ರಬಕವಿ-ಬನಹಟ್ಟಿ : ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಒಳ್ಳೆಯಶಿಕ್ಷಣ ನೀಡಬೇಕು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಒಳ್ಳೆಯ ಶಿಕ್ಷಣ ಕೊಡುತ್ತಾರೆ ಎಂಬ ಭ್ರಮೆ ಈಗಿನ ಪೀಳಿಗೆಯ ಜನರಲ್ಲಿ ಹೆಚ್ಚು ನೋಡುತ್ತೇವೆ ಅದರಲ್ಲೂ ನಗರ ಪ್ರದೇಶಗಳ ಪೋಷಕರು ಮಗು ಹುಟ್ಟುವ ಮೊದಲೇ ಖಾಸಗಿ ಶಾಲೆಗಳಲ್ಲಿ ಲಕ್ಷ ಲಕ್ಷಗೆಟ್ಟಲೆ ಡೊನೇಶನ್ ಕೊಟ್ಟು ಮಕ್ಕಳನ್ನು ಸೇರಿಸಲು ತುದಿಗಾಲಿನಲ್ಲಿ ನಿಲ್ಲುತ್ತಾರೆ ಆದರೆ ಈ ಬಾಗಲಕೋಟೆ ಜಿಲ್ಲೆಯ ನಾವಲಗಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ …
Read More »Monthly Archives: ಜೂನ್ 2024
ಸಿಬಿಐ ತನಿಖೆಯಿಂದ ಸಿಎಂ ಹೇಗೆ ಭಾಗಿಯಾಗಿದ್ದಾರೆಂದು ತಿಳಿಯಲಿದೆ: ಜೋಶಿ
ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ ಆದಿಯಾಗಿ ಎಲ್ಲರೂ ಭಾಗಿಯಾಗಿದ್ದಾರೆ. ಹೀಗಾಗಿ ಮೊದಲು ಮಂತ್ರಿಯನ್ನು ಬಂಧಿಸಬೇಕು. ನಂತರ ಸಿಬಿಐ ತನಿಖೆಗೆ ವಹಿಸಬೇಕು. ಆಗ ಸಿಎಂ ಇದರಲ್ಲಿ ಹೇಗೆ ಭಾಗಿಯಾಗಿದ್ದಾರೆಂಬ ಸಂಗತಿ ಗೊತ್ತಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವುದರಲ್ಲಿ, ದಾರಿ ತಪ್ಪಿಸುವಲ್ಲಿ ನಿಸ್ಸೀಮವಾಗಿದೆ. ಇದೀಗ ವಾಲ್ಮೀಕಿ ನಿಗಮದ ಹಗರಣದಲ್ಲಿ ಯಾವುದೇ ಸಂಪರ್ಕವಿಲ್ಲದ ಒಂಬತ್ತು …
Read More »ಸರ್ಕಾರ ಕೂಡಲೇ ನಾಗೇಂದ್ರ ರಾಜೀನಾಮೆ ಪಡೆಯಬೇಕು: ಶೆಟ್ಟರ್
ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಒತ್ತಾಯಿಸಿದರು. ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ನಾಚಿಕೆಯಿಲ್ಲ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ನ ಆಂತರಿಕ ಹಾಗೂ ಸಿಎಂ, ಡಿಸಿಎಂ ನಡುವಿನ ಕಲಹ ಹೊರಗಡೆ ಬರಲಿದೆ. ಕಾಂಗ್ರೆಸ್‌ನವರ ಅಸಮಾಧಾನದಿಂದ ಸರ್ಕಾರ ಬೀಳುತ್ತದೆ. ಹೀಗಿದ್ದಾಗ ಬಿಜೆಪಿಯವರು ಆಪರೇಷನ್ ಕಮಲ ಮಾಡುವ ಅವಶ್ಯಕತೆಯಿಲ್ಲ …
Read More »ಕಾಳಮ್ಮವಾಡಿ ಡ್ಯಾಂನಲ್ಲಿ ಹೆಚ್ಚಿದ ಸೋರಿಕೆ
ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಜೀವಜಲ ಒದಗಿಸುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ಕಾಳಮ್ಮವಾಡಿ ಜಲಾಶಯದಲ್ಲಿ ಕಳೆದ ಏಳೆಂಟು ವರ್ಷಗಳಿಂದ ನೀರು ಸೋರಿಕೆ ಆಗುತ್ತಿದ್ದು, ಅಲ್ಲಿನ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಒಂದು ವೇಳೆ ಜಲಾಶಯ ಆಸುಪಾಸು ಪ್ರಬಲ ತೀವ್ರತೆಯ ಭೂಕಂಪ ಸಂಭವಿಸಿದರೆ ಜಲಾಶಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ಕೊಲ್ಲಾಪುರದಲ್ಲಿ ದೂಧಗಂಗಾ ನದಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಒಪ್ಪಂದದಿಂದ ಕಾಳಮ್ಮವಾಡಿ ಜಲಾಶಯ ನಿರ್ಮಿಸಲಾಗಿದೆ. ಮಹಾರಾಷ್ಟ್ರ ಶೇ.80ರಷ್ಟು ಅನುದಾನ ಒದಗಿಸಿದ್ದರೆ, ಕರ್ನಾಟಕ ಶೇ.15ರಷ್ಟು …
