Breaking News

Yearly Archives: 2023

ಗುಜರಾತ್ ನ ಗ್ರಾಮಗಳಿಗೆ ಭೇಟಿ ನೀಡಿದ್ರೆ `ಗುಜರಾತ್ ಮಾಡೆಲ್’ ಗೊತ್ತಾಗುತ್ತೆ:H.D.K.

ಎಲ್ಲರೂ ಗುಜರಾತ್ ಮಾಡೆಲ್ ಅಂತಾರೆ, ಅದರೆ ಗುಜರಾತ್ ನ ಗ್ರಾಮಗಳಿಗೆ ಭೇಟಿ ನೀಡಿದ್ರೆ ಗುಜರಾತ್ ಮಾಡೆಲ್ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರ ಫೈಲ್ಸ್ ರೀತಿಯಲ್ಲೇ ಗುಜರಾತ್ ಫೈಲ್ಸ್ ಪುಸ್ತಕ ಇದೆ. ಗುಜರಾತ್ ಗಲಭೆ ವೇಳೆ ಏನೆಲ್ಲಾ ಆಯ್ತು ಅನ್ನೋದು ಪುಸ್ತಕದಲ್ಲಿ ಇದೆ. ಗುಜರಾತ್ ಪೈಲ್ಸ್ ಪುಸ್ತಕದಲ್ಲಿ ಗಲಭೆಯ ಸಂಪೂರ್ಣ ಮಾಹಿತಿ ಇದೆ ಎಂದರು. ತಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಲು ಪ್ರಧಾನಿ ಮೋದಿ ಅವರು …

Read More »

ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿ ಹೆಸರು, ಜನ್ಮದಿನಾಂಕ ಸೇರಿ ಇತರೆ ತಿದ್ದುಪಡಿ : ರಾಜ್ಯ ಸರ್ಕಾರದಿಂದ ಪರಿಷ್ಕೃತ ಸುತ್ತೋಲೆ

ಬೆಂಗಳೂರು : ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿ ಹೆಸರು/ಪೋಷಕರ ಹೆಸರು, ಜನ್ಮದಿನಾಂಕ, ಜಾತಿ ಇತ್ಯಾದಿ ತಿದ್ದುಪಡಿ ಸಂಬಂದ ರಾಜ್ಯ ಸರ್ಕಾರ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿ ಹೆಸರು/ಪೋಷಕರ ಹೆಸರು, ಜಾತಿ, ಜನ್ಮ ದಿನಾಂಕ ಇತ್ಯಾದಿ ತಿದ್ದುಪಡಿ ಮಾಡುವ ಸಂಬಂಧ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನವನ್ನು ನೀಡಿ ಅಧಿಕಾರವನ್ನು ಉಲ್ಲೇಖಿತ ಸುತ್ತೋಲೆಗಳಲ್ಲಿ ಜಿಲ್ಲಾ ಉಪನಿರ್ದೇಶಕರಿಗೆ ಪ್ರತ್ಯಾಯೋಜಿಸಿ ಅದರಂತೆ ಕ್ರಮವಹಿಸಲಾಗುತ್ತಿದೆ. ಈ ಪ್ರಕ್ರಿಯೆಯು ವಿಳಂಬವಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ …

Read More »

ಶಿಕಾರಿಪುರಕ್ಕೆ ವಿಜಯೇಂದ್ರ ಅಭ್ಯರ್ಥಿ: ಯಡಿಯೂರಪ್ಪ

ಬೆಂಗಳೂರು: ಚುನಾವಣ ರಾಜಕಾರಣದಲ್ಲಿ ಭಾಗಿಯಾಗುವುದಿಲ್ಲ ಎಂದು ಘೋಷಿಸಿರುವ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ತಮ್ಮ ಕಾರ್ಯಕ್ಷೇತ್ರ ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯಾಗಿ ಮತ್ತೆ ಘೋಷಣೆ ಮಾಡಿದ್ದಾರೆ. ವಿಧಾನಸಭೆ ಕಲಾಪದ ಬಳಿಕ ಅಂಬೇಡ್ಕರ್‌ ಪ್ರತಿಮೆ ಹಾಗೂ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ವಿಧಾನಸೌಧದಿಂದ ನಡೆದುಕೊಂಡೇ ಬಂದು ಗಾಂಧಿ ಪ್ರತಿಮೆಗೆ ಅವರು ನಮನ ಸಲ್ಲಿಸಿದರು. ಶಿಕಾರಿಪುರಕ್ಕೆ ಬಹುತೇಕ ವಿಜಯೇಂದ್ರ ಅವರೇ …

