ಮೂಡುಬಿದಿರೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ 2020ರ ಆಗಸ್ಟ್ 5ರಂದು ಪ್ರಾರಂಭಗೊಂಡಿದ್ದರೆ ಮುನ್ನಾದಿನವೇ ಮೂಡುಬಿದಿರೆ ಸಮೀಪದ ಬೆಳುವಾಯಿ -ಅಳಿಯೂರು ರಸ್ತೆಯ ಬದಿಯಲ್ಲೇ ಇರುವ “ಸುರಕ್ಷಾ” ಹೆಸರಿನ ಮನೆಯಲ್ಲಿ ರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲೆಂಬ ಸಂಕಲ್ಪದೊಂದಿಗೆ ಬೆಳಗಿಸಿದ ನಂದಾ ದೀಪ ಇದುವರೆಗೂ ನಿರಂತರವಾಗಿ ಬೆಳಗುತ್ತಿದೆ. ಬೆಳುವಾಯಿ ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಮನೆಮಂದಿಯ ಜತೆಗೂಡಿ ಇಂಥ ದೃಢಸಂಕಲ್ಪ ಮಾಡಿದ್ದು ಸೋಮವಾರಕ್ಕೆ ಸರಿಯಾಗಿ 1,267 …
Read More »Daily Archives: ಜನವರಿ 20, 2024
ರಾಯಬಾಗ:ಪಾಳು ಬಿದ್ದ ಮೊರಬ ಶಾಲೆ ಶಿಕ್ಷಕರ ವಸತಿ ಸಮುಚ್ಚಯ
ರಾಯಬಾಗ: ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದು, ಅನುದಾನದಡಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳು ಕೆಲವೆಡೆ ಸದುಪಯೋಗವಾಗುತ್ತಿಲ್ಲ. ಅದಕ್ಕೆ ಉದಾಹರಣೆ ಎಂಬಂತೆ ತಾಲೂಕಿನ ಮೊರಬ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿಗೆ ಅನುಕೂಲವಾಗಲೆಂದು ಪ್ರೌಢಶಾಲೆ ಆವರಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿದ್ದ ವಸತಿ ನಿಲಯ ಸಮುಚ್ಚಯ ಈಗ ಪಾಳು ಬಿದ್ದಿದೆ. ಶಿಕ್ಷಕರು ತಾವು ಕಾರ್ಯ ನಿರ್ವಹಿಸುವ ಶಾಲೆ ಹತ್ತಿರ ಕುಟುಂಬದೊಂದಿಗೆ ವಾಸಿಸಲಿ ಎಂಬ ಉದ್ದೇಶದಿಂದ ಈ …
Read More »ಬೈಲಹೊಂಗಲ: ರಾಯಣ್ಣನ ನೆಲದಲ್ಲಿ ಕುಸ್ತಿಪಟುಗಳ ಕಾದಾಟ!
ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಅಂಗವಾಗಿ ಗ್ರಾಮದ ಗ್ರಾ.ಪಂ. ಆವರಣದಲ್ಲಿ ಗುರುವಾರ ನಡೆದ ಪುರುಷರ ಮತ್ತು ಮಹಿಳೆಯರ ಹೊನಲುಬೆಳಕಿನ ರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳು ಸಹಸ್ರಾರು ಕುಸ್ತಿಪ್ರೇಮಿಗಳನ್ನು ರೋಮಾಂಚನಗೊಳಿಸಿತು. ಕುಸ್ತಿ ಕಣವನ್ನು ಹೂವುಗಳಿಂದ ಶೃಂಗರಿಸಲಾಗಿತ್ತು. ಪೈಲ್ವಾನರನ್ನು ಪ್ರೇಕ್ಷಕರು ಹುರುದುಂಬಿಸಿದರು. ವಿಜಯಪುರ ಭೂತನಾಳ ತಾಂಡದ ಅಶೋಕ ವಾಲಿಕರ ತಂಡದ ಹಲಿಗೆ ವಾದನ ಕುಸ್ತಿ ಪಟುಗಳಿಗೆ, ಪ್ರೇಕ್ಷಕರಿಗೆ ಹುಮ್ಮಸ್ಸು ನೀಡಿತು. ಒಟ್ಟು 30ಕ್ಕೂ ಹೆಚ್ಚು ಜೋಡಿ ಕುಸ್ತಿ ಪಟುಗಳು ಭಾಗವಹಿಸಿದ್ದರು. …
