Breaking News

Monthly Archives: ಏಪ್ರಿಲ್ 2024

ವಿಡಿಯೋದಲ್ಲಿರುವ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ್ರೆ ಸರ್ಕಾರವೇ ಹೊಣೆ : ಹೆಚ್‌ಡಿಕೆ

ಹುಬ್ಬಳ್ಳಿ: ಮಹಿಳೆಯರು ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಆಯೋಗ ಪತ್ರ ಬರೆಯುವ ಮೊದಲೇ ಎಸ್‌ಐಟಿ ತನಿಖೆ ಘೋಷಣೆ ಸಿಎಂ ಮಾಡಿದ್ದಾರೆ. ಯಾರೆಲ್ಲಾ ಮಹಿಳೆಯರ ಕೈಯಿಂದ ದೂರು ಬರೆಸಿಕೊಂಡಿದ್ದಾರೆ, ಯಾರೆಲ್ಲಾ ಇದ್ದರು. ಐದಾರು ವರ್ಷಗಳ ಹಿಂದೆ ನಡೆದಿರುವ ಪ್ರಕರಣ ಈಗ ಯಾಕೆ? ಇಷ್ಟು ವರ್ಷ ಯಾಕೆ ದೂರು ನೀಡಿಲ್ಲ ಎಂದು …

Read More »

3 ತಿಂಗಳ ಹಿಂದೆಯೇ ಪ್ರಜ್ವಲ್ ರೇವಣ್ಣ ವಿಡಿಯೋ ಗುಟ್ಟು ರಟ್ಟು ಮಾಡಿದ್ದ ಬಿಜೆಪಿ ನಾಯಕ

ಬೆಂಗಳೂರು/ಹಾಸನ, (ಏಪ್ರಿಲ್ 30): ಹಾಸನ (Hassan) ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೋ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ (Hassan Pen Drive Case) ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಪೆನ್‌ಡ್ರೈವ್‌ ಪ್ರಕರಣ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಪ್ರಕರಣದ ತನಿಖೆಯನ್ನ ರಾಜ್ಯ ಸರ್ಕಾರ ನೇಮಿಸಿರೋ SIT ಹೊತ್ತುಕೊಂಡಿದೆ. ವಿಡಿಯೋಗಳ ಸತ್ಯಾಸತ್ಯತೆ ಸೇರಿದಂತೆ ಹಲವು ಆಯಾಮಗಳಲ್ಲಿ ಎಡಿಜಿಪಿ ಬಿ.ಕೆ.ಸಿಂಗ್‌ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ. ವಿಡಿಯೋ …

Read More »

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕಮಿಷನ್ ಎಂದರ್ಥ: ಜೆ. ಪಿ. ನಡ್ಡಾ

ಹಾವೇರಿ: ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಮತ್ತು ಕಮಿಷನ್ ಎಂದರ್ಥ ಎಂದು ಲೇವಡಿ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕುಟುಂಬ ರಾಜಕಾರಣ ಮತ್ತು ಭ್ರಷ್ಟರನ್ನು ರಕ್ಷಿಸಲು INDIA ಮೈತ್ರಿಕೂಟ ಮಾಡಿಕೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ. ಬ್ಯಾಡಗಿಯಲ್ಲಿಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ರೋಡ್ ಶೋ ಮುಗಿದ ನಂತರ ಜನರನ್ನುದ್ದೇಶಿಸಿ ಮಾತನಾಡಿದ ಜೆ. ಪಿ. ನಡ್ಡಾ, INDIA ಮೈತ್ರಿಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಇದ್ದಾರೆಯೇ ಎಂದು ಪ್ರಶ್ನಿಸಿದರು. “ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, …

Read More »

