Breaking News

Yearly Archives: 2023

ಶಿಕ್ಷಕರ ವರ್ಗಾವಣೆ: ಇಂದಿನಿಂದ ದಾಖಲೆಗಳ ಪರಿಶೀಲನೆ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮಾ.10ಕ್ಕೆ ಪೂರ್ಣಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ವರ್ಗಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿಯನ್ನು ಇಲಾಖೆ ಬುಧವಾರ ಪ್ರಕಟಿಸಿದೆ. ಡಿ.28ರಂದು ಪ್ರಕಟಿಸಿದ್ದ ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿಯನ್ನು ಮರು ಪ್ರಕಟಿಸಿದ್ದು ಜ.12ರಿಂದ 16ರ ವರೆಗೆ ಹೆಚ್ಚುವರಿ ಶಿಕ್ಷಕರು ಸಲ್ಲಿಸಿರುವ ಆದ್ಯತೆಯಲ್ಲಿನ ದಾಖಲೆಗಳ ಪರಿಶೀಲನೆ ನಡೆಯಲಿದೆ. ಕರಡು ಪಟ್ಟಿಯಿಂದ ಸಮಸ್ಯೆಗೆ ಒಳಗಾದ ಶಿಕ್ಷಕರು ಜ.16 ಮತ್ತು …

Read More »

ಹುಬ್ಬಳ್ಳಿ-ಧಾರವಾಡದಲ್ಲಿ ಯುವಜನೋತ್ಸವ ರಂಗು; ಪ್ರಧಾನಿ ಆಗಮನಕ್ಕೆ ವಾಣಿಜ್ಯನಗರಿ ಪುಳಕ

ಹುಬ್ಬಳ್ಳಿ: ಭಾರತೀಯ ಸಂಸ್ಕೃತಿ, ಪರಂಪರೆ, ಆಚರಣೆ, ಕಲೆ ಹಾಗೂ ಸಾಂಸ್ಕೃತಿಕ ಸಿರಿವಂತಿಕೆ ಲೋಕದ ಅನಾವರಣ, ವಿವಿಧತೆಯಲ್ಲಿ ಏಕತೆ ಭಾವದ ಯುವಶಕ್ತಿ ಸಂಗಮ, ದೇಶದ ಸಾಂಸ್ಕೃತಿಕ ರಾಯಭಾರಿಗಳಂತಿರುವ ಯುವ ಪ್ರತಿಭೆಗಳ ದಿಗ್ದರ್ಶನಕ್ಕೆ ವೇದಿಕೆಯಾಗಲು ಹಾಗೂ ಪ್ರೀತಿಯ ಆತಿಥ್ಯ ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಸಜ್ಜಾಗಿದೆ.   ರಾಷ್ಟ್ರೀಯ ಯುವಜನೋತ್ಸವ ಸಂಭ್ರಮ ಒಂದು ಕಡೆಯಾದರೆ, ಉತ್ಸವಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವಿಕೆ ಮಹಾನಗರವನ್ನು ಪುಳಕಿತಗೊಳ್ಳುವಂತೆ ಮಾಡಿದೆ. ದೇಶದ ಯುವ ಸಾಂಸ್ಕೃತಿಕ ಜಗತ್ತು ಹುಬ್ಬಳ್ಳಿ-ಧಾರವಾಡದಲ್ಲಿ …

Read More »

40 ಕ್ಷೇತ್ರಗಳಲ್ಲಿ ಕೆಆರ್‌ಪಿಪಿ ಪಕ್ಷ ಗೆಲ್ಲಲಿದೆ: ಜನಾರ್ದನ ರೆಡ್ಡಿ

ಗಂಗಾವತಿ: ಅಭಿಮಾನಿಗಳ ಉತ್ಸಾಹ ನೋಡುತ್ತಿದ್ದರೆ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ರಾಜ್ಯದ 40 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಹಿಂದೂಗಳ ಪವಿತ್ರ ಶಕ್ತಿ ಕೇಂದ್ರ ಕಿಷ್ಕಿಂದಾ ಅಂಜನಾದ್ರಿಯನ್ನು ಸಮಗ್ರ ಅಭಿವೃದ್ಧಿ ತಮ್ಮ ವಿಷನ್ ಆಗಿದ್ದು ಯುವ ಕಾರ್ಯಕರ್ತರ ಬೆಂಬಲ ಸಹಕಾರದಿಂದ ಗಂಗಾವತಿ ಕ್ಷೇತ್ರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.     ಅವರು ಕನಕಗಿರಿ ರಸ್ತೆಯಲ್ಲಿ ತಮ್ಮ ನಿವಾಸದ ವೇದಿಕೆಯಲ್ಲಿ ಜನ್ಮದಿನದ ನಿಮಿತ್ತ ಅಭಿಮಾನಿಗಳಿಂದ …

Read More »