Read More »ಸೋತರೆ ಸಚಿವರ ತಲೆ ದಂಡ ಎನ್ನುವುದು ಸುಳ್ಳು: ಸತೀಶ್ ಜಾರಕಿಹೊಳಿ
ಬೆಳಗಾವಿ: ”ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಸಚಿವರ ತಲೆ ದಂಡವಾಗುತ್ತದೆ ಎನ್ನುವುದು ಸುಳ್ಳು” ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳ ಅರ್ಜಿ ಹೈಕಮಾಂಡ್ ಗೆ ಸಲ್ಲಿಸಲಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 10 ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ 6 ಆಕಾಂಕ್ಷಿಗಳ ಅರ್ಜಿ ಸಲ್ಲಿಕೆಯಾಗಿವೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಸಚಿವರಿಗೆ …
Read More »ಕಿಚ್ಚನ ಕೊನೆಯ ಪಂಚಾಯಿತಿಯಲ್ಲಿ ಯಾರಿಗೆ ಗೇಟ್ ಪಾಸ್?
ಬಿಗ್ ಬಾಸ್ ಸೀಸನ್ 10 ಹಲವು ವಿಷಯಗಳಿಂದ ನೋಡುಗರ ಮನ ಸೆಳೆದಿತ್ತು. ಹುಲಿ ಉಗುರು ಪ್ರಕರಣದಲ್ಲಿ ಮೊದಲಿಗೆ ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದರು. ನಂತರ ಸ್ಪರ್ಧಿಗಳು ವರ್ತೂರು ವಿರುದ್ಧ ನಿಂತುಕೊಂಡು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಎಂದರು. ಆದರೆ ಅವರ ಅಭಿಮಾನಿಗಳು, ಅವರ ತಾಯಿ ಸೇರಿಕೊಂಡು ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡಿದ್ದಾರೆ.. ಇನ್ನು ವಿನಯ್ ತಮ್ಮ ಅಗ್ರೆಸ್ಸಿವ್ ಆಟವಾಡಿಕೊಂಡು …
Read More »ಅಂತೂ ಸರಕಾರದಿಂದ ಹೊರ ಬಿದ್ದ ಬಡ್ಡಿ ಮನ್ನಾ ಆದೇಶ
ಕಲಬುರಗಿ: ಸಹಕಾರಿ ಬ್ಯಾಂಕುಗಳಲ್ಲಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲನ್ನು ಸಂಪೂರ್ಣವಾಗಿ 2024ರ ಫೆಬ್ರವರಿ 29 ರೊಳಗೆ ತುಂಬಿದರೆ ಬಡ್ಡಿ ಮನ್ನಾ ಕುರಿತಾಗಿ ಶನಿವಾರ (ಜ.20) ಸಹಕಾರಿ ಇಲಾಖೆ ಅಧಿಸೂಚನೆ. ಬೆಳಗಾವಿಯಲ್ಲಿ ನಡೆದ ಚಳಗಾಲ ಅಧಿವೇಶನದಲ್ಲಿ ಬರಗಾಲ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾದ ವಿಷಯದ ಮೇಲೆ ಚರ್ಚೆ ನಡೆಯುತ್ತಿರುವಾಗ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಯನ್ನೇ ಕೈ ಕೊಟ್ಟ ಪರಿಣಾಮ ರೈತ ಸಂಕಷ್ಟದಲ್ಲಿದ್ದಾನೆ. ಹೀಗಾಗಿ ಸಹಕಾರಿ ಬ್ಯಾಂಕುಗಳಲ್ಲಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ …
Read More »ಒಂದು ದೇಶ, ಒಂದು ಚುನಾವಣೆಗೆ 15 ವರ್ಷಕ್ಕೊಮ್ಮೆ 10,000 ಕೋಟಿ ರೂ. ವೆಚ್ಚ!