ಜನರ ಬದುಕಿನ ಭಾರ ಕಡಿಮೆ ಮಾಡಿದ್ದು ಕಾಂಗ್ರೆಸ್‌ ಎಂದ ಈ. ತುಕಾರಾಂ

ಹೊಸಪೇಟೆ: ರೈತರ ಸಾಲ ಮನ್ನಾದಿಂದ ಹಿಡಿದು ಜನ ಸಾಮಾನ್ಯರ ಬದುಕಿನ ಭಾರವನ್ನು ಕಡಿಮೆ ಮಾಡಿದ್ದು ಕಾಂಗ್ರೆಸ್‌. ರಾಜ್ಯದ ಕಾಂಗ್ರೆಸ್‌ ಸರ್ಕಾರ (State Congress Government) ನೀಡಿದ ಪಂಚ ಗ್ಯಾರಂಟಿಗಳಿಂದ ಕೋಟ್ಯಾಂತರ ಜನರಿಗೆ ಅನುಕೂಲವಾಗಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ (Lok Sabha Election 2024) ತಿಳಿಸಿದರು. ಹೊಸಪೇಟೆ ಪಟ್ಟಣದಲ್ಲಿ ಬಹಿರಂಗ ಪ್ರಚಾರ ಸಭೆ ಹಾಗೂ ರೋಡ್ ಶೋ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು

Read More »

ಓ ನಲ್ಲ ನೀನಲ್ಲ; ಟಿ20 ವಿಶ್ವಕಪ್‌ಗೆ ಕೆಎಲ್‌ ರಾಹುಲ್‌ ಇಲ್ಲ

ಭಾರತದಲ್ಲಿ ಸದ್ಯ 2024ರ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕಲರವ ಹೆಚ್ಚಾಗಿದ್ದು, ಮುಂದಿನ ತಿಂಗಳು ಅಂದರೆ ಮೇ 26 ರಂದು ಮುಕ್ತಾಯವಾಗಲಿದೆ. ಇದಾದ ನಂತರ ಎಲ್ಲರ ಚಿತ್ತ 2024ರ ಟಿ20 ವಿಶ್ವಕಪ್‌ ಅತ್ತ ಎನ್ನುವಂತೆ ಆಗಿದೆ. ಅಷ್ಟರ ಮಟ್ಟಿಗೆ ಬಹುನಿರೀಕ್ಷಿತ ಈ ಟೂರ್ನಿ ಕ್ರಿಕೆಟ್‌ ಪ್ರೇಮಿಗಳನ್ನು ಆರ್ಕಷಿಸಿದೆ. ಅಮೆರಿಕಾ ಮತ್ತು ವೆಸ್ಟ್‌ ಇಂಡೀಸ್‌ ನೆಲದಲ್ಲಿ ಜೂನ್‌ 1 ರಿಂದ 29 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ಪ್ರಕಟಿಸಲು …

Read More »

7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

ಗೋಕರ್ಣ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜನಪ್ರತಿನಿಧಿಗಳು ನಾವು ಜನರ ಕೆಲಸ ಮಾಡಿದ್ದೇವೆ ಎನ್ನುವ ಕಾರಣಕ್ಕಾಗಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅದಕ್ಕೆ ಉದಾಹರಣೆಯೆಂದರೆ ಮಂಜಗುಣಿ ಗಂಗಾವಳಿ ನಡುವಿನ ಸೇತುವೆ ಸಂಪರ್ಕ ರಸ್ತೆಯೂ ಒಂದು. ಇಲ್ಲಿ ಕೂಡು ರಸ್ತೆಗೆ ಮಂಜಗುಣಿಯಲ್ಲಿ ಮಣ್ಣು ಹಾಕದಿದ್ದರೂ ವಾಹನ ಸಂಚಾರಕ್ಕೆ ಮುಕ್ತವಾಗಿದೆ ಎಂದು ಶಾಸಕರಾದ ಸತೀಶ ಸೈಲ್, ದಿನಕರ ಶೆಟ್ಟಿ ಹೇಳಿರುವುದು ಈಗ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಸೇತುವೆ ಕಾಮಗಾರಿ ಆರಂಭಗೊಂಡು 7 ವರ್ಷ ಕಳೆದಿದೆ. ಆದರೆ ಕೇವಲ …

Read More »

ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ

ಸಂಕೇಶ್ವರ: ಮಾಜಿ ಸಚಿವ ದಿ| ಉಮೇಶ ಕತ್ತಿ ಅವರ ಕನಸಿನಂತೆ ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಲು ಈ ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಬೇಕಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಪಟ್ಟಣದಲ್ಲಿ ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಬೇಕೆಂಬ ಉಮೇಶ ಕತ್ತಿ ಕನಸನ್ನು ಮುಖ್ಯಮಂತ್ರಿಯಾಗಿ ನಾನು ಈಡೇರಿಸುತ್ತೇನೆ ಎಂದರು.   ಕಾಂಗ್ರೆಸ್‌ ಕೇವಲ ಮತಬ್ಯಾಂಕ್‌ ಸಲುವಾಗಿ ಮುಸ್ಲಿಂ ಸಮುದಾಯವನ್ನು ಇನ್ನಿತರ …

Read More »

ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ.!

ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ.! ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್ ಸಮಿತಿ ಮದುವೆ ಆಮಂತ್ರಣ ಮಾದರಿಯಲ್ಲಿ ಮತದಾರರಿಗೆ ಮತದಾನಕ್ಕೆ ಆಹ್ವಾನಿಸುವ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವ ವಿಶೇಷ ಚಟುವಟಿಕೆಯಲ್ಲಿ ತೊಡಗಿದೆ. ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಬಬಲೇಶ್ವರ ತಾಲೂಕಿನಲ್ಲಿ ಮತದಾರರನ್ನು ಮತದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಇಂಥ ವಿಶಿಷ್ಟ ಪ್ರಯೋಗಕ್ಕೆ ಮಂದಾಗಿದೆ.   ಬಬಲೇಶ್ವರ ತಾಲೂಕ ಸ್ವಿಪ್ ಸಮಿತಿ, ನಿಡೋಣಿ …

Read More »

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಹೊಸ ಟ್ವಿಸ್ಟ್‌.! ಎಲ್ಲರಿಗಿಂತ ಮೊದಲೇ ಡಿಕೆ ಬ್ರದರ್ಸ್‌ʼಗೆ ತಲುಪಿತ್ತಂತೆ.!?

ಹಾಸನ : ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಹಾಸನದ ಹಾಲೀ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಸಿಡಿ ಊರೆಲ್ಲಾ ಹರಡುವ ಮುನ್ನ ಮೊದಲು ಯಾರ ಕೈಗೆ ಸೇರಿತ್ತು? ಈ ರೀತಿಯ ರಾಜಕೀಯ ಬಿರುಗಾಳಿ ಚುನಾವಣೆ ವೇಳೆ ಜೋರಾಗಿ ಬೀಸಲಿದೆ ಎನ್ನುವ ಮಾಹಿತಿ ಕೆಲವು ಸಚಿವರಿಗೆ, ಸಂಸದರಿಗೆ ಮೊದಲೇ ಇತ್ತೇ? ಈ ವಿಚಾರದ ಬಗ್ಗೆ ಮಾತನಾಡಿರುವ ವಕೀಲ ದೇವರಾಜೇ ಗೌಡ, ಎಲ್ಲರಿಗಿಂತ ಮೊದಲು ಈ ವಿಡಿಯೋ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು …

Read More »

ಒಂದೇ ಸಿನಿಮಾದಲ್ಲಿ ಅಪ್ಪ-ಮಗಳು; ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ದುನಿಯಾ ವಿಜಯ್ ಪುತ್ರಿ!

ದುನಿಯಾ ವಿಜಯ್ ‘ಭೀಮ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟರಲ್ಲೇ ಮತ್ತೊಂದು ಸಿನಿಮಾ ಸೆಟ್ಟೇರುವ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಸಿನಿಮಾ ದುನಿಯಾ ವಿಜಯ್‌ಗೆ ವಿಶೇಷ. ಹಾಗಂತ ಇನ್ನೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂತಲ್ಲ. ಈಗ ದುನಿಯಾ ವಿಜಯ್ ಕೇವಲ ನಟನಾಗಿ ಯಶಸ್ಸು ಕಂಡಿಲ್ಲ. ‘ಸಲಗ’ ಮೂಲಕ ನಿರ್ದೇಶಕನಾಗಿಯೂ ಯಶಸ್ಸು ಕಂಡಿದ್ದಾರೆ. ಈಗ ಎರಡನೇ ಸಿನಿಮಾ ‘ಭೀಮ’ಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮಧ್ಯೆ ತಮ್ಮ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ಕೆಲವು ದಿನಗಳ …

Read More »