Breaking News

Daily Archives: ಜೂನ್ 4, 2024

ಸೋತಲ್ಲಿ ಸಚಿವರ ತಲೆದಂಡ ಸಾಧ್ಯವೇ: ಜಗದೀಶ ಶೆಟ್ಟರ್‌ ಪ್ರಶ್ನೆ

ಬೆಳಗಾವಿ: ‘ಕಾಂಗ್ರೆಸ್‌ ಸೋತ ಕಡೆಯಲೆಲ್ಲ ಸಚಿವರ ತಲೆದಂಡ ಸಾಧ್ಯವೇ? ಹೀಗೆ ತಲೆದಂಡ ಮಾಡಿದರೆ, ರಾಜ್ಯ ಸರ್ಕಾರವೇ ತಲೆದಂಡ ತೆರಬೇಕಾಗುತ್ತದೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ‘ಸಚಿವರ ಮಕ್ಕಳು, ಬಂಧುಗಳಿಗೆ ಟಿಕೆಟ್‌ ಕೊಟ್ಟು ತಂತ್ರ ಹೂಡಿದ ಕಾಂಗ್ರೆಸ್‌ ಈಗ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಗೊತ್ತಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ ನನಗೆ 51 ಸಾವಿರ ಮತ ಮುನ್ನಡೆ ಸಿಕ್ಕಿದೆ. ಅವರ ಯಾವ ಗ್ಯಾರಂಟಿಗಳನ್ನೂ ಜನ ಒಪ್ಪಿಲ್ಲ’ …

Read More »

ಚಿಕ್ಕೋಡಿ: ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾಗೆ 90,834 ಮತಗಳ ಅಂತರದಿಂದ ಗೆಲುವು

ಚಿಕ್ಕೋಡಿ: ಲೋಕಸಭೆ ಕ್ಷೇತ್ರಕ್ಕೆ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮೊದಲ ಯತ್ನದಲ್ಲೇ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ 90,834 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇಲ್ಲಿನ ಆರ್‌.ಡಿ ಕಾಲೇಜು ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು. ಮಧ್ಯಾಹ್ನದವರೆಗೆ 22 ಸುತ್ತುಗಳ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲಿ 8,533 ಮತಗಳ ಮುನ್ನಡೆ ಸಾಧಿಸಿದ ಪ್ರಿಯಾಂಕಾ, ಎರಡನೇ ಸುತ್ತಿನಲ್ಲಿ 20,314 …

Read More »

ಬಿಟ್‌ ಕಾಯಿನ್ ಪ್ರಕರಣ: ಡಿವೈಎಸ್ಪಿ ಮತ್ತೆ ಪರಾರಿ

ಬೆಂಗಳೂರು: ಬಿಟ್ ಕಾಯಿನ್ (ಬಿಟಿಸಿ) ಹಗರಣದ ಸಾಕ್ಷ್ಯಗಳನ್ನು ನಾಶಪಡಿಸಿದ್ದ ಪ್ರಕರಣದ ಆರೋಪಿಯಾಗಿರುವ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರ ಮತ್ತೆ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ. ಬಿಟ್ ಕಾಯಿನ್ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಬಂಧಿಸಿದ್ದ ಅಂದಿನ ಸಿಸಿಬಿ ಪೊಲೀಸರು, ಆತನಿಂದ ಹಲವು ವಸ್ತುಗಳನ್ನು ಜಪ್ತಿ ಮಾಡಿ ಸಾಕ್ಷ್ಯ ನಾಶಪಡಿಸಿದ್ದರು. ಈ ಸಂಬಂಧ ಅಂದಿನ ಸಿಸಿಬಿ ಇನ್‌ಸ್ಪೆಕ್ಟರ್‌ಗಳಾಗಿದ್ದ ಶ್ರೀಧರ್ …

Read More »