ಸಂಸ್ಕೃತಿ, ಆಚಾರ, ವಿಚಾರ ಬಗ್ಗೆ ಮಾತಾಡಲು ಬಿಜೆಪಿಗೆ ಯಾವ ನೈತಿಕತೆಯಿದೆ: ದಿನೇಶ್ ಗುಂಡೂರಾವ್

 ತಲೆ ಮರೆಸಿಕೊಂಡಿರುವ ಸ್ಯಾಂಟ್ರೋ ರವಿ ವಿಚಾರದಲ್ಲಿ ರಾಜಕೀಯ ಆರೋಪ- ಪ್ರತ್ಯಾರೋಪಗಳು ನಡೆಯುತ್ತಿದೆ. ಇದೀಗ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಸಂಸ್ಕೃತಿ, ಆಚಾರ, ವಿಚಾರ ಬಗ್ಗೆ ಮಾತಾಡಲು ಬಿಜೆಪಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ್ದಾರೆ.   ನಾನು ಬಿಜೆಪಿ ಕಾರ್ಯಕರ್ತ ಎಂದು ಸ್ಯಾಂಟ್ರೋ ರವಿಯೇ ಹೇಳಿಕೊಂಡಿದ್ದಾನೆ. ಇಂತಹ ತಲೆಹಿಡುಕರು ಬಿಜೆಪಿಯಲ್ಲಿ ಮಾತ್ರ ಇರಲು ಸಾಧ್ಯ. ಲಂಪಟರು, ನುಂಗುಬಾಕರು, ಲಂಚ-ಮಂಚ ಪ್ರಹಸನ ಶೂರರಿಂದ ಬಿಜೆಪಿ ತುಂಬಿ ತುಳುಕುತ್ತಿದೆ. …

Read More »

ನಿನ್ನನ್ನು ನಕಲಿ ಎನ್​ಕೌಂಟರ್​ನಲ್ಲಿ ಮುಗಿಸುತ್ತಾರೆ, ನ್ಯಾಯಾಲಯಕ್ಕೆ ಶರಣಾಗು’ ಎಂದು ಸ್ಯಾಂಟ್ರೋ ರವಿಗೆ ಬಹಿರಂಗ ಪತ್ರ..!

ಬೆಂಗಳೂರು: ಸ್ಯಾಂಟ್ರೋ ರವಿ ಪ್ರಕರಣ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆತನನ್ನು ಹುಡುಕುತ್ತಿದ್ದಾರೆ. ಇದೀಗ ಕೃಷ್ಣ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಬೇಗನೇ ಶರಣಾಗುವಂತೆ ಸ್ಯಾಂಟ್ರೋ ರವಿಗೆ ಸಲಹೆ ನೀಡಿ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ಎಲ್ಲೆಡೆ ವೈರಲ್​ ಆಗುತ್ತಿದ್ದು ಒಳಗಡೆ ತಮ್ಮ ಪರಿಚಯ ಹೇಳಿಕೊಂಡ ಕೃಷ್ಣ, ಸ್ಯಾಂಟ್ರೋ ರವಿಗೆ ಯಾರೆಲ್ಲ ಏನೇನು ಮಾಡಲಿದ್ದಾರೆ ಎನ್ನುವ ಬಗ್ಗೆ ಎಚ್ಚರಿಸಿದ್ದಾರೆ. ಅದಲ್ಲದೇ ನ್ಯಾಯಾಲಯಕ್ಕೆ ಶರಣಾಗುವಂತೆ ಕೂಡ ಸಲಹೆ ನೀಡಿದ್ದಾರೆ. …

Read More »

ಬಿಜೆಪಿಗೆ ಬಿಗ್ ಶಾಕ್ : ಹಳ್ಳಿ ಹಕ್ಕಿ ‘ವಿಶ್ವನಾಥ್’ ಕಾಂಗ್ರೆಸ್ ಸೇರ್ಪಡೆಗೆ ಮಹೂರ್ತ ಫಿಕ್ಸ್..!

ರಾಯಚೂರು : ಬಿಜೆಪಿ ಎಂಎಲ್ ಸಿ ಆಗಿರುವ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ (H.Vishwanath ) ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ತೊರೆದು ಜೆಡಿಎಸ್ ತೊರೆದು ಶಾಸಕರಾಗಿ ಆಯ್ಕೆಯಾಗಿ ಸಮ್ಮಿಶ್ರ ಸರ್ಕಾರದ ಪತನದ ಸಮಯಲ್ಲಿ ಬಿಜೆಪಿ ಸೇರ್ಪಡೆಯಾಗಿ ಎಂಎಲ್ ಸಿ ಆಗಿರುವ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಇದೀಗ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ .   ಈ ಕುರಿತು ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು ನನ್ನ ರಕ್ತವೇ ಕಾಂಗ್ರೆಸ್ ಎಂದಿದ್ದಾರೆ. ಉತ್ತರಾಯಣದಂದು …

Read More »

