ಮುಂಬೈ: 2023-24ನೇ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ಇಂಡಿಯಾದ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ. ಕೋಟಕ್ ಮಹೀಂದ್ರ ಬ್ಯಾಂಕ್‌ನ ಲಾಭದಲ್ಲಿ ಶೇ 6.75ರಷ್ಟು ಏರಿಕೆಯಾಗಿದೆ. 2022-23ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹3,995 ಕೋಟಿ ಲಾಭಗಳಿಸಿತ್ತು. 2023-24ರ ಅವಧಿಯಲ್ಲಿ ₹4,264 ಕೋಟಿಗೆ ಏರಿಕೆಯಾಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು ವರಮಾನವು ₹10,947 ಕೋಟಿಯಿಂದ ₹14,096 ಕೋಟಿಗೆ ಏರಿಕೆ …
Read More »Daily Archives: ಜನವರಿ 20, 2024
ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..
! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ಈರನಹಟ್ಟಿ ಗ್ರಾಮದ ಶ್ರೀ ಏಳುಮುಖ ದೇವಿ ದೇವಸ್ಥಾನ ಹಾಗೂ ಶ್ರೀ ಬಸವೇಶ್ವರ ಹಾಗೂ ಶ್ರೀ ಹಣಮಂತ ದೇವಸ್ಥಾನದ ಆವರಣದಲ್ಲಿ ಅನ್ನ …
Read More »ರಾಮ ಮಂದಿರಕ್ಕೆ ನಟ ಪ್ರಭಾಸ್ ₹50 ಕೋಟಿ ದೇಣಿಗೆ ನೀಡಿದರೇ?
ಬೆಂಗಳೂರು: ನಟ ಪ್ರಭಾಸ್ ಅವರು ಅಯೋಧ್ಯೆಯಲ್ಲಿನ ರಾಮ ಮಂದಿರಕ್ಕೆ ₹50 ಕೋಟಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. ಆದರೆ, ಇದು ಸುಳ್ಳು ಸುದ್ದಿ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಆಂಧ್ರಪ್ರದೇಶ ಶಾಸಕ ಚಿರ್ಲಾ ಜಗ್ಗಿರೆಡ್ಡಿ ಅವರು ಪ್ರಭಾಸ್ ಅವರನ್ನು ಹೊಗಳುವ ಭರದಲ್ಲಿ, ‘ಪ್ರಭಾಸ್ ರಾಮ ಮಂದಿರಕ್ಕೆ ₹ 50 ಕೋಟಿ ಕೊಡುತ್ತಿದ್ದಾರೆ. ರಾಮ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಂದು ಭೋಜನ ಆಯೋಜನೆಯ ಹೊಣೆ ತೆಗೆದುಕೊಂಡಿದ್ದಾರೆ’ ಎಂದು ಹೇಳಿರುವ ವಿಡಿಯೊ …
Read More »ರಜೆ: ವಿರೋಧ ಪಕ್ಷಗಳ ಟೀಕೆ
ನವದೆಹಲಿ: ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ದೇಶದಾದ್ಯಂತ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ನೀಡಿರುವ ಕ್ರಮವನ್ನು ವಿರೋಧ ಪಕ್ಷಗಳು ಟೀಕಿಸಿವೆ. ‘ಸರ್ಕಾರವು ಇಂತಹ ಸುತ್ತೋಲೆ ಹೊರಡಿಸುವ ಮೂಲಕ ಅಧಿಕಾರದ ದುರುಪಯೋಗ ಮಾಡಿದೆ. ಧಾರ್ಮಿಕ ನಂಬಿಕೆಯ ವಿಚಾರದಲ್ಲಿ ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳುವ ಹಕ್ಕು ನೌಕಕರಿಗೆ ಇದೆ. ಸರ್ಕಾರದ ಇಂತಹ ಕ್ರಮವು ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ’ ಎಂದು ಸಿಪಿಎಂ ಪಾಲಿಟ್ ಬ್ಯೂರೊ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ‘ಬಿಜೆಪಿ …
