Breaking News

Daily Archives: ಮೇ 10, 2024

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ಕಲಬುರಗಿ, : ಕಲಬುರಗಿಯಲ್ಲಿ (Kalaburagi) ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ (Congress) ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ (Murder) ಮಾಡಿದ ಬಗ್ಗೆ ವರದಿಯಾಗಿದೆ. ಜಾವೀದ್ ಚಿನ್ನಮಳ್ಳಿ (27) ಎಂಬವರನ್ನು ಹತ್ಯೆಗೈದ ದುಷ್ಕರ್ಮಿಗಳು ಮೃತದೇಹವನ್ನು ಬಾವಿಗೆ ಎಸೆದಿದ್ದಾರೆ. ದುಷ್ಕರ್ಮಿಗಳು ಜಾವೀದ್​​ರನ್ನು ಅಮಾವಾಸ್ಯೆ ದಿನ ಪಾರ್ಟಿ ಮಾಡಲು ಕರೆದೊಯ್ದಿದ್ದರು. ಜಮೀನಿನಲ್ಲಿ ಪಾರ್ಟಿ ಮಾಡಿದ್ದರು. ನಂತರ ಹತ್ಯೆ ಮಾಡಿ ಬಾವಿಗೆ ಎಸೆದಿದ್ದಾರೆ. ಕಾಂಗ್ರೆಸ್ ಪರ …

Read More »

ಣಬಿಸಿಲಿಗೆ ತತ್ತರಿಸಿದ ಕೋಳಿ ಸಾಕಾಣಿಕೆ ಉದ್ಯಮ,

ಹಾವೇರಿ, : ಈ ಭಾರಿಯ ರಣಬಿಸಿಲಿಗೆ (Sunlight) ಜನ ಜಾನುವಾರು ತತ್ತರಿಸಿ ಹೋಗಿವೆ. ಅದರಲ್ಲೂ ಇತ್ತೀಚಿಗೆ ಪ್ರತಿನಿತ್ಯ 39 ರಿಂದ 40 ರಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದ ಜನರು ಹೈರಾಣಾಗಿದ್ದು ಒಂದು ಕಡೆಯಾದರೆ, ಈ ಭಾರಿಯ ರಣಬಿಸಿಲಿಗೆ ಕೋಳಿ ಉದ್ಯಮಿದಾರರು(Poultry farming)ತತ್ತರಿಸಿ ಹೋಗಿದ್ದಾರೆ. ರಣಬಿಸಿಲಿಗೆ ಕೋಳಿಗಳು ಸಾವನ್ನಪ್ಪದ್ದು, ಮೊಟ್ಟೆಯ ಉತ್ಪಾದನೆ ಕಡಿಮೆಯಾಗುತ್ತಿದೆ. ಇದರಿಂದ ಕೋಳಿ ಉದ್ಯಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾರಿಯ ಬಿಸಿಲಿಗೆ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಕಂಗೆಟ್ಟು ಹೋಗಿವೆ. ಇದಕ್ಕೆ ಕೋಳಿ …

Read More »

ಮಕ್ಕಳ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್

ಬೆಳಗಾವಿ, : ಪಟ್ಟಣದ ನ್ಯೂ ಗಾಂಧಿನಗರ ಮತ್ತು ಉಜ್ವಲ‌್ ನಗರದಲ್ಲಿ ನಿನ್ನೆ(ಮೇ.10) ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ ಮೊಹಮ್ಮದ್ ಖೈಫ್ ಹಾಗೂ ಹೈಜಲ್ ಎಂಬುವವರ ಮೇಲೆ ಏಕಾಏಕಿ ಬೀದಿ ನಾಯಿಗಳ (stray dogs) ಗ್ಯಾಂಗ್ ದಾಳಿ ಮಾಡಿದೆ. ಈ ವೇಳೆ ಗಮನಿಸಿದ ಹೈಜಲ್ ಕೂಡಲೇ ನಾಯಿಗಳನ್ನ ಓಡಿಸಲು ಬಂದಿದ್ದಾನೆ. ಆದರೆ, ನಾಲ್ಕೈದು ನಾಯಿಗಳು ಇರುವ ಕಾರಣಕ್ಕೆ ಆತನ ಮೇಲೆಯೂನಾಯಿಗಳು ದಾಳಿನಡೆಸಿವೆ. ಇದನ್ನ ಗಮನಿಸಿದ ಸ್ಥಳೀಯರು ಕೂಡಲೇ ಇಬ್ಬರು ಮಕ್ಕಳನ್ನ ನಾಯಿ …

Read More »

BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ

ಮಾಲ್ಕನ್‌ಗಿರಿ: ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 5 ಲಕ್ಷ ಜನರಿಗೆ ಅಯೋಧ್ಯೆಯ ರಾಮ ಮಂದಿರದ ದರ್ಶನ ಒದಗಿಸಲಾಗುವುದು ಎಂದು ಅಸ್ಸಾಂ ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಹೇಳಿದ್ದಾರೆ. ಇಲ್ಲಿನ ಕಾಲಿಮೇಳದಲ್ಲಿ ಚುನಾವಣ ರ್‍ಯಾಲಿಯಲ್ಲಿ ಮಾತನಾಡಿ, ಅಸ್ಸಾಂನಲ್ಲಿ ರಾಜ್ಯ ಸರಕಾರದ ಖರ್ಚಿನಲ್ಲೇ 1 ಲಕ್ಷ ಜನರನ್ನು ಅಯೋಧ್ಯೆಗೆ ಕರೆದೊಯ್ಯಲು ನಿರ್ಧರಿಸಿದ್ದೇನೆ. ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೂತನ ಬಿಜೆಪಿ ಸಿಎಂ ಈ ತೀರ್ಥಯಾತ್ರೆ ಸೌಲಭ್ಯ ಒದಗಿಸುತ್ತಾರೆ ಎಂದು ತಿಳಿಸಿದರು.ಬಂಗಾಲಿ ಶಿಕ್ಷಕರ ನೇಮಕ, ಗ್ರಾಮಗಳ …