9 ಸ್ಥಾನ ಗೆಲುವಿಗೆ ಸಿದ್ಧರಾಮಯ್ಯ ಆಡಳಿತ ಕಾರಣ: ಶಾಸಕ ಬಸವರಾಜ ರಾಯರಡ್ಡಿ

ಯಲಬುರ್ಗಾ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉತ್ತಮ ಆಡಳಿತ ನಡೆಸುತ್ತಿರುವುದನ್ನು ಮೆಚ್ಚಿಕೊಂಡು ರಾಜ್ಯದ ಜನ ಬೆಂಬಲಿಸಿದ್ದರಿಂದ 9 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ’ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಿರೀಕ್ಷೆಯಂತೆ ಫಲಿತಾಂಶ ಪ್ರಕಟಗೊಂಡಿದೆ. ಇನ್ನೆರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಮುಖ್ಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ತರ ಸಾಧನೆಯಾಗಿದೆ. …

Read More »

ಲೋಕಸಭಾ ಚುನಾವಣೆ ಫಲಿತಾಂಶ: ಬೆಳಗಾವಿಯಲ್ಲಿ ತಮ್ಮ ತಾಕತ್ತು ತೋರಿಸಿದ ಜಾರಕಿಹೊಳಿ ಬ್ರದರ್ಸ್

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಪುತ್ರ ಮೃಣಾಲ್​ ಅಂಬರೀಶ್​ ಸೋಲು ಕಂಡಿದ್ದಾರೆ. ಮೃಣಾಲ್ ಸೋಲಿಸಲು ಜಾರಕಿಹೊಳಿ ಸಹೋದರರು ಸೈಲೆಂಟ್ ಆಗಿ ಸೂತ್ರ ಹೆಣೆದಿದ್ದರು. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸೇಡು ತೀರಿಸಿಕೊಂಡಿದ್ದು, ಜಗದೀಶ್ ಶೆಟ್ಟರ್ ಗೆಲ್ಲಿಸುವಲ್ಲಿ ಜಾರಕಿಹೊಳಿ ಸಹೋದರರ ಯಶಸ್ವಿ ಆಗಿದ್ದಾರೆ.   ಬೆಳಗಾವಿ, ಜೂನ್​ 04: ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬಗಳಲ್ಲಿ ಬೆಳಗಾವಿಯ ಜಾರಕಿಹೊಳಿ ಕುಟುಂಬವೂ …

Read More »

ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು,ಜೂ.4- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಯಾಗಿದ್ದಾರೆ. ವಿಜೇತ ಕಾಗೇರಿ ಅವರು 3,33,590 ಮತಗಳ ಅಂತರದಿಂದ ಗೆದ್ದಿದ್ದಾರೆ. ಒಟ್ಟು 7,77,887 ಮತಗಳು ಪಡೆದರೆ, ಕಾಂಗ್ರೆಸ್‌‍ ಅಂಜಲಿ ನಿಂಬಾಳ್ಕರ್‌ ಅವರು 4,43,296 ಮತಗಳನ್ನು ಪಡೆದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌‍ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು 2,84,620 ಮತಗಳ …

Read More »

ಬಂಗಾಳದಲ್ಲಿ ದೀದೀ ಮುಂದೆ ಯಾರದ್ದೂ ನಡೆಯಲ್ಲ, ಮತ್ತೊಮ್ಮೆ ಸಾಬೀತು! BJPಗೆ ನೆಲೆ ಇಲ್ಲ

ಕೊಲ್ಕತ್ತ: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಜಿದ್ದಾಜಿದ್ದಿ ಎದುರಿಸಿಕೊಂಡೇ ಬಂದಿರುವ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಮತ್ತೊಮ್ಮೆ ತನ್ನ ಬಲವನ್ನು ಸಾಬೀತುಪಡಿಸಿದೆ. ಬಂಗಾಳದಲ್ಲಿ ದೀದೀ ಮುಂದೆ ಯಾರದ್ದೂ ನಡೆಯಲ್ಲ ಅನ್ನೋದನ್ನು ಲೋಕಸಭಾ ಚುನಾವಣೆಯಲ್ಲಿ ನಿರೂಪಿಸಿದ್ದಾರೆ. ಬಿಜೆಪಿಯ ಶತಪ್ರಯತ್ನಗಳಾಚೆಗೂ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಬಂಗಾಳದ 42 ಸೀಟ್​ಗಳಲ್ಲಿ 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಟಿಎಂಸಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿಯ 8 ಸ್ಥಾನ ಕಸಿದುಕೊಳ್ಳಲಿರುವ …