Read More »ಕೌಟುಂಬಿಕ ಗಲಾಟೆಯಲ್ಲಿ ಓರ್ವನ ಕಿವಿ ಕತ್ತರಿಸಿದ ದುರುಳರು
ಚಿಕ್ಕೋಡಿ: ಕೌಟುಂಬಿಕ ಕಲಹದ ಹಿನ್ನೆಲೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದ ಘಟನೆಯಲ್ಲಿ ವ್ಯಕ್ತಿಯೋರ್ವನ ಕಿವಿ ಕತ್ತರಿಸಿದ ಘಟನೆ ಚಿಕ್ಕೋಡಿ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಜನವಾಡ ಗ್ರಾಮದ ಸಿದ್ದು ಪೂಜಾರಿಗೆ ಆತನ ಪತ್ನಿಯ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಸಿದ್ದು ಪೂಜಾರಿ ಕಿವಿ ತುಂಡಾಗಿತ್ತು. ಜತೆಗೆ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡ ತಂದೆಯನ್ನು ಕೂಡಲೇ ಬೈಕ್ ಮೇಲೆ ಕೂರಿಸಿಕೊಂಡ ಮಗ ಮಾಳು …
Read More »ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಆರಂಭಿಸಲು ಮಾರ್ಗಸೂಚಿ
ಬೆಂಗಳೂರು, ಜೂನ್ 02: 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆ. ಶಾಲೆಗಳು ಬಾಗಿಲು ತೆರೆದಿದ್ದು, ಮಕ್ಕಳು ಆಗಮಿಸುತ್ತಿದ್ದಾರೆ. ಶಾಲೆಗಳಲ್ಲಿ ‘ಕ್ಷೀರಭಾಗ್ಯ ಯೋಜನೆ’ ಆರಂಭಿಸುವ ಕುರಿತು ಶಾಲೆಗಳಿಗೆ, ಮುಖ್ಯ ಶಿಕ್ಷಕರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ‘ಕ್ಷೀರಭಾಗ್ಯ ಯೋಜನೆ’ಯಡಿ ಮಕ್ಕಳಿಗೆ ಶಾಲೆಯಲ್ಲಿ ಹಾಲು ನೀಡಲಾಗುತ್ತದೆ. 2024-25ನೇ ಸಾಲಿಗೆ ಅಗತ್ಯವಿರುವ ಹಾಲಿನ ಪುಡಿ ಆಯಾ ತಿಂಗಳ ಬೇಡಿಕೆಗೆ ಅನುಗುಣವಾಗಿ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಸಮಾಲೋಚಿಸಿ ಶಾಲಾವಾರು ಹಾಗೂ ತಾಲ್ಲೂಕುವಾರು …
Read More »150 ಜಿಲ್ಲಾಧಿಕಾರಿಗಳಿಗೆ ಅಮಿತ್ ಶಾ ಕರೆ
ನವದೆಹಲಿ: ಜೂನ್ 4 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 150 ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂಬ ಆರೋಪದ ಕುರಿತು ಚುನಾವಣಾ ಆಯೋಗವು (ಇಸಿ) ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರಿಂದ ಭಾನುವಾರ ಮಾಹಿತಿ ಕೇಳಿದೆ. ಜೈರಾಮ್ ರಮೇಶ್ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಭಾನುವಾರ ಸಂಜೆ 7 ಗಂಟೆಯೊಳಗೆ ತಮ್ಮ ಆರೋಪಗಳ …
Read More »ಸಿಎಂ, ಡಿಸಿಎಂ ಗೆ ನಾನು ಹೇಳುತ್ತೇನೆ : ದಿಂಗಾಲೇಶ್ವರಶ್ರೀ,
ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆ ನಡಯಲಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ದಿಂಗಾಲೇಶ್ವರ ಶ್ರೀಗಳು ಪೂರ್ಣ ಪ್ರಮಾಣದ ರಾಜಕೀಯ ಅಖಾಡಕ್ಕಿಳಿದ್ದಾರೆ. ಬಾಗಲಕೋಟೆಯ ಎಸ್.ಆರ್.ಪಾಟೀಲ್ ಪರ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದು, ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋ ಒಂದು ವೈರಲ್ ಆಗಿದೆ. ಹೌದು ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಒಪ್ಪಿಸುತ್ತೇನೆ …
Read More »