾರಿಗಳು ಏನು ತಾಂತ್ರಿಕ ಕಾರಣ ಕೊಟ್ಟಿದ್ದಾರೆ ಗೊತ್ತಿಲ್ಲ. ಆಗ ನಾನು ಸಚಿವನಾಗಿರಲಿಲ್ಲ. ಹಳೆಯದ್ದನ್ನೇ ಕೆದಕಿ ಕೆಲಸ ಮಾಡಲಾಗುವುದಿಲ್ಲ. ಬೆಂಗಳೂರು-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಆರಂಭಿಸುವ ಕುರಿತು …

Read More »

ಮುನಿರತ್ನ ಪ್ರಕರಣದ ಹಿಂದೆ ಸಿ.ಡಿ ಶಿವು ಇದ್ದಾನೆ ?: ಶಾಸಕ ರಮೇಶ ಜಾರಕಿಹೊಳಿ

ಅಥಣಿ: ‘ಮುನಿರತ್ನ ಪ್ರಕರಣದ ಹಿಂದೆ ಸಿ.ಡಿ ಶಿವು ಇದ್ದಾನೆ. ಅವನ ವಿರೋಧಿಗಳೆಲ್ಲ ಜೈಲಿನಲ್ಲಿದ್ದಾರೆ. ಈ ಕೆಲಸ ಬಿಟ್ಟರೆ, ಅವನಿಗೆ ಬೇರೇನೂ ಗೊತ್ತಿಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಕಂಪನಿಯವರು ಮೊದಲು ನನ್ನ ಬಲಿ ಪಡೆದರು. ನಂತರ ದೇವೇಗೌಡರ ಕುಟುಂಬದ ಬಲಿ ಪಡೆದರು. ಈಗ ಮುನಿರತ್ನ ಬಲಿ ಪಡೆದಿದ್ದಾರೆ’ ಎಂದರು. ‘ಸಿ.ಡಿ ಶಿವು …

Read More »

ಶಿಕ್ಷಕರಿಗೆ ‘ರಾಷ್ಟ್ರ ನಿರ್ಮಾಣ ಪ್ರಶಸ್ತಿ’ ಪ್ರದಾನ

ಚಿಕ್ಕೋಡಿ: ‘ಶಿಕ್ಷಕರು ಮಕ್ಕಳಿಗೆ ಗುರಿಯ ಬಗ್ಗೆ ಹೇಳಿಕೊಡಬೇಕು. ಮಕ್ಕಳಲ್ಲಿ ಏಕಾಗ್ರತೆ ಮೂಡಿಸಬೇಕು, ನಗು ನಗುತ್ತ ಪಾಠ ಮಾಡಬೇಕು’ ಎಂದು ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪದ್ಮಶ್ರೀ ರೂಗೆ ಸಲಹೆ ನೀಡಿದರು. ಪಟ್ಟಣದ ಆರ್.ಡಿ ಹೈಸ್ಕೂಲ್‌ನ ಧೋಂಡಿರಾಜ್ ಸಭಾ ಭವನದಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ‘ರಾಷ್ಟ್ರ ನಿರ್ಮಾಣ ಪ್ರಶಸ್ತಿ’ಯನ್ನು ಶಿಕ್ಷಕರಿಗೆ ವಿತರಿಸಿ ಅವರು ಮಾತನಾಡಿದರು. ಶಿಕ್ಷಕ ಉಮೇಶ ತೋಟದ ಮಾತನಾಡಿ, ‘ಶಿಕ್ಷಕರನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಹೀಗಾಗಿ …

Read More »

ಲೋಕ ಅದಾಲತ್‌: 400 ಬಾಕಿ ಪ್ರಕರಣ ಇತ್ಯರ್ಥ

ಸವದತ್ತಿ: ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಅದಾಲತ್‌ನಲ್ಲಿ ಬಾಕಿ ಇರುವ 1388 ಪ್ರಕರಣಗಳನ್ನು ಕೈಗೆತ್ತಿಕೊಂಡು 400 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿ ಸುಮಾರು ₹ 94 ಲಕ್ಷದಷ್ಟು ವಸೂಲಾತಿ ಮಾಡಲಾಯಿತು. 3440 ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ 702ನ್ನು ಇತ್ಯರ್ಥಪಡಿಸಿ ಸುಮಾರು ₹ 1.15 ಕೋಟಿ ವಸೂಲಾತಿ ಮಾಡಲಾಗಿದೆ ಎಂದು ನ್ಯಾಯಾಧೀಶ ಶಶಿಧರ ಎಂ. ಗೌಡ ತಿಳಿಸಿದರು. ಈ …

Read More »