Read More »

ಬೊಮ್ಮಾಯಿಯವರು ಕಣ್ಣು ಬಿಡಲು ಇನ್ನೆಷ್ಟು ಶಿಕ್ಷಕರ ಹೆಣ ಬೀಳಬೇಕು?: ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಪಿಂಚಣಿಗಾಗಿ ಮುಷ್ಕರದಲ್ಲಿ ತೊಡಗಿದ್ದ ಬಾಗಲಕೋಟೆ ಮೂಲದ ಶಿಕ್ಷಕ ಸಿದ್ದಯ್ಯ ಹಿರೇಮಠ ಮತ್ತು ರಾಯಚೂರು ಜಿಲ್ಲೆ ಸಿಂಧನೂರು ಮೂಲಕ ಶಂಕರಪ್ಪ ಬೋರಡ್ಡಿ ಅವರು ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ಸರ್ಕಾರಿ ಕೊಲೆಗಳು ಅನ್ನದೆ ಬೇರೇನು ಹೇಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ 141 ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಿರತರಾಗಿರುವ ಅನುದಾನಿತ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ

ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ತಪಸಿ ಗ್ರಾಮದಲ್ಲಿ ಶ್ರೀ ಬಸರಿಶಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.   https://www.instagram.com/reel/CpEyv87Dkf5/?igshid=NDk5N2NlZjQ= ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ …

Read More »

ನಗರಸಭೆ: ₹7.32 ಲಕ್ಷ ಉಳಿತಾಯ ಬಜೆಟ್‌

ಗೋಕಾಕ: ಇಲ್ಲಿನ ನಗರಸಭೆಯ 2023-24ನೇ ಸಾಲಿನ ₹7.32 ಲಕ್ಷದ ಉಳಿತಾಯದ ಬಜೆಟ್ ಅನ್ನು ಪ್ರಭಾರಿ ಪೌರಾಯುಕ್ತ ಶಿವಾನಂದ ಹಿರೇಮಠ ಅವರು, ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಂಡಿಸಿದರು. ನಗರದ ಸ್ವಚ್ಛತೆಗಾಗಿ 19 ಜನ ಪೌರಕಾರ್ಮಿಕರ ನೇಮಕ ಪ್ರಕ್ರಿಯೆ ನಡೆದಿದ್ದು, ಉಳಿದ ಕಾರ್ಮಿಕರನ್ನು ಹೊರಗುತ್ತಿಗೆ ಹಾಗೂ ನೇರ ಪಾವತಿ ಆಧಾರದ ಮೇಲೆ ಸೇವೆಯನ್ನು ಪಡೆಯುವ ಉದ್ದೇಶಕ್ಕೆ ₹3.84 ಕೋಟಿ ಅವಶ್ಯ ನಿಗದಿ ಮಾಡಿರುವುದಾಗಿ ತಿಳಿಸಿದರು.   …

Read More »

ಬೆಳಗಾವಿಯಲ್ಲಿ ಫೆ. 27ರಂದು 8 ಕಿ.ಮೀ ರೋಡ್‌ ಶೋ ನಡೆಸಲಿರುವ ಪ್ರಧಾನಿ ಮೋದಿ

ಬೆಳಗಾವಿ: ‘ನಗರದಲ್ಲಿ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು 8 ಕಿ.ಮೀ.ವರೆಗೆ ರೋಡ್‌ ಶೋ ನಡೆಸಲಿದ್ದಾರೆ. ಇದನ್ನು ನೋಡಲು 3 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.   ‘ಅಂದು ಮಧ್ಯಾಹ್ನ 1ರ ಸುಮಾರಿಗೆ ‍ಪ್ರಧಾನಿ ನಗರಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯ ಜನ ಮೋದಿ ಅವರನ್ನು ನೋಡಲು ಕಾತರರಾಗಿದ್ದಾರೆ. ಅವರೊಂದಿಗೆ ಹೆಜ್ಜೆ ಹಾಕಲಿದ್ದಾರೆ. ವಿಶಾಲವಾದ ರಸ್ತೆಗಳಲ್ಲಿ ಇದೊಂದು ಐತಿಹಾಸಿಕ ರೋಡ್‌ …

Read More »

ಶಹಬ್ಬಾಸ್‌..! ರಸ್ತೆ ಮಧ್ಯೆ ಹೃದಯಾಘಾತಗೊಂಡ ವ್ಯಕ್ತಿಗೆ CPR ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌

