ಕಾಗವಾಡ: ಬೇಂದ್ರೆಯವರ ಕಾವ್ಯ ಹಲವು ವೈಶಿಷ್ಟ್ಯ ಗಳಿಂದ ಕೂಡಿದೆ. ಅದನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿಲ್ಲ. ಬೇಂದ್ರೆಯವರ ಕಾವ್ಯದಲ್ಲಿ ತಾಯಿ, ಅಜ್ಜಿ, ಹೆಂಡತಿ, ಪರಿಸರ, ಸಾಹಿತ್ಯದ ಹಲವು ಪ್ರಕಾರಗಳು ಪ್ರಭಾವವನ್ನು ಬೀರಿವೆ ಎಂದು ಕೆ.ಎ.ಲೋಕಾಪೂರ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಎನ್.ಬಿ. ಝರೆ ಅಭಿಪ್ರಾಯ ವ್ಯಕ್ತಪಡಿಸಿದರು. ಶುಕ್ರವಾರ ಸ್ಥಳೀಯ ಶಿವಾನಂದ ಮಹಾ ವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಕಾಲೇಜು ಒಕ್ಕೂಟ ಹಾಗೂ ಕನ್ನಡ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಡಾ|ದ.ರಾ.ಬೇಂದ್ರೆಯವರ 127ನೆ ಜನ್ಮದಿನಾಚರಣೆಯ ಪ್ರಯುಕ್ತ …
Read More »Yearly Archives: 2023
ಮೇಯರ್ ದಕ್ಷಿಣಕ್ಕೆ-ಉಪಮೇಯರ್ ಉತ್ತರಕ್ಕೆ
ಬೆಳಗಾವಿ: ಸರಿಸುಮಾರು ಒಂದೂವರೆ ವರ್ಷಗಳಬಳಿಕ ಮಹಾನಗರ ಪಾಲಿಕೆಗೆ ಮೇಯರ್ ಹುದ್ದೆ ಭಾಗ್ಯ ಲಭಿಸುತ್ತಿದ್ದು, ಪೂರ್ಣ ಬಹುಮತ ಹೊಂದಿರುವ ಕಮಲ ಪಾಳಯದವರು ಮೇಯರ್-ಉಪಮೆಯರ್ ಹುದ್ದೆ ಅಲಂಕರಿಸಲಿದ್ದಾರೆ. ದಕ್ಷಿಣ ಕ್ಷೇತ್ರಕ್ಕೆ ಮೇಯರ್, ಉತ್ತರ ಕ್ಷೇತ್ರಕ್ಕೆ ಉಪಮೇಯರ್ ಸಿಗುವುದು ಗ್ಯಾರಂಟಿಯಾಗಿದೆ. ಫೆ. 6ರಂದು ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆಯಲಿರುವ ಮೇಯರ್-ಉಪಮೇಯರ್ ಚುನಾವಣೆಗಾಗಿ ತೀವ್ರ ಕಸರತ್ತು ನಡೆದಿದೆ. ಬೆಳಗಾವಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆದಿದ್ದು, …
Read More »ಖಾನಾಪುರ: ಸುವರ್ಣ ಮಹೋತ್ಸವ ಇಂದಿನಿಂದ
ಖಾನಾಪುರ: ತಾಲ್ಲೂಕಿನ ಗಾಡಿಕೊಪ್ಪ ಗ್ರಾಮದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಯರ ಬೃಂದಾವನ ಪ್ರತಿಷ್ಠಾಪನೆ ಸುವರ್ಣ ಮಹೋತ್ಸವ ಆಚರಣೆಗೆ ಅಂಗವಾಗಿ ಫೆ.5 ರಿಂದ 11ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ಮಠದ ಅರ್ಚಕ ಅಚ್ಯುತ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಫೆ.5ರಂದು ನವಗ್ರಹ ಹೋಮ, ಅಷ್ಟೋತ್ತರ ಪಾರಾಯಣ, ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ವಿಶೇಷ ಉಪನ್ಯಾಸ, …
Read More »ಸವದತ್ತಿ: ಯಲ್ಲಮ್ಮನ ಗುಡ್ಡದಲ್ಲಿ ಭಾರತ ಹುಣ್ಣಿಮೆ ಸಡಗರ
