Breaking News

Monthly Archives: ಜೂನ್ 2024

ಜೈಲಿನ ಕೈದಿಗಳಿಗೆ ಅಕ್ಷರ ಪಾಠ

ಹಾವೇರಿ: ಅಪರಾಧ ಮಾಡಿ ಜೈಲು ಸೇರಿರುವ ಅನಕ್ಷರಸ್ಥ ಕೈದಿಗಳಿಗೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯು ಅಕ್ಷರ ಕಲಿಸುತ್ತಿದೆ. ಪ್ರತಿ ದಿನವೂ ನಡೆಯುವ ವಿಶೇಷ ತರಗತಿಗೆ 29 ವಿಚಾರಣಾಧೀನ ಕೈದಿಗಳು ಹಾಜರಾಗುತ್ತಾರೆ. ಅವರಿಗೆ ಕಲಿಕಾ ಸಾಮಗ್ರಿಗಳನ್ನೂ ಉಚಿತವಾಗಿ ನೀಡಲಾಗುತ್ತದೆ. ಶಾಲೆ ಮೆಟ್ಟಿಲು ಹತ್ತದ ಮತ್ತು ಶಿಕ್ಷಣದಿಂದ ವಂಚಿತರಾದ ವಿಚಾರಣಾಧೀನ ಕೈದಿಗಳನ್ನು ಗುರುತಿಸಿರುವ ಇಲಾಖೆ, ಅವರಿಗೆ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿ, ನುರಿತ ಶಿಕ್ಷಕರಿಂದ ಪಾಠ ಮಾಡಿಸುತ್ತಿದೆ. ಕಾರಾಗೃಹದಲ್ಲಿ ಗ್ರಂಥಾಲಯವಿದ್ದು, 3 ಸಾವಿರಕ್ಕೂ ಹೆಚ್ಚು …

Read More »

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಚುನಾವಣೆ: ಇಲ್ಲಿ ಪಕ್ಷ, ಅಲ್ಲಿ ವ್ಯಕ್ತಿ ನಿಷ್ಠ

ಬೆಳಗಾವಿ: ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಸಾಂಪ್ರದಾಯಿಕ ಮತಗಳು ಇರುತ್ತವೆ. ನಾವು ಏನೇ ತಿಪ್ಪರಲಾಗ ಹಾಕಿದರೂ ಆ ಮತದಾರರು ನಂಬಿಕೊಂಡ ಪಕ್ಷ ಹಾಗೂ ನಂಬಿಕೊಂಡ ವ್ಯಕ್ತಿಗೇ ಬೆಂಬಲ ನೀಡುತ್ತಾರೆ… ಶಾಸಕ ಲಕ್ಷ್ಮಣ ಸವದಿ ಅವರ ಮಾತು ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕನ್ನಡಿ ಹಿಡಿದಂತಿದೆ. ಈ ಹಿಂದಿನ ಎಲ್ಲ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ನೋಡಿದರೆ; ಬೆಳಗಾವಿಯಲ್ಲಿ ಪಕ್ಷನಿಷ್ಠೆ- ಚಿಕ್ಕೋಡಿಯಲ್ಲಿ ವ್ಯಕ್ತಿನಿಷ್ಠೆ ಗೆಲುವು ಕಂಡಿದ್ದು ಸ್ಪಷ್ಟವಾಗುತ್ತದೆ. ಬೆಳಗಾವಿಯಲ್ಲಿ ಬಿಜೆಪಿ ಪರ, ಚಿಕ್ಕೋಡಿಯಲ್ಲಿ …

Read More »

ಶಕ್ತಿ’ ಪ್ರಯಾಣಿಕರ ಕಾಯುವ ಫಜೀತಿ!

ಕಲಬುರಗಿ: ಬಸ್‌ ನಿರ್ವಾಹಕರು (ಕಂಡಕ್ಟರ್‌) ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಟಿಕೆಟ್‌ ಕೊಡುವ ಜೊತೆಗೆ ಅವರು ಟೆಕೆಟ್‌ ಪಡೆದ ಸ್ಥಳ ಅಥವಾ ಊರಿನಲ್ಲಿಯೇ ಇಳಿಯುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಶಕ್ತಿ’ ಯೋಜನೆ ಜಾರಿಗೆ ಬಂದ ನಂತರ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಚಾರ ಹೆಚ್ಚಾಗಿದೆ. ಈ ಯೋಜನೆಯ ಸದುಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಆಧಾರ್‌ ಕಾರ್ಡ್‌ ಪ್ರದರ್ಶಿಸಿ ಉಚಿತವಾಗಿ …

Read More »

ಶುಲ್ಕ ಪಾವತಿಸು ಎಂದಿದ್ದಕ್ಕೆ Toll ಬೂತ್‌ ಅನ್ನೇ ಬುಲ್ಡೋಜರ್‌ ನಿಂದ ಧ್ವಂಸಗೊಳಿಸಿದ!

