Breaking News

Daily Archives: ಜೂನ್ 2, 2024

ಭ್ರೂಣಹತ್ಯೆ ಪ್ರಕರಣ. ಮತ್ತೆ ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಮಹಾಲಿಂಗಪುರ: ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಣದ ಜಯಲಕ್ಷ್ಮಿ ನಗರದ ನಕಲಿ ವೈದ್ಯೆ ಕವಿತಾ ಬಾಡನವರ ಅವರಿಂದ ಗರ್ಭಪಾತ ಮಾಡಿಸಿಕೊಂಡು ಮೃತಳಾದ ಮಹಾರಾಷ್ಟ್ರದ ಮೂಲದ ಸೋನಾಲಿ ಕದಂ ಕೇಸ್‌ಗೆ ಸಂಬಂಧಿಸಿದಂತೆ ಪ್ರಕರಣದ ಪ್ರಥಮ, ದ್ವಿತೀಯ ಆರೋಪಿಗಳಾದ ಸಾಂಗಲಿ ಜಿಲ್ಲೆಯ ದುದಗಾಂವ ಗ್ರಾಮದ ನಿವಾಸಿಗಳಾದ ಮೃತ ಸೋನಾಲಿ ತಂದೆ ಸಂಜಯ ಗೌಳಿ, ತಾಯಿ ಸಂಗೀತಾ ಗೌಳಿ ಅವರನ್ನು ಮಹಾಲಿಂಗಪುರ ಪೊಲೀಸರು ಗುರುವಾರ ರಾತ್ರಿ ಬಂಧಿಸಿ, ಶುಕ್ರವಾರ …

Read More »

ವಾಲ್ಮೀಕಿ ನಿಗಮದ ಅಕ್ರಮ: ಇಬ್ಬರು ಅಧಿಕಾರಿಗಳ ಸೆರೆ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ಬೇರೆಡೆ ವರ್ಗಾವಣೆಯಾದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ಇಬ್ಬರು ಅಧಿಕಾರಿಗಳನ್ನು ಬಂಧಿಸಿದೆ. ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಮತ್ತು ಮಾಜಿ ಲೆಕ್ಕಾಧಿಕಾರಿ ಪರಶುರಾಮ್‌ ಜಿ.ದುರ್ಗಣ್ಣನವರ್‌ ಬಂಧಿತರು. ನಿಗಮದ ವ್ಯವಸ್ಥಾಪಕ ಎ.ರಾಜಶೇಖರ್‌ ಮೇ 28ರಂದು ನಗರದ ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿತ್ತು. …

Read More »

ತಿಹಾರ್ ಜೈಲಿಗೆ ಶರಣಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್!

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಹವಾಲಾ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಮನಿಲಾಂಡರಿಂಗ್ ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನು ಜೂನ್ 1 ರಂದು ಕೊನೆಗೊಂಡ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ತಿಹಾರ್ ಜೈಲಿಗೆ ಬಂದು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಈ ಹಿಂದೆ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ನಡೆಸಲು ಅವರಿಗೆ ಜಾಮೀನು ನೀಡಲಾಗಿತ್ತು. …

Read More »

ನೆಲ-ಜಲ ರಕ್ಷಣೆ ಎಲ್ಲರ ಹೊಣೆ: ಶಿವಾಚಾರ್ಯ ಸ್ವಾಮೀಜಿ

ಹಾವೇರಿ: ‘ನೆಲ, ಜಲ, ಭಾಷೆ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಈ ದಿಸೆಯಲ್ಲಿ ಗಂಗಯ್ಯ ಕುಲಕರ್ಣಿ ಅವರು ರೈತ ಸಮುದಾಯಕ್ಕೆ ಸಾವಯವ ಕೃಷಿಯ ಬಗ್ಗೆ ಸಲಹೆ ಕೊಡುವುದರ ಮೂಲಕ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕೆಲಸ ಮಾಡಿದ್ದಾರೆ. ಭೂತಾಯಿಯನ್ನು ವಿಷಮುಕ್ತ ಮಾಡಿ ಮನುಷ್ಯನ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಅವರ ನಿರಂತರ ಪ್ರಾಮಾಣಿಕ ಪರಿಶ್ರಮದ ಪಲವಾಗಿ ಅವರಿಗೆ ರಾಷ್ಟ್ರಿಯ ಪ್ರಶಸ್ತಿ ಸಿಕ್ಕಿದ್ದು ನಮಗೆ ತುಂಬಾ ಸಂತಸವಾಗಿದೆ’ ಎಂದು ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ …

Read More »

