Breaking News

Monthly Archives: ಜೂನ್ 2024

ವೇಶ್ಯಾವಾಟಿಕೆ ಸಂತ್ರಸ್ತೆ ವಿಚಾರಣೆ ಅನ್ಯಾಯ, ಶಿಕ್ಷಿಸಲು ಯಾವುದೇ ಕಾನೂನು ಇಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ವಿಚಾರಣೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆ ದುರುಪಯೋಗ ಮತ್ತು ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವೇಶ್ಯಾವಾಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಸಲ್ಲಿಸಿದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಅರ್ಜಿಯನ್ನು ಪುರಸ್ಕರಿಸಿದೆ. ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ವಿಚಾರಣೆಗೆ ಗುರಿಪಡಿಸದಂತೆ ಹೇಳಿದ್ದು, ಸಂತ್ರಸ್ತ ಮಹಿಳೆಯ ವಿರುದ್ಧ ವಿಚಾರಣಾ ನ್ಯಾಯಾಲಯ ಪ್ರಕ್ರಿಯೆಯನ್ನು …

Read More »

ಪಂಚಾಯತ್‌ಗಳ ಬಲವರ್ಧನೆಗೆ ರಾಜ್ಯ ಸರಕಾರ ಚಿತ್ತ ಹರಿಸಲಿ

ರಾಜ್ಯದಲ್ಲಿ ಜುಲೈ ಒಂದರಿಂದ ಅನ್ವಯವಾಗುವಂತೆ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೂ ನೀಡಲಾಗಿದೆ. ರಾಜ್ಯ ಸರಕಾರದ ಈ ನಿರ್ಧಾರದಿಂದ ಸಾರ್ವಜನಿಕರು ಜನನ ಮತ್ತು ಮರಣ ಪತ್ರಗಳಿಗಾಗಿ ಕಚೇರಿಗಳು ಮತ್ತು ಅಧಿಕಾರಿಗಳ ಬಳಿಗೆ ಅಲೆದಾಟ ನಡೆಸಬೇಕಾದ ಅನಿವಾರ್ಯತೆ ತಪ್ಪಲಿದೆಯಲ್ಲದೆ ಇನ್ನಷ್ಟು ತ್ವರಿತಗತಿಯಲ್ಲಿ ಈ ಪ್ರಮಾಣಪತ್ರಗಳು ಜನರ ಕೈಸೇರಲಿವೆ. ಸದ್ಯದ ನಿಯಮಾವಳಿಯಂತೆ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಮತ್ತು ಆರೋಗ್ಯಾಧಿಕಾರಿಗಳಿಗೆ ಮಾತ್ರವೇ …

Read More »

15ರಿಂದ 26ರವರೆಗೆ ವಿಧಾನಮಂಡಲದ ಅಧಿವೇಶನ?

ಬೆಂಗಳೂರು: ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಜುಲೈ 15ರಿಂದ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಜುಲೈ 15ರಿಂದ 26 ರವರೆಗೆ ಅಧಿವೇಶನ ಕರೆಯಲು ಸರ್ಕಾರ ತೀರ್ಮಾನಿಸಿದೆ. ಜು.4 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.   ಲೋಕಸಭಾ ಚುನಾಣೆಯ ಬಳಿಕ ಮೊದಲ ಬಾರಿಗೆ ಅಧಿವೇಶನ ನಡೆಯುತ್ತಿರುವುದರಿಂದ ಆಡಳಿತ- ವಿಪಕ್ಷದ ಮಧ್ಯೆ ಭಾರಿ ಜಟಾಪಟಿ ನಡೆಯುವ ಸಾಧ್ಯತೆ ಇದೆ.

