Breaking News

Daily Archives: ಜೂನ್ 27, 2024

ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ

ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 37ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ‌ ಥಾವರಚಂದ್ ಗೆಹ್ಲೋತ್ ಅವರು ಪದವೀಧರರಿಗೆ ಪ್ರಮಾಣ ಪತ್ರ ಪದಾನ ಮಾಡಿದರು. ಬಿ.ಎಸ್ಸಿ (ಆನರ್ಸ್‌) ಕೃಷಿ ಸ್ನಾತಕ ಪದವಿ ಕೋರ್ಸ್‌ನಲ್ಲಿ ಶ್ರೀಯಾ ಎಸ್.ಕರಿ ಅವರು ಮೂರು ಚಿನ್ನದ ಪದಕ ಪಡೆದಿದ್ದಾರೆ. ವಿಶ್ವವಿದ್ಯಾಲಯದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 933 ಮಂದಿ ವಿವಿಧ ಪದವಿ ಪೂರೈಸಿದ್ದಾರೆ. ಪಿಎಚ್.ಡಿ 69, ಸ್ನಾತಕೋತ್ತರ …

Read More »

ಡಿಸಿಎಂ ಹುದ್ದೆ’ ಬಗ್ಗೆ ಯಾರೂ ಮಾತನಾಡುವಂತಿಲ್ಲ : ಸಿಎಂ

ಬೆಂಗಳೂರು : ಡಿಸಿಎಂ ಹುದ್ದೆ ಬಗ್ಗೆ ಯಾರೂ ಮಾತನಾಡುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಚಿವರು ಹಾಗೂ ಶಾಸಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ಶಾಸಕರು, ಸಚಿವರು ಡಿಸಿಎಂ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಸಿಎಂ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಶಾಸಕರು ಈ ಬಗ್ಗೆ ಬಹಿರಂಗವಾಗಿ ಮಾತನಾಡಬೇಡಿ.. ಇದರಿಂದ ಸರ್ಕಾರಕ್ಕೆ ಮುಜುಗರವಾಗುತ್ತದೆ. ಇಂತಹ ಹೇಳಿಕೆಗಳು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಡಿಸಿಎಂ ಹುದ್ದೆ ಬಗ್ಗೆ ಯಾರೂ ಮಾತನಾಡುವಂತಿಲ್ಲ ಎಂದು ಸಿಎಂ …

Read More »

ಕೆಟ್ಟು ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ: ಓರ್ವ ಸ್ಥಳದಲ್ಲೇ ಮೃತ್ಯು, 10ಕ್ಕೂ ಹೆಚ್ಚು ಗಾಯ

ಕಾನಾಹೊಸಹಳ್ಳಿ,-ವಿಜಯನಗರ: ಕಾನಾಹೊಸಹಳ್ಳಿ ಠಾಣಾ ವ್ಯಾಪ್ತಿಯ ಆಲೂರು ಹುಲಿಕೆರೆ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ50 ರಲ್ಲಿ ಗುರುವಾರ ತಡರಾತ್ರಿ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲ್ಲರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಒಬ್ಬರು ಸಾವನ್ನಪ್ಪಿದ್ದು , ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಕೃಷ್ಣಪ್ಪ (62 ವರ್ಷ) ಮೃತ ದುರ್ದೈವಿಯಾಗಿದ್ದು ಟಿಟಿ ವಾಹನವು ಕಲಬುರಗಿ ಯಿಂದ ಚಿಕ್ಕಬಳ್ಳಾಪುರ ತಾಲೂಕಿನ ಆರೋಡಿ ಗ್ರಾಮಕ್ಕೆ ತೆರಳುತ್ತಿದ್ದು ಕಲಬರುಗಿಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಸ್ವ ಗ್ರಾಮ ಆರೋಡಿಗೆ ವಾಪಸು …

Read More »

ರಾಜ್ಯದಲ್ಲಿ ಆತಂಕ ಮೂಡಿಸಿದ ‘ಡೇಂಘಿ’ ಜ್ವರ : ಹಾವೇರಿಯಲ್ಲಿ ಮಹಾಮಾರಿಗೆ ಮೊದಲ ಬಲಿ!

ಹಾವೇರಿ : ರಾಜ್ಯದಲ್ಲಿ ಡೇಂಘಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಹಾವೇರಿ ಜಿಲ್ಲೆಯಲ್ಲಿ ಡೇಂಘಿ ಮಹಾಮಾರಿಗೆ ಮೊದಲ ಬಲಿಯಾಗಿದ್ದು, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ 30 ವರ್ಷದ ಮಹಿಳೆ ಡೇಂಘಿಗೆ ಸಾವನ್ನಪ್ಪಿದ್ದಾರೆ. ಹೌದು ಮಹಾಮಾರಿ ಡೇಂಘಿಗೆ 30 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.ಹಾನಗಲ್ ತಾಲೂಕಿನ ನರೇಗಲ್ಲ ಗ್ರಾಮದ ಗೌಸಿಯ (30) ಎಂಬ ಮಹಿಳೆ ಇದೀಗ ಸಾವನ್ನಪ್ಪಿದ್ದಾರೆ.ಹಾವೇರಿ ನಗರದ ಮಲ್ಲಾಡದ ಆಸ್ಪತ್ರೆಯಲ್ಲಿ ನಿನ್ನೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಜ್ವರದಿಂದ …

Read More »

ಭಾರೀ ಮಳೆಗೆ ಧರೆ ಕುಸಿದು ಮನೆಗೆ ಹಾನಿ, ಮಣ್ಣಿನಡಿಯಲ್ಲಿ ಸಿಲುಕಿದ ಮಕ್ಕಳ ರಕ್ಷಣೆ

ಪುತ್ತೂರು: ತಾಲೂಕಿನೆಲ್ಲೆಡೆ ಭಾರಿ ಮಳೆಗೆ ಅನೇಕ ಕಡೆ ಧರೆ ಕುಸಿದ ಘಟನೆ ನಡೆಯುತ್ತಿದ್ದು, ಪುತ್ತೂರು ಬನ್ನೂರಿನ ಜೈನರಗುರಿ ಸಮೀಪ ಮಜೀದ್ ಎಂಬರ ಮನೆ ಮೇಲೆ ಧರೆ ಕುಸಿದ ಪರಿಣಾಮ ಮನೆ ಹಾನಿಗೊಂಡ ಮತ್ತು ನಿದ್ದೆಯಲ್ಲಿದ್ದ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಜೂ.27 ರ ನಸುಕಿನ ಜಾವ ನಡೆದಿದೆ. ಬನ್ನೂರು ಜೈನರಗುರಿ ಮಜೀದ್ ಎಂಬವರ ಮನೆಯ ಪಕ್ಕದ ಧರೆಯೊಂದರ ಮಣ್ಣು ಮಳೆಗೆ ಸಡಿಲಗೊಂಡು ಮನೆ ಮೇಲೆ ಕುಸಿದು ಬಿದ್ದಿದೆ. ಮಜೀದ್ ಮತ್ತು …

Read More »

3 ದಿನ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ

ಬೆಂಗಳೂರು : ರಾಜ್ಯಕ್ಕೆ ಬರುವ ಅನುದಾನಗಳ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೆ ನಾಳೆ ಮೂರನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅಭಿನಂದನೆ ತಿಳಿಸಲಿದ್ದಾರೆ. ಹೌದು ಇಂದಿನಿಂದ ಮೂರು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯಕ್ಕೆ ಬರಬೇಕಿರುವ ಅನುದಾನಗಳ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾಗಿ ಮುಖ್ಯಮಂತ್ರಿ …

Read More »