ಮತ ಎಣಿಕೆಗೆ ಕೌಂಟ್‌ಡೌನ್: ಜಿಲ್ಲೆಯಲ್ಲಿ ಸಿದ್ಧತೆ

 ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂನ್ 4ರಂದು ನಡೆಯಲಿದ್ದು, ಎಣಿಕೆ ಕಾರ್ಯಕ್ಕಾಗಿ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಂಡಿದೆ. ಚಾಮರಾಜನಗರದ ತಾಲೂಕಿನ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ಬೆಳಗ್ಗೆ (ಜೂನ್‌ 04) 8 ಗಂಟೆಗೆ ಆರಂಭ ಆಗಲಿದೆ.   ಎಣಿಕೆ ಕಾರ್ಯವನ್ನು ಸುಲಲಿತವಾಗಿ ನಡೆಸುವ ಸಲುವಾಗಿ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ಸ್, ಯುಪಿಎಸ್, ಟೆಲಿಫೋನ್, ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಣಿಕೆ ಕಾರ್ಯವನ್ನು ಶಾಂತಿ ಮತ್ತು ಸುವ್ಯವಸ್ಥೆ ಮತ್ತು …

Read More »

ಬೈಲಹೊಂಗಲ: ಸಂಭ್ರಮದಿಂದ ನೆರವೇರಿದ ಮಲ್ಲಯ್ಯ ದೇವಸ್ಥಾನದ ಜಾತ್ರಾ ಮಹೋತ್ಸವ

ಬೈಲಹೊಂಗಲ: ಪಟ್ಟಣದ ಮರಡಿ ಗಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದಿಂದ ನೆರವೇರಿತು. ಪಟ್ಟಣದ ಎತ್ತರ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಪದ್ಧತಿಯಂತೆ ಈ ವರ್ಷವೂ ಮರಡಿ ಗಲ್ಲಿ ಹಿರಿಯರು, ರೈತ ಕುಟುಂಬಸ್ಥರು ಮಲ್ಲಯ್ಯಸ್ವಾಮಿ ಪ್ರತಿಮೆಗೆ ಅಲಂಕಾರ, ಅಭಿಷೇಕ ಮಾಡಿ ಭಕ್ತಿಯಿಂದ ಪ್ರಾರ್ಥಿಸಿದರು.‌ ಮಲ್ಲಯ್ಯನ ಪ್ರತಿಮೆ ಎದುರು‌ ಕವಲ ಕಟ್ಟಿ ವರ ಕೇಳಿದರು. ಮಳೆ, ಬೆಳೆ ಸಂಪನ್ನವಾಗಲಿ, ರೈತಾಪಿ ಕುಟುಂಬ, ನಾಡು ಸಮೃದ್ಧವಾಗಿರಲಿ ಎಂದು ಪ್ರಾರ್ಥಿಸಿದರು. ಬೆಟ್ಟದಲ್ಲಿರುವ ಮಲ್ಲಯ್ಯನ‌ ದೇವಸ್ಥಾನಕ್ಕೆ ಬೆಳಿಗ್ಗೆಯಿಂದ ರಾತ್ರಿಯ …

Read More »

ಅಟಮೂರ ಬಾಳಪ್ಪ ಪ್ರತಿಮೆ ಪ್ರತಿಷ್ಠಾಪನೆಗೆ ಮನವಿ

ಬೈಲಹೊಂಗಲ: ತಾಲ್ಲೂಕಿನ ಬೇವಿನಕೊಪ್ಪ ಗ್ರಾಮದ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ನೂತನ ಸೇತುವೆಯ ಮುಂಭಾಗದಲ್ಲಿ ವೀರಕೇಸರಿ ಅಮಟೂರ ಬಾಳಪ್ಪನವರ ಮೂರ್ತಿಯನ್ನು ನಿರ್ಮಿಸಿ ಸುತ್ತಲೂ ಉದ್ಯಾನ ನಿರ್ಮಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು. ಗ್ರಾಮದಿಂದ ಶಾಸಕರ ನಿವಾಸಕ್ಕೆ ಭೇಟಿ ನೀಡಿದ ಗ್ರಾಮಸ್ಥರು, ಬೇವಿನಕೊಪ್ಪ, ಸ್ವಾತಂತ್ರ್ಯ ಹೋರಾಟಗಾರ ಬಾಳಪ್ಪನವರ ತ್ಯಾಗ, ಬಲಿದಾನ, ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ಮಕ್ಕಳಿಗೆ ಪರಿಚಯಿಸಬೇಕು ಎಂದು ತಿಳಿಸಿದರು.