ನವದೆಹಲಿ: ಟೋಲ್‌ ಬೂತ್‌ ಮಾರ್ಗದಲ್ಲಿ ಬುಲ್ಡೋಜರ್‌ ಅನ್ನು ಚಲಾಯಿಸಿಕೊಂಡು ಬಂದ ಚಾಲಕನ ಬಳಿ ಶುಲ್ಕ ಪಾವತಿಸುವಂತೆ ಟೋಲ್‌ ಸಿಬಂದಿ ಕೇಳಿದ್ದಕ್ಕೆ, ಇದರಿಂದ ರೊಚ್ಚಿಗೆದ್ದು ಟೋಲ್‌ ಬೂತ್‌ ಅನ್ನೇ ಧ್ವಂಸಗೊಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಟೋಲ್‌ ಬೂತ್‌ ನ ಕಬ್ಬಿಣದ ಗೇಟ್‌ ಅನ್ನು ಬುಲ್ಡೋಜರ್‌ ನಿಂದ ಕಿತ್ತೆಸೆಯುತ್ತಿರುವ ದೃಶ್ಯವನ್ನು ಟೋಲ್‌ ಸಿಬಂದಿಗಳು ವಿಡಿಯೋ ಮೂಲಕ ಸೆರೆ ಹಿಡಿದಿದ್ದಾರೆ. ದೆಹಲಿ-ಲಕ್ನೋ ನ್ಯಾಷನಲ್‌ ಹೈವೇಯ ಹಾಪುರ್‌ ಟೋಲ್‌ ಬೂತ್‌ ನಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ …

Read More »

ಕೊಲೆಯಾದ ರೇಣುಕಾಸ್ವಾಮಿ ಕೂಡ ದರ್ಶನ್ ಫ್ಯಾನ್​? ಪವಿತ್ರಾಗೆ ಅಶ್ಲೀಲ ಮೆಸೇಜ್​ ಮಾಡಲು ಅದೊಂದೆ ಕಾರಣವಂತೆ!

ಬೆಂಗಳೂರು: ಯಾರೂ ನಿರೀಕ್ಷಿಸದ ಘಟನೆಯೊಂದು ರಾಜ್ಯದಲ್ಲಿಂದು ನಡೆದಿದೆ. ಅಸಂಖ್ಯಾತ ಅಭಿಮಾನಿಗಳ ಬಳಗವನ್ನೇ ಹೊಂದಿರುವ ನಟ ದರ್ಶನ್​ ಕೊಲೆ ಪ್ರಕರಣವೊಂದರಲ್ಲಿ ಬಂಧನವಾಗಿದ್ದು, ಈ ಸುದ್ದಿ ರಾಜ್ಯಾದ್ಯಂತ ತಲ್ಲಣವನ್ನೇ ಸೃಷ್ಟಿ ಮಾಡಿದೆ. ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಅವರ ಗೆಳತಿ ನಟಿ ಪವಿತ್ರಾ ಗೌಡರನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯ ನಿವಾಸಿ. ಜೂನ್​ 8ರಂದು ಮನೆಯಿಂದ ಹೊರಟ ರೇಣುಕಾಸ್ವಾಮಿ ಮತ್ತೆ ವಾಪಸ್​ ಮನೆಗೆ ಬರಲೇ ಇಲ್ಲ. ಇದರಿಂದ …

Read More »

ಮೂಡಲಗಿ: ಘಟಪ್ರಭಾ ನದಿಯಲ್ಲಿ ವ್ಯಕ್ತಿ ಶವವಾಗಿ ಪತ್ತೆ

ಮೂಡಲಗಿ: ಘಟಪ್ರಭಾ ನದಿಯಲ್ಲಿ ವ್ಯಕ್ತಿ ಶವವಾಗಿ ಪತ್ತೆ ಮೂಡಲಗಿ: ತಾಲ್ಲೂಕಿನ ಅವರಾದಿ ಸೇತುವೆಯಿಂದ ಘಟಪ್ರಭಾ ನದಿಯಲ್ಲಿ ಭಾನುವಾರ ಟ್ರ್ಯಾಕ್ಟರ್‌ ಮಗುಚಿ ಬಿದ್ದಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಮಂಗಳವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಚುರಕಾ ಸುರೇನ್‌ ಮೃತ ವ್ಯಕ್ತಿ.   ಸತತ ಮಳೆಯಿಂದ ಮುಳುಗಡೆಯಾಗಿದ್ದ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ, ಅಪಾಯವನ್ನೂ ಲೆಕ್ಕಿಸದೆ ಈ ಸೇತುವೆ ಮೇಲೆ ಸಾಗುತ್ತಿದ್ದಾಗ, ಟ್ರ್ಯಾಕ್ಟರ್‌ನಲ್ಲಿದ್ದ 10 ಮಂದಿ ನೀರಿನ ಸೆಳವಿಗೆ …

