Breaking News

Yearly Archives: 2023

ನೀರಾವರಿ: ₹22,200 ಕೋಟಿ ಟೆಂಡರ್ ಅಕ್ರಮ -ಬಿಜೆಪಿ ಶಾಸಕ ಗೂಳಿಹಟ್ಟಿ ಆರೋಪ

ಬೆಂಗಳೂರು: ವಿವಿಧ ನೀರಾವರಿ ನಿಗಮಗಳಲ್ಲಿ ₹22,200 ಕೋಟಿ ಮೊತ್ತದ ಟೆಂಡರ್ ಅಕ್ರಮ ನಡೆದಿದ್ದು, ಟೆಂಡರ್‌ಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ದಾರೆ.   ಅಕ್ರಮದ ಕುರಿತು ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಫೆ.3ರಂದು ದೂರು ನೀಡಿರುವ ಅವರು, ಕಾಮ ಗಾರಿಗಳ ಕಾರ್ಯಾದೇಶ ರದ್ದುಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಗೂಳಿಹಟ್ಟಿ ಸಲ್ಲಿಸಿರುವ ಪತ್ರ ‘ಲಭ್ಯವಾಗಿದೆ. …

Read More »

ನ್ಯಾಯಾಲಯದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಬಲೆಗೆ

ದಾವಣಗೆರೆ: ಪೋಕ್ಸೋ ಕೇಸ್ ಆರೋಪಿಯಿಂದ 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ದಾವಣಗೆರೆ ಮಕ್ಕಳ ಸ್ನೇಹಿ ನ್ಯಾಯಾಲಯದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ರೇಖಾ ಕೋಟೆಗೌಡರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಮಕ್ಕಳ ಸ್ನೇಹಿ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ. ಕೌಟುಂಬಿಕ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಾಗಿದ್ದ ರೇಖಾ ಕೋಟೆಗೌಡರ್ ಪೋಕ್ಸೋ ಪ್ರಕರಣದ ಆರೋಪಿಯಿಂದ ಲಂಚ ಪಡೆಯುತ್ತಿದ್ದರು. ಮಧುಸೂಧನ್ ಕಿತ್ತೂರ್ ಎಂಬುವವರು ನೀಡಿದ ದೂರಿನ …

Read More »

ಕೆ. ಸೋಮಶೇಖರ್‌ ಅವರು ಸಿದ್ಧಪಡಿಸಿರುವ ನಾಡದೇವಿ ಚಿತ್ರ ಅಧಿಕೃತ

ಬೆಂಗಳೂರು: ಚಿತ್ರ ಕಲಾವಿದ ಕೆ. ಸೋಮಶೇಖರ್‌ ಅವರು ಸಿದ್ಧಪಡಿಸಿರುವ ‘ನಾಡದೇವಿ’ಯ ಚಿತ್ರವನ್ನು ಅಧಿಕೃತವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ನಾಡದೇವಿ ಚಿತ್ರವನ್ನು ಆಯ್ಕೆ ಮಾಡುವ ಸಂಬಂಧ ಈ ಹಿಂದೆ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ ಅಧ್ಯಕ್ಷತೆಯಯಲ್ಲಿ ಸಮಿತಿ ರಚಿಸಲಾಗಿತ್ತು. ರಾಜ್ಯದ ಸಾಂಪ್ರದಾಯಿಕ ಕಲೆ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸುವ, ಸೋಮಶೇಖರ್‌ ಅವರು ರಚಿಸಿದ ‘ನಾಡದೇವಿ’ಯ ಚಿತ್ರವನ್ನು ಅಧಿಕೃತಗೊಳಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. …

Read More »