Read More »ಅನಿಷ್ಟ ಪದ್ಧತಿ ನಿವಾರಣೆಗೆ ಶ್ರಮಿಸಿದ್ದ ಮಹಾಯೋಗಿ ವೇಮನ: ಪ್ರೊ.ಸಿದ್ದಣ್ಣ
ಬೆಳಗಾವಿ: ‘ಕವಿ ಮತ್ತು ದಾರ್ಶನಿಕರಾಗಿದ್ದ ಮಹಾಯೋಗಿ ವೇಮನ ಅವರು ಸಮಾಜದಲ್ಲಿನ ಮೌಢ್ಯ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದ್ದರು’ ಎಂದು ಪ್ರೊ.ಸಿದ್ದಣ್ಣ ಲಂಗೋಟಿ ಸ್ಮರಿಸಿದರು. ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ವೇಮನ ನಂಬಿಕೆ ಇಟ್ಟಿದ್ದರು. ಸಮಾಜದಲ್ಲಿ ತಾವು ಕಂಡ ಸತ್ಯವನ್ನು ಕಹಿಯಾದ ಭಾಷೆಯಲ್ಲಿ ಹಾಡಿ, ಜನರಲ್ಲಿ ಅರಿವಿನ ಬೀಜ ಬಿತ್ತಿದ್ದರು. …
Read More »ಕೃಷಿಕನ ಕೈ ಹಿಡಿದ ‘ನಾರಿ ಸುವರ್ಣ’
ಬೆಳಗಾವಿ: ‘ಐದು ವರ್ಷಗಳ ಹಿಂದೆ ₹2 ಲಕ್ಷ ಬಂಡವಾಳ ಹೂಡಿಕೆ ಮಾಡಿ, ಕುರಿ ಸಾಕಾಣಿಕೆಯತ್ತ ಹೊರಳಿದೆ. ಆರಂಭದಲ್ಲಿ ಐದು ಕುರಿ ಮತ್ತು ಏಳು ಮರಿಗಳಷ್ಟೇ ಇದ್ದವು. ಈಗ 120 ಕುರಿಗಳಿದ್ದು, ನಿರೀಕ್ಷೆಗಿಂತ ಉತ್ತಮ ಆದಾಯ ಬರುತ್ತಿದೆ. ಕೃಷಿಯೊಂದಿಗೆ ಈ ಉಪಕಸುಬು ನನ್ನ ಕೈಹಿಡಿದು ಮುನ್ನಡೆಸುತ್ತಿದೆ’ ಇದು ತಾಲ್ಲೂಕಿನ ಕಮಕಾರಟ್ಟಿ ಬಳಿಯ ರೈತ ಮಹೇಶ ಅರ್ಜುನಶಾ ಮಿರಜಕರ ಮಾತು. 6 ಎಕರೆ ಕೃಷಿಭೂಮಿ ಹೊಂದಿರುವ ಅವರು, ಸೋಯಾಬೀನ್, ಜೋಳ ಬೆಳೆಯುತ್ತಿದ್ದಾರೆ. ಇದರೊಂದಿಗೆ ಕುರಿ …
Read More »ಬೈಲಹೊಂಗಲ: ಸಂಗೊಳ್ಳಿ ಉತ್ಸವಕ್ಕೆ ವೈಭವದ ತೆರೆ
ಸಂಗೊಳ್ಳಿ (ಬೈಲಹೊಂಗಲ): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎರಡು ದಿನಗಳಕಾಲ ನಡೆದ ಸಂಗೊಳ್ಳಿ ರಾಯಣ್ಣ ಉತ್ಸವ-2024ಕ್ಕೆ ಗುರುವಾರ ವೈಭವದ ತೆರೆ ಬಿದ್ದಿತು. ಎರಡನೇ ದಿನ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕುಸ್ತಿ ಪಂದ್ಯಗಳನ್ನು ಕಂಡು ಜನ ರೋಮಾಂಚನಗೊಂಡರು. ರಾಯಣ್ಣ ವೇದಿಕೆಯಲ್ಲಿ ಇಡೀ ದಿನ ನಡೆದ ಸಂಗೀತ, ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳಿಗೆ ಮನಸೋಲದವರೇ ಇಲ್ಲ. ಬೆಳಿಗ್ಗೆ ಅಶೋಕ ಎಮ್ಮಿ ಅವರ ತಂಡ ಭಜನಾ ಪದಗಳನ್ನು ಪ್ರಸ್ತುತಪಡಿಸಿ …