Read More »

ಭ್ರೂಣ ಹತ್ಯೆ ತಡೆಯಲು ರಾಜ್ಯ ಸರ್ಕಾರ ವಿಫಲ: ಹೇಮಲತಾ ನಾಯಕ

ಕೊಪ್ಪಳ: ‘ರಾಜ್ಯದಲ್ಲಿ ಮೇಲಿಂದ ಮೇಲೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಇವುಗಳನ್ನು ತಡೆಯಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ವಿಧಾನಪರಿಷತ್‌ ಸದಸ್ಯೆ ಬಿಜೆಪಿಯ ಹೇಮಲತಾ ನಾಯಕ ಆರೋಪಿಸಿದರು. ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯ ಸರ್ಕಾರ ಸಮಾನತೆ ವಿಚಾರದಲ್ಲಿ ನಿರ್ಲಕ್ಷ್ಯ ಮನೋಭಾವನೆ ಹೊಂದಿದೆ. ಈ ಕೃತ್ಯದಲ್ಲಿ ತೊಡಗಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೆಣ್ಣು ಮಕ್ಕಳಿಗೆ ಗ್ಯಾರಂಟಿಗಳನ್ನು ನೀಡುತ್ತಿರುವ …

Read More »

ದೌರ್ಬಲ್ಯವೇ ಚಟಕ್ಕೆ ಕಾರಣ: ಬ್ರಹ್ಮಕುಮಾರಿ ಯೋಗಿನಿ

ಕೊಪ್ಪಳ: ‘ಮನುಷ್ಯನಲ್ಲಿ ಮಾನಸಿಕ ಹಾಗೂ ಅಧ್ಯಾತ್ಮಿಕ ಬಲ ಕಡಿಮೆಯಾಗಿರುವುದೇ ತಂಬಾಕಿಗೆ ಬಲಿಯಾಗಲು ಮುಖ್ಯ ಕಾರಣ’ ಎಂದು ಬ್ರಹ್ಮಕುಮಾರಿ ಯೋಗಿನಿ ಹೇಳಿದರು. ಈಶ್ವರೀಯ ವಿಶ್ವವಿದ್ಯಾಲಯ ತನ್ನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಂಬಾಕು ನಿಷೇಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಬುದ್ಧಿಜೀವಿಯಾದ ಮನುಷ್ಯನಿಗೆ ಒಳ್ಳೆಯದನ್ನು ಸ್ವೀಕಾರ ಮಾಡಲು ಆಗುತ್ತಿಲ್ಲ, ಕೆಟ್ಟದ್ದನ್ನು ಬಿಡಲೂ ಸಾಧ್ಯವಾಗುತ್ತಿಲ್ಲ. ಅನೇಕ ದುಶ್ಚಟಗಳಿಗೆ ದಾಸನಾಗುತ್ತಿದ್ದು, ದಿನೇ ದಿನೇ ಮನುಷ್ಯನಲ್ಲಿ ದುಃಖ ಹಾಗೂ ಅಶಾಂತಿ ಹೆಚ್ಚುತ್ತಿದೆ. ಇಂತಹ ಸ್ಥಿತಿಗೆ ಮೂಲ ಕಾರಣ ಮನುಷ್ಯನ …

Read More »

ಭೂ ಸವಕಳಿ ತಡೆಗೆ ಗಿಡಗಳ ನೆಡಿ: ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ

ಅಳವಂಡಿ: ರೈತರು ಭೂ ಸವಕಳಿ ತಡೆಯಲು ಗಿಡಗಳನ್ನು ನೆಡಬೇಕು ಹಾಗೂ ಜಮೀನಿನ ಮಣ್ಣು ಹಳ್ಳ ಕೊಳ್ಳ ಸೇರದಂತೆ ತಡೆಯಬೇಕು. ಫಲವತ್ತಾದ ಹಾಗೂ ಪೋಷಕಾಂಶಗಳನ್ನು ಹೊಂದಿದ ಭೂಮಿಯಿಂದ ಮಾತ್ರ ಸಮೃದ್ದ ಬೆಳೆ ಬೆಳೆಯಬಹುದು. ಕಾರಣ ರೈತರು ಭೂಸವಕಳಿ ತಡೆಯಲು ಬದು ನಿರ್ಮಾಣದ ಜೊತೆಗೆ ಗಿಡಗಳನ್ನು ನೆಡಿ ಎಂದು ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ ಕುಷ್ಟಗಿ ಹೇಳಿದರು. ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಜಿಪಂ ಕೊಪ್ಪಳ, ಜಲಾನಯನ ಅಭಿವೃದ್ದಿ ಇಲಾಖೆ, ಕೃಷಿ ಇಲಾಖೆ, ವಿಶ್ವ ಬ್ಯಾಂಕ …

Read More »