ಒಂದು ದೇಶ, ಒಂದು ಚುನಾವಣೆ ನಡೆಸಿದರೆ ಕೇಂದ್ರ ಚುನಾವಣಾ ಆಯೋಗ ಪ್ರತೀ 15 ವರ್ಷಕ್ಕೊಮ್ಮೆ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ (ಇವಿಎಂ) ಖರೀದಿಸಲು 10 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ! ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಒಂದು ದೇಶ, ಒಂದು ಚುನಾವಣೆ ನಡೆದರೆ ಇವಿಎಂ ವೆಚ್ಚದ ಕುರಿತು ಮಾಹಿತಿ ನೀಡಿದೆ. ಇವಿಎಂ ಕಾಲಾವಧಿ 15 ವರ್ಷಗಳದ್ದಾಗಿದೆ. 15 ವರ್ಷಗಳಲ್ಲಿ ಗರಿಷ್ಠ ಮೂರು ಬಾರಿ ಮಾತ್ರ ಬಳಸಬಹುದಾಗಿದೆ. ಒಂದು …
Read More »ಸವದತ್ತಿ, ಬಾದಾಮಿಗೆ ಜಾತ್ರಾ ವಿಶೇಷ ಬಸ್ ವ್ಯವಸ್ಥೆ
ಹುಬ್ಬಳ್ಳಿ: ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ಹಾಗೂ ಬಾದಾಮಿಯ ಬನಶಂಕರಿ ದೇವಿ ಜಾತ್ರೆ ಅಂಗವಾಗಿ ಭಕ್ತರ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಜ.23ರಿಂದ ಜ.30ರ ತನಕ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಜಾತ್ರಾ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ‘ದೇವಿ ಜಾತ್ರೆ ಪ್ರಯುಕ್ತ ಹುಬ್ಬಳ್ಳಿಯಿಂದ 25, ನವಲಗುಂದದಿಂದ 10 ಬಸ್ಗಳನ್ನು ನಿಯೋಜಿಸಲಾಗಿದೆ. 100ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, ಮೇಲ್ವಿಚಾರಣೆಗಾಗಿ 10 ಅಧಿಕಾರಿಗಳು ಹಾಗೂ 20 …
Read More »ಗೋಕಾಕ: 3 ಸಾವಿರ ಮಹಿಳೆಯರಿಂದ ರಾಮನಾಮ ಜಪ
ಗೋಕಾಕ (ಬೆಳಗಾವಿ): ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸೇವಿಕಾ ಸಮಿತಿ ವತಿಯಿಂದ ನಗರದ ಲಕ್ಷ್ಮೀ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಮನಾಮ ಜಪ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮಹಿಳೆಯರಿಗಾಗಿ ಮಾತ್ರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 3,000 ಹೆಣ್ಣು ಮಕ್ಕಳು ಒಂದೇ ರೀತಿಯ ವೇಷಭೂಷಣದಲ್ಲಿ ಸೇರಿದರು. ‘ಶ್ರೀರಾಮ ಜಯರಾಮ ಜಯಜಯ ರಾಮ’ ಎಂಬ ನಾಮವನ್ನು 108 ಬಾರಿ ಜಪಿಸಿದರು. 108 ಸೆಟ್ಗಳನ್ನು ಒಟ್ಟು 11 ಬಾರಿ ಜಪ ಮಾಡಿದರು. ಏಕಕಾಲಕ್ಕೆ ಮಹಿಳೆಯರಿಂದ ಹೊರಬಂದ …
Read More »ಬೆಂಗಳೂರು: ಜ.22ರಂದು ನಗರದ ಹಲವೆಡೆ ರಾಮಜಪ
ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಇದೇ 22ರಂದು (ಸೋಮವಾರ) ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯುವ ಅಂಗವಾಗಿ ನಗರದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಶ್ರೀರಾಮ ಉತ್ಸವ, ಲಕ್ಷ ದೀಪೋತ್ಸವ, ಭಜನೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ‘ಪದ್ಮನಾಭನಗರದ ಕಾರ್ಮೆಲ್ ಸ್ಕೂಲ್ ಮೈದಾನದಲ್ಲಿ …
Read More »