Read More »

ಬಂಗಾರ ದರ ಮತ್ತೆ ಇಳಿಕೆ

26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) ದರ ಮತ್ತೆ ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ಗಮನಿಸಿ. ನಿನ್ನೆ (ಜೂನ್‌ 25) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 66,250 …

Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ ಚಾರ್ಜ್‍ಶೀಟ್ ಸಲ್ಲಿಕೆಗೆ ಪೊಲೀಸರ ಸಿದ್ಧತೆ

ಬೆಂಗಳೂರು, ಜೂ.25- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಇತರರು ಈಗಾಗಲೇ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದು, ಇತ್ತ ವಿಜಯನಗರ ಉಪವಿಭಾಗದ ಪೊಲೀಸರು ಆದಷ್ಟು ಶೀಘ್ರ ಚಾರ್ಜ್‍ಶೀಟ್ ಸಲ್ಲಿಕೆಗೆ ತಯಾರಿ ನಡೆಸುತ್ತಿದ್ದಾರೆ. ಪೊಲೀಸರು ವಿಶ್ರಾಂತಿ ಪಡೆಯದೆ ತಮಗಿರುವ ಸಮಯಾ ವಕಾಶದಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಲು ಶರವೇಗದಲ್ಲಿ ಹಲವು ಹೊಸ ಸಾಕ್ಷ್ಯಗಳನ್ನು ಸಂಗ್ರಹಿಸಲು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ತಂಡ ರಚನೆ: ಪೊಲೀಸರು ಪ್ರತ್ಯೇಕ ತಂಡಗಳನ್ನಾಗಿ ರಚಿಸಿಕೊಂಡು …

Read More »

ಎಣ್ಣೆಯಲ್ಲೂ ಬಡವರಿಗೆ ಬರೆ, ಶ್ರೀಮಂತರ ಮದ್ಯದ ದರ ಇಳಿಕೆ, ಬಡವರ ಮದ್ಯ ದುಬಾರಿ!

ಬೆಂಗಳೂರು: ಕರ್ನಾಟಕದಲ್ಲಿ ಒಂದೇ ಬಾರಿ ಮದ್ಯದ ದರ ಏರಿಕೆ ಮತ್ತು ಇಳಿಕೆ ಎರಡೂ ಆಗುತ್ತಿದೆ! ಹೌದು, ರಾಜ್ಯದಲ್ಲಿ ಜುಲೈ 1ರಿಂದ ಏಕಕಾಲಕ್ಕೆ ಮದ್ಯದ ದರದಲ್ಲಿ ಏರಿಳಿತ ಆಗುತ್ತಿದೆ. ದುಬಾರಿ ಬೆಲೆಯ ಮದ್ಯಗಳ ದರ (Liquor Price) ಕಡಿಮೆ ಆಗುತ್ತಿದ್ದು, ಈವರೆಗೆ ಕಡಿಮೆ ಹಣಕ್ಕೆ ಮಾರಾಟ ಆಗುತ್ತಿದ್ದ ಮದ್ಯಗಳು ದುಬಾರಿ ಆಗುತ್ತಿವೆ.   ಈ ಮದ್ಯಗಳ ಬೆಲೆ ಇಳಿಕೆ ಇದೇ ಜುಲೈ 1ರಿಂದ ರಾಜ್ಯದಲ್ಲಿ ಬಿಯರ್ ಸೇರಿ ಪ್ರೀಮಿಯಂ ಮದ್ಯದ ಬ್ರಾಂಡ್‌ಗಳ …

Read More »

ಪುಣೆ ಪೋರ್ಷೆ ಕಾರು ಅಪಘಾತ ಕೇಸ್​ನಲ್ಲಿ ಅಪ್ರಾಪ್ತನ ರಿಲೀಸ್; ಅಬ್ಸರ್ವೇಶನ್ ಹೋಮ್​ನಿಂದ ಬಿಡುಗಡೆ

ಪುಣೆ (ಮಹಾರಾಷ್ಟ್ರ): ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಬಾಲಾರೋಪಿಯನ್ನು (17 ವರ್ಷ) ರಿಲೀಸ್​ ಮಾಡಲಾಗಿದೆ. ಅಬ್ಸರ್ವೇಶನ್ ಹೋಮ್‌ನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಮೇ 19 ರಂದು ಮುಂಜಾನೆ ಕಲ್ಯಾಣಿ ನಗರದಲ್ಲಿ ಶ್ರೀಮಂತ ಬಿಲ್ಡರ್‌ನ ಪುತ್ರನಾದ ಅಪ್ರಾಪ್ತ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟ ಎಂಬುವರು ಮೃತಪಟ್ಟಿದ್ದರು. ಪೊಲೀಸರ ಪ್ರಕಾರ ಅಪ್ರಾಪ್ತ …