Read More »

‘ರಾಜ್ಯ ಸರ್ಕಾರಿ ನೌಕರ’ರ ವರ್ಗಾವಣೆಗೆ ‘ಸಿಎಂ ಸಿದ್ಧರಾಮಯ್ಯ’ ಈ ಮಾನದಂಡ ಫಿಕ್ಸ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಸಿಎಂ ಸಿದ್ಧರಾಮಯ್ಯ ಖಡಕ್ ನಿರ್ಧಾರ ಕೈಗೊಂಡಿದ್ದಾರೆ. ಅದೇ ನೌಕರರ ವರ್ಗಾವಣೆ ನಾನು ಬೇರೆ ಯಾವುದಕ್ಕೂ ಮಣೆ ಹಾಕೋದಿಲಲ್. ಆ ಮಾನದಂತ ಪೂರೈಸಿದ್ರೆ ಮಾತ್ರವೇ ವರ್ಗಾವಣೆ ಅನುಮತಿಸೋದಾಗಿ ಎಚ್ಚರಿಸಿದ್ದಾರೆ. ಇಂದು ಸಿಎಂ ಸಿದ್ಧರಾಮಯ್ಯ ಅವರು ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿ ನಿಮ್ಮ …

Read More »

ಬೀನ್ಸ್‌ ಬೆಲೆ ಇಳಿಕೆ; ಟೊಮೆಟೊ ದುಬಾರಿ

ಮೈಸೂರು: ದ್ವಿಶತಕ ದಾಟಿದ್ದ ಬೀನ್ಸ್‌ ಬೆಲೆಯು ಈ ವಾರ ಅರ್ಧದಷ್ಟು ಇಳಿಕೆ ಆಗಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಟೊಮೆಟೊ ಧಾರಣೆ ಏರುಮುಖವಾಗಿದೆ. ವಾರದ ಹಿಂದಷ್ಟೇ ಬೀನ್ಸ್‌ ಪ್ರತಿ ಕೆ.ಜಿ.ಗೆ ₹200ರವರೆಗೆ ಮಾರಾಟವಾಗಿ ಕೊಳ್ಳುವವರ ಕಣ್ಣಲ್ಲಿ ನೀರು ತರಿಸಿತ್ತು. ರಾಜ್ಯದಾದ್ಯಂತ ಕಳೆದೊಂದು ತಿಂಗಳಿಂದ ಹದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಬೀನ್ಸ್‌ ಬೆಳೆಯಲು ಆರಂಭಿಸಿದ್ದು, ಮಾರುಕಟ್ಟೆಗೆ ಉತ್ಪನ್ನದ ಆವಕ ಏರತೊಡಗಿದೆ. ಈ ಹಿನ್ನೆಲೆಯಲ್ಲಿ ಇದರ ಬೆಲೆ ಗಣನೀಯ ಇಳಿಕೆ ಕಂಡಿದೆ. ಮೈಸೂರು …

Read More »

ವರ್ಷದ ಬಳಿಕ ಬಾಗಿಲು ತೆರೆಯಲಿದೆ ಸಂಸದರ ಕಚೇರಿ

ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರ ಅಧಿಕೃತ ಕಚೇರಿಯು ಸುಮಾರು ಒಂದು ವರ್ಷದ ಬಳಿಕ ಬಾಗಿಲು ತೆರೆಯಲಿದೆ. ಇದಕ್ಕಾಗಿ ಸಿದ್ಧತೆ ನಡೆದಿದೆ. ಜನರು ದೂರು, ಅಹವಾಲು ಸಲ್ಲಿಕೆಗೆ ಅನುಕೂಲವಾಗುವಂತೆ ಜಿಲ್ಲಾಕೇಂದ್ರದಲ್ಲಿ ಸಂಸದರ ಅಧಿಕೃತ ಕಚೇರಿ ತೆರೆಯಲಾಗುತ್ತದೆ. ಉತ್ತರ ಕನ್ನಡ ಸಂಸದರ ಕಚೇರಿ ಕಳೆದ ಹಲವು ತಿಂಗಳುಗಳಿಂದ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿತ್ತು ಎಂಬ ಆರೋಪಗಳಿದ್ದವು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಯ ಬಾಗಿಲು …

Read More »

ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆ, 27.5 ಲಕ್ಷ ರೈತರಿಗೆ ಬರ ಪರಿಹಾರ: ಕೃಷಿ ಸಚಿವ ಮಾಹಿತಿ

ಬೆಂಗಳೂರು, ಜೂನ್​ 10: 5 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾದರೆ, 4 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ (Rain) ಆಗಿದೆ. ಆ ಮೂಲಕ ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ(Krishna Byre Gowda)ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷದ ಮುಂಗಾರು ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಹೀಗಾಗಿ ಮುಂದಿನ 15 ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ …

Read More »