ತೆಲಂಗಾಣ : ನಡುರಸ್ತೆಯಲ್ಲೆ ಹೃದಯಾಘಾತಗೊಂಡ ವ್ಯಕ್ತಿಯೊಬ್ಬನಿಗೆ ಸಿಪಿಆರ್‌ ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌ ವಿಡಿಯೋ ವೈರಲ್‌ ಆಗಿದೆ.   ಸೈಬರಾಬಾದ್‌ನ ರಾಜೇಂದ್ರನಗರ ಟ್ರಾಫಿಕ್‌ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ರಾಜೀಂದರ್‌ ಎಂಬವರು ಹೃದಯಾಘಾತಕ್ಕೆ ಒಳಗಾಗಿದ್ದ ಎಲ್‌ಬಿ ನಗರದ ಬಾಲರಾಜು ಎನ್ನುವ ವ್ಯಕ್ತಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ ಅನ್ನು ನೀಡಿ ಅವರ ಜೀವವನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆಯನ್ನುಮೆರೆದಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಗೆ ತಕ್ಷಣವೇ ದಾಖಲು ಮಾಡಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ. …

Read More »

15ನೇ ವಿಧಾನಸಭೆ ಅಧಿವೇಶನ ಅಂತ್ಯ; ಪರಸ್ಪರ ಶುಭಾಶಯ ಕೋರಿದ ಸದಸ್ಯರು

ಬೆಂಗಳೂರು: 15ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ವಿಧಾನಸಭೆಯಲ್ಲಿ ವಿದಾಯ ಭಾಷಣದ್ದೇ ಕಾರುಬಾರು. ಕಳೆದ 5 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ, ಜನತೆಯ ಹಿತಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡು ತನುಮನದಿಂದ ದುಡಿದ ಸಂತೃಪ್ತ, ಸಾರ್ಥಕ ಭಾವನೆಯನ್ನು ಎಲ್ಲ ಸದಸ್ಯರುಗಳು ವ್ಯಕ್ತಪಡಿಸಿ, ಪರಸ್ಪರ ಶುಭಾಶಯ,, ಅಭಿನಂದನೆಗಳ ವಿನಿಮಯ ಮಾಡಿಕೊಂಡರು. ಜತೆಗೆ ಮತ್ತೆ ಚುನಾವಣೆಯಲ್ಲಿ ಗೆದ್ದು ಸದನಕ್ಕೆ ಬರೋಣ ಶುಭ ಹಾರೈಕೆಗಳ ವಿನಿಮುಂವೂ ಸದನದಲ್ಲಿ ಆಯಿತು. 2018ರ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ …

Read More »

ಸಿದ್ದರಾಮಯ್ಯಗೆ ಒಂದು ಮತವನ್ನೂ ಹಾಕಲ್ಲ; ಇಡೀ ಗ್ರಾಮದಿಂದ ವರ್ತೂರು ಪ್ರಕಾಶ್‌ಗೆ ಭರವಸೆ

ಕೋಲಾರ: ತಾಲೂಕಿನ ವೇಮಗಲ್‌ ಹೋಬಳಿಯ ಕುರುಬರಹಳ್ಳಿ ಗ್ರಾಮಕ್ಕೆ ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದ್ದ ಬೆನ್ನಲ್ಲಿಯೇ ಗ್ರಾಮಸ್ಥರು ವರ್ತೂರು ಪ್ರಕಾಶ್‌ ಅವರನ್ನು ಆಹ್ವಾನಿಸಿ ಸಿದ್ದರಾಮಯ್ಯರಿಗೆ ಒಂದು ಮತವನ್ನೂ ಹಾಕುವುದಿಲ್ಲ ಎಂದು ಭರವಸೆ ನೀಡಿರುವ ಕುತೂಹಲ ಸಂಗತಿ ನಡೆದಿದೆ. ಕುರುಬರಹಳ್ಳಿ ಗ್ರಾಮಸ್ಥರು ಸಾಮೂಹಿಕವಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರನ್ನು ಗ್ರಾಮಕ್ಕೆ ಕರೆಯಿಸಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಿ ಸನ್ಮಾನಿಸಿ, ನಮ್ಮ ಗ್ರಾಮದಿಂದ ಒಂದು ಮತ ಕೂಡ ಸಿದ್ಧರಾಮಯ್ಯನವರಿಗೆ …

Read More »