ಬೆಳಗಾವಿ: ಕಣ್ಣಿದ್ದವರಗಿಂತ ಕಣ್ಣಿಲ್ಲದವರೇ ಸಮರ್ಥರು

ಬೆಳಗಾವಿ: ‘ಕಣ್ಣಿದ್ದವರಗಿಂತ ಕಣ್ಣಿಲ್ಲದವರೇ ಹೆಚ್ಚು ಸಮರ್ಥರು. ಅವರ ಆಲೋಚನಾ ಶಕ್ತಿ ಅಪರಿಮಿತ. ಸಾಮಾನ್ಯರಿಗಿಂತ ಹತ್ತು ಪಟ್ಟು ಬುದ್ಧಿವಂತಿಕೆ ಅವರಲ್ಲಿ ಇರುತ್ತದೆ. ಹಾಗಾಗಿ, ಯಾರನ್ನೂ ಹಗುರವಾಗಿ ಕಾಣಬಾರದು’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.   ನಗರದಲ್ಲಿ ಶನಿವಾರ ನಡೆದ ಸಮರ್ಥನಂ ಅಂಗವಿಕಲರ ಸಂಸ್ಥೆ, ಪ್ರಜಾವಾಣಿ, ಇಂಡಸ್‌ಇಂಡ್‌ ಬ್ಯಾಂಕ್‌, ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌, ಕ್ರಿಕೆಟ್‌ ಅಸೋಸಿಯೇಷನ್‌ ಫಾರ್‌ ದಿ ಬ್ಲೈಂಡ್‌ ಸಹಯೋಗದಲ್ಲಿ ಆಯೋಜಿಸಿದ ಐದು ದಿನಗಳ …

Read More »

ಬೊಮ್ಮಾಯಿ ಅವರೇ, ಹಗರಣಗಳ ಸಾಧನೆ ಪಟ್ಟಿ ಹಿಡಿದು ಮತ ಕೇಳುವಿರಾ: ಕಾಂಗ್ರೆಸ್ ಟೀಕೆ

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮುಂಬರುವ ವಿಧಾನಸಭೆ ಚುನಾವಣೆಗೆ ಜನರ ಮುಂದೆ ಹಗರಣಗಳ ಸಾಧನೆ ಪಟ್ಟಿ ಹಿಡಿದು ಮತ ಕೇಳಲು ಹೋಗುವಿರಾ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ರಾಜ್ಯದ ವಿವಿಧ ನೀರಾವರಿ ಯೋಜನೆಗಳಲ್ಲಿ ಅಕ್ರಮ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿರುವ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಾಜ್ಯದ ವಿವಿಧ ನೀರಾವರಿ ಯೋಜನೆಗಳಲ್ಲಿ ಒಟ್ಟು ₹22,000 ಕೋಟಿ ಅಕ್ರಮ ನಡೆದಿದೆ ಎಂದು ಸ್ವತಃ ಬಿಜೆಪಿ ಶಾಸಕರೇ ದೂರಿದರೂ ಸಿಎಂ ಮಾತಾಡದಿರುವುದೇಕೆ’ ಎಂದು …

Read More »

ಬೊಮ್ಮಾಯಿ, ಮೋದಿಯಿಂದ ಕುರುಬರಿಗೆ ಎಸ್‌ಟಿ ಮೀಸಲು ಕೊಡಿಸಲಿ: ಸಿದ್ದರಾಮಯ್ಯ

(ವಿಜಯನಗರ ಜಿಲ್ಲೆ) : ‘ಕುರುಬ ಸಮುದಾಯವನ್ನು ಎಸ್‌ಟಿ ಮೀಸಲು ಪಟ್ಟಿಗೆ ಸೇರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಡಬಲ್ ಎಂಜಿನ್ ಸರ್ಕಾರ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಕುಳಿತು ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.   ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಭಾನುವಾರ ಕಾಗಿನೆಲೆ ಕನಕಗುರುಪೀಠದ ಶಾಖಾ ಮಠದಲ್ಲಿ ನೂತನ ಗಂಗಮಾಳಮ್ಮ ಯಾತ್ರಿ …

Read More »

ನೀವು ಈಗ ನೋಡಿರುವುದು ʼಕಾಂತಾರ-2″ ಮುಂದೆ ಬರುವುದು ʼಕಾಂತಾರ -1″ : ರಿಷಬ್‌ ಶೆಟ್ಟಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ ರಿಷಬ್‌ ಶೆಟ್ಟಿ ಅವರ ʼಕಾಂತಾರʼ ಸಿನಿಮಾದ 100 ದಿನದ ಸಂಭ್ರಮದ ಕಾರ್ಯಕ್ರಮ ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕಾಗಿ ಬಂಟರ ಭವನ ʼಕಾಂತಾರʼದ ಸೆಟ್ ನ ಹಾಗೆ ಬದಲಾಗಿತ್ತು. ಇಡೀ ಬಂಟರ ಭವನವನ್ನು ತುಳುನಾಡಿನ ಸಂಪ್ರದಾಯದಂತೆ ಶೃಂಗರಿಸಲಾಗಿತ್ತು. ಸಿನಿಮಾದ ಯಶಸ್ವಿಗಾಗಿ ದುಡಿದ ಪ್ರತಿಯೊಬ್ಬ ಕಲಾವಿದ, ತಾಂತ್ರಿಕ ತಂಡದವರಿಗೆ ಚಿತ್ರ ತಂಡ ಸ್ಮರಣಿಕೆಯನ್ನು ನೀಡಿತು. ಕನ್ನಡ ಸಿನಿಮಾ ರಂಗದಲ್ಲಿ 100 ಡೇಸ್‌ …

Read More »

ಬಿಜೆಪಿ ನಾಯಕನಿಗೆ ಜೆಡಿಎಸ್ ಟಿಕೆಟ್ ಎಲ್ಲಿ ಗೊತ್ತಾ?