ಸವದತ್ತಿ: ಇಲ್ಲಿನ ಯಲ್ಲಮ್ಮನಗುಡ್ಡದ ಭಾರತ ಹುಣ್ಣಿಮೆ ಜಾತ್ರೆ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧ. ಐತಿಹಾಸಿಕ, ಪೌರಾಣಿಕ ಹಾಗೂ ಜನಪದೀಯ ಸಂಸ್ಕೃತಿಯ ತ್ರಿವೇಣಿ ಸಂಗಮವಾಗಿರುವ ಈ ನೆಲದಲ್ಲಿ ಭಾನುವಾರ (ಫೆ.5) ಅದ್ದೂರಿ ಜಾತ್ರೆ ಜರುಗಲಿದ್ದು ‘ಸಪ್ತ ಕೊಳ್ಳಗಳ ನಾಡು’ ಸಂಭ್ರಮದಲ್ಲಿ ಮುಳುಗಿದೆ. ಎತ್ತ ಕಣ್ಣು ಹಾಯಿಸಿದರೂ ಜನಸಾಗರ, ಕಣ್ಮನ ಸೆಳೆಯುತ್ತಿರುವ ಚಕ್ಕಡಿಗಳ ಸಾಲು, ಭಕ್ತರನ್ನು ರಂಜಿಸುತ್ತಿರುವ ಜೋಗತಿಯರ ಚೌಡಕಿ ನಿನಾದ ಹೀಗೆ. ಹಲವು ವಿಶೇಷಗಳ ಮೂಲಕ ಜಾತ್ರೆ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. …
Read More »ಕಕಮರಿ: ‘ಪರೀಕ್ಷೆಗೆ ಭಯ ಪಡುವ ಅಗತ್ಯವಿಲ್ಲ
ಕಕಮರಿ: ‘ಮನಸ್ಸಿನ ಶಕ್ತಿ ದೇಹದ ಶಕ್ತಿಗಿಂತ ಬಲಿಷ್ಠ. ಅದು ಇದ್ದರೆ ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಬಹುದು. ಅದಕ್ಕೆ ಬಡವ- ಶ್ರೀಮಂತ ಎನ್ನುವ ಭೇದಭಾವ ಇಲ್ಲ’ ಎಂದು ಕಕಮರಿ ಗುರುದೇವಾಶ್ರಮದ ಆತ್ಮಾರಾಮ್ ಸ್ವಾಮೀಜಿ ಹೇಳಿದರು. ಸಮೀಪದ ಕೊಟ್ಟಲಗಿ ಸಿದ್ಧೇಶ್ವರ ಆಂಗ್ಲ ಮಾಧ್ಯಮ ಶಾಲೆಯ 11ನೇ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭ ಮತ್ತು ಮಕ್ಕಳಿಂದ ತಂದೆ- ತಾಯಿಗಳ ಪಾದಪೂಜೆ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳಿಗೆ ಅಂಕಗಳು …
Read More »ಬೈಲಹೊಂಗಲ: ಇಂದು ಚನ್ನಬಸವೇಶ್ವರರ ವೈಭವದ ಜಾತ್ರೆ
ಬೈಲಹೊಂಗಲ: ಸವದತ್ತಿ ತಾಲ್ಲೂಕಿಗೆ ಒಳಪಟ್ಟ, ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಈಗ ಜಾತ್ರೆ ಸಡಗರ ಮನೆ ಮಾಡಿದೆ. 12ನೇ ಶತಮಾನದ ಮಹಾಶರಣ ಚನ್ನಬಸವೇಶ್ವರರು ಉಳವಿಗೆ ಹೋಗುವ ಸಂದರ್ಭದಲ್ಲಿ ಈ ಊರಿಗೆ ಬಂದು ತಂಗಿದ್ದರು. ಅಂದಿನಿಂದ ಇಲ್ಲಿ ಜಾತ್ರೆ ನಡೆಸಿಕೊಂಡು ಬರಲಾಗಿದೆ. ಈ ಬಾರಿ ನಡೆಯುತ್ತಿರುವುದು 18ನೇ ವರ್ಷದ ಜಾತ್ರಾ ಮಹೋತ್ಸವ. ಜ.5ರಂದು ಸಂಜೆ 5ಕ್ಕೆ ರಥೋತ್ಸವ ನೆರವೇರಲಿದೆ. ಜಿಲ್ಲೆಯ ವಿವಿಧೆಡೆಯಿಂದ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ. ಭಾನುವಾರ ನಸುಕಿನಿಂದಲೇ ಚನ್ನಬಸವೇಶ್ವರ …
Read More »ಅಥಣಿ| ವೃದ್ಧೆ ಸಾವು, 9 ಮಂದಿಗೆ ಗಾಯ