Read More »ಕಾಲೇಜಿನಲ್ಲಿ ಮೇಳೈಸಿದ ‘ಗ್ರಾಮ ಸಂಭ್ರಮ’ ಪಂಚೆ, ಕುರ್ತಾ ತೊಟ್ಟು ಹೆಗಲ ಮೇಲೊಂದು ಶಲ್ಯ ಹಾಕಿಕೊಂಡು ಯುವಕರು ಬಂದರೆ, ಸೀರೆ, ರವಿಕೆ, ಮೂಗನತ್ತು, ಜಡೆಗೆ ಮಲ್ಲಿಗೆ ಮುಡಿದು ಯುವತಿಯರು
ಚನ್ನಮ್ಮನ ಕಿತ್ತೂರು: ಪಂಚೆ, ಕುರ್ತಾ ತೊಟ್ಟು ಹೆಗಲ ಮೇಲೊಂದು ಶಲ್ಯ ಹಾಕಿಕೊಂಡು ಯುವಕರು ಬಂದರೆ, ಸೀರೆ, ರವಿಕೆ, ಮೂಗನತ್ತು, ಜಡೆಗೆ ಮಲ್ಲಿಗೆ ಮುಡಿದು ಯುವತಿಯರು ಆಗಮಿಸಿದ್ದರು. ‘ಶರಣ್ರೀ ಯಪ್ಪಾ.. ಬನ್ನಿ’ ಎಂದು ಆತ್ಮೀಯವಾಗಿ ಬರಮಾಡಿಕೊಂಡರು. ಇದು ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಗ್ರಾಮ ಸಂಭ್ರಮ’ದಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದ ಪರಿ. ಎತ್ತಿನ ಬಂಡಿ ಕಟ್ಟಿಕೊಂಡು ವಿದ್ಯಾರ್ಥಿಗಳು ಕಾಲೇಜಿನವರೆಗೆ ಬಂದು ನಲಿದರು. ಸಜ್ಜಿರೊಟ್ಟಿ, ಎಣ್ಣೆಗಾಯಿ …
Read More »ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಅಬ್ಜಲಖಾನ ಪ್ರಥಮ
ಕಾಗವಾಡ: ತಾಲ್ಲೂಕಿನ ಐನಾಪುರ ಪಟ್ಟಣದ ಶ್ರೀ ಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಗುರುವಾರ ದೇಸಿ ಸಂಗ್ರಾಮ ಕಲ್ಲುಗಳು ಹಾಗೂ ಗುಂಡು ಎತ್ತುವ ಸ್ಪರ್ಧೆಗಳು ನೋಡುಗರ ಹುಬ್ಬೇರಿಸುವಂತೆ ಮಾಡಿದವು. ಜಮಖಂಡಿ, ಅಥಣಿ, ಗೋಕಾಕ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಬಲಭೀಮರು ಶಕ್ತಿ ಪ್ರದರ್ಶನ ನೀಡಿ ಶಹಬ್ಬಾಸ್ ಎನಿಸಿಕೊಂಡರು. ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಆಸಂಗಿಯ 26ರ ವಯಸ್ಸಿನ ಅಬ್ಜಲಖಾನ ಮುಜಾವರ (97 ಕೆ.ಜಿ) …
Read More »ಫೆ.28ಕ್ಕೆ ಕನ್ನಡ ಬೋರ್ಡ್ ಅಳವಡಿಕೆಗೆ ಡೆಡ್ ಲೈನ್
ಬೆಂಗಳೂರೂ : ಫೆಬ್ರವರಿ 28ಕ್ಕೆ ಕನ್ನಡ ಬೋರ್ಡ್ ಅಳವಡಿಕೆಗೆ ಡೆಡ್ ಲೈನ್ ಹಿನ್ನಲೆ ಎಚ್ಚೆತ್ತುಕೊಂಡ BBMP ಪಾಲಿಕೆಯಿಂದ 28 ರೊಳಗಾಗಿ ಕನ್ನಡ ಬೋರ್ಡ್ ಅಳವಡಿಕೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿಗಳು, ವ್ಯಾಪಾರಸ್ಥರಿಗೆ ನೋಟಿಸ್ ನೀಡುತ್ತಿದೆ. ಈ ವರೆಗೆ ಒಟ್ಟು 34,262 ಸಾವಿರಕ್ಕೂ ಅಧಿಕ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನ್ನಡ ಮಾಯವಾಗ್ತಿರೋ ಹೊತ್ತಲ್ಲೇ, ಫೆಬ್ರವರಿ 28ರ ಒಳಗೆ ಶೇಕಡಾ 60ರಷ್ಟು ಕನ್ನಡ ಬೋರ್ಡ್ …
Read More »