ಹಾಸನ ಜಿಲ್ಲೆಯ ಅರಕಲಹೊಳೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಮಾಜಿ ಸಚಿವ ಎ ಮಂಜು ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ. ಹಾಲಿ ಶಾಸಕ, ಪಕ್ಷದ ಮುಖಂಡ ಎಟಿ ರಾಮಸ್ವಾಮಿ ಅವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿದೆ.   ಇಷ್ಟು ವರ್ಷ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬದ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ ಜೆಡಿಎಸ್ ನಡೆ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ. ಇದೇ ವೇಳೆ ರಾಮಸ್ವಾಮಿ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ಅವರು ಕಾಂಗ್ರೆಸ್‌ಗೆ …

Read More »

ದಂಡ ಕಟ್ಟಿದ ಮೈಸೂರಿನ ಶಾಸಕ ಎಲ್.ನಾಗೇಂದ್ರ

ಮೈಸೂರು: ರಾಜ್ಯ ಸಾರಿಗೆ ಇಲಾಖೆ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಫೆ.11೧ರ ಒಳಗೆ ಪಾವತಿಸಿದರೆ ಶೇ.50 ವಿನಾಯಿತಿ ನೀಡುವುದಾಗಿ ಗುರುವಾರ ಆದೇಶ ಹೊರಡಿಸಿದೆ. ಬಹುತೇಕ ವಾಹನ ಸವಾರರು ಈ ಆದೇಶ ಸದುಪಯೋಗಪಡಿಸಿಕೊಳ್ಳುತ್ತಿದ್ದು, ಬಾಕಿ ಇರಿಸಿಕೊಂಡಿದ್ದ ದಂಡ ಕಟ್ಟುತ್ತಿದ್ದಾರೆ. ಇದೀಗ ಮೈಸೂರಿನ ಚಾಮರಾಜ ವಿಧಾಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶೇ.50 ರಿಯಾಯಿತಿಯಲ್ಲಿ ದಂಡ ಕಟ್ಟಿದ್ದಾರೆ. ವೇಗದ ಕಾರು ಚಾಲನೆಗೆ ಶಾಸಕ ಎಲ್.ನಾಗೇಂದ್ರ 7ಸಾವಿರ ರೂ. ದಂಡ ಕಟ್ಟಬೇಕಾಗಿತ್ತು. ಶೇ.50ರಷ್ಟು …

Read More »

ರೀಲ್ಸ್‌ನಲ್ಲಿ ಪರಿಚಯವಾದವನ ಜತೆ ಪತ್ನಿ ಪರಾರಿ

ಬೆಂಗಳೂರು: ಇತ್ತೀಚೆಗೆ ಚಿಕ್ಕಮಕ್ಕಳಿಂದ ವೃದ್ಧವರೆಗಿನ ಎಲ್ಲ ವಯಸ್ಸಿನವರು ರೀಲ್ಸ್‌ (ಮನರಂಜನೆ ಮೊಬೈಲ್‌ ಆಯಪ್‌)ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಮಹಿಳೆ ಪತಿಯನ್ನು ತೊರೆದು ರೀಲ್ಸ್‌ನಲ್ಲಿ ಪರಿಚಯವಾದ ವ್ಯಕ್ತಿ ಜತೆ ನಾಪತ್ತೆಯಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.   ಈ ಘಟನೆಯಿಂದ ವಿಚಲಿತಗೊಂಡಿರುವ ಪತಿ, ಸುಬೇದಾರಪಾಳ್ಯ ನಿವಾಸಿ ಜೋಸೆಫ್ ಆಂಟೋನಿ ಎಂಬುವರು ಪತ್ನಿ ನಮಿತಾ ಕುಮಾರಿ ಮತ್ತು ನಾಲ್ಕು ವರ್ಷದ ಮಗನನ್ನು ಹುಡುಕಿಕೊಡುವಂತೆ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಸಿ ಕ್ಯಾಮೆರಾ …

Read More »