ಅಥಣಿ: ತಾಲ್ಲೂಕಿನ ಘಟನಟ್ಟಿ ಕ್ರಾಸ್ ಸಮೀಪ ಶನಿವಾರ ಕ್ರೂಸರ್ ಹಾಗೂ ಗೂಡ್ಸ್ ಲಾರಿ ಮಧ್ಯೆ ಮುಖಾ-ಮುಖಿ ಡಿಕ್ಕಿ ಸಂಭವಿಸಿ, ಒಬ್ಬ ವೃದ್ಧೆ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯವರಾದ ದೇವಕಿ ನಿಂಗಣ್ಣ ಕಿಚಡಿ (65) ಮೃತಪಟ್ಟವರು. ಈ ಕ್ರೂಸರ್‌ನಲ್ಲಿ 10 ಮಂದಿ ಯಲ್ಲಮ್ಮನ ಗುಡ್ಡಕ್ಕೆ ದರ್ಶನಕ್ಕೆ ಬಂದಿದ್ದರು. ಶನಿವಾರ ದೇವಿ ದರ್ಶನ ಮಾಡಿಕೊಂಡು ಮರಳಿ ಸಿಂದಗಿ ಕಡೆಗೆ ಹೊಟರಿದ್ದರು. ಅಥಣಿ ಮಾರ್ಗವಾಗಿ ಬರುತ್ತಿದ್ದ ಗೂಡ್ಸ್ ಲಾರಿ ಹಾಗೂ …
Read More »ಬೆಳಗಾವಿ: ‘ದಂಡ ಪಾವತಿಗೆ ಶೇ 50 ರಿಯಾಯಿತಿ’
ಬೆಳಗಾವಿ: ‘ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ದಂಡದ ಮೊತ್ತ ಪಾವತಿಸಲು ಫೆ.11ರವರೆಗೆ ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ. ವಾಹನ ಸವಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ. ಹೇಳಿದರು. ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 6.28 ಲಕ್ಷ ಪ್ರಕರಣಗಳಲ್ಲಿ ₹26 ಕೋಟಿ ದಂಡ ಪಾವತಿಯಾಗಬೇಕಿದೆ. ವಾಹನ ಸವಾರರು ತಮಗೆ ವಿಧಿಸಿದ ದಂಡದ …
Read More »ಐಗಳಿ: ಭೈರವನಾಥ ಜಾತ್ರೆ ಇಂದಿನಿಂದ
ಐಗಳಿ : ಇಲ್ಲಿಯ ಭೈರವನಾಥ ದೇವರ ಜಾತ್ರೆ ಫೆ. 5 ಹಾಗೂ 6ರಂದು ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಲಿವೆ. ಫೆ.5ರಂದು ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ, ನಂತರ ಹಂದರ ಹಾಕುವುದು. ಮಧ್ಯಾಹ್ನ ದೇವರಿಗೆ ಮಹಾ ನೈವೇದ್ಯ ಅರ್ಪಿಸುವುದು, ಸಂಜೆಯಲ್ಲಿ ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ನಂತರ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯಗಳ ಮೂಲಕ ನಡೆಯಲಿದೆ. ರಾತ್ರಿ ಇಂಗಳಿ ಹಾಗೂ ಸತ್ತಿ …
Read More »ಬೋಧಕರ ಕೊರತೆ: ಹಾವೇರಿ ಹಿಮ್ಸ್‌ನ 150 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೊಸದಾಗಿ ಆರಂಭವಾಗಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಕಾಲೇಜಿನಲ್ಲಿ ಬೋಧಕರ ಕೊರತೆಯಿಂದ ಒಂದೂವರೆ ತಿಂಗಳು ಕಳೆದರೂ ಪಾಠಗಳೇ ಆರಂಭವಾಗಿಲ್ಲ. ಇದರಿಂದ 150 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಈ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 79 ಮಂದಿಯನ್ನು ಕಾಯಂ ನೇಮಕಾತಿ ಮಾಡಿಕೊಳ್ಳಲು 2022ರ ಜನವರಿಯಲ್ಲಿ ಸಂದರ್ಶನ ನಡೆಸಲಾಗಿತ್ತು. ಸಂದರ್ಶನ ದಲ್ಲಿ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿಯನ್ನು …
Read More »