Read More »

ನಾಳೆ ದೆಹಲಿಯಲ್ಲಿ INDIA ಬಣ ನಾಯಕರ ಸಭೆ-ಶರದ್ ಪವಾರ್

ಮುಂಬೈ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ನಿರೀಕ್ಷಿತ ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದು, ಸರ್ಕಾರ ರಚನೆಯಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೆಳೆಯಲು ಬಿಜೆಪಿ ಹಾಗೂ ವಿಪಕ್ಷಗಳ ಮೈತ್ರಿಕೂಟದ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಮುಂದಿನ ಕಾರ್ಯತಂತ್ರ ಕುರಿತು ಚರ್ಚಿಸಲು ನಾಳೆ …

Read More »

ಹೂಡಿಕೆದಾರರಿಗೆ ಬಿಗ್ ಶಾಕ್: 21.5 ಲಕ್ಷ ಕೋಟಿ ನಷ್ಟ: ಭಾರೀ ಕುಸಿತ ಕಂಡ ಸೆನ್ಸೆಕ್ಸ್

ಮುಂಬೈ: ಸೆನ್ಸೆಕ್ಸ್ 4000 ಅಂಕಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ಪ್ರಸ್ತುತ 3132.12 ಪಾಯಿಂಟ್‌ಗಳ ಇಳಿಕೆಯೊಂದಿಗೆ 73,336.66 ನಲ್ಲಿ ವಹಿವಾಟು ನಡೆಸುತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶಗಳ ಮತ ಎಣಿಕೆ ನಡುವೆ ಸೆನ್ಸೆಕ್ಸ್ 4,000 ಅಂಕಗಳ ಕುಸಿತ, ನಿಫ್ಟಿ 22,300 ಕ್ಕಿಂತ ಕೆಳಗೆ ಕುಸಿದಿದೆ.   ಷೇರು ಮಾರುಕಟ್ಟೆ ಹೂಡಿಕೆದಾರರು 21.5 ಲಕ್ಷ ಕೋಟಿ ಸಂಪತ್ತಿನ ನಷ್ಟ ಅನುಭವಿಸಿದ್ದಾರೆ. ಬಿಎಸ್‌ಇಯಲ್ಲಿ ಎಲ್ಲಾ ಲಿಸ್ಟೆಡ್ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಬಂಡವಾಳವು 404.42 ಲಕ್ಷ ಕೋಟಿ ರೂ.ಗೆ …

Read More »

ಲೋಕಸಭೆ ಚುನಾವಣೆ ಫಲಿತಾಂಶ 2024: ಸಚಿವರ ಮಕ್ಕಳಲ್ಲಿ ಯಾರ್ಯಾರು ಗೆದ್ರು? ಯಾರು ಸೋತ್ರು?

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಪುತ್ರಿ,​ ಯುವ ಮುಖ ಸಂಯಕ್ತಾ ಪಾಟೀಲ್​ (Samyukta Shivanand Patil) ಅವರನ್ನು ಅಖಾಡಕ್ಕಿಳಿಸಿತ್ತು. ಆದರೆ ಸಂಯುಕ್ತ ಪಾಟೀಲ್​ ಅವರಿಗೆ ಸೋಲಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (Priyanka Jarakiholi) ಅವರು ಕಣದಲ್ಲಿದ್ದರು. ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು, …

Read More »