ಮುಸ್ಲಿಮರು ಭಾರತದಲ್ಲಿ ವಾಸಿಸಲಿಕ್ಕೆ ಅನುಮತಿ ನೀಡಲು ಭಾಗವತ್ ಯಾರು? ಒವೈಸಿ

ನವದೆಹಲಿ: ಭಾರತದಲ್ಲಿ ವಾಸವಾಗಿರುವ ಮುಸ್ಲಿಮರು ಭಯಪಡಬೇಕಾಗಿಲ್ಲ. ಆದರೆ ಅವರು ತಾವೇ ಶ್ರೇಷ್ಠರು ಎಂಬ ಅಬ್ಬರದ ಶ್ರೇಷ್ಠತೆಯ ಪ್ರತಿಪಾದನೆ ತ್ಯಜಿಸಬೇಕು ಎಂದು ಆರ್ ಎಸ್ ಎಸ್ ವರಿಷ್ಠ ಮೋಹನ್ ಭಾಗವತ್ ಅವರ ಸಲಹೆಗೆ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಭಾರತದಲ್ಲಿ ಮುಸ್ಲಿಮರು ವಾಸ್ತವ್ಯ ಹೂಡಲು ಅನುಮತಿ ನೀಡಲು ಅವರು (ಭಾಗವತ್) ಯಾರು ಎಂದು ಪ್ರಶ್ನಿಸಿದ್ದಾರೆ.     “ಭಾರತದಲ್ಲಿ ಮುಸ್ಲಿಮರು ವಾಸಿಸಲು ಅಥವಾ ನಮ್ಮ ನಂಬಿಕಯನ್ನು ಅನುಸರಿಸಲು ಅನುಮತಿ ನೀಡಲು …

Read More »

ಅಕ್ಕಿ ಕೊಡುವುದು ರಾಜ್ಯದ ಜನರು ಕಟ್ಟುವ ತೆರಿಗೆ ಹಣದಿಂದ,ಯಾರಪ್ಪನ ಮನೆಯಿಂದ ತಂದು ಅಲ್ಲ: ಸಿದ್ದರಾಮಯ್ಯ

ಬೆಳಗಾವಿ, ಜನವರಿ 11: ನಮ್ಮ ಸರ್ಕಾರ ಇದ್ದಾಗ ಬಡಜನರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಈಗ ಅದನ್ನು 4 ಕೆ.ಜಿ ಗೆ ಇಳಿಸಿದ್ದಾರೆ. ಅಕ್ಕಿ ಕೊಡುವುದು ರಾಜ್ಯದ ಜನರು ಕಟ್ಟುವ ತೆರಿಗೆ ಹಣದಿಂದ, ಯಾರಪ್ಪನ ಮನೆಯಿಂದ ತಂದು ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.   ಈ ಕುರಿತು ಬೆಳಗಾವಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆಯುವ ಪಕ್ಷ. …

Read More »

ಬಿಜೆಪಿ ಪಾಪದ ಕೊಳೆ’ ತೊಳೆದ ಸಿದ್ದರಾಮಯ್ಯ, ಡಿಕೆಶಿ

ಬೆಳಗಾವಿ: ಇಲ್ಲಿನ ಕಾಂಗ್ರೆಸ್‌ ರಸ್ತೆಯಲ್ಲಿರುವ ವೀರಸೌಧದ ಆವರಣದಲ್ಲಿ ಬುಧವಾರ, ಕಾಂಗ್ರೆಸ್‌ ‘ಪ್ರಜಾಧ್ವನಿ’ ಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಚಾಲನೆ ನೀಡಿದರು. ‘ಬಿಜೆಪಿ ಪಾಪದ ಕೊಳೆ’ ತೊಳೆಯುವ ಸಂಕೇತವಾಗಿ ಎಲ್ಲ ನಾಯಕರೂ ಪೊರಕೆ ಹಿಡಿದು, ನೀರು ಹಾಕಿ ರಸ್ತೆಯಲ್ಲಿ ಗುಡಿಸಿದರು.   1924ರಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಅಧಿವೇಶನದ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿಕೊಂಡ ಏಕಮಾತ್ರ ಅಧಿವೇಶನವದು. ಅದರ ನೆನಪಿಗಾಗಿ ವೀರಸೌಧ ನಿರ್ಮಿಸಲಾಗಿದೆ. ಐತಹಾಸಿಕ …

Read More »

₹4 ಸಾವಿರ ಕೋಟಿ ಆಸ್ತಿ ಜಪ್ತಿಯಾಗಿದ್ದರೂ ಚುನಾವಣೆ ಖರ್ಚಿಗೆ ಯಾವುದೇ ಕಷ್ಟವಿಲ್ಲ’ ಎಂದ: ಜನಾರ್ದನ ರೆಡ್ಡಿ

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಹೊಸ ಪಕ್ಷ ಸ್ಥಾಪಿಸಿ 16 ದಿನಗಳಾಗುವಷ್ಟರಲ್ಲಿಯೇ ಸಿಬಿಐ ಆಸ್ತಿ ಮುಟ್ಟುಗೋಲಿಗೆ ಮುಂದಾಗಿದ್ದು, ಇದು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಹೇಳಿದರು.   ಇಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ ‘ಪಕ್ಷ ಸಂಘಟನೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಜನರಿಗೆ ಮಾಹಿತಿ ನೀಡುತ್ತಿದ್ದೇನೆ. ಕೆಲವರು ಅವುಗಳನ್ನೇ ಹ್ಯಾಕ್‌ ಮಾಡಿಸಿ ಚುನಾವಣಾ ತಯಾರಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಜನರ …

Read More »