Read More »

ಇಂದು ರಾತ್ರಿ ಖರ್ಗೆ ನಿವಾಸದಲ್ಲಿ ‘ಇಂಡಿಯಾ’ ನಾಯಕರ ಸಭೆ

ನವದೆಹಲಿ: ಲೋಕಸಭೆ ಉಪಸಭಾಧ್ಯಕ್ಷರ ಆಯ್ಕೆ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಇಂದು ರಾತ್ರಿ 8 ಗಂಟೆಗೆ ಸಭೆ ನಡೆಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ಎನ್‌ಡಿಎ ತನ್ನ ಅಭ್ಯರ್ಥಿಯಾಗಿ ಬಿಜೆಪಿಯ ಓಂ ಬಿರ್ಲಾ ಅವರನ್ನು ಕಣಕ್ಕಿಳಿಸಿದೆ.   ಇಂಡಿಯಾ ಮೈತ್ರಿಕೂಟವು ಕಾಂಗ್ರೆಸ್‌ ಸಂಸದ ಕೊಡಿಕುನ್ನಿಲ್ ಸುರೇಶ್ ಅವರನ್ನು ಕಣಕ್ಕಿಳಿಸಲಾಗಿದೆ. ಲೋಕಸಭೆ ಉಪಸಭಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಆಡಳಿತ ಮತ್ತು ವಿರೋಧ …

Read More »

ಹಣ ದುರುಪಯೋಗ ಆರೋಪ : ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ವಿರುದ್ಧ ‘FIR’ ದಾಖಲು

ಹಾಸನ : ಹಣ ದುರುಪಯೋಗ ಆರೋಪದ ಅಡಿ ಇದೀಗ ಸೂರಜ್ ರೇವಣ್ಣ ಆಪ್ತ ಎನ್ನಲಾದ ಶಿವಕುಮಾರ್ ವಿರುದ್ಧ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆಯಲ್ಲಿ ​FIR ದಾಖಲಾಗಿದೆ. ಹೌದು ಸೂರಜ್ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹಿನ್ನಲೆ ಜೆಡಿಎಸ್​ ಕಾರ್ಯಕರ್ತ ಠಾಣೆಗೆ ದೂರ ನೀಡಿದ್ದ. ಆದರೆ, ಆತ ಹಣಕ್ಕಾಗಿ ಅರೋಪಿಸಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್, ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ್ದರು. ಇದೀಗ ಹಣ …

Read More »

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.100 ರಷ್ಟು ಸಿಗಲಿವೆ ಔಷಧಿಗಳು : ಗುಂಡೂರಾವ್

ಸರ್ಕಾರಿ ಆಸ್ಪತ್ರೆಯಲ್ಲಿಯೇ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯ ಒದಗಿಸಬೇಕು. ಆ ನಿಟ್ಟಿನಲ್ಲಿ ಔಷಧಿಗಳು ಸೇರಿದಂತೆ ಶೇ.100 ರಷ್ಟು ಔಷಧಿಗಳು ದೊರೆಯುವಂತಾಗಲು ಪ್ರಯತ್ನಿಸಲಾಗಿದೆ. ಇನ್ನು ಮೂರು ನಾಲ್ಕು ತಿಂಗಳಲ್ಲಿ ಶೇ.100 ರಷ್ಟು ಗುರಿ ತಲುಪಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಅವರು ಹೇಳಿದರು.     ರಾಜ್ಯದಲ್ಲಿ 219 ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಿ ಸುಮಾರು 800 ಯಂತ್ರಗಳನ್ನು ಅಳವಡಿಸಲಾಗಿದೆ. ಹೊಸ ತಾಲ್ಲೂಕು ಕೇಂದ್ರಗಳಲ್ಲಿಯೂ ಸಹ ಆರೋಗ್ಯಕ್ಕೆ …

Read More »