Read More »

ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ

ಮೈಸೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮಾಡುತ್ತಿದೆ. ನಮ್ಮ ಪೊಲೀಸರ ಬಗ್ಗೆ ನಂಬಿಕೆ‌ಯಿದೆ. ನಿಷ್ಪಕ್ಷಪಾತ ತನಿಖೆ ಮಾಡಿ ವರದಿ ಕೊಡುತ್ತಾರೆ‌. ಸಿಬಿಐಗೆ ಪ್ರಕರಣ ವಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸ್ ಕೊಡಲಿಲ್ಲ. ಬಿಜೆಪಿ ಅವರು ಸಿಬಿಐ ಗೆ ಕರಪ್ಶನ್ ಬ್ಯೂರ್ ಆಫ್ ಇನ್ವೇಸ್ಟಿಗೇಶನ್ ಎನ್ನುತ್ತಿದ್ದರು. ಚೋರ್ ಬಚಾವ್ ಸಂಸ್ಥೆ ಎಂದು ದೇವೇಗೌಡರು ಹೇಳಿದ್ದರು. …

Read More »

ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ದೇಶವನ್ನು ಒಡೆಯಲು ಸಹ ಹೇಸುವುದಿಲ್ಲ. ಇಂಡಿ ಒಕ್ಕೂಟದ ಹೇಳಿಕೆಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಸ್ಯಾಮ್ ಪಿತ್ರೊಡಾ ನೀಡಿದ್ದಾರೆ ಎನ್ನಲಾದ ಜನಾಂಗಿ ದ್ವೇಷದ ಹೇಳಿಕೆ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಹಾಗೂ ಐಎನ್ ಡಿಐಎ ಒಕ್ಕೂಟಕ್ಕೆ ದೇಶದ ಒಗ್ಗಟ್ಟಾಗಿರುವುದು ಇಷ್ಟವಿಲ್ಲ ಎಂದು ಹರಿಹಾಯ್ದರು.   ಕಾಂಗ್ರೆಸ್ ಸಂಸದ ಡಿ.ಕೆ. …

Read More »

ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ ತೀರ್ಥಹಳ್ಳಿ : ಹೋಟೆಲ್ ಮಂದಾರ್ತಿ ಗ್ರಾಂಡ್ ಎದುರು ನಿಂತಿರುವ ಟಿಪ್ಪರ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಆಗುಂಬೆ ಬಳಿ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ದೊಡ್ಡಮನೆಕೇರಿಯ ಸಲ್ಮಾನ್ ಎಂಬಾತ ಕ್ಯಾಂಟರ್ ಒಳಗೆ ಮಲಗಿದ್ದರು. ಈ ವೇಳೆ ಡ್ರೈವರ್ ನಿಯಂತ್ರಣ ತಪ್ಪಿ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಲ್ಮಾನ್ ಸ್ಥಳದಲ್ಲೇ ಪ್ರಾಣ ಬಿಟ್ಟರೆ ಡ್ರೈವರ್ …

Read More »

ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

ದಾಂಡೇಲಿ : ದಾಂಡೇಲಿಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಕಾರು ಮತ್ತು ಹಳಿಯಾಳದಿಂದ ದಾಂಡೇಲಿಗೆ ಬರುತ್ತಿದ್ದ ದ್ವಿಚಕ್ರ ವಾಹನವೊಂದು ದಾಂಡೇಲಿ ತಾಲೂಕಿನ ಕರ್ಕಾ ಆಲೂರು ಮಧ್ಯ ಪರಸ್ಪರ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.   ಹಳಿಯಾಳ ತಾಲೂಕಿನ ಮದ್ನಳ್ಳಿ ದುಸಗಿ ನಿವಾಸಿ 28 ವರ್ಷ ವಯಸ್ಸಿನ ಸುನೀಲ್ ಬೋಕ್ನೆಕರ್ ಎಂಬತಾನೇ ಗಂಭೀರ ಗಾಯಗೊಂಡ ದ್ವಿಚಕ್ರವಾಹನ ಸವಾರನಾಗಿದ್ದಾನೆ. ದಾಂಡೇಲಿಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. …

Read More »

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ಚುನಾವಣಾ ನಂತರ ಜೆಡಿಎಸ್‌ ಜತೆ ಮೈತ್ರಿ ಇರಬೇಕೋ, ಬೇಡವೋ ಎಂಬುವುದನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ಚುನಾವಣೆ ಅವಲೋಕನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಯಾವುದೇ ನಕಾರಾತ್ಮಕ ಅಂಶಗಳು ಮೂಡಿಲ್ಲ. ಶೀಘ್ರವೇ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯುವ ಚುನಾವಣೆ ಅವಲೋಕನ ಸಭೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ. …

Read More »

ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

ಬೆಂಗಳೂರು: ತಪ್ಪು ಮಾಡಿದವರಿಗೆ ಈ ನೆಲದ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗಬೇಕು ಎಂಬುದು ಬಿಜೆಪಿಯ ಸ್ಪಷ್ಟ ನಿಲುವು. ಆದರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡುವಿನ ವೈಯಕ್ತಿಕ ಕೌಟುಂಬಿಕ ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ. ಬಿಜೆಪಿಯಂತೂ ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಸ್ಪಷ್ಟಪಡಿಸಿದರು. ಲೋಕದ ಡೊಂಕ ನೀವೇಕೆ ತಿದ್ದುವಿರಿ ಎಂಬ ಡಿಸಿಎಂ ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ …

Read More »